• Home
 • »
 • News
 • »
 • jobs
 • »
 • Skill India: ಕೇಂದ್ರದ ಸ್ಕಿಲ್ ಇಂಡಿಯಾ ಯೋಜನೆಯಿಂದ ಯುವ ಜನತೆಗೆ ಸಖತ್ ಲಾಭ: ಮಾಹಿತಿ ಇಲ್ಲಿದೆ

Skill India: ಕೇಂದ್ರದ ಸ್ಕಿಲ್ ಇಂಡಿಯಾ ಯೋಜನೆಯಿಂದ ಯುವ ಜನತೆಗೆ ಸಖತ್ ಲಾಭ: ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ದೇಶದ ಕೈಗಾರಿಕೆಗಳಿಗೆ ಕೌಶಲಯುಕ್ತ ಯುವಕರನ್ನು ಒದಗಿಸುವ ಉದ್ದೇಶದಿಂದ ಪಿಎಂಕೆವಿವೈ ಯೋಜನೆ ಅನ್ನು ಜಾರಿಗೆ ತರಲಾಗಿದೆ. ಈ ತರಬೇತಿಯ ಲಾಭವನ್ನು ಪಡೆದುಕೊಳ್ಳುವ ಮೂಲಕ ಯುವಜನತೆ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು.

 • Trending Desk
 • 4-MIN READ
 • Last Updated :
 • Share this:

  ಭಾರತದ ಪ್ರಮುಖ ಆಧಾರ ಸ್ತಂಭವೇ ಯುವ ಜನತೆ (Young People). ಯುವ ಜನಸಂಖ್ಯೆಯು (Population) ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಶ್ಯಕವಾಗಿದೆ. ಆದ್ದರಿಂದ, ದುಡಿಯುವ ವಯಸ್ಸಿನ ಯುವಕರು ಕೆಲವು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ದೇಶದ ಪ್ರಗತಿಗೆ ಕೆಲಸ ಮಾಡುವ ಅಗತ್ಯತೆ ಇದೆ. ಇದೇ ಕಾರಣಕ್ಕೆ ದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡಿ ಅವರು ಸುಲಭವಾಗಿ ಉದ್ಯೋಗ ಪಡೆಯುವಂತೆ ಮಾಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಉಪಕ್ರಮವನ್ನು ಜಾರಿಗೆ ತಂದಿದೆ.


  ಯಾವಾಗ ಆರಂಭಿವಾಯಿತು?


  2015ರ ಜುಲೈ 15ರಂದು ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನದಂದು MSDE (ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ) ಸ್ಕಿಲ್ ಇಂಡಿಯಾ ಅಭಿಯಾನವನ್ನು ಆರಂಭಿಸಿತು.


  ಸ್ಕಿಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಯೋಜನೆಗಳು


  1) ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY)


  ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯು ಸ್ಕಿಲ್ ಇಂಡಿಯಾ ಉಪಕ್ರಮದ ಹೃದಯ ಭಾಗವಾಗಿದೆ. ಇದು ಉದ್ಯಮ-ಸಂಬಂಧಿತ ಕೌಶಲ್ಯ ಮತ್ತು ತರಬೇತಿಯನ್ನು ಅಭಿವೃದ್ಧಿಪಡಿಸಲು ಯುವಕರನ್ನು ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮವಾಗಿದೆ.


  Know these 5 tech skills to develop your career stg asp
  ಸಾಂಕೇತಿಕ ಚಿತ್ರ


  ಈ ಮೂಲಕ ಅವರಿಗೆ ಉತ್ತಮ ಜೀವನೋಪಾಯದ ಮೂಲಗಳನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಅವನು/ಅವಳು ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಒಬ್ಬ ವ್ಯಕ್ತಿಯು ಒಳಗಾಗುವ ಕೌಶಲ್ಯ ಮತ್ತು ತರಬೇತಿಯನ್ನು ಸಹ ಪ್ರಮಾಣೀಕರಿಸಲಾಗುತ್ತದೆ.


  ದೇಶದ ಕೈಗಾರಿಕೆಗಳಿಗೆ ಕೌಶಲಯುಕ್ತ ಯುವಕರನ್ನು ಒದಗಿಸುವ ಉದ್ದೇಶದಿಂದ ಪಿಎಂಕೆವಿವೈ ಯೋಜನೆ ಅನ್ನು ಜಾರಿಗೆ ತರಲಾಗಿದೆ. ಈ ತರಬೇತಿಯ ಲಾಭವನ್ನು ಪಡೆದುಕೊಳ್ಳುವ ಮೂಲಕ ಯುವಜನತೆ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು.


  ಅಥವಾ ಬೇರೆಲ್ಲಾದರೂ ಉದ್ಯೋಗ ಪಡೆಯಬಹುದು. ಇದಲ್ಲದೆ ಈ ಯೋಜನೆಯಡಿ ತರಬೇತಿ ಪಡೆದ ಯುವಕರಿಗೆ ಸರ್ಕಾರದಿಂದ ಉದ್ಯೋಗ ದೊರಕಿಸಿಕೊಡುವ ಪ್ರಯತ್ನಗಳು ಸಹ ನಡೆಯುತ್ತವೆ.


  2) ಪ್ರಧಾನ ಮಂತ್ರಿ ಕೌಶಲ್ ಕೇಂದ್ರ (PMKK)


  ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ರಾಷ್ಟ್ರದ ನಾಗರಿಕರಿಗೆ ಉದ್ಯೋಗವನ್ನು ಹುಡುಕಲು ಈ ಕಾರ್ಯಕ್ರಮದ ಮೂಲಕ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.


  Canara Bank Deshpande Rural Self Employment Training Institute invites applications for various training apply here
  ಸಾಂದರ್ಭಿಕ ಚಿತ್ರ


  ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ ಕಾರ್ಯಕ್ರಮದಡಿಯಲ್ಲಿ, ನಿರುದ್ಯೋಗಿ ಯುವಕರು ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ನಿರ್ಮಾಣ, ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು, ಪೀಠೋಪಕರಣಗಳು ಮತ್ತು ಫಿಟ್ಟಿಂಗ್‌ಗಳು, ರತ್ನಗಳು ಮತ್ತು ಆಭರಣಗಳು ಮತ್ತು ಚರ್ಮದ ತಂತ್ರಜ್ಞಾನ ಸೇರಿದಂತೆ 40 ಕ್ಕೂ ಹೆಚ್ಚು ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ಪಡೆಯುತ್ತಾರೆ.


  ಪ್ರಧಾನ ಮಂತ್ರಿ ಕೌಶಲ್ ಕೇಂದ್ರದ ಗುರಿಗಳು
  - ದೇಶದ ಯುವಕರಿಗೆ ಕೆಲಸದ ಅವಕಾಶಗಳನ್ನು ನೀಡುವ ಗುರಿಯನ್ನು ಹೊಂದಿದೆ.
  - ಯುವಕರನ್ನು ಸಂಘಟಿಸುವುದು, ಅವರ ಕೌಶಲ್ಯವನ್ನು ಹೆಚ್ಚಿಸುವುದು ಮತ್ತು ಸಾಮರ್ಥ್ಯದ ಆಧಾರದ ಮೇಲೆ ಕೆಲಸ ಒದಗಿಸುವುದು.
  - ಸುಸ್ಥಿರ ಅಭಿವೃದ್ಧಿ ಮಾದರಿಯ ಅಭಿವೃದ್ಧಿಗೆ ಶ್ರಮಿಸುವುದು.


  3) ರೋಜ್‌ಗಾರ್ ಮೇಳ


  ಪಿಎಂಕೆವಿವೈ ಯೋಜನೆಯಡಿ ತರಬೇತಿ ಪಡೆದ ಮತ್ತು ಆ ನಿಟ್ಟಿನಲ್ಲಿ ಪ್ರಮಾಣೀಕರಿಸಲ್ಪಟ್ಟ ಜನರಿಗೆ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ಒದಗಿಸಲಾಗಿದೆ.


  ಅದರಲ್ಲಿ ಒಂದು ರೋಜ್‌ಗಾರ್ ಮೇಳ. ಈ ರೋಜ್‌ಗಾರ್ ಮೇಳಗಳು ಆರು ತಿಂಗಳಿಗೊಮ್ಮೆ ಆಯೋಜಿಸಲಾಗುವ ಕಾರ್ಯಕ್ರಮಗಳಾಗಿದ್ದು ಉದ್ಯೋಗಾಂಕ್ಷಿಗಳಿಗೆ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸುತ್ತದೆ.


  What are the most in demand digital skills in India What does the survey say about this stg asp
  ಸಾಂಕೇತಿಕ ಚಿತ್ರ


  ಮೇಳಗಳು ಸಾಮಾನ್ಯವಾಗಿ ಮೂಲಭೂತ ಶೈಕ್ಷಣಿಕ ಅರ್ಹತೆಗಳೊಂದಿಗೆ 18-35 ವರ್ಷ ವಯಸ್ಸಿನ ಯುವಕರನ್ನು ಪೂರೈಸುತ್ತವೆ. ರೋಜ್‌ಗಾರ್ ಮೇಳಗಳು ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಸೆಷನ್‌ಗಳು, ಸಾಲ ಸೌಲಭ್ಯ, ಕೌಶಲ್ಯ ಪ್ರದರ್ಶನ ಇತ್ಯಾದಿಗಳಂತಹ ಪೂರಕ ಕಾರ್ಯಕ್ರಮಗಳನ್ನು ಸಹ ಒಳಗೊಂಡಿವೆ.


  ಭಾರತ ಅಂತಾರಾಷ್ಟ್ರೀಯ ಕೌಶಲ್ಯ ಕೇಂದ್ರ (IISC)


  ಜಾಗತಿಕ ಉದ್ಯೋಗಿಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, NSDC ಭಾರತ ಅಂತರರಾಷ್ಟ್ರೀಯ ಕೌಶಲ್ಯ ಕೇಂದ್ರಗಳನ್ನು (IISCs) ಪರಿಚಯಿಸಿತು.


  ಸಾಗರೋತ್ತರ ಉದ್ಯೋಗ ಮಾರುಕಟ್ಟೆಗಳಲ್ಲಿ ಉದ್ಯೋಗವನ್ನು ಹುಡುಕುವ ತರಬೇತಿದಾರರನ್ನು ಸಜ್ಜುಗೊಳಿಸಲು ಐಐಎಸ್‌ಸಿಗಳನ್ನು ದೇಶದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಲಾಗಿದೆ.


  ನಿರ್ಗಮನ ಪೂರ್ವ ದೃಷ್ಟಿಕೋನ ತರಬೇತಿ (PDOT)


  PDOT ಕಾರ್ಯಕ್ರಮವನ್ನು ಭಾರತದ ಹೊರಗೆ ಉದ್ಯೋಗಗಳನ್ನು ಹುಡುಕುವ ಅಭ್ಯರ್ಥಿಗಳಿಗೆ ಸಾಂಸ್ಕೃತಿಕ ಅಂಶಗಳು, ಶಿಷ್ಟಾಚಾರಗಳು ಮತ್ತು ನಡವಳಿಕೆಗಳು, ವಲಸೆಯ ಕಾರ್ಯವಿಧಾನ, ಭಾಷೆ ಮತ್ತು ಇತರ ಎಲ್ಲಾ ಅಗತ್ಯ ಮಾಹಿತಿಗಳ ಬಗ್ಗೆ ಶಿಕ್ಷಣ ನೀಡಲು ಪ್ರಾರಂಭಿಸಲಾಗಿದೆ.


  ಯಾವುದೇ ಗೊಂದಲ ಅಥವಾ ತೊಂದರೆಗಳಿಲ್ಲದೆ ಬೇರೆ ದೇಶದಲ್ಲಿ ತಮ್ಮ ಜೀವನವನ್ನು ಸಾಗಿಸಲು ಸಂಪೂರ್ಣವಾಗಿ ಸಜ್ಜುಗೊಳಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.


  ಸ್ಕಿಲ್ ಇಂಡಿಯಾದ ಪ್ರಯೋಜನಗಳು


  * ಉತ್ತಮ ವೇತನ ಉದ್ಯೋಗಗಳಿಗೆ ಪ್ರವೇಶ
  ಸ್ಕಿಲ್ ಇಂಡಿಯಾ ಕಾರ್ಯಕ್ರಮವು ಅಭ್ಯರ್ಥಿಗಳಿಗೆ ಅಗತ್ಯವಾದ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯೊಂದಿಗೆ ಸಜ್ಜುಗೊಳಿಸಿರುತ್ತದೆ. ಇದರಿಂದಾಗಿ ಅವರು ಉತ್ತಮ ವೇತನ ನೀಡುವ ಉದ್ಯೋಗಗಳನ್ನು ಪಡೆಯಲು ಸಹಕಾರಿಯಾಗಿದೆ.


  * ಸಮಾನ ಬೆಳವಣಿಗೆ ವಲಯವಾರು
  ತರಬೇತಿ ಕಾರ್ಯಕ್ರಮಗಳು ತಳಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಕೇಂದ್ರೀಕರಿಸುವುದರಿಂದ, ಎಲ್ಲಾ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ.


  Know these 5 tech skills to develop your career stg asp
  ಸಾಂಕೇತಿಕ ಚಿತ್ರ


  * ಸ್ಕಿಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಅಭ್ಯರ್ಥಿಗಳಿಗೆ ಮೇಲ್ವಿಚಾರಣೆ ಮತ್ತು ಉದಯೋನ್ಮುಖ ಉದ್ಯಮಿಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸುತ್ತದೆ.


  * ಪದವಿ ಪಡೆದರೂ ಉದ್ಯೋಗವಿಲ್ಲದ ಯುವಕರು ಕೂಡ ಈ ಯೋಜನೆಯ ಮೂಲಕ ಪ್ರಯೋಜನ ಪಡೆಯುತ್ತಾರೆ.

  Published by:Kavya V
  First published: