• ಹೋಂ
  • »
  • ನ್ಯೂಸ್
  • »
  • Jobs
  • »
  • Career Tips: ವಿದೇಶದಲ್ಲಿ ಓದಿ, ಅಲ್ಲಿಯೇ ಉದ್ಯೋಗ ಮಾಡಬೇಕೇ? ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ ನೋಡಿ

Career Tips: ವಿದೇಶದಲ್ಲಿ ಓದಿ, ಅಲ್ಲಿಯೇ ಉದ್ಯೋಗ ಮಾಡಬೇಕೇ? ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ ನೋಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವಿದೇಶದಲ್ಲಿ ಓದಿ, ಸ್ವದೇಶಕ್ಕೆ ಮರಳಿ ಕೆಲಸ ಮಾಡುವವರು ತೀರಾ ಕಡಿಮೆ ಅಂತ ಹೇಳಬಹುದು. ಬಹುತೇಕರು ವಿದೇಶದಲ್ಲಿ ಓದು ಮುಗಿಸಿದ ನಂತರ ಅಲ್ಲಿಯೇ ಕೆಲಸ ಹುಡುಕಲು ಶುರು ಮಾಡುತ್ತಾರೆ.

  • Share this:

ಈಗಂತೂ ಅನೇಕ ಯುವಕರು ತಮ್ಮ ಎಂಜಿನಿಯರಿಂಗ್ ಮತ್ತು ವೈದ್ಯಕೀಯ (Engineering and Medical) ಶಿಕ್ಷಣದಲ್ಲಿ ಪದವಿ ಮುಗಿಸಿದ ನಂತರ ಮುಂದಿನ ಸ್ನಾತಕೋತ್ತರ ಪದವಿ ಎಂದರೆ ಎಂ ಎಸ್ (MS) ಮಾಡಲು ವಿದೇಶಕ್ಕೆ ( Abroad) ಹೋಗುತ್ತಾರೆ. ಹಾಗೆ ಓದಲು ವಿದೇಶಕ್ಕೆ ಹೋದ ವಿದ್ಯಾರ್ಥಿಗಳು ಅಲ್ಲಿಯೇ ಓದು ಮುಗಿದ ನಂತರ ವೃತ್ತಿಜೀವನವನ್ನು ಸಹ ಶುರು ಮಾಡಲು ಇಷ್ಟಪಡುತ್ತಾರೆ ಅಂತ ಹೇಳಬಹುದು.


ವಿದೇಶದಲ್ಲಿ ಓದಿ, ಸ್ವದೇಶಕ್ಕೆ ಮರಳಿ ಕೆಲಸ ಮಾಡುವವರು ತೀರಾ ಕಡಿಮೆ ಅಂತ ಹೇಳಬಹುದು. ಬಹುತೇಕರು ವಿದೇಶದಲ್ಲಿ ಓದು ಮುಗಿಸಿದ ನಂತರ ಅಲ್ಲಿಯೇ ಕೆಲಸ ಹುಡುಕಲು ಶುರು ಮಾಡುತ್ತಾರೆ.


ಬೇರೆ ರೀತಿಯ ಪರೀಕ್ಷೆಗಳನ್ನು ನೀಡುವುದು, ಎಸ್ಒಪಿ (ಉದ್ದೇಶದ ಹೇಳಿಕೆ) ಅನ್ನು ತಯಾರು ಮಾಡಿಕೊಳ್ಳುವುದು, ಎಲ್ಒಆರ್ ಗಳನ್ನು ಎಂದರೆ (ಶಿಫಾರಸುಗಳ ಪತ್ರ) ರೆಡಿ ಮಾಡಿಕೊಳ್ಳುವುದು, ಹೀಗೆ ತಮ್ಮ ಕನಸಿನ ದೇಶದಲ್ಲಿ ಅವರ ಆಸಕ್ತಿಗೆ ಹೊಂದಿಕೆಯಾಗುವ ಪ್ರೋಗ್ರಾಂ ಅನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಬ್ಯುಸಿ ಆಗಿ ಬಿಡುತ್ತಾರೆ.


ಈ ಕ್ಷೇತ್ರದಲ್ಲಿ ಗಮನಾರ್ಹ ಜ್ಞಾನ ಮತ್ತು ಅನುಭವ ಹೊಂದಿರುವ ಮೆಂಟರ್ ಎಂದರೆ ಮಾರ್ಗದರ್ಶಕರನ್ನು ನೀವು ಹುಡುಕಿಕೊಳ್ಳುವುದು ತುಂಬಾನೇ ಸಹಾಯವಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಮತ್ತು ನಿಮ್ಮ ಕನಸಿನ ಕೆಲಸವನ್ನು ಅಲ್ಲಿಯೇ ಶುರು ಮಾಡಲು ಉತ್ತಮ ಮಾರ್ಗದರ್ಶಕರ ಸಲಹೆ ಪಡೆಯುವುದು ಏಕೆ ತುಂಬಾನೇ ಮುಖ್ಯವಾಗಿರುತ್ತದೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ ನೋಡಿ.


1. ಅರ್ಜಿ ಪ್ರಕ್ರಿಯೆಯ ಬಗ್ಗೆ ಸಲಹೆ ನೀಡುತ್ತಾರೆ


ಮಾರ್ಗದರ್ಶಕರು ತಮ್ಮ ವಿಶೇಷ ಕ್ಷೇತ್ರಗಳಲ್ಲಿ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಾರೆ. ನಿಮ್ಮ ಪ್ರಕ್ರಿಯೆಯಲ್ಲಿ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಅಂತ ಹೇಳಬಹುದು. ವಿದೇಶದಲ್ಲಿ ಅಧ್ಯಯನ ಮಾಡುವಲ್ಲಿ ಒಳಗೊಂಡಿರುವ ಜಟಿಲತೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಇವರು ಹೊಂದಿರುತ್ತಾರೆ.


ಪ್ರಾತಿನಿಧಿಕ ಚಿತ್ರ


ಅರ್ಜಿ ಪ್ರಕ್ರಿಯೆಯ ಮೂಲಕ ಅರ್ಜಿದಾರರಿಗೆ ಮಾರ್ಗದರ್ಶನ ಮಾಡುವುದು, ಬೇಕಾದ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲಾಗಿದೆಯೇ ಅಂತ ನೋಡಿಕೊಳ್ಳುವುದು ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ಅನಿರೀಕ್ಷಿತ ಅಡೆತಡೆಗಳು ಬಾರದಂತೆ ಮಾರ್ಗದರ್ಶಕರು ಸಹಾಯ ಮಾಡುತ್ತಾರೆ.


2. ಕೋರ್ಸ್ ವರ್ಕ್ ಮತ್ತು ದೇಶದ ಆಯ್ಕೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ


ಮಾರ್ಗದರ್ಶಕರು ನಿಮಗೆ ಪ್ರೋಗ್ರಾಂಗಳಿಗಾಗಿ ಆಯ್ಕೆಗಳನ್ನು ನಿಮ್ಮ ಮುಂದೆ ಹೇಳುತ್ತಾರೆ ಮತ್ತು ಅದರಲ್ಲಿ ನಿಮ್ಮ ಆಸಕ್ತಿಗಳಿಗೆ ಸರಿಹೊಂದುವಂತೆ ಉತ್ತಮವಾದದನ್ನು ನೀವು ಆಯ್ಕೆ ಮಾಡಬಹುದು.


ಈ ಆಯ್ಕೆಗಳು ನಿಮ್ಮ ಆಸಕ್ತಿಯ ಆಯ್ಕೆಯ ಕ್ಷೇತ್ರಗಳಿಗೆ ಸಂಬಂಧಿಸಿರುತ್ತವೆ. ಮಾರ್ಗದರ್ಶಕರು ವಿಶ್ವದ ವೇಗವಾಗಿ ಬದಲಾಗುತ್ತಿರುವ ಬೇಡಿಕೆಗಳಿಗೆ ಸೂಕ್ತ ಕಾರ್ಯಕ್ರಮವನ್ನು ಶಿಫಾರಸು ಮಾಡುತ್ತಾರೆ, ಏಕೆಂದರೆ ಅವರು ಮಾರುಕಟ್ಟೆ ಪ್ರವೃತ್ತಿಗಳ ಬಗ್ಗೆ ಆಳವಾದ ಜ್ಞಾನ ಮತ್ತು ಸಮತೋಲಿತ ದೃಷ್ಟಿಕೋನವನ್ನು ಹೊಂದಿರುತ್ತಾರೆ.


ಕೋರ್ಸ್ ವರ್ಕ್ ನೊಂದಿಗೆ, ಅವೆಲ್ಲವೂ ನಿಮಗೆ ಆರ್ಥಿಕವಾಗಿ ಕಾರ್ಯಸಾಧ್ಯವಾದ ರಾಷ್ಟ್ರಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತವೆ ಮತ್ತು ನೀವು ನಿಮ್ಮ ಪದವಿಯನ್ನು ಗಳಿಸಿದ ನಂತರ ಅದು ನಿಮಗೆ ಅನೇಕ ಉದ್ಯೋಗಾವಕಾಶಗಳನ್ನು ನೀಡುತ್ತದೆ.


3. ಪ್ರೊಫೈಲ್ ರೆಡಿ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ ಇವರು..


ನಿಮ್ಮ ಇಂಟರ್ ಮೀಡಿಯೇಟ್ ಅಥವಾ ಬ್ಯಾಚುಲರ್ ಡಿಗ್ರಿಯಲ್ಲಿನ ಗ್ರೇಡ್ ಗಳನ್ನು ಮೀರಿ, ಪಠ್ಯೇತರ ಚಟುವಟಿಕೆಗಳು, ಒಲಿಂಪಿಯಾಡ್ ಗಳು, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಮತ್ತು ಇತರ ಸಾಮರ್ಥ್ಯಗಳು ಹೀಗೆ ನಿಮ್ಮ ಸಂಪೂರ್ಣವಾದ ಪ್ರೊಫೈಲ್ ಅನ್ನು ರಚಿಸುವಲ್ಲಿ ಈ ಮಾರ್ಗದರ್ಶಕರು ಮಹತ್ವದ ಪಾತ್ರ ವಹಿಸುತ್ತಾರೆ.


ಸಾಂಕೇತಿಕ ಚಿತ್ರ


ಮಾರ್ಗದರ್ಶಕರ ಮಾರ್ಗದರ್ಶನದೊಂದಿಗೆ, ನಿಮ್ಮ ಸಾಮರ್ಥ್ಯಗಳು, ಸಾಧನೆಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪ್ರದರ್ಶಿಸುವ ಗಮನಾರ್ಹ ಪ್ರೊಫೈಲ್ ಅನ್ನು ನೀವು ತಯಾರಿಸಿಕೊಳ್ಳಬಹುದು.


4. ಎಸ್ಒಪಿ, ಎಲ್ಒಆರ್, ಪ್ರಬಂಧಗಳನ್ನು ಬರೆಯಲು ಸಹಾಯ ಮಾಡುತ್ತಾರೆ


ನಿಮ್ಮ ಉದ್ದೇಶದ ಹೇಳಿಕೆಯನ್ನು (ಎಸ್ಒಪಿ) ರಚಿಸುವುದು ವಿದೇಶಿ ವಿಶ್ವವಿದ್ಯಾಲಯಗಳಿಗೆ ಅರ್ಜಿ ಪ್ರಕ್ರಿಯೆಯಲ್ಲಿ ಮತ್ತೊಂದು ನಿರ್ಣಾಯಕ ಹಂತವಾಗಿದೆ. ವಿಶ್ವವಿದ್ಯಾಲಯಗಳು ಸಾಮಾನ್ಯವಾಗಿ ಒತ್ತಾಯಿಸುವ ವಿದ್ಯಾರ್ಥಿಯ ಎಸ್ಒಪಿ ಮೂಲಭೂತವಾಗಿ ಒಂದು ನಿರ್ದಿಷ್ಟ ವಿಶ್ವವಿದ್ಯಾಲಯದಲ್ಲಿ ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಏಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬುದನ್ನು ವಿವರಿಸುವ ಸುದೀರ್ಘ ಪ್ರಬಂಧವಾಗಿದೆ.


ಎಸ್ಒಪಿಯಲ್ಲಿನ ಎಲ್ಲಾ ನಿರ್ಣಾಯಕ ವಿವರಗಳನ್ನು ರೂಪಿಸಲು ಮತ್ತು ಅದನ್ನು ಎದ್ದು ಕಾಣುವಂತೆ ಮಾಡಲು ಮಾರ್ಗದರ್ಶಕರು ಅಭ್ಯರ್ಥಿಗೆ ಸಹಾಯ ಮಾಡುತ್ತಾರೆ.


ಇಂದಿನ ವಿಶ್ವವಿದ್ಯಾಲಯಗಳು ಎಸ್ಒಪಿ ಜೊತೆಗೆ ನಿಮ್ಮ ಅರ್ಜಿಯೊಂದಿಗೆ ಒಂದರಿಂದ ಮೂರು ಶಿಫಾರಸು ಪತ್ರಗಳನ್ನು (ಎಲ್ಒಆರ್) ಕೇಳುತ್ತವೆ. ಎಲ್ಒಆರ್ ಗಳಿಗಾಗಿ ಯಾವ ಪ್ರಾಧ್ಯಾಪಕರನ್ನು ಸಂಪರ್ಕಿಸಬೇಕು ಮತ್ತು ನೀವು ಈ ನಿರ್ದಿಷ್ಟ ಕಾಲೇಜು ಮತ್ತು ಕಾರ್ಯಕ್ರಮವನ್ನು ಏಕೆ ಆರಿಸಿಕೊಂಡಿದ್ದೀರಿ ಎಂಬುದರ ಬಗ್ಗೆ ಹೆಚ್ಚು ವೈಯಕ್ತೀಕರಿಸಿದ ವಿವರಣೆಗಾಗಿ ಪ್ರಾಧ್ಯಾಪಕರನ್ನು ಹೇಗೆ ಕೇಳುವುದು ಮತ್ತು ಈ ನಿರ್ದಿಷ್ಟ ಪ್ರಾಧ್ಯಾಪಕರಿಂದ ಎಲ್ಒಆರ್ ನಿಮ್ಮ ಅರ್ಜಿಯ ಮೇಲ್ಭಾಗದಲ್ಲಿ ಹೇಗೆ ಇರುತ್ತದೆ ಎಂಬ ವಿವರಗಳನ್ನು ವಿಂಗಡಿಸಲು ಮಾರ್ಗದರ್ಶಕರು ನಿಮಗೆ ಸಹಾಯ ಮಾಡಬಹುದು.




5. ಆರ್ಥಿಕ ನೆರವು ಮತ್ತು ಉದ್ಯೋಗಾರ್ಹತೆ ಅಂಶಗಳಲ್ಲೂ ಸಹಾಯ ಮಾಡುತ್ತಾರೆ


ನಿಮ್ಮ ಶಿಕ್ಷಣದ ವೆಚ್ಚಗಳು ಮತ್ತು ಇತರ ವೆಚ್ಚಗಳನ್ನು ಪಾವತಿಸಲು ಮಾರ್ಗದರ್ಶಕರು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಆದ್ಯತೆಯ ಶೈಕ್ಷಣಿಕ ಕ್ಷೇತ್ರ ಮತ್ತು ರಾಷ್ಟ್ರಕ್ಕೆ ಅನುಗುಣವಾಗಿ, ಅವರು ನಿಮಗೆ ವಿದ್ಯಾರ್ಥಿವೇತನದ ಆಯ್ಕೆಗಳ ಬಗ್ಗೆ ತಿಳಿಸಿ ಕೊಡುತ್ತಾರೆ. ವಿದ್ಯಾರ್ಥಿವೇತನಗಳು ನಿಮ್ಮ ಶಿಕ್ಷಣದ ವೆಚ್ಚವನ್ನು ಭರಿಸುವಲ್ಲಿ ತುಂಬಾನೇ ಸಹಾಯಕ್ಕೆ ಬರಬಹುದು.


ಇದನ್ನೂ ಓದಿ: MBBS ಹೊರತಾಗಿ ಈ ಪದವಿಗಳನ್ನು ಓದಿದರೂ ವೈದ್ಯರೆನಿಸಿಕೊಳ್ಳಬಹುದು; ಹತ್ತಾರು ಆಯ್ಕೆಗಳು ಇಲ್ಲಿವೆ ನೋಡಿ


ವಿದ್ಯಾರ್ಥಿವೇತನದ ಹೊರತಾಗಿ ವಿದ್ಯಾರ್ಥಿಗಳು ತಮ್ಮ ವಿದೇಶದ ಅನುಭವವನ್ನು ಆರ್ಥಿಕವಾಗಿ ಹೆಚ್ಚು ಕಾರ್ಯಸಾಧ್ಯವಾಗಿಸಲು ಸಾಲಗಳನ್ನು ಸಹ ಆರಿಸಿಕೊಳ್ಳುತ್ತಾರೆ. ಸಾಲ ಅನುಮೋದನೆ ಕಾರ್ಯವಿಧಾನದ ಉದ್ದಕ್ಕೂ ಮಾರ್ಗದರ್ಶಕರ ಸಹಾಯ ನಿಮಗೆ ಬೇಕಾಗುತ್ತದೆ.


ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುವುದರ ಜೊತೆಗೆ ಮತ್ತು ನಿಮ್ಮ ಕೋರ್ಸ್ ಗಳಿಗೆ ಬಜೆಟ್ ರಚಿಸುವುದರ ಜೊತೆಗೆ, ನಿಮ್ಮ ಕೋರ್ಸ್ ಮುಗಿದ ನಂತರ ಇಂಟರ್ನ್ಶಿಪ್ ಅಥವಾ ಸಂಭಾವ್ಯ ಉದ್ಯೋಗಗಳನ್ನು ಹೇಗೆ ಹುಡುಕಬೇಕು ಎಂಬುದರ ಬಗ್ಗೆ ಸಹ ಮಾರ್ಗದರ್ಶಕರು ಸಲಹೆ ನೀಡುತ್ತಾರೆ.

First published: