2023ನೇ ಸಾಲಿನ UPSC ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆಯ ಮೊದಲ ಹಂತವಾದ ಪ್ರಿಲಿಮ್ಸ್ ಪರೀಕ್ಷೆಗೆ (UPSC Prelims Exam) ದಿನಾಂಕ ಕೂಡ ನಿಗದಿಯಾಗಿದೆ. ಮೇ 28ರಂದು ನಡೆಯುವ ಪರೀಕ್ಷೆಗೆ ಫೆ.1ರಿಂದ 21ರೊಳಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದ್ದಾರೆ. ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗುವ ಸಾವಿರಾರು ಅಭ್ಯರ್ಥಿಗಳು ಕೆಲವೊಂದು ಮುಖ್ಯವಾದ ಮಾಹಿತಿಯನ್ನು ತಿಳಿದಿರಲೇಬೇಕು, ಇಲ್ಲವಾದರೆ ಅವಕಾಶವಂಚಿತರಾಗುತ್ತಾರೆ. ಅಂತಹ ಮುಖ್ಯವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈ ವರ್ಷದ ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ಸಾವಿರಾರು ಅಭ್ಯರ್ಥಿಗಳು ಅನೇಕ ವರ್ಷಗಳಿಂದ ತಯಾರಿಯಲ್ಲಿ ತೊಡಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಅಪರೂಪದ ಸಾಧನೆ ಎನ್ನಲಾಗುತ್ತದೆ. ಆದರೆ, ಬಹುತೇಕರು 3-4 ಪ್ರಯತ್ನಗಳ ಬಳಿಕ 3 ಹಂತದ ಪರೀಕ್ಷೆಯಲ್ಲಿ ಯಶಸ್ವಿಯಾಗಿ IAS, IPS ಅಧಿಕಾರಿಗಳಾಗುತ್ತಾರೆ. ಹಾಗಾದರೆ ಸಾಮಾನ್ಯ ಅಭ್ಯರ್ಥಿಗಳು ಎಷ್ಟು ಸಲ ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗಬಹುದು. ಮೀಸಲಾತಿ ಪ್ರಕಾರ ಎಷ್ಟು ಅವಕಾಶಗಳಿವೆ ಎಂದು ಅಭ್ಯರ್ಥಿಗಳು ತಿಳಿದಿರಲೇಬೇಕು.
ಇದನ್ನೂ ಓದಿ: UPSC Exam 2023: ಮೇ ತಿಂಗಳಲ್ಲಿ ಪರೀಕ್ಷೆ, ಇಂದಿನಿಂದ 8 ರೂಲ್ಸ್ ಫಾಲೋ ಮಾಡಿದ್ರೆ IAS ಅಧಿಕಾರಿ ಆಗೋದು ಗ್ಯಾರೆಂಟಿ
UPSC ಪರೀಕ್ಷೆಗೆ ಎಷ್ಟು ಸಲ ಹಾಜರಾಗಬಹುದು?
UPSC ಪರೀಕ್ಷೆ 2023ರ ಫಾರ್ಮ್ ಗಳನ್ನು ತುಂಬುವಾಗಲೇ ಈ ನಿಯಮಗಳ ಬಗ್ಗೆ ತಿಳಿದಿರಬೇಕು. UPSC ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಅಭ್ಯರ್ಥಿಗಳಿಗೆ ವಿವಿಧ ವರ್ಗಗಳ ಅಡಿಯಲ್ಲಿ ಮೀಸಲಾತಿ ನೀಡಲಾಗುತ್ತದೆ. ಅದರಂತೆ, ಅವರ ಪ್ರಯತ್ನಗಳಿಗೆ ಅವಕಾಶ, ವಯಸ್ಸಿನ ಮಿತಿಯನ್ನು ನಿರ್ಧರಿಸಲಾಗುತ್ತದೆ.
1) ಸಾಮಾನ್ಯ ಅಥವಾ ಆರ್ಥಿಕವಾಗಿ ಹಿಂದುಳಿದ ವಿಭಾಗ ಅಂದರೆ EWS ಅಭ್ಯರ್ಥಿಗಳು UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ಗರಿಷ್ಠ 6 ಬಾರಿ ನೀಡಬಹುದು. 6 ಬಾರಿಯೂ ಯಶಸ್ವಿಯಾಗದಿದ್ದಲ್ಲಿ, ಅವರು ಮತ್ತೆ ಪರೀಕ್ಷೆಗೆ ಹಾಜರಾಗುವಂತೆ ಇಲ್ಲ.
2) OBC ವರ್ಗದ ಅಭ್ಯರ್ಥಿಗಳಿಗೆ UPSC ಪರೀಕ್ಷೆಗೆ ಹಾಜರಾಗಲು 9 ಅವಕಾಶಗಳಿವೆ. ಸಾಮಾನ್ಯ, EWS ಮತ್ತು OBC ವರ್ಗಗಳ ದಿವ್ಯಾಂಗ್ ಅಭ್ಯರ್ಥಿಗಳಿಗೂ ಸಹ 9 ಸಲ ಪರೀಕ್ಷೆಗೆಳಿಗೆ ಹಾಜರಾಗುವ ಅವಕಾಶವಿದೆ
3) SC ಮತ್ತು ST ವರ್ಗದ ಅಭ್ಯರ್ಥಿಗಳಿಗೆ ಯಾವುದೇ ನಿರ್ಬಂಧವಿಲ್ಲ. ಆಯೋಗದ ನಿಯಮಗಳ ಪ್ರಕಾರ ಅಭ್ಯರ್ಥಿಯು ಗರಿಷ್ಠ ವಯಸ್ಸಿನ ಮಿತಿಯನ್ನು ತಲುಪುವವರೆಗೆ ಎಷ್ಟು ಬಾರಿ ಬೇಕಾದರೂ ಪರೀಕ್ಷೆಗೆ ಹಾಜರಾಗಬಹುದು.
ಅವಕಾಶಗಳನ್ನು ಹೇಗೆ ಎಣಿಸಲಾಗುವುದು?
UPSC ಪ್ರಿಲಿಮ್ಸ್ ಪರೀಕ್ಷೆಯ ಅರ್ಜಿಯನ್ನು ಭರ್ತಿ ಮಾಡಿ ನಂತರ ನೀವು ಪರೀಕ್ಷೆಗೆ ಹಾಜರಾಗದಿದ್ದರೆ, ಅದನ್ನು ಒಂದು ಪ್ರಯತ್ನವೆಂದು ಪರಿಗಣಿಸುವುದಿಲ್ಲ. ಆದರೆ ನೀವು UPSC ಪ್ರಿಲಿಮ್ಸ್ ಪರೀಕ್ಷೆಯನ್ನು ನೀಡಿದ್ದರೆ ಮಾತ್ರ ಅದನ್ನು ಒಂದು ಅವಕಾಶವೆಂದು ಪರಿಗಣಿಸಲಾಗುತ್ತದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ, ಅಭ್ಯರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳದಿದ್ದರೂ, ಒಂದು ಪ್ರಯತ್ನವೆಂದು ಎಣಿಸಲಾಗುತ್ತದೆ. ಅಭ್ಯರ್ಥಿಗಳು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಒಂದೇ ಪತ್ರಿಕೆಯಲ್ಲಿ ಕಾಣಿಸಿಕೊಂಡ ತಕ್ಷಣ ತಮ್ಮ ಪ್ರಯತ್ನಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ
UPSC | CSE Prelims Exam 2023 |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 1-2-2023 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 21-2-2023 |
ಅಧಿಕೃತ ವೆಬ್ ಸೈಟ್ | upsc.gov.in |
ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ |
UPSC ಪ್ರಿಲಿಮ್ಸ್ ಪರೀಕ್ಷೆ ದಿನಾಂಕ | 28-5-2023 |
UPSC ಮುಖ್ಯ ಪರೀಕ್ಷೆ | 15-9-2023 |
ಸಾಮಾನ್ಯ/ OBC/ EWS ಅರ್ಜಿ ಶುಲ್ಕ | 100 ರೂ. |
SC/ ST/ ಮಾಜಿ ಸೈನಿಕರು/ PWD/ ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ | ಉಚಿತ |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ