• ಹೋಂ
  • »
  • ನ್ಯೂಸ್
  • »
  • Jobs
  • »
  • Career: ವೃತ್ತಿ ಜೀವನ ಸುಖವಾಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​​ ಫಾಲೋ ಮಾಡಿ

Career: ವೃತ್ತಿ ಜೀವನ ಸುಖವಾಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​​ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸುಸ್ಥಿರ ವೃತ್ತಿಜೀವನದ ಪ್ರಯಾಣವು ಹೂವಿನ ಹಾದಿಯಾಗಿರುವುದಿಲ್ಲ ಬದಲಾಗಿ ಇಲ್ಲಿ ಅನೇಕ ಸವಾಲುಗಳಿರುತ್ತವೆ. ಹಾಗಾಗಿ ಯಾವಾಗಲೂ ಜಾಗರೂಕರಾಗಿರಬೇಕು.

  • Share this:

ಜೀವನ ನಡೆಸಲು ಕೆಲಸ (Job) ಅನ್ನೋದು ತುಂಬಾ ಅತ್ಯಗತ್ಯ, ನಮ್ಮ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು (Story), ಆಸೆಗಳನ್ನು, ಇಷ್ಟಗಳನ್ನು ಈ ಕೆಲಸ ಪೂರೈಸುತ್ತದೆ ಎನ್ನಬಹುದು. ಕೆಲಸ ಎಂದರೆ ಯಾವುದೋ ಸಿಕ್ಕಿದ್ದನ್ನು ಮಾಡುವ ಪ್ರವೃತ್ತಿ, ಮನೋಭಾವ ಈಗ ಸ್ವಲ್ಪ ಬದಲಾಗಿದೆ. ಸುಸ್ಥಿರ ವೃತ್ತಿಜೀವನದ ಅಭಿಲಾಷೆ ಹೆಚ್ಚಿದೆ. ನಮ್ಮ ಇಷ್ಟಗಳಿಗೆ, ಕೌಶಲ್ಯ (Skill), ಬುದ್ಧಿ, ಓದು, ಪದವಿಗೆ ತಕ್ಕ ಕೆಲಗಳನ್ನು ಹುಡುಕುವ ಅಭ್ಯಾಸ ಹೆಚ್ಚಿದೆ. ಹೀಗೆ ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡ ವೃತ್ತಿಜೀವನದ (Career Life) ಆರಂಭ ನಮ್ಮ ಮುಂದಿನ ಮತ್ತು ಕರಿಯರ್‌ಗೆ ಭದ್ರ ಬುನಾದಿ ಆಗಬಹುದು.


ಹೀಗೆ ನೀವು ಆರೋಗ್ಯಕರ ಕೆಲಸ-ಜೀವನದ ಸಮತೋಲನವನ್ನು ಹೊಂದಲು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದರೆ ನಿಮಗೆ ಬೇಕಾದ ಉದ್ಯೋಗವನ್ನು ಹುಡುಕಿ ಅಲ್ಲಿ ಸುಸ್ಥಿರ ವೃತ್ತಿಜೀವನವನ್ನು ಕಂಡುಕೊಳ್ಳುವುದು ಹೇಗೆ? ಅದಕ್ಕಿರುವ ಹಂತಗಳೇನು ಎಂಬುದನ್ನು ನೋಡೋಣ.


ಜೀವನದಲ್ಲಿ ಯಶಸ್ಸು ಕಾಣುವುದು ಹೇಗೆ? 


ಮೊದಲಿಗೆ ವೃತ್ತಿ ಜೀವನದಲ್ಲಿ ಯಶಸ್ಸು, ಅದರಲ್ಲಿ ಬೇರು ಬಿಡಬೇಕು ಎಂದರೆ ನೀವು ನಿಮಗಿಷ್ಟದ ಉದ್ಯೋಗವನ್ನು ಆರಿಸಿಕೊಳ್ಳಬೇಕು. ಅಂದರೆ ನೀವು ನಿಮ್ಮ ಮೌಲ್ಯ ಮತ್ತು ನಿಮ್ಮ ಬಯಕೆ, ಭಾವೋದ್ರೇಕದ ಜೊತೆ ಯಾವುದೇ ರೀತಿ ರಾಜಿ ಮಾಡಿಕೊಳ್ಳದೇ ಕೆಲಸ ಹುಡುಕಿ ವೃತ್ತಿಜೀವನ ಕಟ್ಟಿಕೊಳ್ಳಬೇಕು. ಇಲ್ಲಿ ನಿಮ್ಮ ಮೌಲ್ಯಗಳು ಮತ್ತು ಉತ್ಸಾಹದೊಂದಿಗೆ ಯಾವ ರೀತಿಯ ಉದ್ಯೋಗಗಳು, ವೃತ್ತಿಗಳು ಹೆಚ್ಚಾಗಿ ನಿಮಗೆ ಹೊಂದಾಣಿಕೆಯಾಗುತ್ತವೆ ಎಂಬುದನ್ನು ಮೊದಲಿಗೆ ಗುರುತಿಸಿ ಅಂತಹ ಕೆಲಸ ಹುಡುಕಿ ಮುಂದುವರೆಯಿರಿ.


ಇದನ್ನೂ ಓದಿ: Highest Salary Jobs: ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ 8 ಉದ್ಯೋಗಗಳ ಬಗ್ಗೆ ಮಾಹಿತಿ ಇಲ್ಲಿದೆ


ವೃತ್ತಿ ಆಯ್ಕೆಗಳ ಬಗ್ಗೆ ಸಂಶೋಧನೆ ಮಾಡಿ
ನಿಮ್ಮ ಆಸಕ್ತಿಗಳು ಮತ್ತು ಮೌಲ್ಯಗಳಿಗೆ ಹೊಂದಿಕೆಯಾಗುವ ಉದ್ಯೋಗಗಳು ಮತ್ತು ಉದ್ಯಮಗಳನ್ನು ಹುಡುಕುವ ಹಂತದಲ್ಲಿ ನೀವು ಇವುಗಳ ಬಗ್ಗೆ ಹೆಚ್ಚಿನದ್ದನ್ನು ತಿಳಿಯಲು ಸಂಶೋಧನೆ ಮಾಡಿ. ಈ ವಿಷಯದಲ್ಲಿ ನಿಮ್ಮನ್ನು ನೀವು ಮಿತಿಗೊಳಿಸಿಕೊಳ್ಳಬಾರದು. ವಿಶ್ವಾಸಾರ್ಹರಾದಂತಹ ವೃತ್ತಿಪರರೊಂದಿಗೆ ಸಮಾಲೋಚಿಸಿ ಆಯ್ಕೆಗಳ ಬಗ್ಗೆ ಕೇಳುವುದು, ಅಥವಾ ಇಂಟರ್ನೆಟ್‌ನ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ನೀವು ಈ ಬಗ್ಗೆ ರಿಸರ್ಚ್‌ ಮಾಡಬಹುದು.


ಇದಕ್ಕಾಗಿ ನೀವು ಉದ್ಯಮದ ಈವೆಂಟ್‌ಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಬಹುದು, ವೃತ್ತಿಪರ ಸಂಸ್ಥೆಗಳಿಗೆ ಸೇರಬಹುದು ಮತ್ತು ನಿಮ್ಮ ಬಯಸಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರನ್ನು ಭೇಟಿ ಮಾಡಿ ಕೂಡ ತಿಳಿಯಬಹುದು.


ಅನುಭವ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳಿ
ನಿಮ್ಮ ಇಷ್ಟದ, ಹೊಂದಿಕೆಯಾಗುವ ಕೆಲಸ ಸಿಕ್ಕ ನಂತರ ಅದಕ್ಕೆ ಬೇಕಾದ ಅನುಭವ ಮತ್ತು ಕೌಶಲ್ಯಗಳನ್ನು ಪಡೆಯುವ ಮುಂದಿನ ಹಂತಕ್ಕೆ ಸಾಗಿ.
ಇದಕ್ಕಾಗಿ ನೀವು ಯಾವುದಾದರೂ ಕ್ಲಾಸ್​ ಸೇರಿಕೊಳ್ಳಬಹುದು.
ರಿಸ್ಕ್ ತೆಗೆದುಕೊಳ್ಳಲು ತಯಾರಾಗಿ
ಯಾವುದೇ ಕೆಲಸ ಆದರೂ ಅಲ್ಲಿ ಸುಲಭದ ಮತ್ತು ಕಷ್ಟದ ಹಂತಗಳಿರುತ್ತವೆ. ಹೀಗಾಗಿ ಆರಾಮ ವಲಯದಿಂದ ಹೊರಬಂದು ಸವಾಲುಗಳನ್ನು ತೆಗೆದುಕೊಳ್ಳಲು ತಯಾರಾಗಿರಿ. ನಿಮ್ಮಿಷ್ಟದ ಕೆಲಸ ಸಿಕ್ಕ ನಂತರ ಸುಸ್ಥಿರ ವೃತ್ತಿ ಜೀವನ ಕಟ್ಟಿಕೊಳ್ಳಲು ಈ ಹಂತವನ್ನೂ ಎದುರಿಸಬೇಕು.


ಹೊಂದಿಕೊಳ್ಳುವ ಮತ್ತು ಹೊಸ ಅವಕಾಶಗಳಿಗೆ ಮುಕ್ತವಾಗಿರಿ
ಹೊಂದಿಕೊಳ್ಳುವ ಮತ್ತು ಹೊಸ ಅವಕಾಶಗಳಿಗೆ ತೆರೆದುಕೊಳ್ಳುವುದು ಅತ್ಯಗತ್ಯ. ನಿಮ್ಮ ವೃತ್ತಿಜೀವನದ ಹಾದಿಯಲ್ಲಿ ನೀವು ಹೊಂದಿಕೊಳ್ಳುವ ಅಗತ್ಯವಿರುತ್ತದೆ. ಹೀಗಾಗಿ ಕೆಲಸಕ್ಕೆ ಹೊಂದಿಕೊಳ್ಳುವ ನಿಮ್ಮ ಮನಸ್ಸನ್ನು ಜಾಗೃತಗೊಳಿಸಿ. ಅಷ್ಟೇ ಅಲ್ಲದೇ ಅವಕಾಶಗಳನ್ನು ಸ್ವಾಗತಿಸಲು ಮತ್ತು ಅವುಗಳಿಗೆ ತೆರೆದುಕೊಳ್ಳಲು ಹಿಂಜರಿಯಬೇಡಿ.


ಸುಸ್ಥಿರ ವೃತ್ತಿಜೀವನದ ಪ್ರಯಾಣವು ಹೂವಿನ ಹಾದಿಯಾಗಿರುವುದಿಲ್ಲ ಬದಲಾಗಿ ಇಲ್ಲಿ ಅನೇಕ ಸವಾಲುಗಳಿರುತ್ತವೆ. ಹೀಗಾಗಿ ಇಲ್ಲಿ ನೀವು ಕುತೂಹಲದಿಂದ ಇರಲು ಮುಕ್ತರಾಗಿರಬೇಕು ಮತ್ತು ನೀವು ಬೆಳೆದಂತೆ ಕಲಿಕೆಯನ್ನು ಮುಂದುವರಿಸಬೇಕು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು