ಎಂಜಿನಿಯರಿಂಗ್ (Engineering) ವಿಭಾಗ ಸರ್ವಕಾಲಕ್ಕೂ ಪ್ರಸ್ತುತವಿರುವ ಒಂದು ಕ್ಷೇತ್ರ. ಎಲ್ಲಿ ಬೇಕಾದರೂ ಹೇರಳ ಉದ್ಯೋಗವಕಾಶ (Job Opportunities) ಸಿಗುತ್ತದೆ ಎಂಬ ಪರಿಕಲ್ಪನೆಯಲ್ಲಿ ಎಂಜಿನಿಯರಿಂಗ್ ಸೇರುವವರ ಮತ್ತು ಇಲ್ಲಿ ವೃತ್ತಿ ಜೀವನ (Career) ಆರಂಭಿಸುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೂ ಸಹ ಕೆಮಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರ್ ಹೀಗೆ ಹಲವು ಕೋರ್ಸ್‌ಗಳು ಲಭ್ಯವಿದೆ.
ಕೆಮಿಕಲ್ ಎಂಜಿನಿಯರಿಂಗ್
ನಾವಿಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಬಗ್ಗೆ ತಿಳಿಯುವುದಾದರೆ, ಕೆಮಿಕಲ್ ಎಂಜಿನಿಯರಿಂಗ್ ಎನ್ನುವುದು ಎಂಜಿನಿಯರಿಂಗ್‌ನ ಒಂದು ಶಾಖೆಯಾಗಿದ್ದು ಅದು ಭೌತಿಕ ಮತ್ತು ರಾಸಾಯನಿಕ ವಿಜ್ಞಾನಗಳ ಪ್ರಕ್ರಿಯೆಗಳು, ಉಪಕರಣಗಳು ಮತ್ತು ದೈನಂದಿನ ಬಳಕೆಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ವಿನ್ಯಾಸಗೊಳಿಸಲು ಅನ್ವಯಿಸಬಹುದಾದ ಜ್ಞಾನವನ್ನು ಒದಗಿಸುತ್ತದೆ.
ಎಂಜಿನಿಯರಿಂಗ್‌ನ ಈ ಕ್ಷೇತ್ರವು ಆಹಾರ ಪಾನೀಯಗಳಿಂದ ಹಿಡಿದು ಔಷಧಗಳು ಮತ್ತು ಪ್ಲಾಸ್ಟಿಕ್‌ಗಳವರೆಗೆ ಉತ್ಪನ್ನಗಳ ತಯಾರಿಕೆಯಲ್ಲಿ ನಿರ್ಣಾಯಕವಾಗಿದೆ. ಹೀಗಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಈ ಉದ್ಯೋಗಕ್ಕೆ ಬೇಡಿಕೆ ಹೆಚ್ಚಿದ್ದು, ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿನ ವೃತ್ತಿಜೀವನವು ಸಹ ಹೆಚ್ಚಿನ ಸಂಬಳದ ಜೊತೆ ಲಾಭದಾಯಕವಾಗಿದೆ. ಜೊತೆಗೆ ಹಲವು ಸವಾಲುಗಳಿಂದ ಕೂಡಿರುವ ಉದ್ಯೋಗವು ವೃತ್ತಿಪರ ಬೆಳವಣಿಗೆ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ. ರಾಸಾಯನಿಕ ಪ್ರಕ್ರಿಯೆಗಳನ್ನು ಬಳಸಿಕೊಂಡು ಉತ್ಪನ್ನಗಳ ರಚನೆ ಮತ್ತು ತಯಾರಿಕೆಯು ರಾಸಾಯನಿಕ ಎಂಜಿನಿಯರಿಂಗ್‌ನ ಕಾರ್ಯವಾಗಿದೆ.
ರಾಸಾಯನಿಕಗಳನ್ನು ಸಂಸ್ಕರಿಸುವ ಸಾಧನಗಳು, ಚೌಕಟ್ಟುಗಳು ಮತ್ತು ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸುವುದು, ಕಚ್ಚಾ ವಸ್ತುಗಳನ್ನು ಸಂಯೋಜಿಸುವುದು ಮತ್ತು ಸಂಸ್ಕರಿಸುವುದು ಇದರ ವ್ಯಾಪ್ತಿಯಲ್ಲಿ ಬರುತ್ತದೆ.
ವೃತ್ತಿ ಆಯ್ಕೆಗಳೇನು?
ಪೆಟ್ರೋಲಿಯಂ ಎಂಜಿನಿಯರ್, ನ್ಯೂಕ್ಲಿಯರ್ ಎಂಜಿನಿಯರ್, ಪರಿಸರ ಎಂಜಿನಿಯರ್, ಎನರ್ಜಿ ಎಂಜಿನಿಯರ್, ಮೈನಿಂಗ್ ಎಂಜಿನಿಯರ್, ಕೆಮಿಕಲ್ ಟೆಕ್ನೀಷಿಯನ್, ಮ್ಯಾನುಫ್ಯಾಕ್ಚರಿಂಗ್ ಪ್ರೊಡಕ್ಷನ್ ಟೆಕ್ನೀಷಿಯನ್, ಕೆಮಿಕಲ್ ಪ್ಲಾಂಟ್ ಆಪರೇಟರ್, ಫುಡ್ ಇಂಜಿನಿಯರ್, ಫಾರ್ಮಾಸ್ಯುಟಿಕಲ್ ತಯಾರಕ, ಸೇಫ್ಟಿ ಎಂಜಿನಿಯರ್, ಕನ್ಸಲ್ಟಿಂಗ್ ಎಂಜಿನಿಯರ್ ಸೇರಿ ಹಲವು ವೃತ್ತಿ ಆಯ್ಕೆಗಳು ಲಭ್ಯವಿದೆ.
ಈ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ರಾಸಾಯನಿಕ ಎಂಜಿನಿಯರ್‌ಗಳು ಕೆಲಸ ಮಾಡಬಹುದು. ಈ ಕೋರ್ಸ್‌ನಲ್ಲಿ ಪದವಿ ಪಡೆದವರು ಹೊಸ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳ ಸಂಶೋಧನೆ ಮತ್ತು ಅಭಿವೃದ್ಧಿ, ವಿನ್ಯಾಸ ಮತ್ತು ಉತ್ಪಾದನೆಯಲ್ಲೂ ಕೆಲಸ ಮಾಡಬಹುದು.
ಸಮೂಹ ವರ್ಗಾವಣೆ, ಶಾಖ ವರ್ಗಾವಣೆ, ಪೆಟ್ರೋಲಿಯಂ ರಿಫೈನರಿ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ ಮತ್ತು ಎನರ್ಜಿ ಎಂಜಿನಿಯರಿಂಗ್ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಒಳಗೊಂಡಿರುವ ವಿಷಯಗಳಲ್ಲಿ ಪ್ರಮುಖ ವಿಭಾಗಗಳಾಗಿವೆ.
ಕೆಮಿಕಲ್ ಎಂಜಿನಿಯರ್ ಆಗಿ ವೃತ್ತಿ ಜೀವನ
ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ವೃತ್ತಿಜೀವನದಲ್ಲಿ ಯಶಸ್ವಿಯಾಗಲು, ವೃತ್ತಿಪರರು ಭೌತಿಕ ಮತ್ತು ರಾಸಾಯನಿಕ ವಿಜ್ಞಾನಗಳಲ್ಲಿ ಉತ್ತಮ ಜ್ಞಾನ ಹೊಂದಿರಬೇಕು. ಜೊತೆಗೆ ಕೆಲವು ಮೂಲಭೂತ ಕೌಶಲ್ಯಗಳನ್ನು ಸಹ ಹೊಂದಿರಬೇಕು. ವಿಶ್ಲೇಷಣಾತ್ಮಕ, ವಿವರ-ಆಧಾರಿತ ಮತ್ತು ಅತ್ಯುತ್ತಮ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಇವರು ಹೊಂದಿರಬೇಕು.
ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಯಶಸ್ವಿ ವೃತ್ತಿಜೀವನದ ನಿರ್ಣಾಯಕ ಅಂಶವೆಂದರ ಕಲಿಕೆ ಮತ್ತು ವೃತ್ತಿಪರ ಅಭಿವೃದ್ಧಿ. ಎಂಜಿನಿಯರ್ ಕ್ಷೇತ್ರಗಳು ದಿನನಿತ್ಯ ನವೀಕರಣಗೊಳ್ಳುವ ಕ್ಷೇತ್ರಗಳು. ಹೀಗಾಗಿ ಇಲ್ಲಿ ಪ್ರತಿ ದಿನ ಕಲಿಯುವ ಮತ್ತು ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳುವ ಅಗತ್ಯತೆ ಇರುತ್ತದೆ. ಇಲ್ಲಿಯೂ ನೀವು ಒಳ್ಳೆಯ ಕೆರಿಯರ್ ಕಟ್ಟಿಕೊಳ್ಳಬೇಕು ಅಂದ್ರೆ ನಿಮ್ಮ ಉದ್ಯೋಗಕ್ಕೆ ತಕ್ಕಂತೆ ಹೆಚ್ಚೆಚ್ಚು ವಿಷಯ ಕಲಿಯಬೇಕಾಗಿರುತ್ತದೆ.
ಇದನ್ನೂ ಓದಿ: Career Options: ಡಿಗ್ರಿ ಓದದಿದ್ದರೂ ಈ ಉದ್ಯೋಗಗಳ ಮೂಲಕ ಲಕ್ಷ ಲಕ್ಷ ಸಂಪಾದಿಸಬಹುದು
ಉದ್ಯಮ ಸಮ್ಮೇಳನಗಳಿಗೆ ಹಾಜರಾಗುವುದು, ಕೋರ್ಸ್‌ಗಳನ್ನು ತೆಗೆದುಕೊಳ್ಳುವುದು ಅಥವಾ ಮುಂದುವರಿದ ಪದವಿಗಳನ್ನು ತೆಗೆದುಕೊಂಡು ಓದುವುದರ ಮೂಲಕ ನೀವು ಹೆಚ್ಚು ಕಲಿಕೆಗೆ ತೆರೆದುಕೊಳ್ಳಬಹುದು.
ಬೇಡಿಕೆ ಪಡೆದುಕೊಳ್ಳುತ್ತಿರುವ ಕ್ಷೇತ್ರ
ಉದ್ಯೋಗಕ್ಕೆ ಸಂಬಂಧಿಸಿದಂತೆ, ಮುಂಬರುವ ವರ್ಷಗಳಲ್ಲಿ ರಾಸಾಯನಿಕ ಎಂಜಿನಿಯರ್‌ಗಳ ಬೇಡಿಕೆಯು ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. US ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ರಾಸಾಯನಿಕ ಇಂಜಿನಿಯರ್‌ಗಳ ಉದ್ಯೋಗವು 2019 ರಿಂದ 2029 ರವರೆಗೆ 4% ರಷ್ಟು ಬೆಳವಣಿಗೆ ಕಾಣಲಿದ್ದು, ಮುಂದೆಯೂ ಸಹ ಕ್ಷೇತ್ರ ಬೆಳವಣಿಗೆ ಕಾಣುತ್ತದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ