• ಹೋಂ
  • »
  • ನ್ಯೂಸ್
  • »
  • Jobs
  • »
  • UPSC ಪ್ರಿಲಿಮ್ಸ್ ಪರೀಕ್ಷೆ ಅಂಕಗಳಿಕೆಯಲ್ಲಿ ವಿಫಲವಾಯ್ತು ChatGPT

UPSC ಪ್ರಿಲಿಮ್ಸ್ ಪರೀಕ್ಷೆ ಅಂಕಗಳಿಕೆಯಲ್ಲಿ ವಿಫಲವಾಯ್ತು ChatGPT

ಚಾಟ್​ಜಿಪಿಟಿ

ಚಾಟ್​ಜಿಪಿಟಿ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಡೆಸುವ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಯನ್ನು AI ಚಾಟ್‌ಬಾಟ್‌ಗೆ ನೀಡಲಾಯಿತು. ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (ಎಐಎಂ) ಯುಪಿಎಸ್‌ಸಿ ಪರೀಕ್ಷೆಯನ್ನು ಚಾಟ್‌ಜಿಪಿಟಿಗೆ ಆಯೋಜಿಸಿದೆ. ಅಂತೆಯೇ ಯುಪುಎಸ್‌ಸಿ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಹೇಗೆ ಉತ್ತರಿಸಲಿದೆ ಎಂಬುದನ್ನು ತಿಳಿದುಕೊಳ್ಳಲು ಕೂಡ ಈ ಪರೀಕ್ಷೆಯನ್ನು ನಡೆಸಲಾಯಿತು.

ಮುಂದೆ ಓದಿ ...
  • Share this:

ಕಂಪ್ಯೂಟರ್ ಪ್ರೋಗ್ರಾಂ ಆಗಿರುವ ಚಾಟ್‌ಬಾಟ್, ಮಾನವ ಸಂಭಾಷಣೆಯನ್ನು ಅನುಕರಿಸುವ ಮೂಲಕ ಗ್ರಾಹಕರ ಪ್ರಶ್ನೆಗಳನ್ನು ಅರಿತುಕೊಳ್ಳಲು ಹಾಗೂ ಅವುಗಳಿಗೆ ಪ್ರತಿಕ್ರಿಯೆಗಳನ್ನು ನೀಡಲು ಕೃತಕ ಬುದ್ಧಿಮತ್ತೆ (AI) ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಅನ್ನು ಬಳಸಿಕೊಳ್ಳುತ್ತದೆ. AI ಚಾಟ್‌ಬಾಟ್ ಪ್ರಪಂಚದ ಎಲ್ಲಾ ಉತ್ತರಗಳನ್ನು ಹೊಂದಿದೆ ಎಂಬ ಹಿರಿಮೆಯನ್ನು ಪಡೆದುಕೊಂಡಿರುವುದರಿಂದ ಚಾಟ್‌ಜಿಪಿಟಿ ಇಂದು ಜನಪ್ರಿಯವಾಗಿದೆ. ಚಾಟ್‌ಬಾಟ್ ಅನ್ನು ನವೆಂಬರ್ 2022 ರಲ್ಲಿ ಪ್ರಾರಂಭಿಸಲಾಯಿತು ಹಾಗೂ ಪ್ರಪಂಚದಾದ್ಯಂತ ನಡೆಸಿದ ಕಷ್ಟಕರ ಪರೀಕ್ಷೆಗಳಲ್ಲಿ ಉತ್ತೀರ್ಣತೆಯನ್ನು ಪಡೆದುಕೊಂಡಿದೆ.


ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಸ್ಕೂಲ್‌ನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಕಾರ್ಯಕ್ರಮದ ಅಂತಿಮ ಪರೀಕ್ಷೆಯನ್ನು ತೆರವುಗೊಳಿಸುವುದರಿಂದ ಆರಂಭಿಸಿ US ವೈದ್ಯಕೀಯ ಪರೀಕ್ಷೆಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು ಚಾಟ್‌ಜಿಪಿಟಿ ತನ್ನ ಬುದ್ಧಿಮತ್ತೆಯನ್ನು ಸಾಬೀತುಪಡಿಸಿದೆ.


ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಚಾಟ್‌ಜಿಪಿಟಿ


ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಡೆಸುವ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಯನ್ನು AI ಚಾಟ್‌ಬಾಟ್‌ಗೆ ನೀಡಲಾಯಿತು. ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (ಎಐಎಂ) ಯುಪಿಎಸ್‌ಸಿ ಪರೀಕ್ಷೆಯನ್ನು ಚಾಟ್‌ಜಿಪಿಟಿಗೆ ಆಯೋಜಿಸಿದೆ. ಅಂತೆಯೇ ಯುಪುಎಸ್‌ಸಿ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಹೇಗೆ ಉತ್ತರಿಸಲಿದೆ ಎಂಬುದನ್ನು ತಿಳಿದುಕೊಳ್ಳಲು ಕೂಡ ಈ ಪರೀಕ್ಷೆಯನ್ನು ನಡೆಸಲಾಯಿತು.


ಇದನ್ನೂ ಓದಿ: Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು


ಯುಪಿಎಸ್‌ಸಿಯ ಪ್ರಿಲಿಮ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂದು ಭಾವಿಸುತ್ತೀರಾ ಎಂದು ಚಾಟ್‌ಜಿಪಿಟಿಯನ್ನು ಕೇಳಿದಾಗ ಇದು ಕಷ್ಟಕರವಾಗಿರುತ್ತದೆ ಎಂಬ ಅನಿಸಿಕೆ ವ್ಯಕ್ತವಾಯಿತು.


ಪರೀಕ್ಷೆಯಲ್ಲಿ ಚಾಟ್‌ಬಾಟ್ ಉತ್ತೀರ್ಣಗೊಳ್ಳಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು "ನಿರ್ದಿಷ್ಟ ಉತ್ತರ" ನೀಡಲು ಸಾಧ್ಯವಿಲ್ಲ ಎಂಬುದು ಉತ್ತರವಾಗಿತ್ತು.


100 ರಲ್ಲಿ 54 ಪ್ರಶ್ನೆಗಳಿಗೆ ಮಾತ್ರ ಉತ್ತರ


ಪ್ರಶ್ನೆ ಪತ್ರಿಕೆ 1 (ಸೆಟ್ A) ರಿಂದ ಎಲ್ಲಾ ಪ್ರಶ್ನೆಗಳನ್ನು ಚಾಟ್‌ಜಿಪಿಟಿಗೆ ಕೇಳಲಾಯಿತು. ಚಾಟ್‌ಜಿಪಿಟಿಗೆ ಅದರಲ್ಲಿ 54 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬಲ್ಲುದು ಎಂಬುದು ಮ್ಯಾಗಝೀನ್ ಸಂಸ್ಥೆಗೆ ಆಶ್ಚರ್ಯವನ್ನುಂಟು ಮಾಡಿತ್ತು. ಏಕೆಂದರೆ ಚಾಟ್‌ಜಿಪಿಟಿಯ ಈ ಪ್ರದರ್ಶನವನ್ನು ಸಾಮಾನ್ಯ ಅಭ್ಯರ್ಥಿಗೆ ಹೋಲಿಸಿದಾಗ ಆ ಅಂಕವು 87.54 ಆಗಿತ್ತು. ಇದರಿಂದ ಚಾಟ್‌ಜಿಪಿಟಿಯು ಯುಪಿಎಸ್‌ಸಿ ಪರೀಕ್ಷೆಯನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಸೂಚಿಸುತ್ತದೆ.


ಭೂಗೋಳ ಮತ್ತು ಆರ್ಥಿಕತೆಯಂತಹ ವಿಷಯಗಳಿಗೆ ತಪ್ಪು ಉತ್ತರ


ಭೌಗೋಳಿಕತೆ, ಆರ್ಥಿಕತೆ, ಇತಿಹಾಸ, ಪರಿಸರ ವಿಜ್ಞಾನ, ಸಾಮಾನ್ಯ ವಿಜ್ಞಾನ ಮತ್ತು ಭಾರತಕ್ಕೆ ಸಂಬಂಧಿಸಿದ ಪ್ರಸ್ತುತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು. ಅದೂ ಅಲ್ಲದೆ ಚಾಟ್‌ಜಿಪಿಟಿಯ ಜ್ಞಾನವು ಸೆಪ್ಟೆಂಬರ್ 2021 ಕ್ಕೆ ಸೀಮಿತವಾಗಿರುವುದರಿಂದ, ಪ್ರಸ್ತುತ ವ್ಯವಹಾರಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.


ಪ್ರಶ್ನೆಗಳು ನಿರ್ದಿಷ್ಟ ಕಾಲಮಾನಕ್ಕೆ ಸಂಬಂಧಿಸದೇ ಇದ್ದರೂ, ಭೂಗೋಳ ಮತ್ತು ಆರ್ಥಿಕತೆಯಂತಹ ವಿಷಯಗಳಿಗೆ ಇದು ತಪ್ಪು ಉತ್ತರಗಳನ್ನು ಒದಗಿಸಿದೆ.




ತನ್ನಷ್ಟಕ್ಕೆ ಆಯ್ಕೆಗಳನ್ನು ರಚಿಸಿದ ಚಾಟ್‌ಬಾಟ್


ಚಾಟ್‌ಬಾಟ್ 2021 ರ ಜ್ಞಾನವನ್ನು ಹೊಂದಿದೆ ಎಂದಾದಲ್ಲಿ ಇತಿಹಾಸದಿಂದ ಕೇಳಿದ ತಪ್ಪಾದ ಪ್ರಶ್ನೆಗೆ ಅದು ಸರಿಯಾದ ಉತ್ತರವನ್ನು ನೀಡಬೇಕಾಗಿತ್ತು ಆದರೆ ಚಾಟ್‌ಬಾಟ್ ಸರಿಯಾದ ಉತ್ತರವನ್ನು ನೀಡಲಿಲ್ಲ.


ಇನ್ನು ಕೆಲವು ಬಹು-ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗಿದ್ದು, ಚಾಟ್‌ಬಾಟ್ ಈ ಸಮಯದಲ್ಲಿ ಹೆಚ್ಚುವರಿ ಆಯ್ಕೆಯೊಂದನ್ನು ತನ್ನಷ್ಟಕ್ಕೆ ರಚಿಸಿದ್ದು, ಮೂಲ ಪ್ರಶ್ನೆಗೆ ಇದು ಯಾವುದೇ ರೀತಿಯ ಸಾಮ್ಯತೆಯನ್ನು ಹೊಂದಿಲ್ಲ ಅದೂ ಅಲ್ಲದೆ ಈ ಆಯ್ಕೆಗೆ ಮೇಲಿನ ಯಾವುದೂ ಅಲ್ಲ ಎಂದು ಚಾಟ್‌ಬಾಟ್ ಸ್ವಯಂ ಶೀರ್ಷಿಕೆ ನೀಡಿದೆ.


UPSC ಪರೀಕ್ಷೆಯನ್ನು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಸುಮಾರು 11-12 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಆದರೆ ಅವರಲ್ಲಿ 5% ದಷ್ಟು ಅಭ್ಯರ್ಥಿಗಳು ಮಾತ್ರವೇ ಮುಖ್ಯ ಹಂತಕ್ಕೆ ಆಯ್ಕೆಯಾಗುತ್ತಾರೆ.

First published: