• ಹೋಂ
  • »
  • ನ್ಯೂಸ್
  • »
  • Jobs
  • »
  • Cyber Security ಫೀಲ್ಡ್​​ನಲ್ಲಿ ವೃತ್ತಿ ರೂಪಿಸಿಕೊಳ್ಳುವ ಮುನ್ನ ಈ 5 ವಿಷಯಗಳನ್ನು ತಿಳಿದಿರಲೇಬೇಕು

Cyber Security ಫೀಲ್ಡ್​​ನಲ್ಲಿ ವೃತ್ತಿ ರೂಪಿಸಿಕೊಳ್ಳುವ ಮುನ್ನ ಈ 5 ವಿಷಯಗಳನ್ನು ತಿಳಿದಿರಲೇಬೇಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸೈಬರ್ ಸೆಕ್ಯೂರಿಟಿಗೆ ಫುಲ್‌ ಡಿಮ್ಯಾಂಡ್‌ ಬಂದಿದೆ. ಹೆಚ್ಚುತ್ತಿರುವ ಫೋನ್‌ ಬಳಕೆ, ಅತಿವೇಗದ ಇಂಟರ್‌ನೆಟ್‌, ಆನ್‌ಲೈನ್‌ ಪಾವತಿ ಸೇರಿದಂತೆ ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿರುವುದರಿಂದ ಅಗತ್ಯವಾಗಿ ಸೈಬರ್ ಸೆಕ್ಯೂರಿಟಿ ಬೇಕಾಗಿದೆ. ಸೈಬರ್​ ಸೆಕ್ಯೂರಿಟಿ ಕ್ಷೇತ್ರದಲ್ಲಿ ಹೇಗೆ ವೃತ್ತಿ ರೂಪಿಸಿಕೊಳ್ಳಬಹುದು ಎಂದು ತಿಳಿಯೋಣ.

ಮುಂದೆ ಓದಿ ...
  • Share this:

    ಐಟಿ ಉದ್ಯಮ (IT Sector) ವೇಗವಾಗಿ ಬೆಳೆಯುತ್ತಿರುವುದರ ಜೊತೆ ಜೊತೆಯಲ್ಲಿಯೇ ಸೈಬರ್ ಕ್ರೈಮ್‌ಗಳು (Cyber Crime) ಹೆಚ್ಚುತ್ತಿವೆ. ಹೀಗಾಗಿ ಇವುಗಳ ನಿಯಂತ್ರಣ ಮಾಡುವ ಸಲುವಾಗಿ ಸೈಬರ್‌ ಸೆಕ್ಯೂರಿಟಿಗೆ (Cyber Security) ಹೆಚ್ಚಿನ ಪ್ರಾಮುಖ್ಯತೆ ಬರುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿನ ಎಲ್ಲಾ ಬೆಳವಣಿಗೆಗಳಿಗೆ ಸಾಕ್ಷಿ ಎನ್ನುವಂತೆ ಸೈಬರ್ ಸೆಕ್ಯೂರಿಟಿಗೆ ಫುಲ್‌ ಡಿಮ್ಯಾಂಡ್‌ ಬಂದಿದೆ. ಹೆಚ್ಚುತ್ತಿರುವ ಫೋನ್‌ ಬಳಕೆ, ಅತಿವೇಗದ ಇಂಟರ್‌ನೆಟ್‌, ಆನ್‌ಲೈನ್‌ ಪಾವತಿ ಸೇರಿದಂತೆ ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿರುವುದರಿಂದ ಅಗತ್ಯವಾಗಿ ಸೈಬರ್ ಸೆಕ್ಯೂರಿಟಿ ಬೇಕೆಬೇಕಾಗಿದೆ.


    ಸೈಬರ್‌ ಸುರಕ್ಷತೆ ಬಗ್ಗೆ ಪ್ರಸ್ತುತ ಪ್ರತಿಯೊಬ್ಬರೂ ಕಾಳಜಿ ವಹಿಸುತ್ತಿದ್ದು, ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತ ಸೇರಿ ಹಲವು ದೇಶಗಳು ಸೈಬರ್ ಸುರಕ್ಷತೆಗೆ ಸಂಬಂಧಿತ ಸಂಸ್ಥೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿ ಕಂಪನಿ ಅಥವಾ ಬೇರೆ ಸ್ಥಳಗಳಲ್ಲಿ ಮಹತ್ವ ಪಡೆದುಕೊಳ್ಳುತ್ತಿರುವ ಈ ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ಉದ್ಯೋಗವಕಾಶಗಳಿವೆ ಎನ್ನಬಹುದು. CyberSeek ಪ್ರಕಾರ, ಇದೀಗ, ಅಮೆರಿಕಾದಲ್ಲಿ ಸುಮಾರು 755,800 ಸೈಬರ್‌ ಸೆಕ್ಯೂರಿಟಿ ಉದ್ಯೋಗಾವಕಾಶಗಳಿವೆ ಎಂದು ಹೇಳಿದೆ.


    ಹೀಗೆ ಇಷ್ಟೆಲ್ಲಾ ಉದ್ಯೋಗವಕಾಶ, ಉದ್ಯೋಗ ಭದ್ರತೆ, ಉತ್ತಮ ಸಂಬಳ, ಕೆರಿಯರ್‌ ಇರುವ ಸೈಬರ್‌ ಸೆಕ್ಯೂರಿಟಿ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸುವುದು? ಯಾವೆಲ್ಲಾ ಹಂತಗಳು ನಮಗೆ ಈ ವಿಭಾಗದಲ್ಲಿ ಕೆಲಸ ಪ್ರಾರಂಭಿಸಲು ಸಹಕಾರಿಯಾಗುತ್ತವೆ ಎಂಬುದನ್ನು ನೋಡೋಣ.


    ಮೊದಲಿಗೆ ಸೈಬರ್‌ ಸೆಕ್ಯೂರಿಟಿ ಯಲ್ಲಿ ಕೆಲಸ ಮಾಡಲು ನೆಟ್‌ವರ್ಕಿಂಗ್, ಆಪರೇಟಿಂಗ್ ಸಿಸ್ಟಂಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳಂತಹ ಐಟಿ ಸಿಸ್ಟಮ್‌ಗಳ ಹಿನ್ನೆಲೆ ಜ್ಞಾನ ಬೇಕೆಬೇಕು. ಅನೇಕ ಸೈಬರ್‌ ಸೆಕ್ಯುರಿಟಿ ಹುದ್ದೆಗೆ ಕಂಪ್ಯೂಟರ್ ಸೈನ್ಸ್ ಅಥವಾ ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಂತಹ ಐಟಿ-ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಗತ್ಯವಿರುತ್ತದೆ. ಆದಾಗ್ಯೂ ಈಗ ಕೆಲ ಸರ್ಟಿಫೈಯ್ಡ್‌ ಆನ್‌ಲೈನ್‌ ಕೋರ್ಸ್‌ಗಳ ಮೂಲಕವೂ ನಾವಿಲ್ಲಿ ವೃತ್ತಿಜೀವನ ಆರಂಭಿಸಬಹುದು.




    ಸೈಬರ್ ಭದ್ರತೆಯಲ್ಲಿ ಹೊಸ ವೃತ್ತಿಜೀವನವನ್ನು ಆರಂಭಿಸಲು ಐದು ಪ್ರಾಯೋಗಿಕ ಹಂತಗಳು ಇಲ್ಲಿವೆ.


    * ನೀವು ಸೈಬರ್‌ ಸುರಕ್ಷತೆ ವಿಭಾಗದಲ್ಲಿ ಕೆಲಸ ಮಾಡಲು ಏಕೆ ಬಯಸುತ್ತೀರಿ ಎಂಬುವುದರ ಬಗ್ಗೆ ಅವಲೋಕಿಸಿ


    ಬೇರೆ ಕೆಲಸ ಮಾಡುತ್ತಿದ್ದು ಅದನ್ನು ಬಿಟ್ಟು ಸೈಬರ್ ಸೆಕ್ಯೂರಿಟಿಯಲ್ಲಿ ಕೆಲಸ ಮಾಡಲು ಬಯಸಿದ್ದರೆ ಅಥವಾ ಮೊದಲಿಗೆ ಇಲ್ಲಿಂದಲೇ ವೃತ್ತಿ ಜೀವನ ಆರಂಭಿಸಲು ಬಯಸುವವರು ಈ ವಿಭಾಗಗಕ್ಕೆ ಬರುವುದರ ಬಗ್ಗೆ ಅವರ ಆಸಕ್ತಿ, ಕೌಶಲ್ಯ, ಅರ್ಹತೆಗಳನ್ನು ಮೊದಲಿಗೆ ಪರಿಗಣಿಸಬೇಕು. ನಂತರ ಇಲ್ಲಿ ಕೆಲಸ ಮಾಡಲು ಬಯಸುತ್ತಿರುವುದು ಏಕೆ ಎಂಬುದರ ಬಗ್ಗೆ ಅವಲೋಕಿಸಬೇಕು. ಏಕೆಂದರೆ ಉದ್ಯೋಗಿಗಳು ಅವರು ಮಾಡುವ ಕೆಲಸದ ಬಗ್ಗೆ ಪ್ರೀತಿ ಹೊಂದಿರಬೇಕು. ಯಾವುದೇ ಒತ್ತಾಯ, ಉತ್ತಮ ಸಂಬಳದ ಆಸೆಗೆ ಕಟ್ಟುಬಿದ್ದು ಕೆಲಸ ಮಾಡಬಾರದು. ಹೀಗಾಗಿ ಇಲ್ಲಿಗೆ ಪ್ರವೇಶಿಸುವ ಮೊದಲು ಈ ಅಂಶದ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು.


    * ಆಸಕ್ತಿ ಇರುವ ಸೈಬರ್‌ ಸೆಕ್ಯೂರಿಟಿ ವೃತ್ತಿ ಮಾರ್ಗಗಳ ಬಗ್ಗೆ ರಿಸರ್ಚ್‌ ಮಾಡಿ
    ಸೈಬರ್‌ ಸೆಕ್ಯೂರಿಟಿಯಲ್ಲಿನ ಉದ್ಯೋಗವಕಾಶಗಳು ಬೇರೆ ಬೇರೆ ವಿಭಾಗದಲ್ಲಿ ಹೇರಳವಾಗಿವೆ. ನೀವು ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಲು ಬಯಸಿದರೆ ನಿಮಗೆ ಡಿಸೈನರ್/ಆರ್ಕಿಟೆಕ್ಟ್, ಡಿಫೆಂಡರ್, ಹ್ಯಾಕರ್, ರೆಸ್ಪಾಂಡರ್, ಆಡಿಟರ್ ಮತ್ತು ಮ್ಯಾನೇಜರ್ ಹುದ್ದೆಗಳಿವೆ. ಹಾಗೆಯೇ ಮಾರ್ಕೆಟಿಂಗ್ ಅಥವಾ ಹೆಚ್‌ಆರ್‌ ವಿಭಾಗದಲ್ಲೂ ಅವಕಾಶಗಳಿರುತ್ತವೆ. ಹೀಗಾಗಿ ಈ ವಿಭಾಗದಲ್ಲಿ ನಿಮಗೆ ಯಾವುದರಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂಬುದನ್ನು ಮನನ ಮಾಡಿಕೊಂಡು ಆ ಹುದ್ದೆಯ ಬಗ್ಗೆ ತಿಳಿದುಕೊಂಡು ನಂತರ ಮುಂದುವರೆಯಿರಿ.


    ಇದನ್ನೂ ಓದಿ: Web Developer: 2nd PU ಬಳಿಕ ವೆಬ್ ಡೆವಲಪ್​ಮೆಂಟ್​ ಕೋರ್ಸ್ ಮಾಡಿದ್ರೆ, ಸಂಬಳ ಲಕ್ಷಗಳಲ್ಲಿ ಇರುತ್ತೆ


    * ಕೌಶಲ್ಯಗಳ ಬಗ್ಗೆ ಜ್ಞಾನವಿರಲಿ
    ಹ್ಯಾಕರ್‌ ಗಳು ಹೆಚ್ಚಾಗಿ ಬಳಸುವ ಪೈಥೋನಿಸ್ ಕೋಡಿಂಗ್‌ ಸೇರಿ ಕೆಲವು ಕೋಡಿಂಗ್ ಬಗ್ಗೆ ಅರಿವು ಹೊಂದಿರುವುದು ಇಲ್ಲಿ ಅವಶ್ಯ. ಇದರ ಜೊತೆಗೆ SQL, (ಡೇಟಾಬೇಸ್‌ಗಳೊಂದಿಗೆ ಕೆಲಸ ಮಾಡಲು), ವೆಬ್ ಆಧಾರಿತ ಬೆದರಿಕೆಗಳಿಗಾಗಿ HTML ಮತ್ತು ಜಾವಾಸ್ಕ್ರಿಪ್ಟ್, ಸ್ವಯಂಚಾಲಿತ ಪರೀಕ್ಷೆಗಳನ್ನು ನಡೆಸಲು ಶೆಲ್ ಸ್ಕ್ರಿಪ್ಟಿಂಗ್ ನಂತಹ ಕೌಶಲ್ಯದ ಅರಿವು ಸಹ ಇರಬೇಕು. ಹಾಗೆಯೇ ಸಂವಹನ ಕೌಶಲ್ಯ, ಸಮಸ್ಯೆಗಳನ್ನು ಬಗೆಹರಿಸುವ ಚಾಣಾಕ್ಷತನವೂ ಇರಬೇಕು.




    * ನೆಟ್‌ವರ್ಕ್


    ಸೈಬರ್ ಸೆಕ್ಯೂರಿಟಿಯಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವವರು ಇಲ್ಲಿ ಕೆಲಸ ಮಾಡುತ್ತಿರುವವರ ಅಥವಾ ಇದಕ್ಕೆ ಸಂಬಂಧಪಟ್ಟ ವ್ಯಕ್ತಿ ಅಥವಾ ಕಂಪನಿಗಳ ಜೊತೆ ನೆಟ್‌ವರ್ಕ್‌ ಬೆಳೆಸಿಕೊಳ್ಳಬೇಕು. ಈಗಾಗಲೇ ಸೈಬರ್‌ ಸೆಕ್ಯೂರಿಟಿ ಉದ್ಯೋಗದಲ್ಲಿರುವವರ ಜೊತೆ ಮಾತುಕತೆ ನಡೆಸಿ, ವಿಷಯದ ಬಗ್ಗೆ ತಿಳಿದುಕೊಳ್ಳಿ. ಉದ್ಯಮ ಮತ್ತು ಸ್ಥಳೀಯ ಸೈಬರ್‌ ಸೆಕ್ಯುರಿಟಿ ಗುಂಪುಗಳಿಗೆ ಸೇರುವುದು ನೆಟ್‌ವರ್ಕ್‌ ಬೆಳೆಸಿಕೊಳ್ಳುವ ಉತ್ತಮ ಮಾರ್ಗವಾಗಿದೆ.




    * ಸೈಬರ್‌ ಸುರಕ್ಷತೆಯ ಅನುಭವವನ್ನು ಪಡೆಯಲು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಿ
    ಪ್ರಸ್ತುತ ಸೈಬರ್ ಭದ್ರತೆ ಸಮಸ್ಯೆಗಳ ಕುರಿತು ಮಾತನಾಡುವ ಬ್ಲಾಗ್‌ಗಳು, ಪಾಡ್‌ಕಾಸ್ಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಚಾನಲ್‌ಗಳು ಸಾಕಷ್ಟಿವೆ. ಉದಾಹರಣೆಗೆ, (ISC)2 ವ್ಯಕ್ತಿಗಳು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಲು ಸೈಬರ್‌ ಸುರಕ್ಷತೆ ಪ್ರಮಾಣೀಕರಣದಲ್ಲಿ ಉಚಿತ ಪ್ರಮಾಣೀಕರಣವನ್ನು ನೀಡುತ್ತದೆ. ಇದು ನಿಮ್ಮ ಸೈಬರ್‌ ಸೆಕ್ಯುರಿಟಿ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ.

    Published by:Kavya V
    First published: