ಅಂಬೇಡ್ಕರ್ ವಿಶ್ವವಿದ್ಯಾಲಯ, ಅಮಿಟಿ ವಿಶ್ವವಿದ್ಯಾಲಯ ಮತ್ತು ಬಾತ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ (Psychology) ಶೈಕ್ಷಣಿಕ ಪದವಿಗಳನ್ನು ಹೊಂದಿರುವ ದಿವಿಜಾ ಭಾಸಿನ್ ಮನಃಶಾಸ್ತ್ರಜ್ಞರೂ (Psychologist) ಹೌದು. ತಮ್ಮ ಸಹೋದ್ಯೋಗಿಗಳೊಂದಿಗೆ ಇನ್ಸ್ಟಾದಲ್ಲಿ ರೀಲ್ಗಳನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಇನ್ಸ್ಟಾ ರೀಲ್ಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿರುವ ಡಿವಿಜಾ
ದಿವಿಜಾ ಇನ್ಸ್ಟಾದಲ್ಲಿ @awkwardgoat3 ಬಳಕೆದಾರ ಹೆಸರಿನಲ್ಲಿ ರೀಲ್ಗಳನ್ನು ನಿರ್ಮಿಸುತ್ತಿದ್ದು ತನ್ನ Instagram ಮಾನಸಿಕ ಆರೋಗ್ಯ ಸೇವೆ, ದಿ ಫ್ರೆಂಡ್ಲಿ ಕೌಚ್ನೊಂದಿಗೆ ವಿಶ್ವಾಸಾರ್ಹ ಮನಃಶಾಸ್ತ್ರಜ್ಞರ ನೆರವು ಅಗತ್ಯವಿರುವವರಿಗೆ ದೊರೆಯುವಲ್ಲಿ ಸಹಕಾರ ನೀಡುತ್ತಾರೆ.
ಮನಃಶಾಸ್ತ್ರಜ್ಞವನ್ನು ಆರಿಸಿಕೊಳ್ಳಲು ಕಾರಣ
ಮನಃಶಾಸ್ತ್ರಜ್ಞವನ್ನು ಡಿವಿಜಾ ಆರಿಸಿಕೊಳ್ಳಲು ಕಾರಣವೇನು ಎಂದು ಕೇಳಿದಾಗ ಇದಕ್ಕೆ ತಮ್ಮ ಅಮ್ಮ ತಮ್ಮಲ್ಲಿ ತುಂಬಿದ ಆಸಕ್ತಿ ಎಂದು ತಿಳಿಸಿದ್ದಾರೆ. ದಿವಿಜಾ ತಾಯಿ ಆಗಾಗ್ಗೆ ಮನಃಶಾಸ್ತ್ರದ ಬಗ್ಗೆ ವಿಚಾರ ವಿಮರ್ಶೆಗಳನ್ನು ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ. ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಪಡೆದಿರುವ ದಿವಿಜಾ ಬೇರೆ ಬೇರೆ ತಂತ್ರಾಂಶಗಳ ಮೂಲಕ ಜನರನ್ನು ಉಪಚರಿಸಲು ಈ ಪದವಿಗಳು ನೆರವಾಗಿದೆ ಎಂದು ದಿವಿಜಾ ತಿಳಿಸಿದ್ದಾರೆ
ಕ್ಲಿನಿಕಲ್ ಸೈಕಾಲಜಿಸ್ಟ್ (ಎಮ್ಫಿಲ್) ಪದವಿಯನ್ನು ಪೂರ್ಣಗೊಳಿಸಬೇಕು ಎಂಬುದು ಅವರ ಇಚ್ಛೆಯಾಗಿತ್ತು ಆದರೆ ಸಾಂಕ್ರಾಮಿಕದ ಕಾರಣ ಪೂರ್ಣಗೊಳಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ. ಇದೀಗ ನನ್ನ ಮಾನಸಿಕ ಆರೋಗ್ಯ ಸಂಸ್ಥೆಯಾದ ಫ್ರೆಂಡ್ಲಿ ಕೌಚ್ ಅನ್ನು ಅಭಿವೃದ್ಧಿಗೊಳಿಸುವುದೇ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಈ ಸಂಸ್ಥೆಯ ಮೂಲಕ ಸಾಕಷ್ಟು ಜನರಿಗೆ ಸಹಾಯ ಮಾಡುವುದೇ ನನ್ನ ಧ್ಯೇಯವಾಗಿದೆ ಎಂದು ದಿವಿಜಾ ತಿಳಿಸುತ್ತಾರೆ.
ಸೈಕಾಲಜಿಸ್ಟ್ ಹಾಗೂ ಸೈಕ್ರಿಯಾಟಿಸ್ಟ್ ನಡುವಿನ ಭಿನ್ನತೆಗಳೇನು
ಸೈಕಾಲಜಿಸ್ಟ್ ಹಾಗೂ ಸೈಕ್ರಿಯಾಟಿಸ್ಟ್ ನಡುವಿನ ಭಿನ್ನತೆಗಳೇನು ಎಂಬುದಕ್ಕೆ ದಿವಿಜಾ ಕೆಲವೊಂದು ಅಭಿಪ್ರಾಯಗಳನ್ನು ನೀಡಿದ್ದು ಸೈಕ್ರಿಯಾಟಿಸ್ಟ್ಗಳು ವೈದ್ಯಕೀಯ ವೈದ್ಯರಾಗಿದ್ದು ಚಿಕಿತ್ಸೆಗಳ ಮೂಲಕ ಉಪಚರಿಸುತ್ತಾರೆ. ಕೆಲವೊಬ್ಬರು ಚಿಕಿತ್ಸೆಯಲ್ಲಿ ಅನೇಕ ಕೋರ್ಸ್ಗಳನ್ನು ಮಾಡುತ್ತಾರೆ ಇದು ಅವರ ಚಿಕಿತ್ಸೆಯ ಭಾಗವಾಗಿರುತ್ತದೆ. ಖಿನ್ನತೆ ಅಥವಾ ಆತಂಕದ ಕಾಯಿಲೆಯ ಅಂಶಗಳುಳ್ಳ ರೋಗಿಗಳನ್ನು ಅವರು ಉಪಚರಿಸುತ್ತಾರೆ ಎಂದು ತಿಳಿಸಿದ್ದಾರೆ.
ಸೈಕಿಯಾಲಜಿಸ್ಟ್ ಬಗ್ಗೆ ತಿಳಿಸುವುದಾದರೆ ಇವರು ವೈದ್ಯಕೀಯ ವೈದ್ಯರಲ್ಲ ಹಾಗೂ ರೋಗಿಗಳನ್ನು ಚಿಕಿತ್ಸೆ ಹಾಗೂ ಕೌನ್ಸಲಿಂಗ್ ಮೂಲಕ ಉಪಚರಿಸುತ್ತಾರೆ. ಸೈಕಿಯಾಲಜಿಸ್ಟ್ಗಳು ತರಬೇತಿ ಪಡೆದ ವೃತ್ತಿನಿಪುಣರಾಗಿದ್ದು ಬೇರೆ ಬೇರೆ ಮಾನಸಿಕ ಸ್ಥಿತಿಗಳೊಂದಿಗೆ ಬದುಕುವ ಬೇರೆ ಬೇರೆ ರೋಗಿಗಳು, ಜನರೊಂದಿಗೆ ಒಡನಾಟ ಹೊಂದಿರುತ್ತಾರೆ ಇದರಿಂದ ಅನುಭವ ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ಉತ್ತಮ ಸೈಕಿಯಾಲಜಿಸ್ಟ್ ಆಗಬೇಕಾದರೆ ಇರಬೇಕಾದ ಉತ್ತಮ ಅಂಶಗಳು
ಉತ್ತಮ ಸೈಕಿಯಾಲಜಿಸ್ಟ್ ಆಗಬೇಕಾದರೆ ಇರಬೇಕಾದ ಉತ್ತಮ ಅಂಶಗಳೆಂದರೆ ದಿವಿಜಾ, ಕರುಣೆ, ಸಹಾನುಭೂತಿ, ತಾಳ್ಮೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ. ಶೈಕ್ಷಣಿಕ ಪದವಿಗಳಿಗಿಂತ ಈ ಅಂಶಗಳು ಭಿನ್ನವಾಗಿದ್ದು ಇದನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಏಕೆ ಮುಖ್ಯ?
ಯುವಜನರಿಗೆ ಮಾನಸಿಕ ಆರೋಗ್ಯ ಇಂದಿನ ದಿನಗಳಲ್ಲಿ ಅತಿಮುಖ್ಯವಾದುದು ಎಂದು ತಿಳಿಸುವ ದಿವಿಜಾ ಮಾನಸಿಕ ಆರೋಗ್ಯ ಅತಿಮುಖ್ಯವಾದುದು ಆದರೆ ಇದರತ್ತ ಯಾರೂ ಗಮನಹರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಯುವಜನರು ಇಂದು ಮಾನಸಿಕವಾಗಿ ಧೈರ್ಯಗುಂದುತ್ತಿದ್ದು ಇದರಿಂದಾಗಿಯೇ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮಾನಸಿಕ ಆರೋಗ್ಯದ ಕುರಿತು ರೀಲ್ಸ್ ರಚಿಸುವ ದಿವಿಜಾ ಹೆಚ್ಚಿನ ಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಲು ಸಾಮಾಜಿಕ ಮಾಧ್ಯಮ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಮಾನಸಿಕ ಸಮಸ್ಯೆಗಳಿಂದ ಹೇಗೆ ಹೊರಬರಬಹುದು ಎಂಬ ಸಲಹೆಗಳನ್ನು ದಿವಿಜಾ ತಮ್ಮ ವಿಡಿಯೋದ ಮೂಲಕ ನೀಡುತ್ತಾರೆ.
ಭಾರತದಲ್ಲಿ ಮನಃಶಾಸ್ತ್ರ ಕ್ಷೇತ್ರಕ್ಕಿರುವ ಮಹತ್ವ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಮುಂದೆ ಭವಿಷ್ಯದಲ್ಲಿ ಈ ಕ್ಷೇತ್ರ ಇನ್ನಷ್ಟು ಸುಧಾರಣೆಗೊಳ್ಳಬಹುದು ಎಂಬುದು ದಿವಿಜಾ ಮಾತಾಗಿದೆ.
ಮನಃಶಾಸ್ತ್ರವನ್ನು ವೃತ್ತಿಯನ್ನಾಗಿ ಸ್ವೀಕರಿಸುವವರಿಗೆ ಸಲಹೆ ಏನು?
ಮನಃಶಾಸ್ತ್ರವನ್ನು ವೃತ್ತಿಯನ್ನಾಗಿ ಸ್ವೀಕರಿಸುವವರಿಗೆ ಸಲಹೆ ನೀಡಿರುವ ದಿವಿಜಾ, ಈ ವೃತ್ತಿಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳುವವರ ಮಾತಿಗೆ ಬೆಲೆ ನೀಡಬೇಡಿ ಎಂದು ತಿಳಿಸಿದ್ದಾರೆ. ಕಲಿಕಾ ವಿಷಯಾಗಿ ಮನಃಶಾಸ್ತ್ರವನ್ನು ಆಯ್ಕೆಮಾಡಿಕೊಳ್ಳುವವರಿಗೆ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ. ಯಶಸ್ವಿ ಸೈಕಾಲಜಿಸ್ಟ್ ಆಗಿ ಈ ಕ್ಷೇತ್ರದಲ್ಲಿ ಮುಂದುವರಿಬಹುದು. ಇದಕ್ಕೆ ನಿಮ್ಮಲ್ಲಿ ಆಸಕ್ತಿ, ಶ್ರದ್ಧೆ ಹಾಗೂ ವೃತ್ತಿಯ ಕುರಿತು ಪ್ರೀತಿ ಇರಬೇಕು ಎಂಬುದು ದಿವಿಜಾ ಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ