• ಹೋಂ
 • »
 • ನ್ಯೂಸ್
 • »
 • Jobs
 • »
 • ChatGPT ಸಹಾಯದಿಂದ ಉದ್ಯೋಗಿಗಳು ಹೇಗೆ ತಮ್ಮ ಕೆಲಸವನ್ನು ಬೇಗ ಮಾಡಿ ಮುಗಿಸಬಹುದು ಗೊತ್ತೇ?

ChatGPT ಸಹಾಯದಿಂದ ಉದ್ಯೋಗಿಗಳು ಹೇಗೆ ತಮ್ಮ ಕೆಲಸವನ್ನು ಬೇಗ ಮಾಡಿ ಮುಗಿಸಬಹುದು ಗೊತ್ತೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ChatGPT ಸರಳವಾದಂತಹ ಗೂಗಲ್ ಸರ್ಚ್ ಖಂಡಿತ ಅಲ್ಲ. ನಿಮಗೆ ನಿಖರವಾಗಿ ಏನು ಬೇಕಾಗಿದೆಯೋ ಅದನ್ನು ನಿಮ್ಮ ನಿರೀಕ್ಷೆಗೂ ಮೀರಿ ವ್ಯವಸ್ಥಿತವಾದ ರೂಪದಲ್ಲಿ ನೀಡಬಲ್ಲ ಅದ್ಭುತ ಸಾಮರ್ಥ್ಯ ಹೊಂದಿದೆ ಎಂದರೆ ತಪ್ಪಾಗದು.

 • Share this:

  ಈಗ ಎಲ್ಲೆಡೆ ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೋಡಿದಾಗ ಪ್ರತಿಯೊಬ್ಬರ ಬಾಯಲ್ಲೂ ಕೃತಕ ಬುದ್ಧಿಮತ್ತೆ ಅಥವಾ AIನದ್ದೇ (Artificial Intelligence) ಮಾತು. ಇನ್ನು ನಿರ್ದಿಷ್ಟವಾಗಿ ಹೇಳಬೇಕೆಂದರೆ ಕಳೆದ ಕೆಲ ಸಮಯದಿಂದ ಓಪನ್ ಎಐ ಹೊರತಂದಿರುವ ಚಾಟ್ ಜಿಪಿಟಿ (ChatGPT) ಎಲ್ಲಿಲ್ಲದ ಹವಾ ಎಬ್ಬಿಸಿದೆ. ಪ್ರತಿ ಸಾಮಾಜಿಕ ಮಾಧ್ಯಮಗಳನ್ನು (Social Media) ಗಮನಿಸಿದರೆ ಚಾಟ್ ಜಿಪಿಟಿ ಕುರಿತಾಗಿಯೇ ಜನರು ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ. ಹಿಂದೆಂದೂ ಕಂಡಿರದಂತಹ ಮನುಷ್ಯನ ಹುಡುಕಾಟಕ್ಕೆ ಪರಿಣಾಮಕಾರಿಯಾದಂತಹ ಪರಿಹಾರ ನೀಡುವಲ್ಲಿ ಚಾಟ್ ಜಿಪಿಟಿ ಗಮನಸೆಳೆಯುತ್ತಿದೆ.


  ChatGPT ಸರಳವಾದಂತಹ ಗೂಗಲ್ ಸರ್ಚ್ ಖಂಡಿತ ಅಲ್ಲ. ನಿಮಗೆ ಏನು ನಿಖರವಾಗಿ ಬೇಕಾಗಿದೆಯೋ ಅದನ್ನು ನಿಮ್ಮ ನಿರೀಕ್ಷೆಗೂ ಮೀರಿ ವ್ಯವಸ್ಥಿತವಾದ ರೂಪದಲ್ಲಿ ನೀಡಬಲ್ಲ ಅದ್ಭುತ ಸಾಮರ್ಥ್ಯ ಹೊಂದಿದೆ ಎಂದರೆ ತಪ್ಪಾಗದು.


  ಮುಂಬರುವ ದಿನಗಳಲ್ಲಿ ಯಾವ ರೀತಿ ಎಐ ಜಗತ್ತನ್ನು ವ್ಯಾಪಿಸಿಕೊಳ್ಳಬಹುದೋ ಅದರ ಒಂದು ಸಂಕ್ಷೀಪ್ತ ಭಾಗವಾಗಿದೆ ಪ್ರಸ್ತುತ ಚಾಟ್ ಜಿಪಿಟಿ. ಇದು ಕೇವಲ ನಿತ್ಯ ಗೊಂದಲಗಳನ್ನಷ್ಟೇ ಅಲ್ಲದೆ ಒಂದು ಸಂಸ್ಥೆಯ ಹಣಕಾಸಿಗೆ ಸಂಬಂಧಿಸಿದಂತಹ ಪ್ರಕ್ರಿಯೆ, ವ್ಯವಸ್ಥೆ ಹಾಗೂ ಹಲವು ಇತರೆ ಆಯಾಮಗಳಲ್ಲೂ ಸಹ ಸ್ವಯಂಚಾಲಿತವಾಗಿ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಬಹುದು.


  artificial intelligence
  ಸಾಂದರ್ಭಿಕ ಚಿತ್ರ


  ಅಲ್ಲದೆ ಒಂದು ಸಂಸ್ಥೆಯ ಒಬ್ಬ ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ ತನ್ನ ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳನ್ನು ಹೇಗೆ ಬಳಸಬಹುದು ಹಾಗೂ ಯಾವ ರೀತಿ ಸುಧಾರಿತ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಬಹುದು ಎಂಬುದರ ಬಗೆಯೂ ಸಲಹೆ ನೀಡಲು ಸಮರ್ಥವಾಗಿದೆ ಚಾಟ್ ಜಿಪಿಟಿ.


  ಹಾಗಾದರೆ ಬನ್ನಿ ಒಬ್ಬ ಸಿಎಫ್‍ಒ ತನ್ನನ್ನು ತಾನು, ಇನ್ನೂ ಅತ್ಯುತ್ತಮ ಸಿಎಫ್‍ಒ ಆಗುವಂತೆ ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ಚಾಟ್ ಜಿಪಿಟಿಯೊಂದಿಗೆ ಸಂದರ್ಶನ ಮಾಡಿದಾಗ ಬಂದ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿಯೋಣ.


  ಪ್ರಶ್ನೆ: ಒಬ್ಬ ಸಿಎಫ್‍ಒ ತನ್ನ ಕೆಲಸವನ್ನು ಚೆನ್ನಾಗಿ ಹೇಗೆ ಮಾಡಬಹುದು?


  ಚಾಟ್ ಜಿಪಿಟಿ: ತಂತ್ರಾತ್ಮಕ ಚಿಂತನೆ - ಒಬ್ಬ ಸಿಎಫ್‍ಒ ತನ್ನ ಸಂಸ್ಥೆಯ ತಂತ್ರಾಧಾರಿತ ಉದ್ದೇಶಗಳ ಬಗ್ಗೆ ಆಳವಾಗಿ ತಿಳಿದಿರಬೇಕು ಹಾಗೂ ಅದಕ್ಕನುಗುಣವಾಗಿ ಹಣಕಾಸಿನ ಪ್ರಕ್ರಿಯೆಯನ್ನು ಅಳವಡಿಸುವ ಸಮರ್ಥ್ಯ ಹೊಂದಿರಬೇಕು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಾಂಶಗಳನ್ನು ಸಂಗ್ರಹಿಸಿ ಕಂಪನಿಯು ಆರ್ಥಿಕವಾಗಿ ಮುನ್ನಡೆಯುವ ನಿಟ್ಟಿನಲ್ಲಿ ಹೇಗೆ ಕ್ರಮ ತೆಗೆದುಕೊಳ್ಳಬಹುದೆಂಬ ಪ್ರಜ್ಞ ಹೊಂದಿರಬೇಕು.


  ಡೇಟಾ ಆಧಾರಿತ ನಿರ್ಧಾರ - ಯಾವುದೇ ಪ್ರಕ್ರಿಯೆಯಲ್ಲಿ ದತ್ತಾಂಶ ಅಂದರೆ ಡೇಟಾ ಎನ್ನುವುದು ಬಲು ಮುಖ್ಯ ಅಂಶವಾಗಿದೆ. ಇದರ ಮೇಲೆಯೇ ಮುಂದಿನ ನಿರ್ಣಾಯಕ ಅಂಶಗಳನ್ನು ನಿರ್ಧರಿಸಬಹುದಾಗಿದೆ. ಹಾಗಾಗಿ ಡೇಟಾದ ಸಂಗ್ರಹಣೆ, ವಿಶ್ಲೇಷಣೆ ಹಾಗೂ ಅದನ್ನಾಧರಿತ ನಿರ್ಧಾರ ತೆಗೆದುಕೊಳ್ಳುವಿಕೆ ಮುಖ್ಯವಾಗುತ್ತದೆ.


  ಪರಿಣಾಮಕಾರಿ ಸಂವಹನ - ಯಾವುದೇ ಕೆಲಸ ಅಡೆ-ತಡೆಗಳಿಲ್ಲದ ಸರಾಗವಾಗಿ ಸಾಗಬೇಕೆಂದರೆ ಆ ಕೆಲಸಕ್ಕೆ ಸಂಬಂಧಿಸಿದಂತೆ ಸಂವಹನ ಅತ್ಯುತ್ತಮವಾಗಿರಬೇಕು. ಒಬ್ಬ ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ ಸಂಸ್ಥೆಯ ಪಾಲುದಾರರಿಗೆ, ಷೇರುದಾರರಿಗೆ ಸಂಸ್ಥೆಯ ಪ್ರಮುಖ ಆರ್ಥಿಕ ಅಂಶಗಳನ್ನು ಸ್ಪಷ್ಟವಾಗಿ ತಿಳಿಸುವಂತಹ ಸಂವಹನ ಕೌಶಲ್ಯ ಹೊಂದಿರಬೇಕು. ಇದರಿಂದ ಮುಂದೆ ಏನು ಮಾಡಬಹುದು ಎಂಬುದನ್ನು ನಿರ್ಧರಿಸಲು ಮೇಲ್ಸದಸ್ಯರಿಗೆ ಹೆಚ್ಚಿನ ಕ್ಲ್ಯಾರಿಟಿ ಸಿಗುತ್ತದೆ.


  ಬಲವಾದ ನಾಯಕತ್ವಗುಣ - ಒಂದು ತಂಡವು ನಿಜ ಅರ್ಥದಲ್ಲಿ ತಂಡವಾಗಿಯೇ ಕೆಲಸ ಮಾಡಿದಾಗ ಹಿಡಿದ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಆದರೆ ಅದು ಒಂದು ತಂಡವಾಗಿಯೆ ಮುನ್ನಡೆಯುವಂತೆ ಮಾಡುವುದೇ ದೊಡ್ಡ ಸವಾಲಾಗಿದ್ದು ಗಟ್ಟಿ ನಾಯಕತ್ವದಿಂದ ಮಾತ್ರವೇ ಇದನ್ನು ಸಾಧಿಸಲು ಸಾಧ್ಯ. ಹಾಗಾಗಿ ಗಟ್ಟಿ ನಾಯಕತ್ವದ ಗುಣವನ್ನು ಒಬ್ಬ ಸಿಎಫ್‍ಒ ಹೊಂದಿರಬೇಕು.


  ಅಪಾಯ ನಿರ್ವಹಣೆ: ಹಲವು ಕೆಲಸಗಳಲ್ಲಿ ಅಪಾಯ ಎಂಬುದು ಸಹಜವಾಗಿದ್ದು ಅದನ್ನು ನಿರ್ವಹಿಸುವುದು ಸಹ ಒಂದು ಕೌಶಲ್ಯವಾಗಿದೆ. ಒಂದು ಸಂಸ್ಥೆ ಎಂದಾಗ ಅದರಲ್ಲಿ ಹಣಕಾಸಿನ, ಕಾರ್ಯಾಚರಣೆಯ, ನಿಯಂತ್ರಕಗಳ ಇತ್ಯಾದಿ ಹಲವು ಬಗೆಯ ಅಪಾಯಗಳು ಅಥವಾ ಜನರಲ್ ಆಗಿ ಹೇಳಬೇಕೆಂದರೆ ಸವಾಲುಗಳು ಇರುವುದು ಸಾಮಾನ್ಯ. ಇವೆಲ್ಲವುಗಳನ್ನು ಸಮರ್ಥವಾಗಿ ಅಧ್ಯಯನ ಮಾಡಿ ಇದನ್ನು ನಿರ್ವಹಿಸುವಂತಹ ಕ್ಷಮತೆ ಒಬ್ಬ ಸಿಎಫ್‍ಒ ಹೊಂದಿರಬೇಕು.


  How to Choose a Career in Artificial Intelligence and Machine Learning stg asp
  ಸಾಂಕೇತಿಕ ಚಿತ್ರ


  ನಿರಂತರ ಕಲಿಕೆ - ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆಯಾಗಿದೆ. ಒಬ್ಬ ಅತ್ಯುತ್ತಮ ಸಿಎಫ್‍ಒ ಕೈಗಾರಿಕೆಗೆ ಸಂಬಂಧಿತ ಟ್ರೆಂಡ್ ಗಳಿಗನುಸಾರವಾಗಿ ಎಲ್ಲ ರೀತಿಯ ಮಾಹಿತಿ, ಡೇಟಾ ಹಾಗೂ ಅಪ್ಡೇಟ್ ಗಳನ್ನು ಬಲ್ಲವನಾಗಿರಬೇಕು. ಇದಕ್ಕಾಗಿ ಎಲ್ಲ ರೀತಿಯ ಕಲಿಕೆಯನ್ನು ನಿರಂತರವಾಗಿ ಕಲಿಯುತ್ತಿರಬೇಕು.


  ಸಿಎಫ್‍ಒಗಳ ಕೆಲಸ/ಜೀವನ ಸಮತೋಲನ ಯಾವ ರೀತಿ ಇದ್ದರೆ ಸಮಂಜಸ?


  ಸಿಎಫ್‍ಒಗಳ ಕೆಲಸ/ಜೀವನ ಸಮತೋಲನವು ವ್ಯಕ್ತಿಯ ವೈಯಕ್ತಿಕ ಹಾಗೂ ವೃತ್ತಿಪರ ಆದ್ಯತೆಗಳು ಹಾಗೂ ಆ ಸಂಸ್ಥೆಯಲ್ಲಿ ಅವರಿಗಿರುವ ಪಾತ್ರ ಮತ್ತು ಜವಾಬ್ದಾರಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ ಸಿಎಫ್‍ಒ ಈ ಕೆಳಗಿನ ಟಿಪ್ಸ್ ಗಳನ್ನು ಫಾಲೋ ಮಾಡೋ ಮೂಲಕ ಉತ್ತಮ ಕೆಲಸ/ಜೀವನ ಸಮತೋಲನ ಸಾಧಿಸಬಹುದು.


  ಗಡಿಗಳನ್ನು ಹಾಕಿಕೊಳ್ಳಿ: ಸಮಯವನ್ನು ಉಳಿಸುವ ದೃಷ್ಟಿಯಿಂದ ಮುಂಚಿತವಾಗಿಯೇ ಸಮಯಕ್ಕನುಸಾರ ನಿಮ್ಮ ಕೆಲಸದ ಮಿತಿಗಳನ್ನು ಮೊದಲೆ ಸೆಟ್ ಮಾಡಿಕೊಳ್ಳಿ.


  ಕಾರ್ಯ ಹಂಚಿಕೆ : ನಿಮ್ಮ ತಂಡದ ಸದಸ್ಯರನ್ನು ಇನ್ನಷ್ಟು ಸದೃಢಗೊಳಿಸಲು ಅವರ ಸಾಮರ್ಥ್ಯಕ್ಕನುಸಾರ ಕೆಲಸಗಳನ್ನು ಅವರಲ್ಲಿ ಹಂಚಿ.


  ತಂತ್ರಜ್ಞಾನ ಬಳಸಿ : ಇಂದಿನ ಕಾಲದಲ್ಲಿ ಹಲವು ಕೆಲಸಗಳನ್ನು ತಂತ್ರಜ್ಞಾನ ಸರಾಗವಾಗಿ ಮಾಡುವುದರಿಂದ ನಿಮ್ಮ ಕೆಲಸದ ವಿಷಯದಲ್ಲಿ ತಂತ್ರಜ್ಞಾನದ ಬಳಕೆ ಉಪಯುಕ್ತವಿದ್ದೆಡೆ ಅದನ್ನು ಬಳಸಿ ನಿರ್ವಹಿಸಿ


  ಆರೋಗ್ಯಕ್ಕೆ ಆದ್ಯತೆ ನೀಡಿ: ಸಿಎಫ್‍ಒಗಳು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದೆಡೆ ಹೆಚ್ಚಿನ ಆದ್ಯತೆ ನೀಡಬೇಕು. ನಿಯಮಿತವಾಗಿ ಉತ್ತಮ ನಿದ್ರೆ, ವ್ಯಾಯಾಮ, ಆರೋಗ್ಯಕ ಆಹಾರ ಇತ್ಯಾದಿಯೆಡೆ ಗಮನಹರಿಸಬೇಕು.


  ಕುಟುಂಬ ಹಾಗೂ ಸ್ನೇಹಿತರೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ: ಸಿಎಫ್‍ಒ ಗಳು ತಮ್ಮ ಕೆಲಸದ ಸಮಯದ ನಂತರ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಗುಣಮಟ್ಟದ ಸಮಯ ಕಳೆಯುವುದನ್ನು ಖಚಿತಪಡಿಸಿಕೊಳ್ಳಬೇಕು.
  ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿಗಳು ತಮ್ಮ ಬಳಿ ಇರುವ ಯಾವ ಪರಿಕರಗಳನ್ನು ಉತ್ತಮವಾಗಿ ಬಳಸಬಹುದಾಗಿದೆ?


  ಸಿಎಫ್‍ಒ ಗಳು ಹೆಚ್ಚು ಗಮನಿಸಲಾರದಂತಹ ಹಲವು ಉಪಯುಕ್ತಕಾರಿ ಉಪಕರಣಗಳನ್ನು ತಮ್ಮ ಸುಧಾರಿತ ಪ್ರದರ್ಶನಕ್ಕಾಗಿ ಬಳಸಬಹುದಾಗಿದೆ.


  ಮೈಂಡ್ ಮ್ಯಾಪಿಂಗ್: ಇದೊಂದು ಬಗೆಯ ಪರಿಕರವಾಗಿದ್ದು ಅಧಿಕಾರಿಯು ತನ್ನ ಚಿಂತನೆ, ಪರಿಕಲ್ಪನೆ ಹಾಗೂ ಯೋಜನೆಗಳನ್ನು ಒಂದೆಡೆ ಸಂಯೋಜಿಸಬಹುದಾಗಿದೆ. ಈ ಉಪಕರಣ ಹಲವು ಸಂಕೀರ್ಣತೆಗಳನ್ನು ಚಿಕ್ಕ ಚಿಕ್ಕ ಘಟಕಗಳಾಗಿ ವಿಂಗಡಿಸಿ ಸರಾಗವಾಗಿ ಅವುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.


  ಸ್ವೋಟ್ ಅನಾಲಿಸಿಸ್ (SWOT Analysis) : ಸ್ಟ್ರೆಂಥ್, ವೀಕ್ನೆಸ್, ಅಪಾರ್ಚ್ಯೂನಿಟೀಸ್ ಆಂಡ್ ಥ್ರೆಟ್ಸ್ ಇವುಗಳನ್ನು ಒಟ್ಟಾರೆಯಾಗಿ ಸ್ವೋಟ್ ವಿಶ್ಲೇಷಣೆ ಎನ್ನುತ್ತಾರೆ. ಹೆಸರೇ ಸೂಚಿಸುವ ಹಾಗೆ ಅಧಿಕಾರಿಯು ತನ್ನ ಈ ನಾಲ್ಕೂ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಪರಿಣಾಮಕಾರಿಯಾಗಿ ತನ್ನನ್ನು ತಾನಿ ನಿರ್ವಹಿಸಿಕೊಳ್ಳಬಲ್ಲವನಾಗುತ್ತಾನೆ.


  ಸಿನಾರಿಯೋ ಪ್ಲ್ಯಾನಿಂಗ್ : ಈ ಉಪಕರಣವು ಹಲವು ವಿವಿಧ ಬಗೆಯ ಸಂಭಾವ್ಯ ಭವಿಷ್ಯದ ಪ್ರಕ್ರಿಯೆಗಳನ್ನು ನಿರೀಕ್ಷಿಸಲು ನೆರವು ನೀಡುತ್ತದೆ. ಪ್ರಸ್ತುತ ಲಭ್ಯವಿರುವ ದತ್ತಾಂಶಗಳ ಮೂಲಕ ಭವಿಷ್ಯದಲ್ಲಿ ಉದ್ಭವಗೊಳ್ಳಬಹುದಾದ ಸಂಭಾವ್ಯ ಪರಿಣಾಮಗಳನ್ನು ಇದು ಲೆಕ್ಕ ಹಾಕಿ ಫಲಿತಾಂಶ ನೀಡುತ್ತದೆ. ಇದು ಅಧಿಕಾರಿಗೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಲು ನೆರವಾಗುತ್ತದೆ.


  ಡೇಟಾ ಗ್ರಹಿಸುವಿಕೆ: ದತ್ತಾಂಶಗಳನ್ನು ಸ್ಪಷ್ಟವಾಗಿ ಗ್ರಹಿಸುವಂತೆ ನೆರವಾಗುವ ಚಾರ್ಟುಗಳು, ನಕ್ಷೆಗಳು, ಗ್ರಾಫುಗಳು, ಡ್ಯಾಶ್ಬೋರ್ಡ್ ಇತ್ಯಾದಿ ಗಳನ್ನು ಉತ್ಪಾದಿಸುವ ಟೂಲ್ ಗಳು ಟ್ರೆಂಡ್ ಗಳನ್ನು ಗುರುತಿಸಲು ನೆರವು ನೀಡುತ್ತದೆ. ಇವುಗಳನ್ನು ಬಳಸಿ ಪಾಲುದಾರರೊಂದಿಗೆ ಉತ್ತಮ ಸಂವಹನ ನಡೆಸಬಹುದಾಗಿದೆ.


  ವರ್ಚ್ಯೂಯಲ್ ಆಗಿ ಸಹಯೋಗ : ತ್ವರಿತ ಸಂದೇಶ, ವಿಡಿಯೋ ಕಾನ್ಫರೆನ್ಸಿಂಗ್ ಇತ್ಯಾದಿ ಸೌಲಭ್ಯ ಒದಗಿಸುವ ಪರಿಕರಗಳು ಹೆಚ್ಚಿನ ಸಮಯ ಉಳಿಸುವುದಲ್ಲದೆ ಸ್ಪಷ್ಟವಾದ ಮಾಹಿತಿ ಸಂಭಾಷಣೆ ನಡೆಯಲು ಅನುವು ಮಾಡಿಕೊಡುತ್ತದೆ.


  ಸಿಎಫ್‍ಒಗಳು ಸಂಸ್ಥೆಗೆ ಹೆಚ್ಚಿನ ಮೌಲ್ಯ ಹೇಗೆ ತರಬಹುದು?


  ಒಂದು ಸಂಸ್ಥೆಯ ಹಣಕಾಸಿನ ನೇತೃತ್ವ ಹಾಗೂ ಅದರ ಆರೋಗ್ಯ ಸದೃಢವಾಗಿರುವಲ್ಲಿ ಒಬ್ಬ ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ ಬಲು ಮಹತ್ವದ ಪಾತ್ರ ವಹಿಸುತ್ತಾರೆ.


  ಆರ್ಥಿಕವಾಗಿ ಕಾರ್ಯತಂತ್ರ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸಿಎಫ್‍ಒಗಳು ಹಣಕಾಸಿನ ಮುಖ್ಯಾಂಶಗಳನ್ನು ಕಲೆಹಾಕಿ ಆ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಹುದು.


  ಅಪಾಯ ನಿರ್ವಹಣೆ: ಈ ಮೊದಲೇ ಹೇಳಿದಂತೆ ಅಧಿಕಾರಿಯು ವಿವಿಧ ಬಗೆಯ ಅಪಾಯಗಳನ್ನು ಹಾಗೂ ಅದರೊಳಗಿರುವ ಗಂಭೀರತೆಯನ್ನು ಲೆಕ್ಕ ಹಾಕಿ ಅದಕ್ಕನುಸಾರವಾಗಿ ವ್ಯಾಪ್ತಿಯೊಳಗಿರುವ ಹಾಗೂ ನಿಭಾಯಿಸಬಲ್ಲ ಅಪಾಯಗಳನ್ನು ತೆಗೆದುಕೊಂಡು ನಿಭಾಯಿಸಬಲ್ಲ ಸಾಮರ್ಥ್ಯವನ್ನು ತೋರಿಸುವ ಮೂಲಕ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬಲ್ಲರು.


  ಇದನ್ನೂ ಓದಿ: UPSC ಪ್ರಿಲಿಮ್ಸ್ ಪರೀಕ್ಷೆ ಅಂಕಗಳಿಕೆಯಲ್ಲಿ ವಿಫಲವಾಯ್ತು ChatGPT


  ಹಣಕಾಸು ಯೋಜನೆ ಹಾಗೂ ವಿಶ್ಲೇಷಣೆ: ಕಂಪನಿ ಭವಿಷ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ಅನುಕೂಲವಾಗುವಂತಹ ಪರಿಣಾಮಕಾರಿ ಹಣಕಾಸಿನ ಯೋಜನೆಗಳನ್ನು ಹಾಕಿ ಅವುಗಳನ್ನು ಅನುಷ್ಠಾನಗೊಳಿಸುವಂತಹ ಸಕ್ಷಮತೆ ಅಧಿಕಾರಿ ಹೊಂದಿರಬೇಕು.


  ಕ್ಯಾಪಿಟಲ್ ಮ್ಯಾನೇಜ್ಮೆಂಟ್ : ಕಂಪನಿಯ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ನಿಭಾಯಿಸುವಲ್ಲಿ ಮುಖ್ಯ ಹಣಕಾಸು ಅಧಿಕಾರಿ ಪ್ರಮುಖ ಪಾತ್ರವಹಿಸುತ್ತಾರೆ.


  ಅನುಸರಣೆ: ಆಡಳಿತ ವಲಯದಿಂದ ಹಾಕಲಾಗಿರುವ ಹಲವು ಅನುಸರಣಾ ನಿಯಮಗಳನ್ನು ಸಂಸ್ಥೆ ಅನುಸರಿಸುತ್ತಿದೆ ಎಂಬುದನ್ನು ಅಧಿಕಾರಿ ಖಚಿತಪಡಿಸಿಕೊಳ್ಳಬೇಕು.


  ವ್ಯವಹಾರ ಪ್ರದರ್ಶನ : ಒಂದು ಸಂಸ್ಥೆ ತನ್ನ ಕ್ಷೇತ್ರದಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಿದೆ ಎಂಬುದನ್ನು ಮುಖ್ಯ ಹಣಕಾಸು ಅಧಿಕಾರಿ ತಿಳಿದಿರಬೇಕು ಹಾಗೂ ಅದು ಸದಾ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುತ್ತಿರುವಂತೆ ಸಮಯ ಸಮಯಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿ ಸಮರ್ಥನಾಗಿರಬೇಕು.

  Published by:Kavya V
  First published: