• ಹೋಂ
  • »
  • ನ್ಯೂಸ್
  • »
  • Jobs
  • »
  • 2nd PUCಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ; ಇಲ್ಲಿದೆ ನೋಡಿ ನಿಮಗೆ ಸುವರ್ಣಾವಕಾಶ

2nd PUCಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ; ಇಲ್ಲಿದೆ ನೋಡಿ ನಿಮಗೆ ಸುವರ್ಣಾವಕಾಶ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪಿಯುಸಿ ಫೇಲ್ ಆಗಿದ್ದರೆ ಈ ವೃತ್ತಿ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ, ಮುಂದಿನ ಜೀವನ ಸೂಪರ್​ ಆಗಿ ಇರುತ್ತೆ.

  • Share this:

ಪಿಯುಸಿ (PUC) ಅನ್ನೋದು ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾನೇ ಪ್ರಮುಖವಾದ ಘಟ್ಟ. ಹಾಗಂತ ಪಿಯುಸಿಯಲ್ಲಿ ಫೇಲಾದರೆ ಅಥವಾ ಕಡಿಮೆ ಅಂಕಗಳನ್ನು (PU Results 2023) ಗಳಿಸಿದರೆ ಮುಂದೆ ಬದುಕೇ ಇಲ್ಲ ಅಂತ ಮಾತ್ರ ತಿಳಿದುಕೊಂಡು ಹತಾಶರಾಗಬೇಡಿ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದವರಿಗೆ ಮತ್ತು ಸಿಇಟಿ ಪರೀಕ್ಷೆಯಲ್ಲಿ (CET Exam) ಉತ್ತಮ ಅಂಕಗಳನ್ನು ಗಳಿಸಿದವರಿಗೆ ಎಂಜಿನಿಯರ್ ಅಥವಾ ವೈದ್ಯರಾಗುವ ಅವಕಾಶಗಳು ತುಂಬಾನೇ ಇರುತ್ತವೆ.


ಆದರೆ ಕಡಿಮೆ ಅಂಕಗಳನ್ನು ಗಳಿಸಿದವರಿಗೂ ಸಹ ಬೇರೆ ರೀತಿಯ ಅನೇಕ ಪದವಿ ಕೋರ್ಸ್ ಗಳು ಈಗ ಬಂದಿವೆ. ಇನ್ನೂ ಪಿಯುಸಿಯಲ್ಲಿ ಫೇಲಾದವರು ‘ಅಯ್ಯೋ ಹೀಗಾಯಿತ್ತಲ್ಲ ನಮ್ಮ ಬದುಕು’ ಅಂತ ತೀರಾ ಹತಾಶೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಇವರಿಗೂ ಸಹ ಅನೇಕ ರೀತಿಯ ಕೋರ್ಸ್ ಗಳು ಮತ್ತು ವೃತ್ತಿ ಆಯ್ಕೆಗಳು ಲಭ್ಯವಿವೆ.


ಇನ್ನೂ ಎಷ್ಟೋ ಜನ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಓದಲು ಮನೆಯಲ್ಲಿ ಅಷ್ಟೊಂದು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ 10ನೇ ತರಗತಿ ಮುಗಿಸಿ ಶಾಲೆ ಬಿಟ್ಟು ಕೆಲಸಕ್ಕೆ ಹೋಗಲು ಶುರು ಮಾಡಿರುತ್ತಾರೆ. ಹೀಗೆ ಪಿಯುಸಿ ನಿಮಗೆ ಕೈ ಕೊಟ್ಟರೂ, ಜೀವನ ನಿಮ್ಮ ಕೈ ಬಿಡಬಾರದು ಅಷ್ಟೇ.  ಜೀವನದಲ್ಲಿ ನಂಬಿಕೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದಷ್ಟೇ.


ದ್ವಿತೀಯ ಪಿಯುಸಿ ಎಂದರೆ 12ನೇ ತರಗತಿಯಲ್ಲಿ ಅನುತ್ತೀರ್ಣರಾದ ಅಥವಾ ಕಾಲೇಜಿನಿಂದ ಡ್ರಾಪ್ ಔಟ್ ಆದ ವಿದ್ಯಾರ್ಥಿಗಳು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಸಂಬಳದ ಹುದ್ದೆಗೆ ಏರಬಹುದು. ಆದರೆ ನಿಮ್ಮ ಆಸಕ್ತಿಗೆ ಅನುಗುಣವಾಗಿ ನೀವು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದರಲ್ಲಿ ಹಂತ ಹಂತವಾಗಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಶ್ರಮ ಪಡಬೇಕು.




ಪಿಯುಸಿ ಫೇಲ್ ಆಗಿದ್ದರೆ ಈ ವೃತ್ತಿ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ..


ಸೇಲ್ಸ್ ರೀಪ್ರಸೆಂಟೇಟಿವ್: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡಬಹುದು. ನೀವು ಕೆಲಸ ಮಾಡುತ್ತಿರುವ ಕಂಪನಿಯ ಸರಕುಗಳನ್ನು ನೀವು ಮಾರಾಟ ಮಾಡಬೇಕಾಗುತ್ತದೆ.


ಇದನ್ನು ಮಾಡುವುದು ತುಂಬಾ ಸುಲಭ ಮತ್ತು ಸಾಮಾನ್ಯವಾಗಿ, ಮಾರಾಟ ಪ್ರತಿನಿಧಿಗಳನ್ನು ನೇಮಕ ಮಾಡುವ ಕಂಪನಿಗಳು ಯಾವುದೇ ಶೈಕ್ಷಣಿಕ ಅರ್ಹತೆಯನ್ನು ಕೇಳುವುದಿಲ್ಲ.


ಬಹುರಾಷ್ಟ್ರೀಯ ಕಂಪನಿಗಳಾದ ಮೆಕ್ ಡೊನಾಲ್ಡ್ಸ್, ರಿಲಯನ್ಸ್, ಏರ್ಟೆಲ್ ಸಹ 12ನೇ ತರಗತಿಯಲ್ಲಿ ಫೇಲ್ ಆದವರನ್ನು ಮಾರಾಟ ಪ್ರತಿನಿಧಿಗಳಾಗಿ ನೇಮಿಸಿಕೊಳ್ಳುತ್ತವೆ. ತಿಂಗಳಿಗೆ 7,000 ರೂಪಾಯಿಗಳಿಂದ ಸಂಬಳ ಪ್ರಾರಂಭವಾಗಬಹುದು ಮತ್ತು ಅನುಭವದೊಂದಿಗೆ 20,000 ರೂಪಾಯಿಗಳವರೆಗೆ ಇದು ಹೋಗಬಹುದು.


ಡೇಟಾ ಎಂಟ್ರಿ ಆಪರೇಟರ್:  ಡಾಟಾ ಎಂಟ್ರಿ ಆಪರೇಟರ್ ಕಾಲೇಜು ಬಿಟ್ಟವರು ಮತ್ತು ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಂದು ಸೂಕ್ತ ಉದ್ಯೋಗ ಸ್ಥಾನವಾಗಿದೆ. 12ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಸಹ ಈ ಕೆಲಸಕ್ಕೆ ಪ್ರಯತ್ನಿಸಬಹುದು. ಆದಾಗ್ಯೂ ಕಾಲೇಜು ಬಿಟ್ಟವರು ಈ ಕೆಲಸಕ್ಕೆ ಸೂಕ್ತ ಅಭ್ಯರ್ಥಿಗಳಾಗಿರುತ್ತಾರೆ. ಅನೇಕ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಡೇಟಾ ಎಂಟ್ರಿ ಆಪರೇಟರ್ ಗಳ ಅಗತ್ಯವಿದೆ.


ಇಲ್ಲಿ ನಿಮಗೆ ಬೇಕಾಗಿರುವ ಒಂದೇ ಒಂದು ಕೌಶಲ್ಯವೆಂದರೆ ವೇಗವಾಗಿ ಟೈಪಿಂಗ್ ಮಾಡುವ ಕೌಶಲ್ಯ. ನೀವು ನಿಮಿಷಕ್ಕೆ 40 ರಿಂದ 50 ಪದಗಳನ್ನು ಟೈಪ್ ಮಾಡಲು ಸಾಧ್ಯವಾದರೆ ಸಾಕು.


ನಿಮ್ಮ ಟೈಪಿಂಗ್ ವೇಗವು ಉತ್ತಮವಾಗಿಲ್ಲದಿದ್ದರೆ, ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಟೈಪಿಂಗ್ ಅಭ್ಯಾಸ ಮಾಡಬಹುದು. ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿದರೆ ತಿಂಗಳಿಗೆ 7,000 ರಿಂದ 12,000 ರೂಪಾಯಿ ಸಂಬಳವನ್ನು ಗಳಿಸಬಹುದು.


ಕಾಲ್ ಸೆಂಟರ್ ಉದ್ಯೋಗ: ಕಾಲ್ ಸೆಂಟರ್ ಉದ್ಯೋಗಗಳು ಕಾಲೇಜು ಬಿಟ್ಟವರಿಗೆ ಮತ್ತು 12ನೇ ತರಗತಿಯಲ್ಲಿ ಫೇಲ್ ಆದವರಿಗೆ ಹೇಳಿ ಮಾಡಿಸಿದ ಕೆಲಸ. ಅವರು ಯಾವುದೇ ಸ್ಥಳೀಯ ಕಾಲ್ ಸೆಂಟರ್ ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು, ಅಲ್ಲಿ ನಿಮಗೆ ಸ್ಥಳೀಯ ಭಾಷೆ ಗೊತ್ತಿರಬೇಕು ಅಷ್ಟೇ.


ಅಂತರರಾಷ್ಟ್ರೀಯ ಕಾಲ್ ಸೆಂಟರ್ ನಲ್ಲಿ ಕೆಲಸ ಪಡೆಯಲು 12ನೇ ತರಗತಿಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ, ಈ ಕೆಲಸ ಕಾಲೇಜು ಬಿಟ್ಟವರಿಗೆ ಸೂಕ್ತವಾಗಿರುತ್ತದೆ.




ಅಂತರರಾಷ್ಟ್ರೀಯ ಕಾಲ್ ಸೆಂಟರ್ ಗಳಲ್ಲಿ ಶೈಕ್ಷಣಿಕ ಅರ್ಹತೆಗಳು ಆದ್ಯತೆಯಲ್ಲದಿದ್ದರೂ, ನಿಮಗೆ ಇಂಗ್ಲಿಷ್ ಭಾಷೆ ಚೆನ್ನಾಗಿ ಗೊತ್ತಿರಬೇಕು. ಕಾಲ್ ಸೆಂಟರ್ ಕೆಲಸ ನಿಮಗೆ ತಿಂಗಳಿಗೆ 7,000 ರಿಂದ 35,000 ರೂಪಾಯಿಗಳವರೆಗೆ ಪಾವತಿಸಬಹುದು.


ನೆಟ್‌ವರ್ಕ್ ಮಾರ್ಕೆಟರ್: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ನೆಟ್‌ವರ್ಕ್ ಮಾರ್ಕೆಟಿಂಗ್ ಮತ್ತೊಂದು ಉತ್ತಮ ವೃತ್ತಿ ಆಯ್ಕೆಯಾಗಿದೆ. ಹೆಚ್ಚಿನ ಶಿಕ್ಷಣ ಪಡೆಯದ ಆದರೆ ಲಕ್ಷಾಂತರ ಗಳಿಸುವ ಅನೇಕ ನೆಟ್‌ವರ್ಕ್ ಮಾರ್ಕೆಟರ್ ಇದ್ದಾರೆ. ಇದು ಮೂಲಭೂತವಾಗಿ ಮಾರ್ಕೆಟಿಂಗ್ ನಂತೆಯೇ, ಆದರೆ ಇಲ್ಲಿ ನೀವು ನಿಮಗಾಗಿ ಕೆಲಸ ಮಾಡಲು ತಂಡವನ್ನು ನಿರ್ಮಿಸಬೇಕು.


ಇದರಲ್ಲಿ, ಮೊದಲು, ನೀವು ದೊಡ್ಡ ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ನಿಮ್ಮ ಅಡಿಯಲ್ಲಿ ಸದಸ್ಯರನ್ನು ಸೇರಿಸಿಕೊಳ್ಳಬೇಕು. ನಿಮ್ಮ ಸದಸ್ಯರು ಬೆಳೆದಂತೆ ನೀವು ಹೆಚ್ಚು ಹಣವನ್ನು ಗಳಿಸುತ್ತೀರಿ.


ಆದ್ದರಿಂದ 12ನೇ ತರಗತಿಯಲ್ಲಿ ಅನುತ್ತೀರ್ಣರಾದ ಅಥವಾ ಕಾಲೇಜಿನಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಈ ಉದ್ಯೋಗ ಸೂಕ್ತವಾಗಿದೆ. ಕಂಪನಿಯ ಸದಸ್ಯರಾಗಲು, ನೀವು ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಕೆಲಸದಲ್ಲಿ ನಿಮ್ಮ ಅನುಭವ ಹೆಚ್ಚಾದಂತೆ, ನೀವು ಹೆಚ್ಚು ಹಣವನ್ನು ಸಂಪಾದಿಸಲು ಪ್ರಾರಂಭಿಸುತ್ತೀರಿ. ನೀವು ತಿಂಗಳಿಗೆ 10,000 ರಿಂದ 50,000 ರೂಪಾಯಿಗಳವರೆಗೂ ಗಳಿಸಬಹುದು.


ಮೇಲ್ ಪೋಸ್ಟಿಂಗ್ ಕೆಲಸ: ಮೇಲ್ ಪೋಸ್ಟಿಂಗ್ ಉದ್ಯೋಗವು 12ನೇ ತರಗತಿ ಫೇಲ್ ಮತ್ತು ಕಾಲೇಜು ಡ್ರಾಪ್ ಔಟ್ ವಿದ್ಯಾರ್ಥಿಗಳಿಗೆ ಮತ್ತೊಂದು ಸೂಕ್ತ ವೃತ್ತಿ ಆಯ್ಕೆಯಾಗಿದೆ. ವಿಶೇಷವೆಂದರೆ ಮಹಿಳೆಯರು ಮತ್ತು ಗೃಹಿಣಿಯರು ಸಹ ಈ ಕೆಲಸವನ್ನು ಮಾಡಬಹುದು.


ಇದನ್ನೂ ಓದಿ: 2nd PUC Examನಲ್ಲಿ ಫೇಲ್ ಆಗಿದ್ದರೆ ಕೊರಗಬೇಡಿ; ಪೂರಕ ಪರೀಕ್ಷೆಗೆ ಈ ರೀತಿ ತಯಾರಿ ನಡೆಸಿ


ಏಕೆಂದರೆ ಇದು ಮನೆ ಆಧಾರಿತ ಕೆಲಸವಾಗಿದ್ದು, ಅಲ್ಲಿ ನೀವು ಬೇರೊಬ್ಬರ ವ್ಯವಹಾರವನ್ನು ಉತ್ತೇಜಿಸುವ ಪತ್ರಗಳು ಮತ್ತು ಕರಪತ್ರಗಳನ್ನು ಪೋಸ್ಟ್ ಮಾಡಬೇಕಾಗುತ್ತದೆ. ಯಾವುದೇ ವಯಸ್ಸಿನ ಜನರು ಈ ಕೆಲಸವನ್ನು ಮಾಡಬಹುದು. ಈ ಉದ್ಯೋಗದಲ್ಲಿ ನೀವು 7,000 ರಿಂದ 40,000 ರೂಪಾಯಿಗಳವರೆಗೆ ಗಳಿಸಬಹುದು.

top videos


    ಭಾರತೀಯ ಸೇನೆ: ಭಾರತೀಯ ಸೇನೆಯು 12ನೇ ತರಗತಿಯಲ್ಲಿ ಫೇಲ್ ಆದ ಅಥವಾ ಕಾಲೇಜು ಬಿಟ್ಟವರಿಗೆ ಉದ್ಯೋಗ ಸ್ಥಾನಗಳನ್ನು ಜಾಹೀರಾತು ಮೂಲಕ ತಿಳಿಸುತ್ತದೆ. ಭಾರತೀಯ ಸೇನೆಯಲ್ಲಿ ಕೆಲಸ ಪಡೆಯಲು, ವಿದ್ಯಾರ್ಥಿಗಳು ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು.

    First published: