ವೈದ್ಯರ (Doctor) ಸೇವೆ ಮತ್ತು ವೈದ್ಯಕೀಯ ಸಮುದಾಯ ವಿಶ್ವದಾದ್ಯಂತ ಸಾಕಷ್ಟು ಗೌರವ ಹೊಂದಿದೆ. ಹೊಸ ಹೊಸ ಸಾಂಕ್ರಾಮಿಕ ರೋಗಗಳು (Pandemic) ಉಲ್ಬಣವಾಗುತ್ತಿರುವ ಈ ಸಮಯದಲ್ಲಿ ವೈದ್ಯರೂ ಕೂಡ ಹೆಚ್ಚಿನ ಸಂಶೋಧನೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಜನರಿಗೆ ಪರಿಹಾರದ ದಿಕ್ಕಾಗುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ನಾವಿನ್ಯತೆ ಎಂಬುವುದು ಅವಶ್ಯಕ. ಅದು ಶಿಕ್ಷಣ, ತಂತ್ರಜ್ಞಾನ, ಅಭಿವೃದ್ಧಿ ಹಾಗೆಯೇ ವೈದ್ಯಕೀಯ ವಲಯವೂ (Medical Fields) ಆಗಿರಬಹುದು.
ಯಾವುದೇ ಕ್ಷೇತ್ರವಾಗಿರಲಿ ಯಶಸ್ಸು ಪಡೆಯಬೇಕು ಎಂದರೆ ಪ್ರಚಲಿತ ಕಾಲಮಾನಕ್ಕೆ ಏನು ಬೇಕು ಅದನ್ನು ಅಳವಡಿಸಿಕೊಳ್ಳಬೇಕು ಮತ್ತು ಕಾರ್ಯರೂಪಕ್ಕೆ ತರಬೇಕು.
ವೈದ್ಯರಿಗೆ ಬೇಕು ಪ್ರಚಲಿತ ಕೌಶಲ್ಯ
ವೈದ್ಯಕೀಯ ಲೋಕ ಈಗ ಹಲವಾರು ಮೈಲುಗಳನ್ನೇ ಸಾಧಿಸಿಬಿಟ್ಟಿದೆ. ಅಂಗಾಂಶ ಕಸಿ, ರೋಬೋಟಿಕ್ ಆಪರೇಷನ್ ಹೀಗೆ ಹತ್ತಾರು ಸಾಧನೆಗಳನ್ನು ಮಾಡಿದ ಖ್ಯಾತಿ ಈ ವಲಯಕ್ಕೆ ಸಲ್ಲುತ್ತದೆ. ಹೀಗೆ ವೈದ್ಯಲೋಕ ಮುಂದೆ ಹೋಗುತ್ತಿದ್ದಂತೆ ವೈದ್ಯರೂ ಕೂಡ ಅದಕ್ಕೆ ತಕ್ಕನಾದ ಕೌಶಲ್ಯಗಳನ್ನು ಹೊಂದುವುದು ಅತ್ಯವಶ್ಯಕ.
ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ನವೀನ ಸಂಶೋಧನೆಗಳು ಮತ್ತು ಆರೋಗ್ಯ ಸೇವೆಗಳಲ್ಲಿನ ಪ್ರಗತಿ, ಆರೋಗ್ಯ ಸಮಾಲೋಚನೆ, ಆರೋಗ್ಯ ಮಾಹಿತಿ, ಆನುವಂಶಿಕ ಸಲಹೆ ಮತ್ತು ಟೆಲಿಮೆಡಿಸಿನ್ ವಿಭಾಗಗಳಲ್ಲಿ ಹೊಸತನವನ್ನು ವೈದ್ಯರು ಅಳವಡಿಸಿಕೊಳ್ಳಬೇಕು. ಇದಕ್ಕೆ ಅಂತಾನೇ ಹಲವಾರು ಮಾರ್ಗಗಳಿವೆ. ಹಾಗಾದರೆ ಮುಂದಿನ ದಿನಗಳಲ್ಲಿ ವೈದ್ಯರೊಬ್ಬರು ಹೇಗೆ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಅದಕ್ಕಿರುವ ಮಾರ್ಗಗಳೇನು ಎಂಬುವುದನ್ನು ನಾವಿಲ್ಲಿ ತಿಳಿಯೋಣ.
ವೈದ್ಯರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಅಳವಡಿಸಿಕೊಳ್ಳಬೇಕಾದ ಮಾರ್ಗಗಳು
ಡಿಜಿಟಲೀಕರಣದ ಬಳಕೆ
ಡಿಜಿಟಲೀಕರಣ ಪ್ರಸ್ತುತದ ಅಭಿವೃದ್ದಿ ಮಂತ್ರ. ಪ್ರತಿ ಉದ್ಯಮದಲ್ಲೂ ಡಿಜಿಟಲೀಕರಣ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿದೆ. ಅಂತೆಯೇ ವೈದ್ಯರು ಕೂಡ ತಮ್ಮ ವೃತ್ತಿ ಬದುಕಿನಲ್ಲಿ ಡಿಜಟಲೀಕರಣಕ್ಕೆ ಒತ್ತು ನೀಡಬೇಕು. ಹೊಸ ಆವಿಷ್ಕಾರಗಳು ಮತ್ತು AI ಮತ್ತು ML ನಂತಹ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳೊಂದಿಗೆ, ಆರೋಗ್ಯ ರಕ್ಷಣೆಯಲ್ಲಿ, ಗುಣಮಟ್ಟ ಮತ್ತು ಆರೈಕೆಯ ದಕ್ಷತೆಯು ಸುಧಾರಿಸುತ್ತಲೇ ಇದೆ.
ಇದನ್ನೂ ಓದಿ: IT Certifications: ಐಟಿ ಉದ್ಯೋಗಿಗಳೇ, 2023ರಲ್ಲಿ ಈ 7ರಲ್ಲಿ ಒಂದಾದರೂ ಕೋರ್ಸ್ ಮಾಡಿದ್ರೆ ಮಾತ್ರ ಡಿಮ್ಯಾಂಡ್
ಡಿಜಿಟಲ್ ಉಪಕ್ರಮಗಳು, ವಿಶೇಷವಾಗಿ ಕೋವಿಡ್ ಸಮಯದಲ್ಲಿ ಹೆಚ್ಚಾಗಿದೆ. ಹೆಲ್ತ್ಕೇರ್ ಸ್ಟಾರ್ಟ್ಅಪ್ಗಳು, ತಂತ್ರಜ್ಞಾನ ಕಂಪನಿಗಳು ಡಿಜಿಟಲ್ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲು ಜಾರಿಗೆ ಬಂದಿವೆ. ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಈ ಅಂಶವನ್ನು ಅಳವಡಿಸಿಕೊಳ್ಳಬಹುದು.
ಡಿಜಿಟಲ್ ಮಾಧ್ಯಮ ಮತ್ತು ಪರಿಹಾರಗಳು
ಡಿಜಿಟಲ್ ಮಾಧ್ಯಮ ಮತ್ತು ಪರಿಹಾರಗಳು ವೈದ್ಯರಿಗೆ ಅವರ ಕೌಶಲ್ಯ ಹೆಚ್ಚಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ. ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ಗಳು, ಕಾರ್ಯಾಗಾರಗಳು ಮತ್ತು ಆನ್ಲೈನ್ ಕಾನ್ಫರೆನ್ಸ್ಗಳಂತಹ ತಂತ್ರಜ್ಞಾನವು ವೈದ್ಯರಿಗೆ ಇತ್ತೀಚಿನ ಬೆಳವಣಿಗೆಗಳ ಕುರಿತು ನವೀಕೃತವಾಗಿರಲು ಸಹಾಯ ಮಾಡುತ್ತದೆ.
ಪ್ರಸ್ತುತ ಕೆಲವು ನಿರ್ಣಾಯಕ ಶಸ್ತ್ರಚಿಕಿತ್ಸೆಗಳನ್ನು ಸಹ ಆಪರೇಷನ್ ಥಿಯೇಟರ್ಗಳಿಂದ ನೇರ ಪ್ರಸಾರ ಮಾಡಲಾಗುತ್ತದೆ. ತಜ್ಞರು ಹೇಗೆಲ್ಲಾ ಅಂತಹ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಆರಂಭಿಕ ಹಂತದಲ್ಲಿರುವ ವೈದ್ಯರು ನೋಡಿತಿಳಿದುಕೊಳ್ಳಬಹುದು.
ಹೆಚ್ಚಿನ ಜ್ಞಾನವನ್ನು ಪಡೆಯಲು ಇಂತಹ ಡಿಜಿಟಲ್ ಫ್ಲಾಟ್ಫಾರ್ಮ್ಗಳನ್ನು ವೈದ್ಯರು ಬಳಸಿಕೊಳ್ಳಬಹುದು. ಆಪರೇಷನ್ ಕೊಠಡಿಯ ಲೈವ್ ಸ್ಟ್ರೀಮಿಂಗ್, ಸೆಮಿನಾರ್ಗಳು, ವೆಬ್ನಾರ್ಗಳು, ವೀಡಿಯೊ ಕಂಟೆಂಟ್, ಹ್ಯಾಂಡ್-ಆನ್-ವರ್ಕ್ಶಾಪ್ಗಳಂತಹ ಈವೆಂಟ್ಗಳು ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ, ಬಹಳಷ್ಟು ಆಸ್ಪತ್ರೆಗಳು ಡಿಜಿಟಲ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿವೆ ಮತ್ತು ತಮ್ಮ ಸಿಬ್ಬಂದಿಗೂ ಸಹ ತರಬೇತಿ ನೀಡುತ್ತಿವೆ ಮತ್ತು ಪ್ರಮಾಣಪತ್ರ ಕಾರ್ಯಾಗಾರಗಳನ್ನು ಸಹ ನಡೆಸುತ್ತಿವೆ.
ಫಿಜಿಟಲ್
ಸರ್ಕಾರಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು-ಎಲ್ಲವೂ ಹೆಚ್ಚು ಡಿಜಿಟಲ್ ಆಗುತ್ತಿವೆ, ಅಲ್ಲಿ ಹೆಚ್ಚಿನ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ವೈದ್ಯರಿಗೆ ಹೆಚ್ಚಿನ ಡಿಜಿಟಲ್ ಪರಿಹಾರಗಳು ಲಭ್ಯವಿವೆ. ಎಂಬಿಬಿಎಸ್ ವಿದ್ಯಾರ್ಥಿಗಳಾಗಿರಲಿ ಅಥವಾ ಅಭ್ಯಾಸ ಮಾಡುವ ವೈದ್ಯರಾಗಿರಲಿ ಕಾರ್ಯಾಗಾರಗಳು ಡಿಜಿಟಲ್ನಲ್ಲಿ ನಡೆಯುತ್ತವೆ.
ವೈದ್ಯಲೋಕದಲ್ಲಿ ಡಿಜಿಟಲ್ ಕಲ್ಪನೆ ಫಿಜಿಟಲ್ ಆಗಿದೆ. ಅಂದರೆ ಒಂದು ಭಾಗ ಡಿಜಿಟಲ್ ಮತ್ತು ಒಂದು ಭಾಗ ಭೌತಿಕ ಎಂದರ್ಥ. ಫಿಜಿಟಲ್ ಎನ್ನುವುದು ಭೌತಿಕ ಮತ್ತು ಡಿಜಿಟಲ್ ಬೆಳವಣಿಗೆಗಳ ಒಮ್ಮುಖವಾಗಿದೆ.
ಹೊಸ ಆವಿಷ್ಕಾರಗಳು ನ್ಯಾನೊತಂತ್ರಜ್ಞಾನ, ರೊಬೊಟಿಕ್ಸ್ ಮತ್ತು ಕನೆಕ್ಟಿವಿಟಿಯಂತಹ ಕ್ಷೇತ್ರಗಳಲ್ಲಿ 'ಭೌತಿಕ' ಜಗತ್ತನ್ನು ವಿಸ್ತರಿಸುತ್ತಿವೆ ಮತ್ತು ಮೆಡ್ಟೆಕ್ ಮತ್ತು ಸಾಧನದಲ್ಲಿ, 'ಡಿಜಿಟಲ್' ಜಗತ್ತಿನಲ್ಲಿ, ಆರಂಭಿಕ ಪತ್ತೆ, ರೋಗನಿರ್ಣಯ ಮತ್ತು ಚಿಕಿತ್ಸೆಗಳಲ್ಲಿ AI ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಅಪ್ಲಿಕೇಶನ್
ದೂರದ ಪ್ರದೇಶಗಳಲ್ಲಿ ಅಭ್ಯಾಸ ಮಾಡುವ ವೈದ್ಯರಿಗೆ ಹೊಸ ರೋಗನಿರ್ಣಯ ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಹೆಚ್ಚಿನ ಹೊಸ ಮಾಹಿತಿಯೊಂದಿಗೆ ವೈದ್ಯಕೀಯ ಸೆಮಿನಾರ್ಗಳು ಮತ್ತು ಕಾರ್ಯಾಗಾರಗಳಿಗೆ ಹಾಜರಾಗಲು, ಆರೋಗ್ಯ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ನವೀಕೃತವಾಗಿರಲು ಕಷ್ಟಸಾಧ್ಯವಾಗಬಹುದು.
ಅಂತಹ ವೈದ್ಯರಿಗೆ ಮೆಡಿಸೇಜ್ ಪ್ಲಾಟ್ಫಾರ್ಮ್ನಂತಹ ಇಂಟರ್ನೆಟ್ ಸೇವೆಗಳು ಸಹಾಯ ಮಾಡುತ್ತವೆ. ವೈದ್ಯರು ತಮ್ಮ ಕೌಶಲ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಉತ್ತಮಗೊಳಿಸಿಕೊಳ್ಳಲು ಈ ಅಪ್ಲಿಕೇಶನ್ಗಳು ಸಹಾಯ ಮಾಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ