ಇಂದು ಬೇಕರಿ ಮತ್ತು ಪಾಕ ( Bakery & Culinary) ಸಂಬಂಧಿತ ಕ್ಷೇತ್ರಗಳು ಹೆಚ್ಚು ಲೀಡಿಂಗ್ನಲ್ಲಿವೆ. ಲಕ್ಷಾಂತರ ಜನರಿಗೆ ಉದ್ಯೋಗವಕಾಶವನ್ನು (Job Opportunities) ತೆರೆದಿಡುತ್ತಿದೆ. ಸಾಂಪ್ರಾದಾಯಿಕ ಕೋರ್ಸ್ಗಳ ಜೊತೆಗೆ ಈ ಡಿಪ್ಲೋಮಾ ಕೋರ್ಸ್ಗಳನ್ನು (Diploma Courses) ಮಾಡುವುದರಿಂದ ಬೇಕರಿ ಮತ್ತು ಕುಕಿಂಗ್ ಕ್ಷೇತ್ರದಲ್ಲಿ ಹೊಸತನ್ನು ಸಾಧಿಸಬಹುದು. ಜೊತೆಗೆ ಇವು ನಿರಂತರವಾಗಿ ಸಾಗುವ ಉದ್ಯಮವಾಗಿದ್ದು, ಸೃಜನಶೀಲತೆಗೆ ಹೆಚ್ಚು ಅವಕಾಶವಿರುತ್ತದೆ. ಹಾಗಾದ್ರೆ ಈ ನಿಟ್ಟಿನಲ್ಲಿ ಬೇಕರಿ ಡಿಪ್ಲೋಮಾದಲ್ಲಿ ಎಷ್ಟೆಲ್ಲಾ ವೃತ್ತಿಗಳನ್ನು ಆಯ್ದುಕೊಳ್ಳಬಹುದು ಎಂಬುವುದನ್ನು ಇಲ್ಲಿ ತಿಳಿಯಿರಿ.
ಪೇಸ್ಟ್ರೀ ಶೆಫ್
ಇವತ್ತು ಪೇಸ್ಟ್ರೀಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಬೇಕಿಂಗ್ ಮತ್ತು ಪೇಸ್ಟ್ರೀ ತಯಾರಿಸುವಲ್ಲಿ ಅತ್ಯುತ್ತಮ ತಂತ್ರದ ಅರಿವಿರಬೇಕು. ಕೇಕ್ ವಿನ್ಯಾಸ ಮಾಡುವುದು ಜೊತೆಗೆ ಅದನ್ನು ಪ್ರಸ್ತುತ ಪಡಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಅತಿ ಬೇಗನೆ ಕೇಕ್ ಮಾಡಬೇಕಲ್ಲದೇ ಹಲವಾರು ಕೆಲಸವನ್ನು ಮಾಡುವಷ್ಟು ಪರಿಣತಿ ಹೊಂದಿರಬೇಕು.
ವಿವಿಧ ಕೌಶಲ್ಯತೆ ಬಳಸಿಕೊಂಡು ಬಿಸ್ಕೆಟ್, ಪೇಸ್ಟ್ರೀ, ಬ್ರೆಡ್ ಮತ್ತು ಸ್ವೀಟ್ಸ್ ಮಾಡುವಂತವರಾಗಿರಬೇಕು. ಪೇಸ್ಟ್ರೀ ಐಸಿಂಗ್, ಫ್ರಾಸ್ಟಿಂಗ್ , ಅಲಂಕಾರ ಜೊತೆಗೆ ಸಿಹಿ ತಿನಿಸುಗಳನ್ನು ಆಕರ್ಷಕವಾಗಿ ಅಲಂಕರಿಸುವ ಕಲೆಯಲ್ಲಿ ಪ್ರಾವೀಣ್ಯತೆ ಇರಬೇಕು. ದಾಸ್ತಾನು ನಿರ್ವಹಣೆಯ ಹೆಚ್ಚುವರಿ ಹೊಣೆಗಾರಿಕೆಯೂ ಇರುತ್ತದೆ. ಬ್ಯುರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಹೇಳುವಂತೆ ಮೇ 2022 ರಲ್ಲಿ ಶೆಫ್ ಇಲ್ಲವೇ ಮುಖ್ಯ ಶೆಫ್ ಅವರ ವಾರ್ಷಿಕ ವೇತನ 18,08,769 ರೂ ಆಗಿದೆ.
ಕೇಟರಿಂಗ್ / ಅಡುಗೆ ಮಾಡುವವರು
ನುರಿತ ಸಂಘ ಮತ್ತು ಗ್ರಾಹಕ ಸೇವಾ ಕೌಶಲ್ಯ ಹೊಂದಿರುವ ಅಡುಗೆಯವರಿಗೆ ಬಹಳ ಡಿಮ್ಯಾಂಡ್. ರುಚಿಯಾದ ಅಡುಗೆ, ಪಾಕಪ್ರಾವೀಣ್ಯತೆಗೆ ಎಲ್ಲೆಡೆ ತೆರೆದ ಅವಕಾಶವಿದೆ. ಒತ್ತಡದ ನಡುವೆ ಅಗತ್ಯ ಬಿದ್ದಂತೆ ಕೆಲಸ ಮಾಡಲು ಸಿದ್ಧವಿರಬೇಕು.
ಭಾರತೀಯ, ಸಾಂಪ್ರದಾಯಿಕ, ಪಾರ್ಟಿ ಅಡುಗೆಗಳಿಗೆ ಭಾರೀ ಡಿಮ್ಯಾಂಡ್ ಇದೆ. ಹದವಾಗಿ ಬೇಯಿಸಿ ಶುಚಿಯಾಗಿ ಬಡಿಸಿ, ರುಚಿಯಾಗಿ ನೀಡಿದರೇ ಅವರಿಗೆ ಎಲ್ಲಿಲ್ಲದ ಬೇಡಿಕೆ. ಈವೆಂಟ್ ಬಳಿಕ ಸಂಪೂರ್ಣ ಸ್ವಚ್ಛತೆಯ ಕಾರ್ಯ ಮುಗಿಸಬೇಕು. ಮೆನು ಆಯೋಜನೆಯಿಂದ ಬಡಿಸುವ ತನಕ ಶೆಫ್ ಕೆಲಸ ಮುಖ್ಯವಾಗುತ್ತದೆ. ಇವರ ಸಂಬಳ ವರ್ಷಕ್ಕೆ 21,07,789 ರೂ ಆಗಿರುತ್ತದೆ.
ಆಹಾರ ವಿನ್ಯಾಸಕರು
ಇವತ್ತು ಆಹಾರವನ್ನು ಮಾಡುವುದಷ್ಟೇ ಅಲ್ಲ ಅದನ್ನು ವಿನ್ಯಾಸ ಮಾಡುವುದು ಕೂಡ ಬ್ಯುಸಿನೆಸ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತದೆ. ತರಕಾರಿಯನ್ನು ಕತ್ತರಿಸುವುದರಿಂದ ಹಿಡಿದು ಟೇಬಲ್ ಮೇಲೆ ಜೋಡಿಸುವ ತನಕ, ಬಡಿಸುವುದರಿಂದ ಹಿಡಿದು ಫಿಂಗರ್ ಬೌಲ್ ನೀಡುವ ತನಕ ಪ್ರತಿಯೊಂದು ಕೂಡ ಅಲಂಕಾರಕ್ಕೆ ಒತ್ತು ನೀಡುತ್ತದೆ.
ಸಾಸ್ ಬಳಕೆ, ವಿವಿಧ ಉಪಕರಣಗಳನ್ನು ಬಳಸುವ ರೀತಿಗೆ ತರಬೇತಿ ಪಡೆದಿರುತ್ತಾರೆ. ಇನ್ನೂ ಇವರು ಫೋಟೋಶೂಟ್ಗಳಲ್ಲಿ ಲೈಟಿಂಗ್ಗೆ ಹೊಂದುವಂತೆ ಆಹಾರವನ್ನು, ಬಣ್ಣದ ಸಾಮಗ್ರಿ ಬಳಸಿ ಅಡುಗೆ ಮಾಡುವಷ್ಟು ಪರಿಣತಿ ಇರಬೇಕು. ಇವರ ಸರಾಸರಿ ವಾರ್ಷಿಕ ಸಂಬಳ 2022 ರಲ್ಲಿ 16,00, 899 ರೂ ಆಗಿತ್ತು.
ಆಹಾರದ ಬರಹಗಾರರು/ ಫುಡ್ ರೈಟಿಂಗ್ ಜರ್ನಲಿಸ್ಟ್
ಇವತ್ತು ಆಹಾರ ಮತ್ತು ಬರಹ ಒಂದಕ್ಕೊಂದು ಸಂಬಂಧ ಹೊಂದಿದೆ. ದಿನಪತ್ರಿಕೆ, ನಿಯತಕಾಲಿಕ ಬ್ಲಾಗ್, ಅಡುಗೆ ಪುಸ್ತಕ ಮತ್ತು ಸಾಮಾಜಿಕ ಜಾಲತಾಣದ ಬರಹಗಳಲ್ಲಿ ಆಹಾರದ ರೆಸಿಪಿ ಮತ್ತು ಅದರ ವಿಶೇಷತೆಗಳ ಬರವಣಿಗೆಗೆ ಭಾರೀ ಬೇಡಿಕೆ ಇದೆ. ರೆಸ್ಟೋರೆಂಟ್ ವಿಮರ್ಶೆ, ಆಹಾರದ ರುಚಿ, ಗುಣಮಟ್ಟಕ್ಕೆ ರೇಟಿಂಗ್ಸ್ ನೀಡುವುದು ಇದಕ್ಕೆಲ್ಲಾ ಮನ್ನಣೆ ಇದೆ.
ಮಾಧ್ಯಮದೊಟ್ಟಿಗೆ ಉತ್ತಮ ನೆಟ್ವರ್ಕ್ ಇದ್ದರೆ ಒಳ್ಳೆಯ ಅಡುಗೆಗಳನ್ನು ಬರಹ ರೂಪಕ್ಕಿಳಿಸಬಹುದು. ಆಹಾರದ ಬರವಣಿಗೆ ಮಾಡುವವರು ಆಹಾರದ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಬೇಕು. ಅದರಲ್ಲೂ ದೊಡ್ಡ ದೊಡ್ಡ ಟಿವಿ ಶೋಗಳಲ್ಲೂ ಭಾಗವಹಿಸಿ ಅದರ ಬಗ್ಗೆ ತಿಳಿಸಿಕೊಡಬಹುದು. 2022 ರಲ್ಲಿ ಈ ಬರಹಗಾರರ ವಾರ್ಷಿಕ ವೇತನವು 10,09,689 ರೂ ಆಗಿದೆ.
ಫುಡ್ ಫೋಟೋ ಜರ್ನಲಿಸ್ಟ್/ ಫೋಟೋಗ್ರಾಫರ್ಸ್
ದೊಡ್ಡ ದೊಡ್ಡ ಮ್ಯಾಗಜೀನ್ಗಳಲ್ಲಿ ಆಹಾರಕ್ಕಿಂತಲೂ ಅದನ್ನು ಸೆರೆಹಿಡಿದಿರುವ ರೀತಿಗೆ ಮನಸ್ಸು ಸೋಲುತ್ತದೆ. ಈ ನಿಟ್ಟಿನಲ್ಲಿ ಫೋಟೋ ಜರ್ನಲಿಸ್ಟ್ ಶೆಫ್ನೊಟ್ಟಿಗೆ ಚರ್ಚಿಸಿ ಅದಕ್ಕೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ಫ್ರೇಮ್ ಇಡಬಹುದು. ಈ ನಿಟ್ಟಿನಲ್ಲಿ ಲೈಟ್ಸ್, ಅತ್ಯುತ್ತಮ ಕ್ಯಾಮರಾ. ಲೆನ್ಸ್, ಸೆಟ್ ಡಿಸೈನ್ , ಪ್ರಾಪರ್ಟಿ ಇದೆಲ್ಲದರ ಬಗ್ಗೆ ಅರಿವು ಮುಖ್ಯವಾಗುತ್ತದೆ. ಇವರ ವಾರ್ಷಿಕ ಸಂಬಳ 4,00,800 ರೂ ಆಗಿದೆ.
ಆಹಾರೋದ್ಯಮಿ
ಇವತ್ತು ಅತಿ ದೊಡ್ಡ ಉದ್ಯಮಗಳಲ್ಲಿ ಆಹಾರದ ಉದ್ಯಮವೇ ಮುಂದಿದೆ. ಅಡುಗೆ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಬ್ರ್ಯಾಂಡ್ ತಯಾರಿಕೆ. ಮೆನುಗಳ ತಯಾರಿಕೆ, ನ್ಯೂಟ್ರಿಷಿಯನ್ಯುಕ್ತ ಆಹಾರದ ತಯಾರಿಕೆಗೆ ಅತ್ಯುತ್ತಮ ಅವಕಾಶ. ಇನ್ನೂ ದೊಡ್ಡ ರೆಸ್ಟೊರೆಂಟ್, ಟ್ರಕ್, ಮೊಬೈಲ್ ಕ್ಯಾಂಟೀನ್ ಇವೆಲ್ಲ ಆಹಾರದ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡುತ್ತಿವೆ. ಇವರ ವಾರ್ಷಿಕ ಸರಾಸರಿ ಆದಾಯ 21,09,291 ರೂ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ