ಹೆಣ್ಣುಮಕ್ಕಳ (Daughters) ಶಿಕ್ಷಣಕ್ಕೆ ಈಗ ಪೋಷಕರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಮಗಳು ಓದಬೇಕು (Education), ಜೀವನದಲ್ಲಿ ಮುಂದೆ ಬರಬೇಕು ಎಂದು ಬಯಸುತ್ತಾರೆ. ಆದರೆ ಗಂಡು ಮಕ್ಕಳಂತೆ ಶಿಕ್ಷಣಕ್ಕಾಗಿ ದೂರದ ಊರಿಗೆ ಕಳುಹಿಸಲು ಈಗಲೂ ಪೋಷಕರು ಹಿಂದೇಟು ಹಾಕುತ್ತಾರೆ. ಆ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳಿಗೆ ಹೊಂದುವ 4 ವೃತ್ತಿ ಆಯ್ಕೆಗಳ (Career Options) ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸೆಕೆಂಡ್ ಪಿಯು ನಂತರ ಈ ಕೋರ್ಸ್ ಮಾಡಬಹುದು.
1) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ವೃತ್ತಿ: ನೀವು ಟಿವಿ ಪರದೆಯ ಮೇಲೆ ಹೆಣ್ಣು ಮಕ್ಕಳನ್ನು ನೋಡಿದಾಗಲೆಲ್ಲಾ, ಅವರ ಸ್ಥಾನದಲ್ಲಿ ನಿಮ್ಮನ್ನು ನೋಡುವ ಬಯಕೆ ಇರಬಹುದು. ಇದಕ್ಕಾಗಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕೋರ್ಸ್ ಅನ್ನು ತೆಗೆದುಕೊಳ್ಳುವುದು ಲಾಭದಾಯಕ. ಈ ವೃತ್ತಿಯು ಸವಾಲಿನ ಮತ್ತು ಅಪಾಯದಿಂದ ಕೂಡಿದೆ ಆದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನೀವು ತೃಪ್ತಿಯನ್ನು ಪಡೆಯುತ್ತೀರಿ. ಡಿಜಿಟಲ್ ಮಾಧ್ಯಮದ ಆಗಮನದೊಂದಿಗೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವ್ಯಾಪ್ತಿ ವಿಸ್ತಾರವಾಗಿದೆ.
2) ಜಾಹೀರಾತು ವೃತ್ತಿ: ಇತ್ತೀಚಿನ ದಿನಗಳಲ್ಲಿ, ಜಾಹೀರಾತು ಬಹಳ ಲಾಭದಾಯಕ, ಅಟ್ರಾಕ್ಟೀವ್ ವೃತ್ತಿಯಾಗಿ ಹೊರಹೊಮ್ಮಿದೆ. ಇದು ನಿಮಗೆ ಒಂದು ಕಡೆ ಸೃಜನಶೀಲತೆಯನ್ನು ಮತ್ತು ಮತ್ತೊಂದೆಡೆ ಖ್ಯಾತಿಯನ್ನು ನೀಡುತ್ತದೆ. ಈ ವೃತ್ತಿಯಲ್ಲಿ, ನಿಮ್ಮ ಸುತ್ತಲಿನ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಾಮರ್ಥ್ಯವನ್ನು ನೀವು ಹೊಂದಿರಬೇಕು. ಆಕರ್ಷಕ ಜಾಹೀರಾತುಗಳ ಮೂಲಕ ನಿಮ್ಮ ಗುರಿ ಪ್ರೇಕ್ಷಕರನ್ನು ಆಕರ್ಷಿಸಬೇಕು. ಆಲ್-ರೌಂಡ್ ಸೃಜನಶೀಲತೆ ಮತ್ತು ಬ್ರ್ಯಾಂಡಿಂಗ್ ಕೌಶಲ್ಯಗಳು ಜಾಹೀರಾತು ವೃತ್ತಿಜೀವನಕ್ಕೆ ಅಗತ್ಯವಾದ ಕೌಶಲ್ಯಗಳಾಗಿವೆ.
3) ಫ್ಯಾಷನ್ ಡಿಸೈನಿಂಗ್ ವೃತ್ತಿ: ಆಧುನಿಕ ಮೌಲ್ಯಗಳು ನಮ್ಮ ಜೀವನಶೈಲಿಯ ಮೇಲೆ ಹೆಚ್ಚು ಪ್ರಭಾವ ಬೀರಿವೆ. ಈ ಟ್ರೆಂಡ್ ಅನ್ನು ನೋಡಿದರೆ, ಫ್ಯಾಷನ್ ಡಿಸೈನಿಂಗ್ ಕೆಲವು ಸಮಯದಿಂದ ಹೆಚ್ಚು ಆದ್ಯತೆಯ ವೃತ್ತಿಜೀವನದ ಆಯ್ಕೆಯಾಗಿ ಹೊರಹೊಮ್ಮಿದೆ. ಈ ಕಾರಣದಿಂದ ಫ್ಯಾಷನ್ ಡಿಸೈನರ್ ಗಳಿಗೆ ಬೇಡಿಕೆ ಹೆಚ್ಚಿದೆ.
ಸೆಕೆಂಡ್ ಪಿಯು ಉತ್ತೀರ್ಣರಾದ ಬಳಿಕ ನೀವು ಎರಡು ಕೋರ್ಸ್‌ಗಳನ್ನು ಮಾಡಬಹುದು. ಫ್ಯಾಷನ್ ಟೆಕ್ನಾಲಜಿಯಲ್ಲಿ ಪದವಿ, ಡಿಪ್ಲೊಮಾ ಕೋರ್ಸ್‌ಗಳೂ ಇವೆ. ಪದವಿ ಕೋರ್ಸ್‌ಗಳು ನಾಲ್ಕು ವರ್ಷಗಳ ಅವಧಿಯದ್ದಾಗಿದೆ. ಮೂರು ಮತ್ತು ಎರಡು ವರ್ಷಗಳ ಡಿಪ್ಲೋಮಾಗಳು ಸಹ ಲಭ್ಯವಿದೆ.
4) ಗಗನಸಖಿ ವೃತ್ತಿ: ಹೆಣ್ಣುಮಕ್ಕಳಲ್ಲಿ ಇದು ಅತ್ಯಂತ ಜನಪ್ರಿಯ ವೃತ್ತಿ ಆಯ್ಕೆಯಾಗಿದೆ. ನೀವು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದ್ದರೆ, ಈ ವೃತ್ತಿಯು ನಿಮಗಾಗಿಯೇ ಇದೆ. ಗಗನಸಖಿಯಾಗಿ, ನೀವು ವಿವಿಧ ಸ್ಥಳಗಳು ಮತ್ತು ದೇಶಗಳಿಗೆ ಭೇಟಿ ನೀಡುತ್ತೀರಿ. ಈ ವೃತ್ತಿಯು ಸಮರ್ಪಣೆ ಮತ್ತು ಧೈರ್ಯದ ಜೊತೆಗೆ ಕಠಿಣ ಪರಿಶ್ರಮವನ್ನೂ ಬಯಸುತ್ತದೆ.
ಇದನ್ನೂ ಓದಿ: Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
ದೇಶದ ಹಲವು ಸಂಸ್ಥೆಗಳು ಸೆಕೆಂಡ್ ಪಿಯು ಪಾಸ್ ಆದ ಯುವತಿಯರಿಗೆ ಡಿಪ್ಲೊಮಾ ಮತ್ತು ಅಲ್ಪಾವಧಿಯ ಕೋರ್ಸ್‌ಗಳನ್ನು ಮತ್ತು ತರಬೇತಿಯನ್ನು ನೀಡುತ್ತವೆ. ನೇಮಕಾತಿಯ ವಯಸ್ಸು 19 ರಿಂದ 25 ವರ್ಷಗಳು. ಬುದ್ಧಿವಂತ ಮತ್ತು ಆತ್ಮವಿಶ್ವಾಸದ ಹುಡುಗಿಯರು ಈ ಕೋರ್ಸ್ ಮಾಡಿದ ನಂತರ ಆಕಾಶದಲ್ಲಿ ಹಾರಲು ಸಿದ್ಧರಾಗುತ್ತಾರೆ. ಈ ವೃತ್ತಿಗೆ ಸಂವಹನ ಕೌಶಲ್ಯ, ತಾಳ್ಮೆ ಮತ್ತು ಉತ್ತಮ ಹಾಸ್ಯ ಪ್ರಜ್ಞೆ ಅತ್ಯಗತ್ಯ. ಹಿಂದಿ-ಇಂಗ್ಲೀಷ್ ಗೊತ್ತಿರಬೇಕು. ನೀವು ಯಾವುದೇ ವಿದೇಶಿ ಭಾಷೆಯ ಜ್ಞಾನವನ್ನು ಹೊಂದಿದ್ದರೆ, ನಿಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ