• ಹೋಂ
  • »
  • ನ್ಯೂಸ್
  • »
  • Jobs
  • »
  • Career Break: ಕೆಲಸದಿಂದ ಆಗಾಗ ಬ್ರೇಕ್ ತೆಗೆದುಕೊಳ್ಳುವವರೇ ಸಕ್ಸಸ್​ಫುಲ್​ ಉದ್ಯೋಗಿ ಆಗ್ತಾರಂತೆ!

Career Break: ಕೆಲಸದಿಂದ ಆಗಾಗ ಬ್ರೇಕ್ ತೆಗೆದುಕೊಳ್ಳುವವರೇ ಸಕ್ಸಸ್​ಫುಲ್​ ಉದ್ಯೋಗಿ ಆಗ್ತಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಮ್ಮೊಮ್ಮೆ ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಮೂಲಕ ನಿಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ  ವಿಶ್ರಾಂತಿ ಒದಗಿಸುತ್ತಿರಬೇಕು. ನೀವು ಈ ಸಮಯದಲ್ಲಿ ಏನೂ ಮಾಡದೇ ಹೋದರೂ ನಿಮ್ಮ ಮನಸ್ಸು ಹಾಗೂ ಶರೀರ ಸಾಕಷ್ಟು ಕ್ರಿಯಾಶೀಲವಾಗಬಹುದು.

  • Trending Desk
  • 5-MIN READ
  • Last Updated :
  • Share this:

    ಇಂದಿನ ಸಾಕಷ್ಟು ಯುವಕರು ಅಥವಾ ವಯಸ್ಕರು ಒಂದಾದ ಮೇಲೊಂದಂರಂತೆ ಕೆಲಸಗಳನ್ನು (Jobs) ನಿರ್ವಹಿಸುತ್ತಲೇ ಇರುತ್ತಾರೆ. ಈಗ ಜನರಿಗೆ ಪುರುಸೋತ್ತಿಲ್ಲ. ಬ್ರೇಕ್​ ಪಡೆಯುವ ಹಂಬಲವಿಲ್ಲ. ಏನಿದ್ದರೂ ಒಂದು ಯೋಜನೆ ಮುಗಿಸಿದರೆ ಸಾಕು ಇನ್ನೊಂದು ಯೋಜನೆಗೆ ಕೈಹಾಕಿಯೇ ಬಿಡುತ್ತಾರೆ. ಒಟ್ಟಿನಲ್ಲಿ ಇಂದಿನ ಸ್ಪರ್ಧಾತ್ಮಕತೆಗೆ (Competitive) ತಕ್ಕಂತೆ ಬಹು ಜನರು ಕೆಲಸದ ವಿಷಯದಲ್ಲಿ ತಾವು ಮುಂದಿರುವಂತೆ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತಾರೆ.


    ಅದರಲ್ಲೂ ಈಗ ರಿಮೋಟ್ ಕೆಲಸದ ಸೌಲಭ್ಯವಿದೆ. ನಿರಂತರ ನೆಟ್ ಸಂಪರ್ಕವಿರುತ್ತದೆ. ಹಾಗಾಗಿ ಕೆಲಸವು ಅವಿರತವಾಗಿ ನಡೆಯುತ್ತಲೇ ಇರುತ್ತದೆ. ಹಲವು ಜನರಿಗೆ ಮನೆಯಲ್ಲೇ ಕೆಲಸ ಮಾಡಬಹುದಾಗಿರುವುದರಿಂದ ಹೆಚ್ಚಿನ ಸಮಯ ಉಳಿದು ಸಾಕಷ್ಟು ಪ್ರಾಡಕ್ಟಿವಿಟಿ ತೋರಿಸುತ್ತಾರೆ. ಆದರೆ, ಇಷ್ಟೊಂದು ನಿರಂತರವಾಗಿ, ಸ್ವಲ್ಪವೂ ವಿರಾಮಗಳಿಲ್ಲದೆ ಕೆಲಸ ಮಾಡುವುದು ನಿಜಕ್ಕೂ ಉತ್ತಮ ರೂಢಿಯೇ? ಈ ಕುರಿತು ಒಂದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ಮುಖ್ಯವಾಗಿದೆ.


    ದಿನದ ಎಲ್ಲ ಸಮಯವೂ ಬ್ಯುಸಿಯಾಗಿರುವುದು, ಏನಾದರೂ ಕೆಲಸ ಮಾಡುತ್ತಲೇ ಇರುವುದು ಒಂದು ರೀತಿಯ ಫ್ಯಾಶನ್ ಆಗಿ ಪರಿಗಣಿಸಲ್ಪಡುತ್ತದೆ. ಆದರೆ, ಪ್ರತಿಯೊಂದಕ್ಕೂ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಪ್ರಾರಂಭದಲ್ಲಿ ಒಂದು ಉತ್ತೇಜನಕಾರಿ ಅನುಭವ ನೀಡುವಂತಿದ್ದರೂ ಈ ರೀತಿಯ ಬ್ಯುಸಿ ಶೆಡ್ಯೂಲ್ ಕ್ರಮೇಣ ನಿಮ್ಮ ದಿನಗಳನ್ನು ಅಲ್ಪಗೊಳಿಸುತ್ತವೆ. ನಿಮಗೆ ಹಾಯಾಗಿ ಸ್ವಲ್ಪ ವಿಶ್ರಾಂತಿಯೂ ಸಹ ಸಿಗದಂತೆ ಅಡಕತ್ತರಿಯಲ್ಲಿ ಸಿಕ್ಕಿಸುತ್ತದೆ. ಇದರಿಂದ ನಿಮ್ಮಲ್ಲಿ ಒಂದು ಉಸಿರುಗಟ್ಟುತ್ತಿರುವಂತಹ ಅನುಭವ ಉಂಟಾಗಲು ಪ್ರಾರಂಭಿಸುತ್ತದೆ.


    Career Tips how to choose right career as far your dreams
    ಸಾಂದರ್ಭಿಕ ಚಿತ್ರ


    ಹಾಗಾಗಿ ಜೀವನದಲ್ಲಿ ಕೆಲಸ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಸಮತೋಲನದಲ್ಲಿ ಕಾಪಾಡಿಕೊಂಡು ಹೋಗುವುದು  ಮುಖ್ಯ. ಮಾನಸಿಕವಾಗಿ ಶಾಂತವಾಗಿರಲು ಹಾಗೂ ಇನ್ನಷ್ಟು ಸಾಮರ್ಥ್ಯದನುಸಾರವಾಗಿ ಕೆಲಸ ಮಾಡಲು ಆಗಾಗ ವಿರಾಮ ತೆಗೆದುಕೊಳ್ಳುವುದು ಹಾಗೂ ಕೆಲಸದ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿರುಸುವುದು ಮುಖ್ಯವಾಗುತ್ತದೆ.


    ಅತಿಯಾದ ಕೆಲಸದ ಮೌಲ್ಯಗಳಿರುವುದು ಶಾಪವೇ ಅಥವಾ ವರದಾನವೆ?


    ನಾವು ಸಾಮಾನ್ಯವಾಗಿ ಕೆಲಸದ ದೃಷ್ಟಿಯಿಂದ ನೋಡಿದಾಗ ಉದ್ಯೋಗಿಯೊಬ್ಬ ಕೆಲಸಕ್ಕೆ ಸಂಬಂಧಿಸಿದಂತೆ ಗಟ್ಟಿಯಾದ ವೃತ್ತಿಪರ ಮೌಲ್ಯಗಳು ಅಥವಾ ನೀತಿಗಳನ್ನು ಹೊಂದಿರಬೇಕೆಂದು ನಂಬಿರುತ್ತೇವೆ. ಈ ಬಗ್ಗೆ ತಮ್ಮದೆ ಆದ ಒಂದು ಅನುಭವವನ್ನು ಬಿಚ್ಚಿಡುವ ವ್ಯಕ್ತಿಯೊಬ್ಬರು ಈ ಕೆಳಗಿನಂತೆ ನುಡಿಯುತ್ತಾರೆ.


    "ಒಂದು ವರ್ಷದ ಹಿಂದೆ ನಾನು ನನ್ನದೆ ಆದ ಉದ್ಯಮ ಆರಂಭಿಸಲು ಕಾರ್ಪೊರೇಟ್ ಕೆಲಸ ತೊರೆದೆ. ನನ್ನ ಕನಸಿನ ಆ ಉದ್ಯಮ ಬೆಳೆಸಲು ಹಗಲು-ರಾತ್ರಿ ನಿರಂತರ ದುಡಿಯುತ್ತಿದ್ದೆ. ನಾನು ನನ್ನ ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದೆ.


    ಇದನ್ನೂ ಓದಿ: Career Success Tips: ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 10-10-10 ಸೂತ್ರ ಬಳಸಿ


    ಹೀಗಿರುವಾಗ ಒಂದೊಮ್ಮೆ ಅಡುಗೆ ಮನೆಯಲ್ಲಿ ಯಾವ ಸೂಚನೆಯೂ ಇಲ್ಲದೆ ಪ್ರಜ್ಞೆ ಕಳೆದುಕೊಂಡು ಬಿದ್ದೆ. ಆ ಸಮಯದಲ್ಲಿ ನನಗೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಆದರೆ ನಿರಂತರ ಕೆಲಸ ನನ್ನ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು." ಮುಂದುವರೆಯುತ್ತ ಆ ವ್ಯಕ್ತಿ ತಮ್ಮ ಕೆಲಸದ ಜೀವನದಲ್ಲಿ ಅವರು ಎಂದಿಗೂ ವಿರಾಮ ಪಡೆಯುವ ಜಾಯಮಾನ ಹೊಂದಿಲ್ಲದವರಾಗಿದ್ದು ಸದಾ ಕಠಿಣ ಪರಿಶ್ರಮ ಹಾಗೂ ನಿರಂತರ ಕೆಲಸ ಮಾಡುವಿಕೆಯಲ್ಲಿ ವಿಶ್ವಾಸ ಇರಿಸಿದ್ದರು.




    ಆದರೆ, ಹತ್ತು ವರ್ಷಗಳ ಅನುಭವದಲ್ಲಿ ಅವರಿಗೆ ಈ ರೀತಿಯ ನಿರಂತರ ಕೆಲಸ ಹಾಗೂ ಆಗಾಗ ತೆಗೆದುಕೊಳ್ಳಬಹುದಾದ ವಿರಾಮದ ಅಗತ್ಯದ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವಂತಾಯಿತು.


    ನಿಮಗಿಷ್ಟವಾಗುವ ಕೆಲಸ ಮಾಡುವುದೂ ಒಮ್ಮೊಮ್ಮೆ ನಿಮ್ಮನ್ನು ಕಳೆದುಕೊಳ್ಳುವಂತೆ ಮಾಡುತ್ತದೆ


    ಸಾಮಾನ್ಯವಾಗಿ ಇಷ್ಟವಾಗದ ಕೆಲಸವನ್ನು ನಾವು ಮಾಡಲು ಪ್ರಾರಂಭಿಸಿದಾಗ ಅತಿ ಶೀಘ್ರದಲ್ಲಿಯೇ ನಾವು ಅದರಿಂದ ವಿಮುಕ್ತರಾಗಿ ನೆಮ್ಮದಿಯನ್ನೇ ಕಳೆದುಕೊಂಡು ಬಿಡುತ್ತೇವೆ. ಆದರೆ, ಇನ್ನೊಂದೆಡೆ ನಮಗಿಷ್ಟವಾಗುವ ಕೆಲಸವನ್ನು ನಾವು ನಿತ್ಯವೂ ಆನಂದಿಸಲು ಪ್ರಾರಂಭಿಸುತ್ತೇವೆ.


    ಆದರೆ, ನಿಮಗೆ ಗೊತ್ತಿರಲಿ, ನಿಮಗಿಷ್ಟವಾಗುವಂತಹ ಕೆಲಸವೂ ನಿಮ್ಮನ್ನು ಕಳೆದುಕೊಳ್ಳುವಂತೆ ಮಾಡಬಹುದು. ಜನಪ್ರೀಯವಾಗಿ ಹೇಳಲಾಗುವ "ನೀವು ಮಾಡುತ್ತಿರುವುದನ್ನು ತುಂಬಾ ಪ್ರೀತಿಸುತ್ತಿದ್ದರೆ, ನೀವು ನಿಮ್ಮ ಜೀವನದಲ್ಲಿ ಒಂದು ದಿನವೂ ಕೆಲಸ ಮಾಡಲಾರಿರಿ" ಎಂಬುದನ್ನು ನೆನಪಿಟ್ಟುಕೊಳ್ಳಬೇಕು.


    ಮೇಲಿನ ಜನಪ್ರೀಯ ವಾಕ್ಯವು ಕೆಲವರ ವಿಷಯದಲ್ಲಿ ಸತ್ಯವಾದ ಮಾತಾಗಿದ್ದರೂ, ಸಾಮಾನ್ಯವಾಗಿ ಕೆಲಸ ಕೇಂದ್ರಿತವಾದಂತಹ ಜೀವನ ಸಾಕಷ್ಟು ಕಷ್ಟಕರವಾಗಿರುತ್ತದೆ. ಅಮೆರಿಕದಲ್ಲಿ ನಡೆಸಲಾಗಿರುವ ಸಮೀಕ್ಷೆಯೊಂದರಲ್ಲಿ 83% ಜನರು ಅವರು ಅತಿಶಯವಾದ ಕೆಲಸದ ಒತ್ತಡದಿಂದ ಬಳಲುತ್ತಿರುವುದಾಗಿ ಅಲವತ್ತುಕೊಂಡಿದ್ದಾರೆ.


    How to Navigate a Mid Life Career Crisis
    ಸಾಂದರ್ಭಿಕ ಚಿತ್ರ


    ಯಾವುದೇ ಇರಲಿ ಒಂದು ಇತಿ-ಮಿತಿ ಎಂಬುದಿರುತ್ತದೆ. ಕೆಲಸದ ವಿಷಯದಲ್ಲೂ ಸಹ ಇದು ಸತ್ಯವಾಗಿದೆ. ಕೆಲಸ ಎಷ್ಟೇ ಚೆನ್ನಾಗಿದೆ ಎಂದೆನಿಸಿದರೂ ಅದನ್ನು ಮಾಡುವ ನಿಮ್ಮ ದೇಹಕ್ಕೆ ಅದರದ್ದೆ ಆದ ಒಂದು ಮಿತಿ ಇರುತ್ತದೆ. ಈ ಮೀತಿಯನ್ನು ಮೀರಿದಾಗ ಶಾರೀರಿಕ ಹಾಗೂ ಮಾನಸಿಕವಾಗಿ ಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.


    ವಿರಾಮ ತೆಗೆದುಕೊಳ್ಳುವ ಮೂಲಕ ಮತ್ತೆ ಉತ್ಸಾಹಿ ಹಾಗೂ ಶಕ್ತಿಭರಿತರಾಗಿ


    ಕೆಲಸದಲ್ಲಿ ಆಗಾಗ ವಿರಾಮ ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದು ನಿಜಕ್ಕೂ ಮನಸ್ಸಿನ ಮೇಲಾಗುವ ಒತ್ತಡವನ್ನು ಪರಿಣಾಮಕಾರಿಯಾಗಿ ಶಮನ ಮಾಡಬಹುದು. ನಿಮ್ಮ ಜೀವನದಲ್ಲಿ ವರ್ಕ್ ಲೈಫ್ ಬ್ಯಾಲನ್ಸ್ ಅನ್ನು ಸರಿಯಾಗಿರಿಸಿಕೊಂಡು ಹೋಗಲು ವಿರಾಮಗಳು ಅಗತ್ಯವಾಗಿವೆ.


    ನಿಮಗೆ ಕೆಲಸ ಇಷ್ಟವಾದರೂ ವೈಯಕ್ತಿಕ ಜೀವನದಲ್ಲೂ ಕೆಲವು ಇಷ್ಟಪಡುವ ಹವ್ಯಾಸಗಳಿರಬಹುದು, ಚಟುವಟಿಕೆಗಳಿರಬಹುದು. ನೀವು ವಿರಾಮ ತೆಗೆದುಕೊಂಡಾಗ ನಿಮ್ಮಲ್ಲಿರುವ ಆ ವಿಶೇಷ ಕ್ರಿಯೆಗಳನ್ನು ಮನಬಿಚ್ಚಿ ಮಾಡಿ. ಇವು ನಿಮ್ಮಲ್ಲಾಗಿರುವ ಒತ್ತಡವನ್ನು ಕ್ಷಣ ಮಾತ್ರದಲ್ಲೇ ನಿವಾರಿಸಬಹುದು.




    ಒಮ್ಮೊಮ್ಮೆ ಸುಮ್ಮನಿರುವುದು ಸಹ ಕ್ರಿಯಾಶೀಲತೆಯಾಗಬಹುದು


    ಒಮ್ಮೊಮ್ಮೆ ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಮೂಲಕ ನಿಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ  ವಿಶ್ರಾಂತಿ ಒದಗಿಸುತ್ತಿರಬೇಕು. ನೀವು ಈ ಸಮಯದಲ್ಲಿ ಏನೂ ಮಾಡದೇ ಹೋದರೂ ನಿಮ್ಮ ಮನಸ್ಸು ಹಾಗೂ ಶರೀರ ಸಾಕಷ್ಟು ಕ್ರಿಯಾಶೀಲವಾಗಬಹುದು. ಅದಕ್ಕೆ ಬೇಕಾದಂತಹ ಪ್ರಚೋದಕತೆ ಅಥವಾ ಉತ್ತೇಜನ ಸಿಗಬಹುದು.


    ಒಟ್ಟಾರೆಯಾಗಿ ವೃತ್ತಿಯನ್ನು ಕಟ್ಟಿಕೊಳ್ಳುವಾಗ ಕೆಲಸದ ಹೇಗೆ ಮಹತ್ವ ಆಗಿದೆಯೋ ಆಗಾಗ ವಿರಾಮ ಪಡೆಯುವುದು ಸಹ ಅಷ್ಟೇ ಮಹತ್ವವಾಗಿದೆ. ಇದನ್ನು ಇನ್ನಷ್ಟು ಸರಳವಾಗಿ ಅರ್ಥೈಸಿಕೊಳ್ಳಬೇಕೆಂದರೆ, ನೀವು ಬೆಟ್ಟದ ಮೇಲಿರುವ ಯಾವುದೋ ದೇವಾಲಯಕ್ಕೆ ಹೋಗುತ್ತಿರುತ್ತೀರಿ. ಮೆಟ್ಟಿಲುಗಳನ್ನು ಏರುತ್ತ ಹೋದಾಗ ಒಂದೆಡೆ ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೀರಿ. ಹೀಗೆ ವಿಶ್ರಾಂತಿ ತೆಗೆದುಕೊಂಡಾಗಲೇ ನಿಮಗೆ ಮತ್ತಷ್ಟು ಮೆಟ್ಟಿಲುಗಳನ್ನೇರುವ ಶಕ್ತಿ ಬರುತ್ತದೆ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು