• ಹೋಂ
 • »
 • ನ್ಯೂಸ್
 • »
 • Jobs
 • »
 • Hospitality Industry: ಆತಿಥ್ಯ ನೀಡುವುದೇ ಒಂದು ದೊಡ್ಡ ಉದ್ಯಮ; ಇದರಲ್ಲಿ 5 ಅದ್ಭುತ ವೃತ್ತಿ ಅವಕಾಶಗಳಿವೆ

Hospitality Industry: ಆತಿಥ್ಯ ನೀಡುವುದೇ ಒಂದು ದೊಡ್ಡ ಉದ್ಯಮ; ಇದರಲ್ಲಿ 5 ಅದ್ಭುತ ವೃತ್ತಿ ಅವಕಾಶಗಳಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Career Options: ಆತಿಥ್ಯ ಉದ್ಯಮವು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬಾರ್ ಗಳು ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವ್ಯವಹಾರಗಳ ಶ್ರೇಣಿಯನ್ನು ಒಳಗೊಂಡಿದೆ. ಆತಿಥ್ಯ ಉದ್ಯಮದಲ್ಲಿ ವೃತ್ತಿಜೀವನವು ಲಾಭದಾಯಕ ಉದ್ಯಮವಾಗಿದೆ. ಆತಿಥ್ಯ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
 • Share this:

  ಆತಿಥ್ಯ ಉದ್ಯಮ (Hospitality Industry) ಅಂತ ಹೇಳಿದರೆ ನಮ್ಮಲ್ಲಿ ಅನೇಕರಿಗೆ ಬೇಗನೆ ನಾವು ಯಾವ ಕೆಲಸದ  (Job) ಬಗ್ಗೆ ಮಾತಾಡುತ್ತಿದ್ದೇವೆ ಅಂತ ಅರ್ಥವಾಗಲಿಕ್ಕಿಲ್ಲ. ಅದೇ ಇದನ್ನ ಇಂಗ್ಲೀಷ್ ನಲ್ಲಿ ಹಾಸ್ಪಿಟಾಲಿಟಿ ಇಂಡಸ್ಟ್ರಿ ಅಂತ ಹೇಳಿದರೆ ಬೇಗನೆ ಅರ್ಥವಾಗುತ್ತದೆ. ಆತಿಥ್ಯ ಉದ್ಯಮ ಈಗ ಜಾಗತಿಕವಾಗಿ ತುಂಬಾನೇ ವೇಗವಾಗಿ ಬೆಳೆಯುತ್ತಿರುವ ಉದ್ಯಮದಲ್ಲಿ ಒಂದು ಅಂತ ಹೇಳಬಹುದು.


  ಆತಿಥ್ಯ ಉದ್ಯಮವು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬಾರ್ ಗಳು ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವ್ಯವಹಾರಗಳ ಶ್ರೇಣಿಯನ್ನು ಒಳಗೊಂಡಿದೆ. ಆತಿಥ್ಯ ಉದ್ಯಮದಲ್ಲಿ ವೃತ್ತಿಜೀವನವು ಲಾಭದಾಯಕ ಮತ್ತು ಸವಾಲಿನದ್ದಾಗಿರಬಹುದು, ಆದರೆ ಈ ಉದ್ಯಮದಲ್ಲಿ ಬೆಳವಣಿಗೆ ಮತ್ತು ಪ್ರಗತಿಯ ಅವಕಾಶಗಳು ಸಹ ತುಂಬಾನೇ ಇವೆ ಅಂತ ಹೇಳಬಹುದು.


  ಆತಿಥ್ಯ ಉದ್ಯಮದಲ್ಲಿರುವವರು ವೃತ್ತಿ ಆಯ್ಕೆಗಳು ಯಾವುವು?


  ಆತಿಥ್ಯ ಉದ್ಯಮದಲ್ಲಿರುವ ಕೆಲವು ಸಾಮಾನ್ಯ ವೃತ್ತಿ ಆಯ್ಕೆಗಳೆಂದರೆ ಹೋಟೆಲ್ ಮ್ಯಾನೇಜ್ಮೆಂಟ್, ಫುಡ್ ಆಂಡ್ ಬೆವರೇಜ್ ಸರ್ವಿಸ್, ಈವೆಂಟ್ ಪ್ಲ್ಯಾನಿಂಗ್ ಮತ್ತು ಪ್ರವಾಸೋದ್ಯಮ ಸೇರಿವೆ. ಈ ವೃತ್ತಿಜೀವನಕ್ಕೆ ಚೆನ್ನಾಗಿ ಮಾತನಾಡಲು ಬರಬೇಕು ಮತ್ತು ಗ್ರಾಹಕ ಸೇವೆ, ಸಮಸ್ಯೆ-ಪರಿಹಾರ ಮತ್ತು ನಾಯಕತ್ವದಂತಹ ಕೌಶಲ್ಯಗಳು ಬೇಕಾಗುತ್ತವೆ.


  ಫ್ಯಾಟ್ ಟೈಗರ್ ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಸಾಹಿಲ್ ಆರ್ಯ, ಆತಿಥ್ಯ ಉದ್ಯಮಕ್ಕೆ ಪ್ರವೇಶಿಸಲು ಬಯಸುವವರಿಗೆ ಐದು ಆಸಕ್ತಿದಾಯಕ ವೃತ್ತಿ ಆಯ್ಕೆಗಳ ಬಗ್ಗೆ ಹೇಳಿದ್ದಾರೆ ನೋಡಿ.


  ಸಾಂದರ್ಭಿಕ ಚಿತ್ರ


  1) ಹೆಲ್ತ್ ಆಂಡ್ ಸೇಫ್ಟಿ ಮ್ಯಾನೇಜರ್


  ಆತಿಥ್ಯ ಉದ್ಯಮದಲ್ಲಿನ ಹೆಲ್ತ್ ಆಂಡ್ ಸೇಫ್ಟಿ ಮ್ಯಾನೇಜರ್ ವೃತ್ತಿಯಲ್ಲಿ ಇರುವವರು ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಾರೆ ಅಂತ ಹೇಳಬಹುದು. ತಮ್ಮಲ್ಲಿ ಬಂದ ಅತಿಥಿಗಳು ಮತ್ತು ಉದ್ಯೋಗಿಗಳ ಸುರಕ್ಷತೆಗಾಗಿ ಉತ್ತಮ ಅಭ್ಯಾಸಗಳನ್ನು ಜಾರಿಗೆ ತರುತ್ತಿದ್ದಾರೆ ಅಂತ ಖಚಿತಪಡಿಸಿಕೊಳ್ಳಲು ಜವಾಬ್ದಾರರಾಗಿರುತ್ತಾರೆ.


  ಶೀಘ್ರದಲ್ಲಿಯೇ ಆತಿಥ್ಯ ಉದ್ಯಮದಲ್ಲಿ ಈ ಒಂದು ಮ್ಯಾನೇಜರ್ ಕೆಲಸಕ್ಕೆ ಬೇಡಿಕೆ ತುಂಬಾನೇ ಹೆಚ್ಚಾಗುವ ನಿರೀಕ್ಷೆಯಿದೆ, ಏಕೆಂದರೆ ಯಾವುದೇ ರೀತಿಯ ವ್ಯವಹಾರವು ಮೊದಲಿಗೆ ತಮ್ಮ ಅತಿಥಿಗಳು ಮತ್ತು ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಈ ಕೆಲಸದಲ್ಲಿ ಒಳ್ಳೆಯ ಸಂಬಳವಿದ್ದು, ಉದ್ಯೋಗ ಭದ್ರತೆ ಸಹ ಇರುತ್ತದೆ.


  2) ಡೇಟಾ ಎನಾಲಿಸ್ಟ್


  ಆತಿಥ್ಯ ಉದ್ಯಮದಲ್ಲಿನ ಡೇಟಾ ವಿಶ್ಲೇಷಕನು ಪ್ರವೃತ್ತಿಗಳನ್ನು ಗುರುತಿಸಲು ಡೇಟಾವನ್ನು ವಿಶ್ಲೇಷಿಸಲು, ವ್ಯವಹಾರ ಕಾರ್ಯಾಚರಣೆಗಳನ್ನು ಸುಧಾರಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಗೆ ಮಾಹಿತಿ ನೀಡಲು ಜವಾಬ್ದಾರನಾಗಿರುತ್ತಾನೆ.


  ಶೀಘ್ರದಲ್ಲಿಯೇ ಆತಿಥ್ಯ ಉದ್ಯಮದಲ್ಲಿ ಡೇಟಾ ವಿಶ್ಲೇಷಕರ ಬೇಡಿಕೆ ಸಹ ಹೆಚ್ಚಾಗುವ ನಿರೀಕ್ಷೆಯಿದೆ, ಏಕೆಂದರೆ ವ್ಯವಹಾರಗಳು ತಮ್ಮ ಕಾರ್ಯಾಚರಣೆಗಳನ್ನು ಉತ್ತಮಗೊಳಿಸಲು ಮತ್ತು ಗ್ರಾಹಕರ ಅನುಭವವನ್ನು ಸುಧಾರಿಸಲು ಡೇಟಾವನ್ನು ಹತೋಟಿಗೆ ತರಲು ಪ್ರಯತ್ನಿಸುತ್ತವೆ. ಈ ವೃತ್ತಿಯಲ್ಲಿ ಒಳ್ಳೆಯ ಸಂಬಳವಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ಅವಕಾಶ ಸಹ ಇರುತ್ತದೆ.


  3) ಫುಡ್ ಡೆಲಿವರಿ ಮ್ಯಾನೇಜರ್


  ಆತಿಥ್ಯ ಉದ್ಯಮದಲ್ಲಿ ಆಹಾರ ವಿತರಣಾ ವಿಭಾಗದಲ್ಲಿ ಮ್ಯಾನೇಜರ್ ಆದರೆ ಬರುವ ಆರ್ಡರ್ ಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಸಮಯೋಚಿತ ಮತ್ತು ನಿಖರವಾದ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಆಹಾರ ವಿತರಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತಾರೆ.
  ಶೀಘ್ರದಲ್ಲಿಯೇ ಗ್ರಾಹಕರ ಬೇಡಿಕೆಯನ್ನು ಪೂರೈಸಲು ವ್ಯವಹಾರಗಳು ತಮ್ಮ ವಿತರಣಾ ಸೇವೆಗಳನ್ನು ವಿಸ್ತರಿಸುವುದರಿಂದ ಆತಿಥ್ಯ ಉದ್ಯಮದಲ್ಲಿ ಆಹಾರ ವಿತರಣಾ ವ್ಯವಸ್ಥಾಪಕರ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ವೃತ್ತಿಯಲ್ಲಿ ಒಳ್ಳೆಯ ಸಂಬಳ, ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ಅವಕಾಶ ಮತ್ತು ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ನಿರ್ವಹಣೆಯಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.


  4) ಟೂರಿಸಂ ಸ್ಪೆಷಲಿಸ್ಟ್


  ಆಹಾರ ಮತ್ತು ವೈನ್ ಪ್ರವಾಸಗಳು, ಅಡುಗೆ ತರಗತಿಗಳು ಮತ್ತು ಫಾರ್ಮ್-ಟು-ಟೇಬಲ್ ಅನುಭವಗಳು ಸೇರಿದಂತೆ ಪ್ರಯಾಣಿಕರಿಗೆ ಪಾಕಶಾಲೆಯ ಅನುಭವಗಳನ್ನು ನೀಡಲು ಪಾಕಶಾಲೆಯ ಪ್ರವಾಸೋದ್ಯಮ ತಜ್ಞರು ಜವಾಬ್ದಾರರಾಗಿರುತ್ತಾರೆ. ಈ ವೃತ್ತಿಯಲ್ಲಿ ಸ್ಥಳೀಯ ಪಾಕಪದ್ಧತಿ ಮತ್ತು ಆಹಾರದ ಬಗ್ಗೆ ಜ್ಞಾನ ಜೊತೆಗೆ ಅತ್ಯುತ್ತಮ ಸಂವಹನ ಕೌಶಲ್ಯಗಳು ಬೇಕಾಗುತ್ತವೆ.


  ಇದನ್ನೂ ಓದಿ: UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ


  5) ಹೋಟೆಲ್ ಮ್ಯಾನೇಜರ್


  ಹೊಟೇಲ್ ಗೆ ಬಂದಂತಹ ಸಿಬ್ಬಂದಿಯನ್ನು ಮತ್ತು ಗ್ರಾಹಕರನ್ನು ನಿರ್ವಹಿಸುವುದು, ಗ್ರಾಹಕರ ದೂರುಗಳನ್ನು ನಿರ್ವಹಿಸುವುದು, ಬಜೆಟ್ ಗಳನ್ನು ಹೊಂದಿಸುವುದು ಮತ್ತು ನಿರ್ವಹಿಸುವುದು ಮತ್ತು ಹೋಟೆಲ್ ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹೋಟೆಲ್ ನ ದೈನಂದಿನ ಕಾರ್ಯಾಚರಣೆಗಳನ್ನು ಹೋಟೆಲ್ ವ್ಯವಸ್ಥಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಈ ವೃತ್ತಿಯು ಚಿಕ್ಕದಾದ ಹೋಟೆಲ್ ಗಳಿಂದ ದೊಡ್ಡ ಸ್ಟಾರ್ ಹೊಟೇಲ್ ಗಳವರೆಗೆ ವಿವಿಧ ಸೆಟ್ಟಿಂಗ್ ಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು