• ಹೋಂ
 • »
 • ನ್ಯೂಸ್
 • »
 • Jobs
 • »
 • WFHನಲ್ಲಿರುವ ಉದ್ಯೋಗಿಗಳು ಆಫೀಸ್​ನಲ್ಲಿ ಕಾಣದೇ ಇರುವುದರಿಂದ ಹೈಕ್, ಪ್ರಮೋಷನ್ ಹೆಚ್ಚಾಗಿ ಸಿಗಲ್ವಾ?

WFHನಲ್ಲಿರುವ ಉದ್ಯೋಗಿಗಳು ಆಫೀಸ್​ನಲ್ಲಿ ಕಾಣದೇ ಇರುವುದರಿಂದ ಹೈಕ್, ಪ್ರಮೋಷನ್ ಹೆಚ್ಚಾಗಿ ಸಿಗಲ್ವಾ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಉದ್ಯೋಗಿಗಳಿಗೆ ಹೈಬ್ರೀಡ್‌ ಕೆಲಸ ವಿಧಾನ ಒಂದು ರೀತಿ ವರವೂ ಹೌದು, ಶಾಪವೂ ಹೌದು ಎನ್ನುವಂತಾಗುತ್ತಿದೆ.

 • Share this:

ಮೊದಲೆಲ್ಲಾ ಕಂಪನಿ, ಕೆಲಸದ (Office) ಸ್ಥಳದಲ್ಲಿಯೇ ಉದ್ಯೋಗಿಗಳು ಕೆಲಸ ಮಾಡುವ ಅನಿವಾರ್ಯತೆ ಇತ್ತು. ಆದರೆ ಕೋವಿಡ್‌ (Covid) ಇದನ್ನೆಲ್ಲಾ ಬದಲಾಯಿಸಿತು. ಕೋವಿಡ್‌ ನಂತರ ಕಂಪನಿಗಳು ವರ್ಕ್‌ ಫ್ರಮ್‌ ಹೋಮ್‌ (Work From Home), ಹೈಬ್ರೀಡ್‌ ಕೆಲಸದಂತಹ ವಿದ್ಯಮಾನವನ್ನು ಪರಿಚಯಿಸಿತು.


ರಿಮೋಟ್‌, ಹೈಬ್ರೀಡ್‌ ಕೆಲಸ ವಿಧಾನ


ಕೋವಿಡ್‌ ಕೃಪಾಕಟಾಕ್ಷದಿಂದ ಕೆಲಸಕ್ಕೆ ಕಚೇರಿಗೆ ಹೋಗಲಾರದ ಪರಿಸ್ಥಿತಿಯಲ್ಲಿದ್ದ ಅದೆಷ್ಟೋ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಾ ವೃತ್ತಿ ಜೀವನವನ್ನು ಉಳಿಸಿಕೊಂಡಿದ್ದಾರೆ. ವರ್ಕ್‌ ಫ್ರಮ್‌ ಹೋಮ್‌ ನಂತರ ಈಗ ಹೈಬ್ರೀಡ್‌ ಉದ್ಯೋಗ ಅಂದರೆ ಎರಡು ದಿನ ಕಚೇರಿ ಮತ್ತು ಎರಡು ದಿನ ಮನೆಯಿಂದ ಕೆಲಸ ಮಾಡಬಹುದು. ಈ ವಿಧಾನವೂ ಸಹ ಈಗ ಪ್ರಾಮುಖ್ಯತೆ ಪಡೆದುಕೊಂಡಿದೆ.


ಕಂಪನಿಗಳು ಸಹ ಉದ್ಯೋಗಿಗಳನ್ನು ಕಂಪನಿಯಲ್ಲಿಯೇ ಉಳಿಸಿಕೊಳ್ಳಲು ಇದೇ ಪರಿಕಲ್ಪನೆಯನ್ನು ಉದ್ಯೋಗಿಗಳಿಗೆ ಒದಗಿಸುತ್ತಿದೆ. ಆದಾಗ್ಯೂ ವರ್ಷಗಳಿಂದ ಕಂಪನಿಗಳಲ್ಲಿ ಮಾತ್ರ ವಜಾಗೊಳಿಸುವಿಕೆ ಭರ್ಜರಿಯಾಗಿ ನಿಲ್ಲದಂತೆ ನಡೆಯುತ್ತಲೇ ಇದೆ. ಜಗತ್ತಿನಾದ್ಯಂತ ಉದ್ಯೋಗದಾತರು ಹೈಬ್ರಿಡ್ ಕೆಲಸವನ್ನು ಉದ್ಯೋಗಿಗಳಿಗೆ ನೀಡುತ್ತಿದ್ದಾರೆ ಎಂದು ಅನೇಕ ಇತರ ಅಧ್ಯಯನಗಳು ಸೂಚಿಸಿವೆ.


ಇಂಟರ್ನ್ಯಾಷನಲ್ ಫೌಂಡೇಶನ್ ಆಫ್ ಎಂಪ್ಲಾಯಿ ಬೆನಿಫಿಟ್ ಪ್ಲಾನ್‌ಗಳ ಉದ್ಯೋಗಿ ಪ್ರಯೋಜನಗಳ ಸಮೀಕ್ಷೆಯ ವರದಿಯ ಪ್ರಕಾರ, 74 ಪ್ರತಿಶತ ಉದ್ಯೋಗದಾತರು ಹೈಬ್ರಿಡ್ ಕೆಲಸದ ವ್ಯವಸ್ಥೆಗಳನ್ನು ನೀಡುತ್ತಾರೆ ಎಂದು ಹೇಳಿದೆ.
ರಿಮೋಟ್‌, ಹೈಬ್ರೀಡ್‌ ಕೆಲಸ ವಿಧಾನ ವರವೂ ಹೌದು, ಶಾಪವೂ ಹೌದು


ಉದ್ಯೋಗಿಗಳಿಗೆ ಹೈಬ್ರೀಡ್‌ ಕೆಲಸ ವಿಧಾನ ಒಂದು ರೀತಿ ವರವೂ ಹೌದು, ಶಾಪವೂ ಹೌದು ಎನ್ನುವಂತಾಗುತ್ತಿದೆ. ಕೆಲವರಿಗೆ ಆಫೀಸು ಮತ್ತು ಮನೆಯಲ್ಲಿ ಕೆಲಸ ಮಾಡುವುದು ಅನುಕೂಲ ಎನಿಸಿದರೆ, ಇನ್ನೂ ಕೆಲವರಿಗೆ ಈ ವಿಧಾನ ಅಷ್ಟಾಗಿ ಹೊಂದಿಕೊಳ್ಳುತ್ತಿಲ್ಲ. ಇತ್ತೀಚಿನ ಕೆಲ ವರದಿಗಳು ವೃತ್ತಿ ಬೆಳವಣಿಗೆ ಮತ್ತು ಮೌಲ್ಯಮಾಪನಗಳ ಮೇಲೆ ಹೈಬ್ರೀಡ್‌ ಕೆಲಸ ವಿಧಾನ ಪ್ರಭಾವ ಬೀರುತ್ತದೆ ಎಂದು ಹೇಳಿವೆ.


ರಿಮೋಟ್‌, ಹ್ರೈಬ್ರೀಡ್‌ ಕೆಲಸ.. ಉದ್ಯೋಗಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ?


ಮಾರ್ಚ್ 2023 ರಲ್ಲಿ ಲಿಂಕ್ಡ್‌ಇನ್ ವರದಿಯು ಹೈಬ್ರಿಡ್ ಕೆಲಸದಿಂದಾಗಿಕಚೇರಿಯಲ್ಲಿ ಉದ್ಯೋಗಿಯು ಹೆಚ್ಚಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಪ್ರಭಾವ ಉದ್ಯೋಗಿಯ ಬೆಳವಣಿಗೆ, ಕಚೇರಿಯಲ್ಲಿ ಅವರ ಮೌಲ್ಯಮಾಪನದ ಮೇಲೆ ಬೀರುತ್ತದೆ ಎಂದು ಹೇಳಿದೆ.


ಮೆಟಾದ ಲೀಡರ್‌ ಶಿಪ್ ಗೈಡ್‌ನ ಸಂಸ್ಥಾಪಕ, ಕೋಡಿ ಡಕೋಟಾ ವೂಟೆನ್, C.B.C., ತಮ್ಮ ಬ್ಲಾಗ್‌ನಲ್ಲಿ ನೀವು ಕಚೇರಿಯಲ್ಲಿ ಇಲ್ಲದಿದ್ದರೆ ನೀವು ಮುಂದಿನ ವಜಾಗೊಳಿಸುವಿಕೆಯ ಭಾಗವಾಗಿರುತ್ತೀರಿ ಎಂದು ಬರೆದುಕೊಂಡಿದ್ದರು.


ಟೀಮ್‌ಲೀಸ್ ಡಿಜಿಟಲ್‌ನ ಮುಖ್ಯ ವ್ಯಾಪಾರ ಅಧಿಕಾರಿ ಶಿವ ಪ್ರಸಾದ್ ನಂದೂರಿ, ವರ್ಕ್‌ ಫ್ರಮ್‌ ಹೋಮ್ ಅಥವಾ ಹೈಬ್ರಿಡ್ ಮಾದರಿಗಳು ವೃತ್ತಿಜೀವನದ ಪ್ರಗತಿ ಮತ್ತು ನಕರಾತ್ಮಕ ವಿಷಯ ಎರಡಕ್ಕೂ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ. "ಪ್ಲಸ್ ಸೈಡ್ನಲ್ಲಿ, ರಿಮೋಟ್ ಕೆಲಸವು ವರ್ಧಿತ ಉತ್ಪಾದಕತೆ, ಸುಧಾರಿತ ಕೆಲಸ-ಜೀವನ ಸಮತೋಲನ ಮತ್ತು ವಿವಿಧ ಸ್ಥಳಗಳಿಂದ ಹೆಚ್ಚು ವೈವಿಧ್ಯಮಯ ತಂಡಗಳೊಂದಿಗೆ ಸಹಕರಿಸುವ ಅವಕಾಶಕ್ಕೆ ಕಾರಣವಾಗಬಹುದು.
ಅಲ್ಲದೆ, ಇದು ಉದ್ಯೋಗಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಪಡೆಯಲು ಅವಕಾಶಗಳನ್ನು ನೀಡುತ್ತದೆ, ಇದು ಅವರ ವೃತ್ತಿಜೀವನವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ”ಎಂದು ಅವರು ತಿಳಿಸಿದ್ದಾರೆ.


ಲಾಭದ ಜೊತೆಗೆ ರಿಮೋಟ್‌ ಕೆಲಸ ಕೆಲ ನಷ್ಟಗಳನ್ನು ಸಹ ಹೊಂದಿದೆ. ಇದು ದೀರ್ಘಕಾಲೀನ ಪರಿಣಾಮಕಾರಿ ಸಂವಹನದ ಮೇಲೆ ಪರಿಣಾಮ ಬೀರಬಹುದು. ಪ್ರತ್ಯೇಕತೆಯ ಭಾವನೆಗೆ ಕಾರಣವಾಗಬಹುದು ಮತ್ತು ಉದ್ಯೋಗಿಗಳ ಸಾಧನೆಗಳಿಗೆ ಕಡಿಮೆ ಗೋಚರತೆಯನ್ನು ಉಂಟುಮಾಡಬಹುದು ಎಂದು ನಂದೂರಿ ಹೇಳಿದ್ದಾರೆ. ಅಂದರೆ ರಿಮೋಟ್‌ ಮತ್ತು ಹೈಬ್ರೀಡ್‌ ಕೆಲಸವು ಅಪ್ರೈಸಲ್‌ ಮತ್ತು ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ.


ಎನ್‌ಎಲ್‌ಬಿ ಸರ್ವೀಸಸ್‌ನ ಸಿಇಒ ಸಚಿನ್ ಅಲುಗ್ ಅವರು ಹೈಬ್ರಿಡ್ ಅಥವಾ ರಿಮೋಟ್ ಕೆಲಸದ ಮಾದರಿಯು ಪ್ರಪಂಚದಾದ್ಯಂತದ ವ್ಯಾಪಾರ ನಾಯಕರು ಮತ್ತು ಮಧ್ಯಸ್ಥಗಾರರನ್ನು ವಿಭಜಿಸಿದೆ.


ಇದನ್ನೂ ಓದಿ: Career Tips: ಉಚಿತವಾಗಿ ಸಿಗುವ ಗೂಗಲ್ ಅನಾಲಿಟಿಕ್ಸ್ ಕೋರ್ಸ್ ಮಾಡಿದ್ರೆ ಲಕ್ಷಗಳ ಸಂಬಳದ ಉದ್ಯೋಗ ನಿಮ್ಮದಾಗುತ್ತೆ


ಅನೇಕರು ಇದನ್ನು ಫ್ಯಾಶನ್ ಎಂದು ಕರೆದಿದ್ದಾರೆ. ಸಾಂಕ್ರಾಮಿಕ ನಂತರ ಉದ್ಯೋಗ ಕ್ಷೇತ್ರದಲ್ಲಿ ಕಂಪನಿಗಳು ಉದ್ಯೋಗಿಗಳಿಂದ ಹೊಸ ಕೌಶಲ್ಯವನ್ನು ಬಯಸುತ್ತಿದ್ದಾರೆ. ಕೌಶಲ್ಯ ಹೊಂದಿರುವವರು ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

top videos


  63 ಪ್ರತಿಶತ ಭಾರತೀಯರು ರಿಮೋಟ್‌ ವಿಧಾನದಲ್ಲಿ ಕೆಲಸ ಮಾಡುವುದರಿಂದ ತಮ್ಮ ವೃತ್ತಿಜೀವನದ ಮೇಲೆ ಯಾವುದೇ ಹಾನಿಕಾರಕ ಪರಿಣಾಮ ಬೀರುವುದಿಲ್ಲ ಎಂದು ಲಿಂಕ್ಡ್‌ಇನ್ ನಡೆಸಿದ ಅಧ್ಯಯನದಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಇದೇ ಪ್ರಮಾಣವು ಅವರು ಕಚೇರಿಗೆ ಹೋಗದಿದ್ದರೆ ಅವರ ವೃತ್ತಿ ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದು ಸಹ ಅಭಿಪ್ರಾಯ ಪಟ್ಟಿದ್ದಾರೆ.

  First published: