• Home
 • »
 • News
 • »
 • jobs
 • »
 • Electric Vehicle Industry: ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಈಗ ವೃತ್ತಿ ರೂಪಿಸಿಕೊಂಡವರು ಭವಿಷ್ಯದಲ್ಲಿ ಸೇಫ್

Electric Vehicle Industry: ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಈಗ ವೃತ್ತಿ ರೂಪಿಸಿಕೊಂಡವರು ಭವಿಷ್ಯದಲ್ಲಿ ಸೇಫ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಜಾಗತಿಕ ಎಲೆಕ್ಟ್ರಿಕ್ ವೆಹಿಕಲ್ (EV) ಮಾರುಕಟ್ಟೆಯು 2030ರ ವೇಳೆಗೆ 23.1 ಪ್ರತಿಶತದಷ್ಟು ಅಂದರೆ ಸಿಎಜಿಆರ್ ನಲ್ಲಿ 1103.17 ಬಿಲಿಯನ್ ಡಾಲರ್ ಗೆ ತಲುಪುವ ವೇಗದಲ್ಲಿ ಬೆಳೆಯುತ್ತಿದೆ.

 • Trending Desk
 • 5-MIN READ
 • Last Updated :
 • Share this:

  ಈಗಂತೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನ (Petrol-Diesel Price) ಕೇಳಿದರೆ ಶಾಕ್ ಆಗುವುದಂತೂ ಗ್ಯಾರೆಂಟಿ ಅಂತ ಹೇಳಬಹುದು. ದಿನೇ ದಿನೇ ಹೆಚ್ಚುತ್ತಿರುವ ತೈಲದ ಬೆಲೆಗಳು ನಿಜಕ್ಕೂ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ನಮಗೆ ಬೇಕೆ ಅನ್ನೋ ಪ್ರಶ್ನೆಯನ್ನು ಮೂಡುವಂತೆ ಮಾಡುತ್ತಿದೆ ಅಂತ ಹೇಳಬಹುದು. ಅದಕ್ಕೆ ಪರ್ಯಾಯ ಎಂಬಂತೆ ಬಂದಿವೆ ಈ ಎಲೆಕ್ಟ್ರಿಕ್ ವಾಹನಗಳು (Electric Vehicle) ಅಂತ ಹೇಳಬಹುದು. ಈಗ ಅನೇಕ ಜನರು ಈ ಎಲೆಕ್ಟ್ರಿಕ್ ಬೈಕ್ ಮತ್ತು ಕಾರುಗಳನ್ನು ಖರೀದಿಸುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಬ್ಯಾಟರಿಯಲ್ಲಿ ಚಲಿಸುವ ಮೊದಲ ಗಾಡಿಯಿಂದ (ಸ್ಕಾಟಿಷ್ ರಸಾಯನಶಾಸ್ತ್ರಜ್ಞ ವಿಲಿಯಂ ಮಾರಿಸನ್ ಸುಮಾರು 1890 ರಲ್ಲಿ ಕಂಡುಹಿಡಿದರು) ಇಂದಿನ ಅಲ್ಟ್ರಾ ಮಾಡರ್ನ್ 'ಇಂಧನ ರಹಿತ' ಕಾರುಗಳವರೆಗೆ, ದೂರದೃಷ್ಟಿಯುಳ್ಳವರು ಸಾರಿಗೆ ವ್ಯವಸ್ಥೆಯನ್ನು ವಿದ್ಯುತ್ ಚಾಲಿತವಾಗಿ ಮಾಡುವ ಪ್ರಯತ್ನ ಇನ್ನೂ ವೇಗಗೊಳಿಸಿದ್ದಾರೆ ಅಂತ ಹೇಳಬಹುದು.


  ಜಾಗತಿಕ ಎಲೆಕ್ಟ್ರಿಕ್ ವೆಹಿಕಲ್ (EV) ಮಾರುಕಟ್ಟೆಯು 2030 ರ ವೇಳೆಗೆ 23.1 ಪ್ರತಿಶತದಷ್ಟು ಸಿಎಜಿಆರ್ ನಲ್ಲಿ 1103.17 ಬಿಲಿಯನ್ ಡಾಲರ್ ಗೆ ತಲುಪುವ ವೇಗದಲ್ಲಿ ಬೆಳೆಯುತ್ತಿದೆ. (ಪ್ರಿಸ್ಟೆನ್ಸ್ ರಿಸರ್ಚ್, 2022).  ಪ್ರಾತಿನಿಧಿಕ ಚಿತ್ರ

  ಏಷ್ಯಾ ಪೆಸಿಫಿಕ್ 2021 ರಿಂದ ಇವಿ ಉದ್ಯಮದಲ್ಲಿ ಪ್ರಾಬಲ್ಯವನ್ನು ಮುಂದುವರಿಸಿದೆ, ಭಾರತವನ್ನು ಸೂಕ್ತ ಮಾರುಕಟ್ಟೆಯಾಗಿ ನೋಡಲಾಗುತ್ತಿದೆ. ಏಕೆಂದರೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಅಳವಡಿಕೆಯನ್ನು ಹೆಚ್ಚಿಸಲು ಸರ್ಕಾರವು ಇವಿ ಉದ್ಯಮಗಳಿಗೆ ಅನುಕೂಲಕರವಾಗಿ ಧನಸಹಾಯ ನೀಡುತ್ತಿದೆ.


  ಭಾರತೀಯ ವಾಹನ ತಯಾರಕರು ಸ್ಥಳೀಯ ನೇಮಕಾತಿಗಳ ಹುಡುಕಾಟದಲ್ಲಿದ್ದಾರೆ..


  ಇವಿ ವಿಕಸನವು ಕೇವಲ ತಾಂತ್ರಿಕ ಪ್ರವೃತ್ತಿಯಾಗಿ ಮಾತ್ರವಲ್ಲ, ಚಲನಶೀಲತೆಯಲ್ಲಿನ ತಾಂತ್ರಿಕ ಪ್ರಗತಿಗಳು, ವಾತಾವರಣದ ಹದಗೆಡುವಿಕೆ, ಹವಾಮಾನ ವೈಪರೀತ್ಯಗಳು ಮತ್ತು ಕಚ್ಚಾ ತೈಲ ಸವಕಳಿಯಿಂದ ಉಂಟಾಗುವ ಹೊಸ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ ಒಂದು ಪ್ರಮುಖ ಹೆಜ್ಜೆಯಾಗಿ ಬಂದಿದೆ.


  ಭಾರತದ ಅಗಾಧ ಜನಸಂಖ್ಯೆ ಮತ್ತು ಆಟೋಮೊಬೈಲ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಇವಿ ಮಾರುಕಟ್ಟೆ ನಿಸ್ಸಂದೇಹವಾಗಿ ತುಂಬಾನೇ ಎತ್ತರಕ್ಕೆ ಬೆಳೆಯುತ್ತದೆ ಅಂತ ಹೇಳಬಹುದು.  ಪ್ರಾತಿನಿಧಿಕ ಚಿತ್ರ

  ಹೆಚ್ಚುವರಿಯಾಗಿ, ಚಲನಶೀಲತೆ, ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಒಂದು ಟನ್ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಈಗಾಗಲೇ, ಭಾರತದ ಉನ್ನತ ಉದ್ಯೋಗ ವೇದಿಕೆಗಳು ಪ್ರತಿದಿನ 700 ರಿಂದ 9,000 ಹುದ್ದೆಗಳಿಗೆ ಜಾಹೀರಾತು ನೀಡುತ್ತಿವೆ.


  ಈ ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ಶುರು ಮಾಡಲು ಆಶಿಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿವೆ ಕೆಲವು ಸಲಹೆಗಳು.


  1. ಇವಿ ವಿಷಯದಲ್ಲಿ ಬೇಡಿಕೆ ಇರುವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ


  ಆಟೋಮೊಬೈಲ್ ಗಳಲ್ಲಿ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರಬೇಕಾಗಿಲ್ಲ ಎಂಬ ಅಂಶವು ಇವಿ ಉದ್ಯಮದ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇವಿ ಉದ್ಯಮದಲ್ಲಿ ಕೈಗಾರಿಕಾ ಎಂಜಿನಿಯರ್ ಗಳಿಂದ ಮೆಟೀರಿಯಲ್ ಎಂಜಿನಿಯರ್ ಗಳವರೆಗೆ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ನಿಂದ ಕೆಮಿಕಲ್ ಎಂಜಿನಿಯರ್ ಗಳು ಅಥವಾ ವಿಶ್ಲೇಷಕರು ಮತ್ತು ಡೇಟಾ ಮ್ಯಾನೇಜರ್ ಗಳವರೆಗೆ ಎಲ್ಲರಿಗೂ ಆಕರ್ಷಕ ವೃತ್ತಿ ಅವಕಾಶಗಳನ್ನು ನೀಡುತ್ತದೆ.


  ನಿಮ್ಮ ನಿರೀಕ್ಷಿತ ಆಸಕ್ತಿಯ ಕ್ಷೇತ್ರಕ್ಕೆ ಸರಿಯಾದ ಕೋರ್ಸ್ ಅನ್ನು ನಿರ್ಧರಿಸಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ.


  2. ಇವಿ ಉದ್ಯಮದಲ್ಲಿ ಅನುಭವ ಪಡೆಯಲು ಕಲಿಕೆಗೆ ಸಮಯ ನೀಡಿ


  ಇಂಟರ್ನ್ಶಿಪ್ ಮತ್ತು ಪ್ರಾಜೆಕ್ಟ್ ನಿರ್ವಹಣೆಯ ಮೂಲಕ ಅಗತ್ಯವಾದ ಅನುಭವವನ್ನು ಪಡೆಯಲು ವಿದ್ಯಾರ್ಥಿಯು ಉದ್ಯಮಕ್ಕೆ ಪರಿಪೂರ್ಣವಾಗಿ ಹೊಂದಿಕೊಳ್ಳಬಹುದು.


  ಅಗತ್ಯವಿರುವ ಸ್ಥಾನಕ್ಕೆ ನಿಮ್ಮ ಸೂಕ್ತತೆಯನ್ನು ಪ್ರದರ್ಶಿಸಲು ವಿವಿಧ ಇವಿ ಅಪ್ಲಿಕೇಶನ್ ಗಳಿಗಾಗಿ ಯೋಜನೆಗಳನ್ನು ರಚಿಸಿ. ಇದು ವಾಹನದ ವಿನ್ಯಾಸದ ಒಟ್ಟಾರೆ ಗ್ರಹಿಕೆಯನ್ನು ಒದಗಿಸುವಾಗ ನಿಮ್ಮ ಪರಿಕಲ್ಪನಾ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಂತ ಹೇಳಬಹುದು.


  ಇದನ್ನೂ ಓದಿ: Explosive Engineering: ಕಟ್ಟಡ ಉರುಳಿಸುವವರ ಸಂಬಳ ಲಕ್ಷಗಳಲ್ಲಿ ಇದೆ; ಈ ಡಿಪ್ಲೊಮಾ ಮಾಡಿರಬೇಕಷ್ಟೇ

  3. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿ


  ಸಂಶೋಧನೆ ಮತ್ತು ಅಭಿವೃದ್ಧಿ ಇವಿ ಉದ್ಯೋಗ ಅಭ್ಯರ್ಥಿಯ ಕೌಶಲ್ಯಗಳ ಪಟ್ಟಿಗೆ ನಿರ್ಣಾಯಕ ಸೇರ್ಪಡೆಯಾಗಿದೆ. ಒಂದು ವಿಷಯವನ್ನು ಅನುಸರಿಸುವ ಬದಲು, ನಿಮಗೆ ಸಾಧ್ಯವಾದಷ್ಟು ಹೊಸ ಮಾಡ್ಯೂಲ್ ಗಳ ಜ್ಞಾನವನ್ನು ಸಂಪಾದಿಸಲು ಪ್ರಯತ್ನಿಸಿ.


  ಉದಾಹರಣೆಗೆ ತಂತ್ರಜ್ಞಾನ ವಿನ್ಯಾಸ, ಅಪ್ಲಿಕೇಶನ್ ಅಭಿವೃದ್ಧಿ, ಬ್ಯಾಟರಿ ಪ್ಯಾಕ್ ಮಾಡೆಲಿಂಗ್, ಇವಿ ಡೈನಾಮಿಕ್ಸ್ ಲೆಕ್ಕಾಚಾರ, ಇತ್ಯಾದಿಗಳನ್ನು ಕಲಿಯಿರಿ. ಬಹುಮುಖ ಇವಿ ಉದ್ಯಮಕ್ಕಾಗಿ, ಬಹುಮುಖಗಳಲ್ಲಿ ಕಲಿಯುವಂತಾಗಿ.  ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏನಾಗುತ್ತಿದೆ ಅಂತ ಬೆಳವಣಿಗೆಗಳ ಮೇಲೆ ಒಂದು ಕಣ್ಣಿಡಿ. ಈ ವಿಷಯದ ಬಗ್ಗೆ ತಜ್ಞರು ನಿಯಮಿತವಾಗಿ ಲೇಖನಗಳನ್ನು ಬರೆಯುವುದರಿಂದ ನಿಮ್ಮ ಜ್ಞಾನವನ್ನು ಅಗಾಧವಾಗಿ ಹೆಚ್ಚಿಸಿಕೊಳ್ಳಬಹುದು.


  4. ಇಂಟರ್ನ್ಶಿಪ್ ತೆಗೆದುಕೊಳ್ಳಿ


  ಇಂಟರ್ನ್ಶಿಪ್ ಗಳನ್ನು ಈಗಾಗಲೇ ನೈಜ-ಸಮಯದ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ ನೀವು ಸಂಕೀರ್ಣ ತಾಂತ್ರಿಕ ದೋಷಗಳನ್ನು ಪರಿಹರಿಸುವಲ್ಲಿ ಕೌಶಲ್ಯವನ್ನು ಪಡೆಯುತ್ತೀರಿ, ಪ್ರಾಯೋಗಿಕವಾಗಿ ಮತ್ತು ಈ ಉದ್ಯಮದ ಸಂಸ್ಕೃತಿಗೆ ಸರಿ ಹೊಂದುತ್ತೀರಿ.


  ಇವಿ ಪರಿಸರ ವ್ಯವಸ್ಥೆಯು ಅನೇಕ ಹಂತಗಳನ್ನು ಹೊಂದಿದೆ ಮತ್ತು ಇಂಟರ್ನ್ ಆಗಿ ಅನುಭವವನ್ನು ಪಡೆಯುವುದು ನಿಮಗೆ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ ಅಂತ ಹೇಳಬಹುದು.


  5. ನೆಟ್‌ವರ್ಕ್ ಬೆಳೆಸಿಕೊಳ್ಳಿರಿ


  ನೀವು ಕೆಲಸ ಮಾಡಲು ಇಚ್ಛಿಸುವ ಇವಿ ಉದ್ಯಮದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಹಲವಾರು ಜನರನ್ನು ನೀವು ತಿಳಿದಿರಬೇಕು. ಅವರೊಂದಿಗೆ ಸಂಪರ್ಕಿಸಿ ಮತ್ತು ನೆಟ್‌ವರ್ಕ್ ಬೆಳೆಸಿಕೊಳ್ಳಿರಿ. ಪ್ರಸ್ತುತ ಪರಿಸ್ಥಿತಿ ಏನು ಮತ್ತು ನಿಮ್ಮ ಉತ್ತಮ ಕ್ರಮ ಏನು ಎಂಬುದರ ಕುರಿತು ಅವರ ಸಲಹೆಯನ್ನು ಕೇಳಿ ತಿಳಿದುಕೊಳ್ಳಿ.


   


  ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಂದಾಜಿನ ಪ್ರಕಾರ, ಮುಂದಿನ 6-7 ವರ್ಷಗಳಲ್ಲಿ ಸರಿ ಸುಮಾರು 10 ಮಿಲಿಯನ್ ನೇರ ಮತ್ತು 50 ಮಿಲಿಯನ್ ಪರೋಕ್ಷ ಉದ್ಯೋಗಗಳು ಶೀಘ್ರದಲ್ಲಿಯೇ ಬರಲಿವೆ.


  ಜಗತ್ತು ಸುಸ್ಥಿರ ಮತ್ತು ಪರಿಸರ ಸ್ನೇಹಿ ಚಲನಶೀಲತೆಯ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಇವಿ ಉದ್ಯಮದಲ್ಲಿ ಕೆಲಸವು ಯಶಸ್ವಿ ಮತ್ತು ಸುರಕ್ಷಿತ ಭವಿಷ್ಯಕ್ಕೆ ಒಂದು ಒಳ್ಳೆಯ ಮಾರ್ಗವಾಗಿದೆ.

  Published by:Kavya V
  First published: