• ಹೋಂ
  • »
  • ನ್ಯೂಸ್
  • »
  • Jobs
  • »
  • Data Science ಕೋರ್ಸ್ ಕಲಿಯಲು ಎಷ್ಟು ಲಕ್ಷ ಹಣ ಬೇಕಾಗುತ್ತದೆ? ಟ್ರೈನಿಂಗ್ ಸೆಂಟರ್​ಗಳ ಮಾಹಿತಿಯೂ ಇಲ್ಲಿದೆ

Data Science ಕೋರ್ಸ್ ಕಲಿಯಲು ಎಷ್ಟು ಲಕ್ಷ ಹಣ ಬೇಕಾಗುತ್ತದೆ? ಟ್ರೈನಿಂಗ್ ಸೆಂಟರ್​ಗಳ ಮಾಹಿತಿಯೂ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬೆಂಗಳೂರಿನಲ್ಲಿರುವ ಜಿಗ್ಸಾ ಅಕಾಡೆಮಿಯು ಡೇಟಾ ಸೈನ್ಸ್ ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ತರಬೇತಿ ನೀಡುತ್ತದೆ. ಇದು 11 ತಿಂಗಳ ತರಬೇತಿ.

  • Share this:

ದತ್ತಾಂಶ ವಿಜ್ಞಾನ (Data Science) ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆ ಗಳಿಸುತ್ತಿರುವ ಕ್ಷೇತ್ರವಾಗಿದ್ದು, ಐಟಿ ಜಗತ್ತಿನಲ್ಲಿ ಹೆಚ್ಚು ಆದ್ಯತೆ ಪಡೆದುಕೊಳ್ಳುತ್ತಿದೆ. ದಿನೇ ದಿನೇ ದತ್ತಾಂಶ ವಿಜ್ಞಾನದ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ಕೃತಕ ಬುದ್ಧಿಮತೆಯ (Artificial Intelligence) ಭವಿಷ್ಯ ಎಂದೇ ಬಣ್ಣಿಸಲಾಗುತ್ತಿದೆ. ಹಾಗಾಗಿ ಇದು ಜಗತ್ತಿನಾದ್ಯಂತ ಹೆಚ್ಚೆಚ್ಚು ಬೇಡಿಕೆಯ ಕ್ಷೇತ್ರವಾಗಿ ಮುಂದುವರೆಯುತ್ತಿದೆ.


ಗೂಗಲ್, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಆಪಲ್‌ನಂತಹ ದೈತ್ಯ ಕಂಪೆನಿಗಳು ಹಾಗೂ ಸಣ್ಣಪುಟ್ಟ ಸ್ಟಾರ್ಟ್‌ ಅಪ್ಸ್ ಕೂಡ ದತ್ತಾಂಶ ವಿಜ್ಞಾನದ ಅಳವಡಿಕೆಗೆ ಒಲವು ತೋರುತ್ತಿವೆ. ಆದ್ದರಿಂದ ಡೇಟಾ ಸೈನ್ಸ್ ಕೂಡ ಐಟಿ ವೃತ್ತಿಪರರಿಗೆ ಹೆಚ್ಚೆಚ್ಚು ಗಳಿಕೆಯ ಕ್ಷೇತ್ರವಾಗಿ ಪರಿವರ್ತನೆಗೊಳ್ಳುತ್ತಿದೆ.


ಇನ್ನು ಆಧುನಿಕ ಪ್ರಪಂಚದಲ್ಲಿ ಡೇಟಾ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಸಂಗ್ರಹಣೆ ಮತ್ತು ವಿಶ್ಲೇಷಣೆ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಹೆಚ್ಚು ದತ್ತಾಂತಗಳು ರಚನಾತ್ಮಕವಾಗಿರುವುದಿಲ್ಲ. ವಿಶ್ಲೇಷಣೆಗೆ ಸರಿಯಾದ ಅನುಕ್ರಮ ಮುಖ್ಯವಾಗಿರುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಡೇಟಾ ವಿಜ್ಞಾನ ಅಗತ್ಯವಾಗಿದೆ.




ಇತ್ತೀಚಿನ ಕೆಲವೊಂದು ವರದಿಯ ಪ್ರಕಾರ, ಡೇಟಾ ಸೈನ್ಸ್ ನ ಬೇಡಿಕೆಯು 2022 ರಿಂದ 2023ರ ಅವಧಿಯ ವೇಳೆಗೆ 378.7 ಶತಕೋಟಿಯ ಮಾರುಕಟ್ಟೆ ಮೌಲ್ಯವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಡೇಟಾ ಸೈನ್ಸ್ ಅಗಾಧವಾಗಿ ವಿಸ್ತಾರಗೊಳ್ಳುತ್ತಿರುವ ಕ್ಷೇತ್ರವಾಗಿದೆ.


ಲಿಂಕ್ಡಿನ್ ವರದಿ ಹೇಳೋದೇನು?


ಇನ್ನು ಲಿಂಕ್ಡಿನ್ ವರದಿಯ ಪ್ರಕಾರ, ದತ್ತಾಂಶ ವಿಜ್ಞಾನವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ಕ್ಷೇತ್ರವಾಗಿದ್ದು 2012ರಿಂದ ಶೇಕಡಾ 650ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ.


ಮಾರುಕಟ್ಟೆಯು ಮೇಲ್ಮುಖವಾಗಿ ಚಲಿಸುವ ನಿರೀಕ್ಷೆಯಿದ್ದು, ಇನ್ನು 2019ರಲ್ಲಿ ಯುಎಸ್‌ಡಿ 37.9 ಶತಕೋಟಿಯಿಂದ 2026ರ ವೇಳೆಗೆ ಯುಎಸ್‌ಡಿ 230.80 ಶತಕೋಟಿಗೆ ಹೆಚ್ಚಳವಾಗುವ ನಿರೀಕ್ಷೆ ಹೆಚ್ಚಾಗಿದೆ.


ಅನಾಲಿಟಿಕ್ಸ್ ಇನ್‌ ಸೈಟ್ಸ್ ವರದಿ ವಿಶ್ಲೇಷಿಸುವುದೇನು?


ಅನಾಲಿಟಿಕ್ಸ್ ಇನ್‌ ಸೈಟ್ಸ್ ವರದಿಗಳ ಪ್ರಕಾರ, ಭಾರತವು ವಿಶ್ವಾದ್ಯಂತ ಶೇಕಡಾ 32ರಷ್ಟು ಡೇಟಾ ಮಾರುಕಟ್ಟೆಯನ್ನು ವ್ಯಾಪಿಸಿಕೊಳ್ಳಲಿದ್ದು, 2026ರ ವೇಳೆಗೆ ಯುಎಸ್‌ಡಿ 20 ಶತಕೋಟಿ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ.


ಹಾಗಾಗಿ ಡೇಟಾ ಸೈನ್ಸ್ ಕಲಿಯುವ ಅವಶ್ಯಕತೆ ಹೆಚ್ಚಾಗಿದ್ದು, ಇದನ್ನು ನಾನಾ ಕಡೆ ಕಾಲೇಜುಗಳಲ್ಲಿ ಈ ವಿಷಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕಲಿಯುವ ಆಸಕ್ತರು ಈ ಕೆಳಗಿನ ಮಾಹಿತಿಯ ಮೂಲಕ ಡೇಟಾ ಸೈನ್ಸ್ ಅನ್ನು ಕಲಿಯಬಹುದಾಗಿದೆ.


ಐಬಿಎಂ ಮತ್ತು ಎಡ್ವನ್ಸರ್ ನಿಂದ ಪ್ರಮಾಣ ಪತ್ರ


ಎಡ್ವನ್ಸರ್ ಡೇಟಾ ಸೈನ್ಸ್ ಬಗ್ಗೆ ನೀಡುವ ತರಬೇತಿ ಪಡೆದುಕೊಳ್ಳುವ ಮೂಲಕ ಐಬಿಎಂನಿಂದ ವೃತ್ತಿಪರ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಇದು ನೂರರಷ್ಟು ಉದ್ಯೋಗವಕಾಶವನ್ನು ನೀಡುವುದಲ್ಲದೇ ಸಂಬಳವನ್ನು ದುಪ್ಪಟ್ಟು ಪಡೆದುಕೊಳ್ಳುವ ಉತ್ತಮ ತರಬೇತಿ ಕೂಡ ಹೌದು.


ವಿದ್ಯಾರ್ಥಿಗಳು ಪ್ರೋಗ್ರಾಂಗಳಾದ ಎಸ್‌ಕ್ಯೂಎಲ್, ಆರ್ ಮತ್ತು ಪೈಥಾನ್ ಅನ್ನು ಬಳಸಿಕೊಂಡು ಭವಿಷ್ಯ ಸೂಚಕ ಮಾಡೆಲಿಂಗ್ ಮತ್ತು ಯಂತ್ರ ಕಲಿಕೆ ತಂತ್ರಗಳಲ್ಲಿ ಹೇಗೆ ಪರಿಣಿತರಾಗುವುದು ಎಂಬ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ.


ಸಾಂದರ್ಭಿಕ ಚಿತ್ರ


ಇದು 150 ಗಂಟೆಗಳ ತರಬೇತಿಯಾಗಿದ್ದು, 150 ಕಾರ್ಯಯೋಜನೆಗಳು ಮತ್ತು ಯೋಜನೆಗಳನ್ನು ಒಳಗೊಂಡಿರುತ್ತದೆ. ವಾರಾಂತ್ಯದಲ್ಲಿ ಲೈವ್ ಆನ್‌ ಲೈನ್ ತರಬೇತಿ ಅಥವಾ ವಿಡಿಯೋ ಆಧಾರಿತ ಕಲಿಕೆ ಇವೆರಡರಲ್ಲಿ ತಮಗೆ ಬೇಕಾದದನ್ನು ಆಯ್ಕೆ ಮಾಡಿಕೊಳ್ಳಬಹುದು.


ಪ್ರಾಕ್ಸಿಸ್ ಬ್ಯುಸಿನೆಸ್ ಶಾಲೆಯಲ್ಲಿ ಪಿಜಿಪಿ ಎಂಬ ಕೋರ್ಸ್


ಈ ಶಾಲೆಯು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ವೃತ್ತಿಪರ ಉದ್ಯಮದಾರರನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತದೆ. ಇದು 9 ತಿಂಗಳ ತರಬೇತಿಯಾಗಿದ್ದು, ಎಸ್‌ಕ್ಯೂಎಲ್, ಆರ್, ಎಕ್ಸಲ್, ಅಮೆಜಾನ್ ಎಡಬ್ಲ್ಯೂಎಸ್ ಮತ್ತು ಪೈಥಾನ್ ಹೀಗೆ ಇನ್ನಿತರ ವಿಶ್ಲೇಷಣಾ ಡೊಮೈನ್‌ನಲ್ಲಿನ ಯಂತ್ರ ಕಲಿಕೆ ಮತ್ತು ಡೇಟಾ ಮೈನಿಂಗ್ ನಂತಹ ಇತರ ಕಲಿಕೆಯೊಂದಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತದೆ. ಈ ತರಬೇತಿಗೆ ತಗಲುವ ವೆಚ್ಚ ರೂ. 5.10 ಲಕ್ಷ.


ದ ಮುಖೇಶ್ ಪಟೇಲ್ ಶಾಲೆ


ಇದು ದತ್ತಾಂಶ ವಿಜ್ಞಾನದ ಬಗ್ಗೆ 2 ವರ್ಷದ ಎಂ.ಟೆಕ್ ಕೋರ್ಸ್ ಹಾಗೂ ಕೃತಕ ಬುದ್ಧಿಮತ್ತೆಯ ತರಬೇತಿಯನ್ನು ಹೊಂದಿದ್ದು, ಇದು ಡೇಟಾ ಸಂಗ್ರಹಣೆ, ವಿಶ್ಲೇಷಣಾತ್ಮಕ ಪ್ರೋಗ್ರಾಮಿಂಗ್ ಸೇರಿದಂತೆ ಈ ವಿಷಯದ ಆಳ ಅಗಲವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲು ತರಗತಿಯ ಜೊತೆಗೆ ಇಂಟರ್ನ್ ಶಿಪ್ ಮುಖೇನ ಅನುಕೂಲ ಕಲ್ಪಿಸಿಕೊಡುತ್ತದೆ. ದ ಮುಖೇಶ್ ಪಟೇಲ್ ಶಾಲೆಯಲ್ಲಿ ಈ ತರಬೇತಿಗೆ ತಗಲುವ ವೆಚ್ಚ 5 ಲಕ್ಷ ರೂ.


ಡೇಟಾ ಸೈನ್ಸ್‌ನಲ್ಲಿ ಪಿಜಿಪಿ


ಗುರ್ ಗಾಂವ್, ಹೈದರಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಮತ್ತು ಪುಣೆಗಳಲ್ಲಿ ಡೇಟಾ ಸೈನ್ಸ್ ಕುರಿತಾದ ತರಬೇತಿಯನ್ನು ಪಡೆದುಕೊಳ್ಳಬಹುದು. ಭಾರತದಲ್ಲಿಯೇ ತರಬೇತಿ ಪಡೆಯುವವರಿಗೆ ಇದು ಅನುಕೂಲವಾಗಲಿದ್ದು, ಇದು ಕೇವಲ 5 ತಿಂಗಳ ತರಬೇತಿಯಾಗಿದೆ. ಇದಕ್ಕೆ ತಗಲುವ ವೆಚ್ಚ 3.5 ಲಕ್ಷ ರೂ.


ಇದನ್ನೂ ಓದಿ: Career Tips: IIM ಒದಗಿಸುವ ಈ ಆನ್​ಲೈನ್​ ಕೋರ್ಸ್​​ಗಳನ್ನು ಮಾಡಿದ್ರೆ ದೊಡ್ಡ ಸಂಬಳದ ಉದ್ಯೋಗ ಸಿಗುತ್ತೆ


ಸ್ನಾತಕೋತ್ತರ ಡಿಪ್ಲೋಮಾ


ಬೆಂಗಳೂರಿನಲ್ಲಿರುವ ಜಿಗ್ಸಾ ಅಕಾಡೆಮಿಯು ಡೇಟಾ ಸೈನ್ಸ್ ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ತರಬೇತಿ ನೀಡುತ್ತದೆ. ಇದು 11 ತಿಂಗಳ ತರಬೇತಿ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ತರಗತಿಗಳನ್ನು ಹಾಗೂ ಇಂಟರ್ನ್ ಶಿಪ್ ಹೀಗೆ ಪ್ರಾಜೆಕ್ಟ್ ಮೂಲಕ ತರಬೇತಿ ನೀಡುತ್ತದೆ.


ಇದಕ್ಕೆ ತಗುಲುವ ವೆಚ್ಚ 6.15 ಲಕ್ಷ ರೂ. (ಹಾಸ್ಟೆಲ್ ವೆಚ್ಚ ಸೇರಿದಂತೆ). ಇದು ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಡೇಟಾ ಸೈನ್ಸ ಬೂಟ್ ಕ್ಯಾಪ್ ಪ್ರಮಾಣಪತ್ರ ತರಬೇತಿ, ಪೈಥಾನ್, ಇತ್ಯಾದಿ ಪಠ್ಯಕ್ರಮ ಒಳಗೊಂಡಿದೆ.

top videos
    First published: