• ಹೋಂ
  • »
  • ನ್ಯೂಸ್
  • »
  • Jobs
  • »
  • Career Opportunities: ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಎಷ್ಟೆಲ್ಲಾ ವೃತ್ತಿ ಅವಕಾಶಗಳಿವೆ ನೋಡಿ

Career Opportunities: ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಎಷ್ಟೆಲ್ಲಾ ವೃತ್ತಿ ಅವಕಾಶಗಳಿವೆ ನೋಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ಅಂತಹ ವಿಷಯಗಳನ್ನು ಓದಿದರೆ, ವೃತಿ ಅವಕಾಶಗಳು ಸ್ವಲ್ಪ ಜಾಸ್ತಿಯೇ ಇರುತ್ತವೆ.

  • Share this:

ಸಾಮಾನ್ಯವಾಗಿ ಈಗ ಐಟಿ ಕಂಪನಿಗಳಲ್ಲಿ (IT Companies) ನಡೆಯುತ್ತಿರುವ ಲೇ-ಆಫ್ ಗಳನ್ನು (Layoffs) ನೋಡಿದರೆ, ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ (2nd PUC) ಮಾಡಿದ ನಂತರ ಇಂಜಿನಿಯರಿಂಗ್ (Engineering) ಅನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ವಿಷಯವನ್ನು ಅರಿಸಿಕೊಂಡರೆ ಭವಿಷ್ಯದಲ್ಲಿ ಉದ್ಯೋಗವಕಾಶಗಳು ಜಾಸ್ತಿ ಇರುತ್ತವೆ ಅಂತ ಎರಡು ಬಾರಿ ಯೋಚಿಸುವಂತಾಗಿದೆ.


ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ಅಂತಹ ವಿಷಯಗಳನ್ನು ಓದಿದರೆ, ವೃತಿ ಅವಕಾಶಗಳು ಸ್ವಲ್ಪ ಜಾಸ್ತಿಯೇ ಇರುತ್ತವೆ. ಕಂಪ್ಯೂಟರ್ ಸೈನ್ಸ್ ವಿಷಯವು ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಅಭಿವೃದ್ಧಿ ಮತ್ತು ನಿರ್ವಹಣೆಯೊಂದಿಗೆ ವ್ಯವಹರಿಸುವ ಎಂಜಿನಿಯರಿಂಗ್ ನ ಒಂದು ಶಾಖೆಯಾಗಿದೆ.


ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಏಕೆಂದರೆ ಇದು ಉತ್ತಮ ಸಂಬಳವನ್ನು ಮತ್ತು ಪ್ರೋತ್ಸಾಹಕಗಳನ್ನು ನೀಡುತ್ತದೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಗಳು ಪ್ರೋಗ್ರಾಮಿಂಗ್, ಅಲ್ಗಾರಿದಮ್ ಗಳು, ಸಾಫ್ಟ್‌ವೇರ್ ಅಭಿವೃದ್ಧಿ, ಕಂಪ್ಯೂಟರ್ ನೆಟ್‌ವರ್ಕ್ ಗಳು, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಇತರರ ಬಗ್ಗೆ ಕಲಿಯುತ್ತಾರೆ.


ಪ್ರಾತಿನಿಧಿಕ ಚಿತ್ರ


ಸಿಎಸ್ಇಯಲ್ಲಿ ಪದವಿಯೊಂದಿಗೆ, ವಿದ್ಯಾರ್ಥಿಗಳು ಆಯ್ಕೆ ಮಾಡಲು ವಿವಿಧ ಉದ್ಯಮಗಳಲ್ಲಿ ಡಜನ್ ಗಟ್ಟಲೆ ವೃತ್ತಿ ಆಯ್ಕೆಗಳನ್ನು ಹೊಂದಿದ್ದಾರೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುವುದರ ಬಗ್ಗೆ ಅತ್ಯಂತ ಒಳ್ಳೆಯ ವಿಷಯವೆಂದರೆ ಮಾರುಕಟ್ಟೆಯಲ್ಲಿ ದಕ್ಷ ಎಂಜಿನಿಯರ್ ಗಳ ಬೇಡಿಕೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.


ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಲಭ್ಯವಿರುವ ವೃತ್ತಿ ಅವಕಾಶಗಳು ಹೀಗಿವೆ..


ಸಾಫ್ಟ್‌ವೇರ್ ಡೆವಲಪರ್


ಸಾಫ್ಟ್‌ವೇರ್ ಡೆವಲಪರ್ ಗಳು ವೆಬ್‌ಸೈಟ್ ಗಳು ಮತ್ತು ಮೊಬೈಲ್ ಗಾಗಿ ಸಾಫ್ಟ್‌ವೇರ್ ಅಪ್ಲಿಕೇಶನ್ ಗಳ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವರು ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಬೆನ್ನೆಲುಬಾಗಿರುತ್ತಾರೆ. ಸಾಫ್ಟ್‌ವೇರ್ ಎಂಜಿನಿಯರ್ ಗಳಾಗಿ ಪ್ರವೇಶ ಮಟ್ಟದ ಉದ್ಯೋಗವನ್ನು ಹುಡುಕುವ ವಿದ್ಯಾರ್ಥಿಗಳು ಸಿ, ಸಿ ++, ಪೈಥಾನ್, ಎಸ್‌ಕ್ಯೂಎಲ್, ಜಾವಾ ಮತ್ತು ಇತರ ವಿವಿಧ ಪ್ರೋಗ್ರಾಮಿಂಗ್ ಭಾಷೆಗಳ ಜ್ಞಾನವನ್ನು ಹೊಂದಿರಬೇಕು.


ಡೇಟಾ ಸೈಂಟಿಸ್ಟ್


ಸಿಎಸ್ಇ ಪದವೀಧರರಿಗೆ ದೊಡ್ಡ ವೃತ್ತಿಜೀವನದ ಭವಿಷ್ಯವನ್ನು ನೀಡುವ ಮತ್ತೊಂದು ಕ್ಷೇತ್ರವೆಂದರೆ ಅದು ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಅನಲೈಜರ್. ವಿಭಿನ್ನ ತಂತ್ರಗಳನ್ನು ಬಳಸಿಕೊಂಡು ದೊಡ್ಡ ಡೇಟಾಸೆಟ್ ಗಳನ್ನು ತಯಾರಿಸಲು ಮತ್ತು ನಿರ್ವಹಿಸಲು ಇವರು ಜವಾಬ್ದಾರರಾಗಿರುತ್ತಾರೆ. ಈ ಡೇಟಾಬೇಸ್ ಅನ್ನು ಬಳಸಿಕೊಂಡು, ಡೇಟಾ ವಿಶ್ಲೇಷಕರು ಈ ಕಾರ್ಯದ ಬಗ್ಗೆ ಅರ್ಥ ಮಾಡಿಕೊಳ್ಳುತ್ತಾರೆ.


ಪ್ರಾತಿನಿಧಿಕ ಚಿತ್ರ


ಕ್ಲೌಡ್ ಕಂಪ್ಯೂಟಿಂಗ್ ವೃತ್ತಿಪರ


ಇವರು ಮೈಕ್ರೋಸಾಫ್ಟ್ ಅಜೂರ್, ಅಮೆಜಾನ್ ವೆಬ್ ಸೇವೆಗಳು (ಎಡಬ್ಲ್ಯುಎಸ್), ಗೂಗಲ್ ಕ್ಲೌಡ್ ಪ್ಲಾಟ್ಫಾರ್ಮ್ ಮತ್ತು ಇನ್ನೂ ಅನೇಕ ಕ್ಲೌಡ್ ಆಧಾರಿತ ತಂತ್ರಜ್ಞಾನಗಳಲ್ಲಿ ಪರಿಣತರಾಗಿಬೇಕು. ಇವರು ಸಂಸ್ಥೆಯ ಮತ್ತು ಕಂಪನಿಯ ಕ್ಲೌಡ್ ಮೂಲಸೌಕರ್ಯವನ್ನು ವಿನ್ಯಾಸಗೊಳಿಸಲು, ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಜವಾಬ್ದಾರರಾಗಿರುತ್ತಾರೆ.


ಸೈಬರ್ ಸೆಕ್ಯೂರಿಟಿ ಎಕ್ಸ್‌ಪರ್ಟ್


ಯಾವುದೇ ಸಂಸ್ಥೆಗೆ ಅಥವಾ ಕಂಪನಿಗೆ, ಡೇಟಾ ತುಂಬಾನೇ ಮುಖ್ಯವಾಗುತ್ತದೆ. ಸೈಬರ್ ಸೆಕ್ಯೂರಿಟಿ ಅಪಾಯ ಹೆಚ್ಚುತ್ತಿರುವ ಈ ಸಮಯದಲ್ಲಿ, ಸಂಸ್ಥೆಯ ಐಟಿ ಮೂಲಸೌಕರ್ಯವನ್ನು ಭದ್ರಪಡಿಸುವಲ್ಲಿ ಸೈಬರ್ ಭದ್ರತಾ ತಜ್ಞರ ಅಗತ್ಯವು ನಿರ್ಣಾಯಕವಾಗುತ್ತದೆ.


ಈ ವೃತ್ತಿಪರರ ಜವಾಬ್ದಾರಿಗಳಲ್ಲಿ ವ್ಯವಸ್ಥೆಗಳು, ನೆಟ್ವರ್ಕ್ ಗಳು ಮತ್ತು ಡೇಟಾವನ್ನು ಕಳ್ಳತನ ಮತ್ತು ಹಾನಿಯಿಂದ ರಕ್ಷಿಸಲು ಭದ್ರತಾ ಕ್ರಮಗಳನ್ನು ವಿನ್ಯಾಸಗೊಳಿಸುವುದು ಮತ್ತು ಅವುಗಳನ್ನು ಸರಿಯಾಗಿ ಕಾರ್ಯಗತ ಗೊಳಿಸುವುದು ಸೇರಿದೆ.




ಯುಎಕ್ಸ್/ಯುಐ (UX/UI) ಡಿಸೈನರ್


ವೆಬ್‌ಸೈಟ್ ಗಳು, ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ಸಾಫ್ಟ್ವೇರ್ ಅಪ್ಲಿಕೇಶನ್ ಗಳ ಬಳಕೆದಾರ ಅನುಭವ (ಯುಎಕ್ಸ್) ಮತ್ತು ಬಳಕೆದಾರ ಇಂಟರ್ಫೇಸ್ (ಯುಐ) ಅನ್ನು ವಿನ್ಯಾಸಗೊಳಿಸುವುದು ಯುಎಕ್ಸ್ / ಯುಐ ವಿನ್ಯಾಸಕರ ಜವಾಬ್ದಾರಿಯಾಗಿದೆ.

top videos


    ತಯಾರಿಸಿದ ಉತ್ಪನ್ನವು ನೋಡಲು ತುಂಬಾನೇ ಆಕರ್ಷಕವಾಗಿದೆ ಮತ್ತು ಅಂತಿಮ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಯುಎಕ್ಸ್ / ಯುಐ ಡಿಸೈನರ್ ಗಳು ಖಚಿತಪಡಿಸಿಕೊಳ್ಳಬೇಕು.

    First published: