ಸಂಸ್ಕೃತವನ್ನು (Sanskrit) ಭಾರತದ ಅನೇಕ ಭಾಷೆಗಳ (Indian Language) ತಾಯಿ ಎನ್ನಲಾಗುತ್ತದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಸಂಸ್ಕೃತವನ್ನು ದೇವಭಾಷಾ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಹೆಚ್ಚಿನ ಪಠ್ಯಗಳನ್ನು ಸಂಸ್ಕೃತ ಭಾಷೆಯಲ್ಲಿ ಮಾತ್ರ ಬರೆಯಲಾಗಿದೆ. ಈ ಭಾಷೆ ಯುವಜನತೆಯನ್ನು ಮತ್ತೊಮ್ಮೆ ತನ್ನತ್ತ ಸೆಳೆಯುತ್ತಿದೆ. ಈಗ ಈ ಭಾಷೆಯಲ್ಲಿ ಸಂಶೋಧನೆಯಿಂದ ಹಿಡಿದು ಕಲಿಸುವ ಕೆಲಸಗಳವರೆಗೆ ಅನೇಕ ಉದ್ಯೋಗಾವಕಾಶಗಳಿವೆ (Job Opportunities). ಕಾರಣದಿಂದಾಗಿ ವಿದ್ಯಾರ್ಥಿಗಳು ಈಗ ವೃತ್ತಿಯನ್ನು (Career) ಮಾಡಲು ಭಾಷೆಯಾಗಿ ಆಯ್ಕೆ ಮಾಡಲು ಆದ್ಯತೆ ನೀಡುತ್ತಿದ್ದಾರೆ.
ಸಂಸ್ಕೃತ ಭಾಷೆಯ ವಿಶೇಷವೆಂದರೆ ಈ ಭಾಷೆ ಕಲಿತ ನಂತರ ಉದ್ಯೋಗಕ್ಕಾಗಿ ಅಲೆದಾಡಬೇಕಾಗಿಲ್ಲ. ಸಂಸ್ಕೃತದ ಜ್ಞಾನ, ಸಂಶೋಧನೆ ಮತ್ತು ಬೋಧನೆಯಿಂದ ಪೂಜೆ, ಜಾತಕ ಹೊಂದಾಣಿಕೆ ಸೇರಿದಂತೆ ಸ್ವಯಂ ಉದ್ಯೋಗಕ್ಕೆ ವ್ಯಾಪಕ ಅವಕಾಶಗಳನ್ನು ಒದಗಿಸುತ್ತದೆ.
ಸಂಸ್ಕೃತ ಕೋರ್ಸ್ ಮತ್ತು ಬೇಕಾದ ಅರ್ಹತೆ
ನೀವು ಸಂಸ್ಕೃತದಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಅದನ್ನು ವೃತ್ತಿಯಾಗಿ ಆಯ್ಕೆ ಮಾಡಬಹುದು. ಈಗ ಹೆಚ್ಚಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಮತ್ತು ಆಧುನಿಕ ಸಂಸ್ಕೃತಿಯ ಶಿಕ್ಷಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಸಂಸ್ಕೃತದಲ್ಲಿ ಪದವಿ ಮಾಡಲು, ಸಂಸ್ಕೃತ ವಿಷಯದಲ್ಲಿ ಸೆಕೆಂಡ್ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಬಹಳ ಮುಖ್ಯ. 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ನೀವು ಸಂಸ್ಕೃತ ವಿಷಯದಲ್ಲಿ ವಿಶೇಷತೆಯೊಂದಿಗೆ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಇತರ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು.
ಪದವಿಯ ನಂತರ ನೀವು ಸಂಸ್ಕೃತದಲ್ಲಿ 2 ವರ್ಷಗಳ ಮಾಸ್ಟರ್ ಆಫ್ ಆರ್ಟ್ಸ್ ಅನ್ನು ಸಹ ಮಾಡಬಹುದು. ನೀವು ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿ ಪಡೆಯಲು ಬಯಸಿದರೆ, ನೀವು ಪಿಎಚ್‌ಡಿ ಕೂಡ ಮಾಡಬಹುದು. ಸಂಸ್ಕೃತದ ಜ್ಞಾನವಿರುವವರು ಯುಜಿಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಂಸ್ಕೃತದಲ್ಲಿ ಸಂಶೋಧನೆ ಮಾಡಬಹುದು. ಇದಲ್ಲದೆ, ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಲ್ಪಾವಧಿಯ ಕೋರ್ಸ್‌ಗಳು ಸಹ ಲಭ್ಯವಿದೆ.
ವೃತ್ತಿ ವ್ಯಾಪ್ತಿ
ಸಂಸ್ಕೃತ ಭಾಷೆ ಸಾಮಾನ್ಯ ಭಾಷೆಯಲ್ಲ. ಈ ಭಾಷೆ ದೇಶದೊಳಗೆ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಸಿದ್ಧವಾಗಿದೆ. ಭಾರತದೊಳಗೆ ಸುಮಾರು 15 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಂಸ್ಕೃತವು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: Counsellor Career: ಆಪ್ತ ಸಮಾಲೋಚಕರಾಗುವುದು ಹೇಗೆ? ಸೈಕಾಲಜಿ ವಿದ್ಯಾರ್ಥಿಗಳಿಗೆ ಇದು ಅದ್ಭುತ ವೃತ್ತಿ ಆಯ್ಕೆ
ಇನ್ನು ವಿದೇಶಗಳ 250 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಲಾಗುತ್ತಿದೆ. ಈ ಭಾಷೆಯಲ್ಲಿ ಅಧ್ಯಯನ ಮಾಡಿದ ನಂತರ ನೀವು ಅನುವಾದಕರಾಗಿ, ಬರಹಗಾರರಾಗಿ, ಸಂಸ್ಕೃತ ಭಾಷೆಯ ಶಿಕ್ಷಕರಾಗಿ ವೃತ್ತಿಜೀವನವನ್ನು ಮಾಡಬಹುದು. ಇದರೊಂದಿಗೆ, ನೀವು ದೊಡ್ಡ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅರ್ಚಕರಾಗಬಹುದು.
ಸಾಂಪ್ರದಾಯಿಕ ಶಿಕ್ಷಣ
ನೀವು ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲು ಬಯಸಿದರೆ, ದೆಹಲಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ಸಂಸ್ಥೆ, ಬನಾರಸ್‌ನಲ್ಲಿರುವ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ದೆಹಲಿಯಲ್ಲಿರುವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಬಿಹಾರದಲ್ಲಿರುವ ಕಾಮೇಶ್ವರ್ ಸಿಂಗ್ ದರ್ಭಾಂಗ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳಿ.
ಮತ್ತೊಂದೆಡೆ, ಆಧುನಿಕ ಶಿಕ್ಷಣಕ್ಕಾಗಿ, ದೆಹಲಿ ವಿಶ್ವವಿದ್ಯಾಲಯ, ಸೇಂಟ್ ಸ್ಟೀಫನ್ಸ್ ಕಾಲೇಜು, ಜೆಎನ್‌ಯು ಮತ್ತು ಪಾಟ್ನಾದಲ್ಲಿರುವ ಪಾಟ್ನಾ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಬನಾರಸ್ ಮತ್ತು ಅಲಹಾಬಾದ್ ವಿಶ್ವವಿದ್ಯಾಲಯಗಳು ಅತ್ಯುತ್ತಮ ಆಯ್ಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ