• ಹೋಂ
  • »
  • ನ್ಯೂಸ್
  • »
  • Jobs
  • »
  • Doctors: ಬ್ರಿಟನ್​​ನಲ್ಲಿ ತಮ್ಮ ವೃತ್ತಿಗೆ ಗುಡ್​ ಬೈ ಹೇಳ್ತಿದ್ದಾರೆ ವೈದ್ಯರು- ಇದಕ್ಕೆ ಕಾರಣಗಳೇನು ಗೊತ್ತಾ?

Doctors: ಬ್ರಿಟನ್​​ನಲ್ಲಿ ತಮ್ಮ ವೃತ್ತಿಗೆ ಗುಡ್​ ಬೈ ಹೇಳ್ತಿದ್ದಾರೆ ವೈದ್ಯರು- ಇದಕ್ಕೆ ಕಾರಣಗಳೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಸ್ಥೆಯಲ್ಲಿ ಹದಗೆಡುತ್ತಿರುವ ಪರಿಸ್ಥಿತಿಗಳು ಹಾಗೂ ಹೆಚ್ಚುತ್ತಿರುವ ಕೆಲಸದ ಹೊರೆ, ಕಡಿಮೆ ವೇತನ ಮೊದಲಾದ ಕಾರಣಗಳು ವೈದ್ಯರನ್ನು ಎನ್‌ಎಚ್ಎಸ್ ಅನ್ನು ತೊರೆಯುವಂತೆ ಮಾಡುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

  • Share this:

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯಲ್ಲಿ (NHS) ಕಾರ್ಯನಿರ್ವಹಿಸುತ್ತಿರುವ ಅನೇಕ ಕಿರಿಯ ವೈದ್ಯರುಗಳು ಸಂಸ್ಥೆಯಲ್ಲಿನ ಕಳಪೆ ಸೇವಾಮಟ್ಟ ಹಾಗೂ ಕಡಿಮೆ ವೇತನ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದು, ಇದನ್ನು ಪರಿಹರಿಸುವಂತೆ ಆಗ್ರಹಿಸಿ ಮುಷ್ಕರ (Strike) ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸು ಹಾಗೂ ವ್ಯಾಪಾರೀ ಪ್ರಪಂಚವು ಅತ್ಯದ್ಭುತ ಅವಕಾಶಗಳನ್ನು ವೈದ್ಯರಿಗೆ ಒದಗಿಸುತ್ತಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಗಳನ್ನರಸಿಕೊಂಡು ವೈದ್ಯರು (Doctors) ತಮ್ಮ ವೈದ್ಯಕೀಯ ವೃತ್ತಿಗೆ ಎಳ್ಳುನೀರು ಬಿಡುತ್ತಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಪರಿಸ್ಥಿತಿ ಎಂಬುದಾಗಿ ಬಿಂಬಿತವಾಗಿದೆ.


ಹೆಚ್ಚುವರಿ ಸಂಬಳ, ಉತ್ತಮ ಸೌಲಭ್ಯಗಳು


ಜೇ-ಯಂಗ್ ಪಾರ್ಕ್, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯರಾಗಲು ಆರು ವರ್ಷಗಳ ಕಾಲ ಅಧ್ಯಯನ ಮಾಡಿದರು, ಹೊಸದಾಗಿ ಅರ್ಹತೆ ಗಳಿಸಿದ ವೈದ್ಯರಾಗಿ ಐದು ತಿಂಗಳ ಕಾಲ ಸೇವೆ ಸಲ್ಲಿಸಿದ ನಂತರ ಜೇ ಯಂಗ್ NHS ತೊರೆದರು ಹಾಗೂ ಇನ್ವೆಸ್ಟ್‌ಮೆಂಟ್ ಬ್ಯಾಕಿಂಗ್‌ನಲ್ಲಿ ಸೇರಿಕೊಂಡರು.


ರಾತ್ರೋರಾತ್ರಿ ಜೇ ಸಂಬಳ ಮೂರು ಪಟ್ಟು ಅಧಿಕವಾಯಿತು. ಇದು ಒಂದಿಬ್ಬರ ಕಥೆಯಲ್ಲ, ಬ್ರಿಟಿಷ್ ಮೆಡಿಕಲ್ ಅಸೋಸಿಯೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ ಐವರಲ್ಲಿ ಇಬ್ಬರು ಕಿರಿಯ ವೈದ್ಯರು ಉತ್ತಮ ಉದ್ಯೋಗ ದೊರೆತ ಒಡನೆಯೇ ಎನ್‌ಎಚ್‌ಎಸ್ ಅನ್ನು ತೊರೆಯುವ ನಿರ್ಧಾರವನ್ನು ಮಾಡುತ್ತಿದ್ದು 79% ದಷ್ಟು ವೈದ್ಯರು ಎನ್‌ಎಚ್‌ಎಸ್ ಅನ್ನು ತೊರೆಯುವ ಮನಸ್ಸು ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.


ಹುದ್ದೆಗಳನ್ನು ತ್ಯಜಿಸುತ್ತಿರುವ ವೈದ್ಯರುಗಳು


ಸಂಸ್ಥೆಯಲ್ಲಿ ಹದಗೆಡುತ್ತಿರುವ ಪರಿಸ್ಥಿತಿಗಳು ಹಾಗೂ ಹೆಚ್ಚುತ್ತಿರುವ ಕೆಲಸದ ಹೊರೆ, ಕಡಿಮೆ ವೇತನ ಮೊದಲಾದ ಕಾರಣಗಳು ವೈದ್ಯರನ್ನು ಎನ್‌ಎಚ್ಎಸ್ ಅನ್ನು ತೊರೆಯುವಂತೆ ಮಾಡುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.


ಹೊಸ ವೃತ್ತಿ ಜೀವನ ಆಯ್ದುಕೊಳ್ಳುವ ಕ್ಷೇತ್ರಗಳಲ್ಲಿ ನೇಜ್ಮೆಂಟ್ ಕನ್ಸಲ್ಟಿಂಗ್, ಜೊತೆಗೆ ಔಷಧೀಯ ವಲಯವೂ ಸೇರಿದೆ. ಆರೋಗ್ಯ ಸಂಘಗಳು, ಸರ್ಕಾರವು NHS ಸಿಬ್ಬಂದಿಯ ಮೇಲೆ ವರ್ಷಗಳ ನೈಜ-ಅವಧಿಯ ವೇತನ ಕಡಿತವನ್ನು ಹೇರುತ್ತಿದೆ ಎಂದು ಆರೋಪಿಸಿದೆ. ಇದರಿಂದ ನಿರುತ್ಸಾಹಗೊಂಡ ಉದ್ಯೋಗಿಗಳು ಹೆಚ್ಚಿನ ಮಟ್ಟದಲ್ಲಿ ಹುದ್ದೆಗಳನ್ನು ತ್ಯಜಿಸುವುದಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Midlife Career: 40ರ ಬಳಿಕ ಕೆಲಸ ಚೇಂಜ್ ಮಾಡೋ ಪ್ಲ್ಯಾನ್ ಮಾಡ್ತಿದ್ದೀರಾ? ಇಲ್ಲಿವೆ ನೋಡಿ ಬೆಸ್ಟ್ ಆಯ್ಕೆಗಳು


ಕಿರಿಯ ವೈದ್ಯರು ಪಡುತ್ತಿರುವ ಬವಣೆ


ಡಿಸೆಂಬರ್‌ನಿಂದ ದಾದಿಯರು, ಆಂಬ್ಯುಲೆನ್ಸ್ ಕಾರ್ಮಿಕರು ಮತ್ತು ಇತರ ಉದ್ಯೋಗಿಗಳ ಎಚ್ಚರಿಕೆಯ ಮುಷ್ಕರಗಳ ನಂತರ, ಆರೋಗ್ಯ ಒಕ್ಕೂಟಗಳು ಇತ್ತೀಚೆಗೆ ಮಂತ್ರಿಗಳೊಂದಿಗೆ ವೇತನ ಒಪ್ಪಂದವನ್ನು ಮುಂದುವರಿಸುವ ಸಲುವಾಗಿ ಮುಷ್ಕರ ಕ್ರಮವನ್ನು ಹಿಂತೆಗೆದುಕೊಂಡವು.


ಆದರೆ ಕಿರಿಯ ವೈದ್ಯರುಗಳು ತಮ್ಮ ಮುಷ್ಕರವನ್ನು ಮುಂದುವರಿಸುತ್ತಿದ್ದಾರೆ. ಬಹುತೇಕ ಕಿರಿಯ ವೈದ್ಯರು ತಮ್ಮ ವಿದ್ಯುತ್ ಬಿಲ್‌ಗಳನ್ನೂ ಪಾವತಿಸಲು ಕಷ್ಟಪಟ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.


ವೈದ್ಯರಿಗೆ ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ ಆಸಕ್ತಿ ಮೂಡಿದೆ


ಜಾಬ್ಸ್ ವೆಬ್‌ಸೈಟ್ ಇಂಡೀಡ್ ತಿಳಿಸಿರುವಂತೆ, ಸರಾಸರಿ ಉದ್ಯೋಗಾಕಾಂಕ್ಷಿಗಳಿಗೆ ಹೋಲಿಸಿದರೆ ವೈದ್ಯರು ತಮ್ಮ ಕ್ಷೇತ್ರದ ಹೊರಗಿನ ಆಯ್ಕೆಗಳನ್ನು ಅನ್ವೇಷಿಸುವ 20% ಹೆಚ್ಚಿನ ಸಾಧ್ಯತೆ ಇದೆ ಅಂತೆಯೇ ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರದಲ್ಲಿ ವೈದ್ಯರ ಆಸಕ್ತಿ ಹೆಚ್ಚಾಗಿದೆ.


ಬಲವಂತ, ಒತ್ತಡವಲ್ಲ


ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಲು ವೈದ್ಯಕೀಯ ವೃತ್ತಿ ತೊರೆದ ಮಾರ್ಕ್ ಜೆಂಕಿನ್ಸ್ ಪ್ರಕಾರ ಭಾವನಾತ್ಮಕ ಕಾರಣಗಳು ಎನ್‌ಎಚ್‌ಎಸ್‌ನಲ್ಲಿ ಕೆಲಸ ಮಾಡುವ ವೈದ್ಯರನ್ನು ವೃತ್ತಿ ತೊರೆಯುವಂತೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.


ವೈದ್ಯನಾಗಿ ಪ್ರತಿಯೊಬ್ಬರಿಗೂ ವೈಯಕ್ತಿಕ ಆತಂಕವಿರುತ್ತದೆ ಎಂದು ಹೇಳುವ ಜೆಂಕಿನ್ಸ್, ಇಂತಹ ಸನ್ನಿವೇಶಗಳನ್ನು ವೈದ್ಯರು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.


ವೈದ್ಯರು ರೋಗಿಯನ್ನು ಪರಿಶೀಲಿಸುವ ಸಮಯದಲ್ಲಿ ಸರಿಯಾದ ಸಮಯಕ್ಕೆ ಆ ರೋಗಿಯನ್ನು ನೀವು ಪರೀಕ್ಷಿಸಿಲ್ಲ ಎಂದಾದರೆ ಅವರು ನಿಮ್ಮ ಮೇಲೆ ಸಿಟ್ಟಾಗುತ್ತಾರೆ.


ಆದರೆ ಅಂತಿಮವಾಗಿ ವೈಯಕ್ತಿಕ ಯಶಸ್ಸಿನ ಚಿಂತೆ ವೈದ್ಯರನ್ನು ಕಾಡಲಾರಂಭಿಸುತ್ತದೆ. ಅದನ್ನು ನಾನು ಬಲವಂತ ಎಂದು ಕರೆಯುತ್ತೇನೆ ಇದು ಒತ್ತಡವಲ್ಲ ಎಂಬುದು ಜೆಂಕಿನ್ಸ್ ಮಾತಾಗಿದೆ.


ಬುದ್ಧಿಮತ್ತೆಯ ಯುದ್ಧ


ಯುಕೆ ಆರ್ಥಿಕತೆಯು ಬಿಗಿಯಾದ ಕಾರ್ಮಿಕ ಮಾರುಕಟ್ಟೆ ಹಾಗೂ ಪ್ರತಿಭಾ ಯುದ್ಧದಿಂದ ಬಳಲುತ್ತಿದೆ. ಇದರ ನಡುವೆ ಪ್ರತಿಭಾವಂತ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಸಂಸ್ಥೆಗಳು ಉತ್ಸುಕವಾಗಿವೆ.


ಹಲ್ಟ್ ಇಂಟರ್‌ನ್ಯಾಶನಲ್ ಬ್ಯುಸಿನೆಸ್ ಸ್ಕೂಲ್‌ನ ಶೈಕ್ಷಣಿಕ ವ್ಯವಹಾರಗಳ ಡೀನ್ ಇಯಾನ್ ಡೌಗಲ್ ಪ್ರಕಾರ ಹೊಸ ಬುದ್ಧಿಮತ್ತೆಯನ್ನು ಅರಿತುಕೊಳ್ಳುವ ಹಾಗೂ ಅದನ್ನು ಅನ್ವಯಿಸುವ ಸಾಮರ್ಥ್ಯ ವೈದ್ಯರಿಗಿದೆ ಎಂದು ತಿಳಿಸಿದ್ದಾರೆ.

Published by:Latha CG
First published: