• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಒಂದೆಡೆ ಸುಂಸ್ಕೃತ ಗೃಹಿಣಿರು ಇನ್ನೊಂದೆಡೆ ದೇಶ ಕಾಯುವ ಧೀರ ವನಿತೆಯರು; CRPF ಮಹಿಳಾ ಸಶಸ್ತ್ರಪಡೆ ಬಗ್ಗೆ ಇಲ್ಲಿದೆ ಮಾಹಿತಿ

Success Story: ಒಂದೆಡೆ ಸುಂಸ್ಕೃತ ಗೃಹಿಣಿರು ಇನ್ನೊಂದೆಡೆ ದೇಶ ಕಾಯುವ ಧೀರ ವನಿತೆಯರು; CRPF ಮಹಿಳಾ ಸಶಸ್ತ್ರಪಡೆ ಬಗ್ಗೆ ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತರಬೇತಿಯ ಸಮಯದಲ್ಲಿ ಮಹಿಳಾ ಸಿಬ್ಬಂದಿಗೆ ಕೂಡ ಪುರುಷ ಸಿಬ್ಬಂದಿಯಂತೆ ಸಮಾನ ರೀತಿಯಲ್ಲಿಯೇ ತರಬೇತಿಯನ್ನು ನೀಡಲಾಗುತ್ತದೆ. ಮಹಿಳೆಯರು ಕೂಡ ಪ್ರತಿಯೊಂದು ತರಬೇತಿಗೂ ತಮ್ಮನ್ನು ಸಿದ್ಧರಾಗಿಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಗಳನ್ನು ಹೇಳದೆಯೇ ದೇಶ ಕಾಯುವ ಸಿದ್ಧತೆಯಲ್ಲಿ ಮಹಿಳೆಯರು ಏಕಾಗ್ರತೆಯಿಂದ ಪಾಲ್ಗೊಳ್ಳುತ್ತಾರೆ.

ಮುಂದೆ ಓದಿ ...
  • Share this:
  • published by :

CRPF ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ (Women) ಸಶಸ್ತ್ರ ಪಡೆಯ ಸಿಬ್ಬಂದಿಗಳು ಒಂದೆಡೆ ಸುಂಸ್ಕೃತ ಗೃಹಿಣಿಯಾಗಿ ಇನ್ನೊಂದೆಡೆ ಶಸ್ತ್ರಸಜ್ಜಿತ ಯೋಧರಾಗಿ ದೇಶವನ್ನು ಸಂರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪುರುಷ (Men)  ಸೇನಾನಿಗಳಂತೆಯೇ ತರಬೇತಿ (Training) ಪಡೆದು ದೇಶ ಕಾಯುವ ಕರ್ತವ್ಯದಲ್ಲಿ ನಿರತರಾಗಿರುವ ಮಹಿಳಾ ಮಣಿಗಳು ದೇಶದ ಅಮೂಲ್ಯ ರತ್ನಗಳೆಂದೆನಿಸಿದ್ದಾರೆ.


ಸಂಪ್ರದಾಯ ಬದ್ಧ ಗೃಹಿಣಿ ದೇಶ ಕಾಯುವ ಯೋಧೆ


ನೆತ್ತಿ ಬೈತಲೆಯಲ್ಲಿ ಚುಕ್ಕಿಯಂತೆ ಹೊಳೆಯುವ ಸಿಂಧೂರ, ಸಣ್ಣ ಕೆಂಪು ಬಿಂದಿ, 3 ಕೆಜಿಯ ಎಕೆ – 47 ಬಲ ತೋಳಿನಲ್ಲೇರಿಸಿಕೊಂಡು ತಮ್ಮ ಕಪ್ಪನೆಯ ನೀಳ ಕೂದಲನ್ನು ತುರುಬಿನಂತೆ ಸುತ್ತಿ 29 ರ ಹರೆಯದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಶಶಿ ತಮ್ಮ ಎಂದಿನ ದಿನಚರಿಯಂತೆ ಶ್ರೀನಗರದಲ್ಲಿ ನಡೆಯುವ ಸೇನಾ ಕಸರತ್ತಿನಲ್ಲಿ ಪಾಲ್ಗೊಳ್ಳಲು ಸಿದ್ಧರಾಗುತ್ತಿದ್ದರು.


ಶಶಿ ಹಲವಾರು ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಒಬ್ಬ ಧೀರ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ ಜೊತೆಗೆ ಸಂಪ್ರದಾಯಬದ್ಧ ಕುಟುಂಬದ ಸೊಸೆಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: Success Story: ಐಐಟಿ, ಐಐಎಂ ವಿದ್ಯಾರ್ಥಿನಿ ಅಲ್ಲದಿದ್ದರೂ 1.6 ಕೋಟಿ ಸಂಬಳದ ಉದ್ಯೋಗ ಪಡೆದ ಅದಿತಿ


ಕರ್ತವ್ಯದ ಸಮಯದಲ್ಲಿ ಖಾಕಿಶರ್ಟ್ ಹಾಗೂ ಖಾಕಿ ಪ್ಯಾಂಟ್ ಧರಿಸಿ ಯೋಧರಾಗಿ ಕಾರ್ಯನಿರ್ವಹಿಸಿದರೆ ಇತ್ತ ಆಗ್ರಾದ ತಮ್ಮ ಮನೆಯಲ್ಲಿ ಬಣ್ಣದ ಸೀರೆಯುಟ್ಟು, ಮುಖವನ್ನು ಮುಚ್ಚಿ ಒಬ್ಬ ಗೃಹಿಣಿಯಾಗಿ, ತಾಯಿಯಾಗಿ, ಸೊಸೆಯಾಗಿ ಕೂಡ ತಮ್ಮ ಜವಬ್ದಾರಿಯನ್ನು ನಿರ್ವಹಿಸುತ್ತಾರೆ.


ದೇಶ ಕಾಯುವ ಧೀರ ವನಿತೆಯರು


ಶಶಿಯಂತೆ CRPF ನಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಮಹಿಳಾ ಸಿಬ್ಬಂದಿಗಳು ಯೋಧರಾಗಿ ದೇಶ ಕಾಯುವ ಹಾಗೂ ಗೃಹಿಣಿಯಾಗಿ ಮನೆಯ ಜವಬ್ದಾರಿಯನ್ನು ನಿರ್ವಹಿಸುವ ಕೆಲಸವನ್ನು ಸಮಾನವಾಗಿ ನಿಭಾಯಿಸುತ್ತಿದ್ದಾರೆ.


ಒಬ್ಬ ತಾಯಿ ಹೇಗೆ ತಮ್ಮ ಮಕ್ಕಳನ್ನು ಜೋಪಾನ ಮಾಡುತ್ತಾರೆ ಅಂತೆಯೇ ಈ ಧೀರ ವನಿತೆಯರು ತಮ್ಮ ಮಕ್ಕಳನ್ನು ಕಾಪಾಡುವ ಅದೇ ಒಲವು ಹಾಗೂ ವಾತ್ಸಲ್ಯದಿಂದ ದೇಶವನ್ನು ಸಂರಕ್ಷಿಸುತ್ತಿದ್ದಾರೆ.


ಶ್ರೀನಗರದಲ್ಲಿ ನಡೆಯುವ ಸೇನಾ ಕಸರತ್ತು ದಿನವೂ ಮುಂಜಾನೆ 4 ಗಂಟೆಗೆ ಆರಂಭಗೊಳ್ಳುತ್ತದೆ. ಗವ್ವೆನ್ನುವ ಕತ್ತಲು ಹಾಗೂ ದೇಹವನ್ನು ಸೀಳುವ ಕೊರೆಯುವ ಚಳಿಯ ನಡುವೆಯೇ ಮಹಿಳಾ ಸಿಬ್ಬಂದಿಗಳು ತರಬೇತಿಗೆ ಸಿದ್ಧಗೊಳ್ಳುತ್ತಾರೆ. ಸಿದ್ಧಗೊಳ್ಳುವ ಅದೇ ಸಮಯದಲ್ಲಿ ಬೆಳಗ್ಗಿನ ಉಪಹಾರ ಮಧ್ಯಾಹ್ನದೂಟ ಹೀಗೆ ಪ್ರತಿಯೊಂದನ್ನು ಸಿದ್ಧಗೊಳಿಸಬೇಕು.
ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ


ಕಸರತ್ತಿನ ಸಮಯದಲ್ಲಿ ಮಹಿಳಾ ಸಿಬ್ಬಂದಿಗೆ ದೇಹದ ಭಂಗಿಯಿಂದ ಹಿಡಿದು ಕಣ್ಣುಗಳ ಸಂಪರ್ಕ, ಆಂಗಿಕ ಭಾಷೆ ಹೀಗೆ ಪ್ರತಿಯೊಂದನ್ನು ತಿಳಿಸಲಾಗುತ್ತದೆ. ಕಸರತ್ತಿಗೆ ಪಾಲ್ಗೊಳ್ಳುವ ಮೊದಲು ಸಿಬ್ಬಂದಿಗಳು ಕಡ್ಡಾಯವಾಗಿ ಹೊಟ್ಟೆ ತುಂಬಾ ಆಹಾರ ಸೇವಿಸಬೇಕು.


ತರಬೇತಿಯ ಸಮಯದಲ್ಲಿ ಮಹಿಳಾ ಸಿಬ್ಬಂದಿಗೆ ಕೂಡ ಪುರುಷ ಸಿಬ್ಬಂದಿಯಂತೆ ಸಮಾನ ರೀತಿಯಲ್ಲಿಯೇ ತರಬೇತಿಯನ್ನು ನೀಡಲಾಗುತ್ತದೆ. ಮಹಿಳೆಯರು ಕೂಡ ಪ್ರತಿಯೊಂದು ತರಬೇತಿಗೂ ತಮ್ಮನ್ನು ಸಿದ್ಧರಾಗಿಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಗಳನ್ನು ಹೇಳದೆಯೇ ದೇಶ ಕಾಯುವ ಸಿದ್ಧತೆಯಲ್ಲಿ ಮಹಿಳೆಯರು ಏಕಾಗ್ರತೆಯಿಂದ ಪಾಲ್ಗೊಳ್ಳುತ್ತಾರೆ.


ಮಹಿಳಾ ಸಿಬ್ಬಂದಿಯನ್ನು ಎಲ್ಲೆಲ್ಲಿ ನಿಯೋಜಿಸಲಾಗಿದೆ?


ಸಿಆರ್‌ಪಿಎಫ್‌ನಲ್ಲಿರುವ ಪ್ರತಿಯೊಬ್ಬ ಮಹಿಳೆಯರು ತಮ್ಮ ವೈಯಕ್ತಿಕ ಜೀವನದ ಕಷ್ಟ, ನೋವುಗಳನ್ನು ಮರೆತು ದೇಶ ರಕ್ಷಣೆಯ ಕಾಯಕದಲ್ಲಿ ವ್ಯಸ್ಥರಾಗಿದ್ದಾರೆ.


ಇಲ್ಲಿರುವ ಒಬ್ಬೊಬ್ಬ ಹೆಣ್ಣುಮಗಳದು ಒಂದೊಂದು ಕಥೆಯಾಗಿದೆ. ಒಬ್ಬರು ಹಾಲುಣಿಸುತ್ತಿರುವ ಕಂದನನ್ನು ತೊರೆದು ಸೇನೆಗೆ ಸೇರ್ಪಡೆಗೊಂಡಿದ್ದರೆ ಇನ್ನು ಕೆಲವರು ಮನೆಯವರನ್ನು ವಿರೋಧಿಸಿ ದೇಶ ಕಾಯುವ ಉತ್ಕಟ ದೇಶ ಪ್ರೇಮದಲ್ಲಿ ತಮ್ಮನ್ನು ಮುಡಿಪಾಗಿಸಿಕೊಂಡಿದ್ದಾರೆ.


ಸಿಆರ್‌ಪಿಎಫ್ ಸಶಸ್ತ್ರ ಪಡೆಗಿಂತ ಮುಂಚೆಯೇ 1986 ರಲ್ಲಿ ಮಹಿಳಾ ಸಿಬ್ಬಂದಿಯನ್ನು ಸೇರಿಸಲು ಪ್ರಾರಂಭಿಸಿತು. ಮೊದಲ ಮಹಿಳಾ ಬೆಟಾಲಿಯನ್ 88 (ಎಮ್) 1986 ರಲ್ಲಿ ಜನ್ಮ ತಾಳಿತು. 1153 ಮಹಿಳೆಯರನ್ನು ಸೇರ್ಪಡೆಗೊಳಿಸಲಾಯಿತು. ಇಂದು 9430 ಮಹಿಳಾ ಸಿಬ್ಬಂದಿಗಳು ಸಿಆರ್‌ಪಿಎಫ್ ಸೇನೆಯಲ್ಲಿದ್ದಾರೆ.


ಸಿಆರ್‌ಪಿಎಫ್ ಮಹಿಳಾ ಸಿಬ್ಬಂದಿಗಳನ್ನು ಜಮ್ಮು ಹಾಗೂ ಕಾಶ್ಮೀರ, ಅಯೋಧ್ಯಾ, ಮಣಿಪುರ, ಅಸ್ಸಾಮ್, ಎಲ್‌ಡಬ್ಲ್ಯೂಇ ಹಾಗೂ ದೇಶದ ಇನ್ನಿತರ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಪ್ರಸ್ತುತ ಜಮ್ಮು ಹಾಗೂ ಕಾಶ್ಮೀರದಲ್ಲಿ 405 ಸಿಆರ್‌ಪಿಎಫ್ ಮಹಿಳಾ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.


ಕಷ್ಟಗಳನ್ನು ಮೆಟ್ಟಿನಿಂತಿರುವ ಧೀರೆಯರು


ಮಹಿಳಾ ಸಶಸ್ತ್ರ ಪಡೆಗಳು ತಮ್ಮ ಕರ್ತವ್ಯದ ಭಾಗವಾಗಿ ತಪಾಸಣೆ ಹಾಗೂ ಗಲಭೆ ನಿಯಂತ್ರಣ ಮೊದಲಾದ ಮಹತ್ತರ ಜವಬ್ದಾರಿಗಳನ್ನು ನಿರ್ವಹಿಸುತ್ತಾರೆ. ಕ್ವಿಕ್ ಆ್ಯಕ್ಷನ್ ಟೀಮ್‌ನಲ್ಲಿ ಹೆಚ್ಚು ಸುಧಾರಿತ ತರಬೇತಿ ಪಡೆದ ಪುರುಷರನ್ನು ಈ ಹಿಂದೆ ನಿಯೋಜಿಸಲಾಗುತ್ತಿದ್ದು ಇದೀಗ ಮಹಿಳೆಯರನ್ನು ಈ ತಂಡದಲ್ಲಿ ನಿಯೋಜಿಸಲಾಗುತ್ತಿದೆ.


ಪ್ರಸ್ತುತ 18 ಮಹಿಳೆಯರು ಹಾಗೂ 108 ಪುರುಷರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ತಂಡವು ರಹಸ್ಯ ಕಾರ್ಯಾಚರಣೆ, ಉಗ್ರಗಾಮಿಗಳನ್ನು ನಿಯಂತ್ರಿಸುವುದು, ಭೂಗತ ಪಾತಕಿಗಳನ್ನು ಬಂಧಿಸುವುದು ಹೀಗೆ ಹಲವು ತಂತ್ರಗಳಲ್ಲಿ ಪರಿಣಿತರೆನಿಸಿದ್ದಾರೆ.


ಸಿಆರ್‌ಪಿಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸೇನಾ ಪಡೆಗಳು ಹಲವಾರು ಸಂಘರ್ಷಗಳನ್ನೆದುರಿಸಿದ್ದಾರೆ. ಈ ಮೊದಲು ಶಿಬಿರಗಳಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ತಮ್ಮ ಮೇಲೆರಗುತ್ತಿದ್ದ ಕಲ್ಲು ತೂರಾಟದ ಘಟನೆಗಳ ಬಗ್ಗೆ ಕೆಲವು ಸಿಬ್ಬಂದಿಗಳು ಹಂಚಿಕೊಂಡಿದ್ದರೆ ಬಸ್‌ಗಳನ್ನು ಹತ್ತುತ್ತಿದ್ದ ವೇಳೆಯಲ್ಲಿ ಕೂಡ ನಾವು ಹೆಲ್ಮೆಟ್ ಧರಿಸಿಕೊಂಡೇ ನಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದೆವು ಎಂಬ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದೀಗ ಪರಿಸ್ಥಿತಿ ಈ ಹಿಂದಿನಂತಿಲ್ಲ ಬದಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

top videos
    First published: