• ಹೋಂ
  • »
  • ನ್ಯೂಸ್
  • »
  • Jobs
  • »
  • Competitive Examsಗೆ ತಯಾರಾಗುತ್ತಿದ್ದೀರಾ? ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಕೆಲ ಮುಖ್ಯ ಪ್ರಶ್ನೆಗಳು ಹೀಗಿವೆ

Competitive Examsಗೆ ತಯಾರಾಗುತ್ತಿದ್ದೀರಾ? ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಕೆಲ ಮುಖ್ಯ ಪ್ರಶ್ನೆಗಳು ಹೀಗಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಒಂದು ಪರೀಕ್ಷೆ ಅಂದರೆ ಅಲ್ಲಿ ಸಾಮಾನ್ಯ ಜ್ಞಾನ, ಗಣಿತ, ವಿಜ್ಞಾನ, ವ್ಯಾಕರಣ, ಪ್ರಚಲಿತ ವಿದ್ಯಾಮಾನ ಎಲ್ಲವೂ ಒಳಗೊಂಡಿರುತ್ತದೆ. ಅದರಲ್ಲೂ ಈ ಪರೀಕ್ಷೆಗಳಲ್ಲಿ ಜನರಲ್‌ ಸ್ಟಡೀಸ್‌, ಸಾಮಾನ್ಯ ಜ್ಞಾನ ತುಂಬಾ ಮುಖ್ಯ.

  • Share this:

ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ( Competitive Exams) ಅಭ್ಯರ್ಥಿಗಳು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ವಿದ್ಯಾಭ್ಯಾಸ (Education) ಮುಗಿಸಿಯೋ ಇಲ್ಲಾ ಕೆಲಸ ಮಾಡುತ್ತಲೆಯೇ ಈ ಪರೀಕ್ಷೆಗಳಿಗೆ ತಯಾರಿ (Exam Preparation) ನಡೆಸುತ್ತಿರುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಈ ರೀತಿಯ ಒಂದು ಪರೀಕ್ಷೆ ಪಾಸ್‌ ಮಾಡುವುದು ಸುಲಭದ ಮಾತು ಅಲ್ವೇ ಅಲ್ಲ. ಅದಕ್ಕೆ ಕಠಿಣ ಶ್ರಮ, ತಯಾರಿ ಎಲ್ಲವೂ ಬೇಕು. ಪೂರ್ವ ತಯಾರಿ ಇಲ್ಲದೇ ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ.


ಒಂದು ಪರೀಕ್ಷೆ ಅಂದರೆ ಅಲ್ಲಿ ಸಾಮಾನ್ಯ ಜ್ಞಾನ, ಗಣಿತ, ವಿಜ್ಞಾನ, ವ್ಯಾಕರಣ, ಪ್ರಚಲಿತ ವಿದ್ಯಾಮಾನ ಎಲ್ಲವೂ ಒಳಗೊಂಡಿರುತ್ತದೆ. ಅದರಲ್ಲೂ ಈ ಪರೀಕ್ಷೆಗಳಲ್ಲಿ ಜನರಲ್‌ ಸ್ಟಡೀಸ್‌, ಸಾಮಾನ್ಯ ಜ್ಞಾನ ತುಂಬಾ ಮುಖ್ಯ.




ಪರೀಕ್ಷೆಗಳ ಮೂಲ ಈ ಸಾಮಾನ್ಯ ಜ್ಞಾನ


ಸಾಮಾನ್ಯ ಜ್ಞಾನ ಎಂಬುವುದು ಹಲವು ಪರೀಕ್ಷೆಗಳ ಮೂಲ. ಇದು UPSC, SSC, ಬ್ಯಾಂಕ್ ಪಿಒ/ಕ್ಲರ್ಕ್ ಮತ್ತು ಇತರ ಹುದ್ದೆಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಮತ್ತು ಸರ್ಕಾರಿ ಪರೀಕ್ಷೆಗಳ ಪ್ರಮುಖ ಭಾಗವಾಗಿದೆ ಮತ್ತು ಇದು ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುವ ಒಂದು ವಿಭಾಗವಾಗಿದೆ.


ಈ ವರ್ಗದಲ್ಲಿನ ಪ್ರಶ್ನೆಗಳು ವಿಶಾಲವಾದ ಪ್ರದೇಶವನ್ನು ಹೊಂದಿವೆ ಮತ್ತು ವಿಜ್ಞಾನ, ಭೂಗೋಳ, ಭಾಷೆ, ಪ್ರಪಂಚ, ರಾಜಕೀಯ, ಪ್ರಶಸ್ತಿಗಳು, ಮನರಂಜನೆ, ಸಾಮಾಜಿಕ ಅಧ್ಯಯನಗಳು, ಪ್ರಮುಖ ನಾಯಕರು ಮತ್ತು ಸಾಹಿತ್ಯದಂತಹ ಎಲ್ಲಾ ವಿಷಯಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.


ಇದನ್ನೂ ಓದಿ: UPSC Success Story: ತಾಯಿ ಇಲ್ಲದೆ ಹುಡ್ಗಿಯನ್ನು ಓದಿಸಲು ನಿರಾಕರಿಸಿದ್ರು; ಒಂಟಿಯಾಗಿದ್ದುಕೊಂಡು ಓದಿ IAS ಆದ ದಿಟ್ಟೆ


ಈ ಸಾಮಾನ್ಯ ಜ್ಞಾನ ಎಂಬುವುದು ಯಾವುದೇ ಒಂದು ಪರೀಕ್ಷೆಗೆ ಮಾತ್ರವಲ್ಲದೇ ಎಲ್ಲಾ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ಇದಕ್ಕೆ ಸುಮಾರು ತಜ್ಞರು ಐದರಿಂದ ಹತ್ತನೇ ತರಗತಿಯ ಗಣಿತ, ವಿಜ್ಞಾನ, ಸಮಾಜ ಪುಸ್ತಕಗಳನ್ನು ಓದಲು ಹೇಳುತ್ತಾರೆ. ಇಲ್ಲಿನ ಅದೆಷ್ಟೋ ವಿಷಯಗಳು ಸಾಮಾನ್ಯ ಜ್ಞಾನದಡಿಯಲ್ಲಿ ಬರುತ್ತವೆ.


ಹಾಗಾದರೆ GKಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಉತ್ತರ ಸಮೇತ ನಾವು ನಿಮಗೆ ಇಲ್ಲಿ ಹೊತ್ತು ತಂದಿದ್ದೇವೆ. ಹೆಚ್ಚು-ಕಮ್ಮಿ ಇದೇ ರೀತಿಯ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುತ್ತದೆ.


ಪ್ರಶ್ನೆ 1: ಅರುಣಾಚಲ ಪ್ರದೇಶದ ರಾಜಧಾನಿ ಯಾವುದು?
ಉತ್ತರ: ಇಟಾನಗರ


ಪ್ರಶ್ನೆ 2: ಭಾರತದ ಅತಿ ಉದ್ದದ ಉಕ್ಕಿನ ಸೇತುವೆ ಮಹಾತ್ಮ ಗಾಂಧಿ ಸೇತು ಯಾವ ರಾಜ್ಯದಲ್ಲಿದೆ?
ಉತ್ತರ: ಬಿಹಾರ


ಪ್ರಶ್ನೆ 3: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಯಾವ ದೇಶವು ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ಖರೀದಿಸಿತು?
ಉತ್ತರ: ಚೀನಾ


ಪ್ರಶ್ನೆ 4: ಭಾರತದ ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ಯಾವ ವಿಶ್ವ ಸಂಸ್ಥೆಯು ತಲಾ $5 ಮಿಲಿಯನ್‌ನ 2 ಸಾಲಗಳನ್ನು ಅನುಮೋದಿಸಿದೆ?
ಉತ್ತರ: ವಿಶ್ವ ಬ್ಯಾಂಕ್


ಪ್ರಶ್ನೆ 5: ಪ್ರಸ್ತುತ ಭಾರತದಲ್ಲಿರುವ ಸಂಸತ್ತನ್ನು ಯಾರಿಂದ ವಿನ್ಯಾಸಗೊಳಿಸಲಾಗಿದೆ?
ಉತ್ತರ: ಸರ್ ಎಡ್ವಿನ್ ಲ್ಯಾಂಡ್‌ಸೀರ್ ಲುಟ್ಯೆನ್ಸ್


ಪ್ರಶ್ನೆ 6: ಕಿಂಗ್ ಜಾರ್ಜ್ V ಮತ್ತು ಕ್ವೀನ್ ಮೇರಿ ಅವರನ್ನು ಸ್ವಾಗತಿಸಲು ಭಾರತದಲ್ಲಿ 1911 ರಲ್ಲಿ ಯಾವ ಸ್ಮಾರಕವನ್ನು ನಿರ್ಮಿಸಲಾಯಿತು?
ಉತ್ತರ: ಗೇಟ್‌ವೇ ಆಫ್ ಇಂಡಿಯಾ


ಪ್ರಶ್ನೆ 7: ಹಿಂದಿ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಸೆಪ್ಟೆಂಬರ್ 14


ಪ್ರಶ್ನೆ 8: ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿದೆ?
ಉತ್ತರ: ಕೇರಳ


ಪ್ರಶ್ನೆ 9: ಭಾರತದ ಮೊದಲ ನದಿ ಕಣಿವೆ ಯೋಜನೆ ಯಾವುದು?
ಉತ್ತರ: ದಾಮೋದರ್ ವ್ಯಾಲಿ ಪ್ರಾಜೆಕ್ಟ್

top videos


    ಪ್ರಶ್ನೆ 10: ಭಾರತದ ಮೊದಲ ಯಶಸ್ವಿ ಪರಮಾಣು ಪರೀಕ್ಷೆಗೆ ಯಾವ ಕೋಡ್ ಹೆಸರನ್ನು ನಿಗದಿಪಡಿಸಲಾಗಿದೆ?
    ಉತ್ತರ: ಲಾಫಿಂಗ್‌ ಬುದ್ಧ

    First published: