• Home
  • »
  • News
  • »
  • jobs
  • »
  • Career Tips: ಹೊಸದಾಗಿ ಉದ್ಯೋಗಕ್ಕೆ ಸೇರುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ

Career Tips: ಹೊಸದಾಗಿ ಉದ್ಯೋಗಕ್ಕೆ ಸೇರುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ಸ್ನೇಹಿತರು ಯಾವುದಾದರು ಒಂದು ಜಾಬ್​ ಗೆ ಸೇರಿಕೊಂಡರೆ ನೀವೂ ಸಹ ಅದೇ ಜಾಬ್​ ಬೇಕು ಎಂದು ಆಸೆ ಪಡಬೇಡಿ ಏಕೆಂದರೆ ಆ ಕೆಲಸ ಅವರ ಜೀವನಕ್ಕನುಸಾರವಾಗಿರುತ್ತದೆ.ಕೆಲವೊಮ್ಮೆ ನೀವು ಬಯಸಿದ ಉದ್ಯೋಗ ಸಿಗದೇ ಇರಬಹುದು ಅಂತಹ ಸಮಯದಲ್ಲಿ ನಿಮಗೆ ಸಿಕ್ಕ ಕೆಲಸವನ್ನು ಹೇಗೆ ಉತ್ತಮವಾಗಿ ನಿಭಾಯಿಸೋದು ನೋಡಿ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karnataka, India
  • Share this:

ಈಗ ತಾನೆ ನೀವು ನಿಮ್ಮ ಶಿಕ್ಷಣವನ್ನು (Education) ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಿದ್ದೀರಾ ಎಂದುಕೊಳ್ಳಿ. ಹಾಗಾದಾಗ ನಿಮಗೆ ಸಾಕಷ್ಟು ಗೊಂದಲಗಳಿರುತ್ತವೆ. ಅದನ್ನು ಹೇಗೆ ಪರಿಹರಿಸಿಕೊಳ್ಳುವುದು ಎಂಬ ಅನುಮಾನದಲ್ಲಿ ಮನಸ್ಸಿಗೆ ಬಂದ ಇಂಟರ್ವ್ಯೂ (Interview) ಅಟೆಂಡ್​ ಮಾಡುತ್ತಿರುತ್ತೀರಿ ಆ ಕಾರಣದಿಂದ ನೀವು ಯಾವುದರಲ್ಲೂ ಆಯ್ಕೆ ಆಗದೆ ಉಳಿಯುವ ಸಂದರ್ಭವೂ ಇದೆ. ಅದಕ್ಕಾಗಿ ನೀವು ಸಂದರ್ಶನಕ್ಕೆ ಹೋಗುವ ಮುನ್ನ ಕೆಲವು ಸಲಹೆಗಳನ್ನು (Tips) ಪಾಲಿಸಿ.


ನಾವಿಲ್ಲಿ ನೀಡಿರುವ ಈ ಉಪಾಯಗಳನ್ನು ನೀವು ಪಾಲಿಸಿದರೆ ಉದ್ಯೋಗ ತಾನಾಗಿಯೇ ನಿಮ್ಮನ್ನು ಅರಸಿ ಬರುತ್ತದೆ. ಆದರೆ ನಿಮ್ಮ ಕಡೆಯಿಂದ ಕೊಂಚ ಪ್ರಯತ್ನ ಬೇಕು. ಅದೇನು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತೇವೆ ನೋಡಿ. ಇದನ್ನು ಅನುಸರಿಸಿ ನಂತರ ಸಂದರ್ಶನ ನೀಡಿ ಎಷ್ಟು ಬದಲಾವಣೆ ಕಾಣುತ್ತದೆ ನೋಡಿ.


ನಿಮ್ಮ ಆಸಕ್ತಿ ಹಾಗೂ ಕೌಶಲ್ಯಕ್ಕೆ ಒತ್ತು ನೀಡಿ


ನೀವು ಯಾವ ರೀತಿಯ ಕೆಲಸವನ್ನು ಮಾಡಲು ಇಷ್ಟ ಪಡುತ್ತೀರಿ ಮತ್ತು ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹಾಗೂ ಕೌಶಲ್ಯ ಇದೆ ಎಂಬುದನ್ನು ಮೊದಲು ಗುರುತಿಸಿಕೊಳ್ಳಿ ನಂತರ ಆ ಕ್ಷೇತ್ರದ ಬಗ್ಗೆ ಸ್ವಲ್ಪ ಗೂಗಲ್​ ಮಾಡಿ ಇಲ್ಲವೇ ಯಾರನ್ನಾದರೂ ಕೇಳಿ ತಿಳಿದುಕೊಳ್ಳಿ. ನಂತರ ನೀವು ಸ್ವತಃ ಎಷ್ಟು ಮಾಹಿತಿ ಸಂಗ್ರಹಿಸಿದ್ದೀರಿ ಎಂಬುದನ್ನು ನೀವೇ ಮನದಟ್ಟು ಮಾಡಿಕೊಳ್ಳಿ. ಈಗ ನಿಮಗೆ ನಿಮ್ಮ ಮೇಲೆ ಎಷ್ಟು ವಿಶ್ವಾಸ ಬಂದಿದೆ ಎಂಬುದನ್ನು ತಿಳಿಯಿರಿ ಇಷ್ಟಾದ ನಂತರ ಸಂದರ್ಶನಕ್ಕೆ ತೆರಳಿ.


ಇದನ್ನೂ ಓದಿ: School Holiday: ಮುಂದುವರಿದ ಚಳಿಗಾಲದ ರಜೆ, ಇನ್ನೆಷ್ಟು ದಿನ ಇರಲಿದೆ ನೋಡಿ


ನೀವು ಸಂದರ್ಶನ ನೀಡುತ್ತಿರುವ ಕಂಪನಿ ನಿಮಗೆ ಸುರಕ್ಷತವಾಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಗಮನಿಸಿ. ಏಕೆಂದರೆ ಎಷ್ಟೋ ಕಂಪನಿಗಳು ತಮ್ಮ ನೌಕರರ ಸಂಬಳ ಹಾಗೂ ಉದ್ಯೋಗ ಸ್ಥಿರತೆ ಬಗ್ಗೆ ಸುರಕ್ಷತೆ ನೀಡುವುದಿಲ್ಲ. ಯಾವ ರೀತಿ ಸೌಲಭ್ಯಗಳಿದೆ ಎಂದು ನೋಡಿ ತಿಳಿದುಕೊಳ್ಳಿ. ಅದರಲ್ಲೂ ನೀವು ಮಹಿಳೆಯರಾಗಿದ್ದರೆ. ಕಂಪನಿ ಇರುವ ಜಾಗ ಯಾವ ರೀತಿಯ ನೌಕರಿದ್ದಾರೆ? ಎಷ್ಟು ಜನ ಮಹಿಳೆಯರು ನಿಮ್ಮ ಜೊತೆ ಕೆಲಸ ಮಾಡುತ್ತಾರೆ ಎಂಬುದನ್ನು ಮೊದಲೇ ತಿಳಿದುಕೊಳ್ಳಿ.


ಜನರ ಸಲಹೆಗಳನ್ನು ಕೇಳಿ ಆದರೆ ಗೊಂದಲ ಬೇಡ


ಉದ್ಯೋಗಕ್ಕೆ ಸೇರಿಕೊಳ್ಳುವಾಗ ಜನರ ಸಲಹೆ ಕೇಳುವುದು ತಪ್ಪಲ್ಲ ಆದರೆ ತುಂಬಾ ಜನರ ಸಲಹೆಗಳನ್ನು ಕೇಳುವುದು ಖಂಡಿತಾ ತಪ್ಪು. ಏಕೆಂದರೆ ಪ್ರತಿಯೊಬ್ಬರ ಅಭಿಪ್ರಾಯವೂ ಸಹ ಒಂದೊಂದು ರೀತಿಯದ್ದಾಗಿರುತ್ತದೆ. ಆದ್ದರಿಂದ ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಸಲಹೆಯನ್ನು ಮಾತ್ರ ಸ್ವೀಕಾರ ಮಾಡಿ. ಇತರ ಸಲಹೆಗಳಿಂದ ಖಂಡಿತ ಗೊಂದಲಕ್ಕೊಳಗಾಗಬೇಡಿ.


ಇದನ್ನೂ ಓದಿ: UPSC Success Story: ಸರ್ಕಾರಿ ಕೆಲಸ ಬಿಟ್ಟು ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಿ ಯಶಸ್ವಿಯಾದ ಕನಿಕಾ


ನಿಮ್ಮ ಸ್ನೇಹಿತರು ಯಾವುದಾದರು ಒಂದು ಜಾಬ್​ ಗೆ ಸೇರಿಕೊಂಡರೆ ನೀವೂ ಸಹ ಅದೇ ಜಾಬ್​ ಬೇಕು ಎಂದು ಆಸೆ ಪಡಬೇಡಿ ಏಕೆಂದರೆ ಆ ಕೆಲಸ ಅವರ ಜೀವನಕ್ಕನುಸಾರವಾಗಿರುತ್ತದೆ.ಕೆಲವೊಮ್ಮೆ ನೀವು ಬಯಸಿದ ಉದ್ಯೋಗ ಸಿಗದೇ ಇರಬಹುದು ಅಂತಹ ಸಮಯದಲ್ಲಿ ನಿಮಗೆ ಸಿಕ್ಕ ಕೆಲಸವನ್ನು ಹೇಗೆ ಉತ್ತಮವಾಗಿ ನಿಮ್ಗೆ ಇಷ್ಟವಾಗುವ ರೀತಿಯಲ್ಲಿ ಮಾಡಲಾಗುತ್ತದೆ ಎಂಬ ಬಗ್ಗೆ ಗಮನ ಕೊಡಿ. ಒಟ್ಟಿನಲ್ಲಿ ನೀವು ಉದ್ಯೋಗಕ್ಕೆ ಸೇರಿಕೊಳ್ಳುವ ಸಮಯದಲ್ಲಿ ತುಂಬಾ ಜಾಗರೂಕತೆಯಿಂದ ಇರಿ. ಇಲ್ಲವಾದರೆ ನಿಮ್ಮ ಮುಂದಿನ ಬದುಕಿಗೆ ಅದು ಮಾರಕವಾಗಬಹುದು ಎಚ್ಚರ.

First published: