ನಾವು ಈ ವಿಮಾನ ನಿಲ್ದಾಣಕ್ಕೆ (Airport) ವಿಮಾನ (Flights) ಹತ್ತಲು ಹೋದರೆ ಅಲ್ಲಿ ನಮಗೆ ಅನುಕೂಲವಾಗಲೆಂದು ಅನೇಕ ರೀತಿಯ ಸೇವೆಗಳು ಮತ್ತು ಸೌಲಭ್ಯಗಳು ಲಭ್ಯವಿರುವುದನ್ನು ನಾವು ನೋಡುತ್ತೇವೆ. ಹೀಗೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರಾಮವಾಗಿಡುವುದು ಆತಿಥ್ಯ ಕ್ಷೇತ್ರ (Hospitality Sector) ಎಂದರೆ ಏರ್‌ಪೋರ್ಟ್ ಹಾಸ್ಪಿಟಾಲಿಟಿಯಲ್ಲಿ ಕೆಲಸ ಮಾಡುವವರ ಮೂಲ ಉದ್ದೇಶವಾಗಿರುತ್ತದೆ.
ಈ ವಿಮಾನ ನಿಲ್ದಾಣದ ಆತಿಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ವಿಮಾನ ಹತ್ತಲು ಬೇಕಾದ ಎಲ್ಲಾ ವ್ಯವಸ್ಥೆಗಳಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿಮಾನ ಪ್ರಯಾಣಿಕರಿಗೆ ಆಹ್ಲಾದಕರವಾದ ಅನುಭವವನ್ನು ಹೊಂದಲು ಅಗತ್ಯವಿರುವ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸುತ್ತಾರೆ ಅಂತ ಹೇಳಬಹುದು.
ಕ್ರಿಯಾತ್ಮಕ ಮತ್ತು ಉತ್ತೇಜಕ ವಾತಾವರಣದಲ್ಲಿ ಕೆಲಸ ಮಾಡಲು ಬಯಸುವ ವ್ಯಕ್ತಿಗಳಿಗೆ, ವಿಮಾನ ನಿಲ್ದಾಣ ಆತಿಥ್ಯ ಉದ್ಯಮವು ವೃತ್ತಿಪರ ಭವಿಷ್ಯದ ವ್ಯಾಪಕ ಆಯ್ಕೆಯನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಲಾಂಜ್ ಗಳಿಂದ ಹಿಡಿದು ಕೆಫೆಗಳವರೆಗೆ ಮತ್ತು ಡ್ಯೂಟಿ-ಫ್ರೀ ಸ್ಟೋರ್ ಗಳವರೆಗೆ, ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಹಲವಾರು ಪರ್ಯಾಯಗಳನ್ನು ಒದಗಿಸುತ್ತದೆ. ವಿವಿಧ ಆತಿಥ್ಯ ಲಾಭದಾಯಕ ಉದ್ಯೋಗಾವಕಾಶಗಳನ್ನು ನೀಡುತ್ತದೆ.
ವಿಮಾನ ನಿಲ್ದಾಣಗಳ ಆತಿಥ್ಯ ಕ್ಷೇತ್ರದಲ್ಲಿರುವ ಎರಡು ಜನಪ್ರಿಯ ವೃತ್ತಿಜೀವನಗಳು
ಫುಡ್ ಅಂಡ್ ಬೆವರೇಜಸ್ (ಆಹಾರ ಮತ್ತು ಪಾನೀಯ)
ವಿಮಾನ ನಿಲ್ದಾಣಗಳಲ್ಲಿ ಈ ವಿಭಾಗಗಳಲ್ಲಿ ವಿವಿಧ ರೀತಿಯ ಆತಿಥ್ಯ ಉದ್ಯೋಗಗಳು ಲಭ್ಯವಿದೆ, ಉದಾಹರಣೆಗೆ ತಿನಿಸುಗಳು, ಕಾಫಿ ಅಂಗಡಿಗಳು, ಬಾರ್ ಗಳು ಮತ್ತು ಕೆಫೆಗಳಲ್ಲಿ ಅನೇಕ ರೀತಿಯ ಕೆಲಸಗಳು ಲಭ್ಯವಿರುತ್ತವೆ. ಇವುಗಳಲ್ಲಿ ಬಾಣಸಿಗರು, ಸರ್ವರ್ ಗಳು, ಬಾರ್ ಅಟೆಂಡರ್ ಗಳು ಮತ್ತು ಸ್ವೀಟ್ ಮಾರುವವರನ್ನು ನೇಮಿಸಿಕೊಳ್ಳುತ್ತವೆ. ಗ್ರಾಹಕ ಸೇವೆಯ ಮೇಲಿನ ಪ್ರೀತಿ ಮತ್ತು ಪ್ರಯಾಣಿಕರಿಗೆ ಸ್ಮರಣೀಯ ಅನುಭವವನ್ನು ಒದಗಿಸುವ ಬಯಕೆ ಹೊಂದಿರುವ ಜನರಿಗೆ ವಿವಿಧ ಆಯ್ಕೆಗಳು ಲಭ್ಯವಿವೆ.
ವಿಮಾನ ನಿಲ್ದಾಣಗಳಲ್ಲಿನ ಆಹಾರ ಮತ್ತು ಪಾನೀಯಗಳ ವಿಭಾಗವು ಸದಾ ಜನರೊಂದಿಗೆ ಕೆಲಸ ಮಾಡಲು ಇಷ್ಟಪಡುವ ಅಭ್ಯರ್ಥಿಗಳಿಗೆ ಸೂಕ್ತ ಹೊಂದಾಣಿಕೆಯಾಗಬಹುದು. ಇದು ಬೇರೆ ಬೇರೆ ದೇಶದ ಜನರೊಂದಿಗೆ ವಿಮಾನ ನಿಲ್ದಾಣದಲ್ಲಿ ಸಹಕರಿಸಲು, ಹೊಸ ಹೊಸ ಅನುಭವವನ್ನು ಪಡೆಯಲು ಮತ್ತು ವಿವಿಧ ಆತಿಥ್ಯ-ಸಂಬಂಧಿತ ಕ್ಷೇತ್ರಗಳಲ್ಲಿ ಬಳಸಬಹುದಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.
ವಿಮಾನ ನಿಲ್ದಾಣ ಆತಿಥ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಿರ್ಮಿಸುವ ಬಗ್ಗೆ ಮಾತನಾಡಿದ ಎನ್ಕಾಲ್ಮ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಮತ್ತು ತರಬೇತಿ ಮುಖ್ಯಸ್ಥ ಮಿಲನ್ ಮುಖರ್ಜಿ "ಭಾರತದ ವಿಮಾನ ನಿಲ್ದಾಣ ಆತಿಥ್ಯ ವಲಯವು ಪ್ರಯಾಣಿಕರಿಗೆ ಉನ್ನತ ದರ್ಜೆಯ, ಅಸಾಧಾರಣ ಅನುಭವಗಳನ್ನು ಒದಗಿಸಲು ಬದ್ಧವಾಗಿದೆ.
ಇದಕ್ಕಾಗಿ ವಿಮಾನ ನಿಲ್ದಾಣದ ಅನುಭವವನ್ನು ಬದಲಾಯಿಸಲು ಲಾಂಜ್ ಗಳು, ಸ್ಪಾಗಳು ಮತ್ತು ಸ್ವಾಸ್ಥ್ಯ ಕೇಂದ್ರಗಳು ಸೇರಿದಂತೆ ವಿವಿಧ ಸೇವೆಗಳನ್ನು ನೀಡಲಾಗುತ್ತಿದೆ. ಕಾರ್ಯನಿರ್ವಾಹಕ ಸ್ಥಾನಗಳಿಂದ ಹಿಡಿದು ಗ್ರಾಹಕ ಸೇವಾ ಸ್ಥಾನಗಳವರೆಗೆ, ವಿಮಾನ ನಿಲ್ದಾಣ ಆತಿಥ್ಯ ವಲಯದಲ್ಲಿ ಕೆಲಸ ಮಾಡಲು ಬಯಸುವವರಿಗೆ ಏನನ್ನಾದರೂ ಹೊಂದಿದೆ" ಎಂದು ಮಿಲನ್ ಮುಖರ್ಜಿ ಹೇಳಿದರು.
ಗ್ರಾಹಕ ಸೇವೆ ಮತ್ತು ಸಾರಿಗೆ
ವಿಮಾನ ನಿಲ್ದಾಣಗಳಲ್ಲಿ ಬಹಳಷ್ಟು ಜನರು ಬಂದು ಹೋಗುವುದರಿಂದ, ಗ್ರಾಹಕರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಯದಲ್ಲಿ ಅವುಗಳನ್ನು ಪರಿಹರಿಸಲು ಅತ್ಯುತ್ತಮ ಸೇವೆಯನ್ನು ನೀಡುವುದು ತುಂಬಾನೇ ಮುಖ್ಯವಾಗಿರುತ್ತದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ, ನೀವು ಪ್ರಯಾಣಿಕರಿಗೆ ಚೆಕ್-ಇನ್, ಬೋರ್ಡಿಂಗ್ ಮತ್ತು ಅವರ ಪ್ರಯಾಣದ ಇತರ ಅಂಶಗಳ ಬಗ್ಗೆ ಸಹಾಯ ಮಾಡಬಹುದು.
ನೀವು ಸ್ನೇಹಪರ ಮತ್ತು ಬೇರೆ ಬೇರೆ ರಾಷ್ಟ್ರದ ಜನರೊಂದಿಗೆ ಸಂವಹನ ನಡೆಸಲು ಇಷ್ಟಪಡುತ್ತಿದ್ದರೆ, ವಿಮಾನ ನಿಲ್ದಾಣದಲ್ಲಿ ಗ್ರಾಹಕ ಸೇವೆಯಲ್ಲಿ ಕೆಲಸ ಮಾಡುವುದು ಒಳ್ಳೆಯ ಆಯ್ಕೆಯಾಗಿರುತ್ತದೆ. ಮೀಟ್ ಅಂಡ್ ಗ್ರೀಟ್ ಮತ್ತೊಂದು ಸೇವೆಯಾಗಿದ್ದು, ಇದು ವಿಮಾನ ನಿಲ್ದಾಣಗಳಿಗೆ ತನ್ನ ಪ್ರತ್ಯೇಕತೆಯನ್ನು ಹೊಂದಿದೆ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರರಿಗೆ ದೀರ್ಘಾವಧಿಯಲ್ಲಿ ಲಾಭದಾಯಕ ವೃತ್ತಿಜೀವನವನ್ನು ನಿರ್ಮಿಸಲು ಉತ್ತಮ ಅವಕಾಶವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ