ಭಾರತದಲ್ಲಿ ಲಕ್ಷಾಂತರ ಯುವಕರ ಸರ್ಕಾರಿ ಉದ್ಯೋಗವನ್ನು (Government Jobs) ಪಡೆಯಬೇಕೆಂದು ಕನಸು ಕಾಣುತ್ತಾರೆ. ಆದರೆ ಆರ್ಥಿಕ ಸ್ಥಿತಿಯಿಂದಾಗಿ ಅವರು ಖಾಸಗಿ ಕಂಪನಿಗಳಲ್ಲಿ (Private Jobs) ಕೆಲಸ ಮಾಡಬೇಕಾಗುತ್ತದೆ. ಇನ್ನು ಅನೇಕ ಆಕಾಂಕ್ಷಿಗಳು ಸರ್ಕಾರಿ ಉದ್ಯೋಗಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ತಯಾರಿ ಪ್ರಾರಂಭಿಸುತ್ತಾರೆ. ಆದರೆ ಅದಕ್ಕಾಗಿ ಕೆಲಸ ಬಿಟ್ಟು ಓದಲು ಸಾಧ್ಯವಾಗದೆ ಸರ್ಕಾರಿ ಕೆಲಸ ಪಡೆಯುವ ಕನಸನ್ನು ಕೈ ಬಿಡುತ್ತಾರೆ. ನೀವು ಸಹ ಅವರಲ್ಲಿ ಒಬ್ಬರಾಗಿದ್ದರೆ ಅಥವಾ ತಯಾರಿಗಾಗಿ ಫುಟ್ ಟೈಮ್ ಕೆಲಸವನ್ನು ಬಿಡಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗೆ ಪ್ರಯೋಜನಕಾರಿಯಾಗಿದೆ.
ಸರ್ಕಾರಿ ನೌಕರಿ ಪಡೆಯಲು ನಿಮ್ಮ ಫುಲ್ ಟೈಂ ಜಾಬ್ ಬಿಡುವ ಅಗತ್ಯವಿಲ್ಲ. ಸರಿಯಾದ ಸಮಯ ನಿರ್ವಹಣೆ ಮತ್ತು ಪ್ಲ್ಯಾನ್ ಮಾಡಿದರೆ ಸಾಕು. ಅದು ಹೇಗೆ ಎಂದು ತಿಳಿಯೋಣ.
1) ಪ್ಲ್ಯಾನ್ ತುಂಬಾನೇ ಮುಖ್ಯ
ತಯಾರಿಯ ಮೊದಲು ಯೋಜನೆ ಮುಖ್ಯ. ಸರ್ಕಾರಿ ಕೆಲಸಕ್ಕೆ ತಯಾರಿ ಮಾಡಲು ಬಯಸಿದರೆ, ಇದಕ್ಕಾಗಿ ನಿಮಗೆ ಮೊದಲು ಯೋಜನೆ ಬೇಕು. ನೀವು ಒಂದು ಸಮಯದಲ್ಲಿ ಕೇವಲ ಒಂದು ಪರೀಕ್ಷೆಯ ಮೇಲೆ ಮಾತ್ರ ಕೇಂದ್ರೀಕರಿಸುವುದು ಸೂಕ್ತ. ಆಗ ತಯಾರಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪರೀಕ್ಷೆಗೆ ತಯಾರಿ ಮಾಡುವ ಮೊದಲು, ಪಠ್ಯಕ್ರಮ ಮತ್ತು ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಿ. ಅದರ ಆಧಾರದ ಮೇಲೆ, ನೀವು ಪ್ಲ್ಯಾನ್ ಮಾಡಿಕೊಳ್ಳಿ.
2) ಟೈಮ್ ಟೇಬಲ್ ತಯಾರಿಸಿ
ಇದರಲ್ಲಿ ಹೊಸದೇನಿದೆ ಎಂದು ನೀವು ಯೋಚಿಸಬಹುದು. ನೀವು ಮೊದಲೇ ಟೈಮ್ ಟೇಬಲ್ ತಯಾರಿಸಿ ಸಿದ್ಧಪಡಿಸಿರಬೇಕು. ನಿಮ್ಮ ಫುಲ್ ಟೈಂ ಉದ್ಯೋಗದ ಜೊತೆಗೆ ಓದಿಗೆ ನೀವು ಸಮಯ ಸರಿದೂಗಿಸಬೇಕು. ನಿಮ್ಮ ಕೆಲಸದ ಮೊದಲು ಅಥವಾ ನಂತರ 2 ರಿಂದ 3 ಗಂಟೆಗಳ ಸಮಯವನ್ನು ಅಧ್ಯನಕ್ಕೆ ಮೀಸಲಿಡಿ. ವಾರದ ರಜೆಯ ದಿನದಂದು ಸರ್ಕಾರಿ ಉದ್ಯೋಗಗಳ ತಯಾರಿಗೆ ಹೆಚ್ಚಿನ ಸಮಯವನ್ನು ನೀಡಿ.
3) ಸುದ್ದಿಪತ್ರಿಕೆಗಳನ್ನು ಓದುವುದನ್ನು ಮರೆಯಬೇಡಿ
ಸರ್ಕಾರಿ ಉದ್ಯೋಗ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ವಿಭಾಗವು ಬಹಳ ಮುಖ್ಯವಾಗಿದೆ. ಟಿವಿಯಲ್ಲಿ ಸುದ್ದಿ ವಾಹಿನಿ ನೋಡುವ ಬದಲು ದಿನಪತ್ರಿಕೆ ಓದಿ. ನೀವು ರೈಲು, ಮೆಟ್ರೋ, ಬಸ್ ಅಥವಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದರೆ ನಿಮ್ಮ ಮೊಬೈಲ್ ಫೋನ್‌ನ ಬ್ರೌಸರ್‌ನಲ್ಲಿ ನೀವು ಸುದ್ದಿಯನ್ನು ಓದಬಹುದು. ಇದು ನಿಮ್ಮ ಇಂಗ್ಲಿಷ್ ಶಬ್ದಕೋಶದೊಂದಿಗೆ ನಿಮಗೆ ಸಹಾಯ ಮಾಡುತ್ತದೆ.
4) ಮಾಕ್ ಟೆಸ್ಟ್ ಕಡ್ಡಾಯ
ಅಣಕು ಪರೀಕ್ಷೆಯನ್ನು ಮಾಡುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ತಯಾರಿಗಾಗಿ ನೀವು ಸರಿಯಾಗಿ ಪ್ಲ್ಯಾನ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
5) ಆತ್ಮವಿಶ್ವಾಸ ಮುಖ್ಯ
ನೀವು ಪೂರ್ಣ ಸಮಯದ ಉದ್ಯೋಗದೊಂದಿಗೆ ಸರ್ಕಾರಿ ಕೆಲಸಕ್ಕೆ ತಯಾರಿ ಮಾಡುತ್ತಿದ್ದರೆ ಧನಾತ್ಮಕವಾಗಿರಿ. ನೀವು ಕಡಿಮೆ ಓದಿದ್ದರೂ ಪರೀಕ್ಷೆಯ ಮೊದಲು ಒತ್ತಡವನ್ನು ತೆಗೆದುಕೊಳ್ಳಬೇಡಿ. ಪರೀಕ್ಷೆಗೆ ತಯಾರಿ ನಡೆಸಲು ಆನ್‌ಲೈನ್ ತರಬೇತಿಯು ತುಂಬಾ ಸಹಾಯಕವಾಗಿದೆ ಎಂದು ಕೆಲವರು ಹೇಳುತ್ತಾರೆ. ನಿಮಗೆ ಸಮಯಾವಕಾಶವಿದ್ದರೆ ಆನ್ ಲೈನ್ ಕ್ಲಾಸ್ ಸಹಾಯ ಪಡೆದುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ