ಬೋರ್ಡ್ ಪರೀಕ್ಷೆಯ ಫಲಿತಾಂಶ (Exam Result) ಹೊರಬೀಳುತ್ತಿದ್ದಂತೆಯೇ ವಿದ್ಯಾರ್ಥಿಗಳು ಶಾಲೆಯಿಂದ ಕಾಲೇಜಿನೆಡೆಗೆ ಹೆಜ್ಜೆ ಇಡುವ ಮೂಲಕ ಶಿಕ್ಷಣದ ಮುಂದಿನ ಗುರಿಯನ್ನು ಮುಂದುವರಿಸಲು ಸಿದ್ಧರಾಗಿರುತ್ತಾರೆ. ಈ ಸಮಯದಲ್ಲಿ ಭವಿಷ್ಯದ ವೃತ್ತಿಪರ ಆಯ್ಕೆಗೂ (Career Options) ಸೂಕ್ತವಾಗಿರುವಂತಹ ಕೋರ್ಸ್ಗಳ ಆಯ್ಕೆಗಳನ್ನು ವಿದ್ಯಾರ್ಥಿಗಳು ಮಾಡಬೇಕಾಗುತ್ತದೆ. ನಿಮಗಾಗಿ ಸರಿಯಾದ ವೃತ್ತಿಪರ ಮಾರ್ಗವನ್ನು (Career Guidance) ಆಯ್ಕೆಮಾಡುವಲ್ಲಿ ನಿಮಗೆ ಸಹಾಯ ಮಾಡಲು ಈ ಲೇಖನದಲ್ಲಿ ಸಲಹೆಗಳನ್ನು ನೀಡಿದ್ದೇವೆ.
ಜಾಹೀರಾತು ಕ್ಷೇತ್ರದಲ್ಲಿದೆ ವಿಫುಲ ಅವಕಾಶಗಳು
ಜಾಹೀರಾತು ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ನಿಮ್ಮಲ್ಲಿದ್ದರೆ, ನೀವು ಇದಕ್ಕಾಗಿ ಕೆಲವೊಂದು ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ. ಜಾಹೀರಾತುಗಳನ್ನು ನಿರ್ಮಿಸಲು ಕ್ರಿಯಾತ್ಮಕತೆಯ ಅರಿವು ಅಗತ್ಯವಿರುತ್ತದೆ. ನೀವು ಕ್ರಿಯಾತ್ಮಕರಾಗಿ ಹಾಗೂ ಭಿನ್ನವಾಗಿ ಯೋಚಿಸುವವರು ಎಂದಾದಲ್ಲಿ ಈ ಕ್ಷೇತ್ರ ನಿಮಗೆ ಸೂಕ್ತವಾದುದಾಗಿದೆ.
ಯಾವ ವಿಭಾಗದಲ್ಲಿ ಶಿಕ್ಷಣ ಪೂರೈಸಿರಬೇಕು?
ಜಾಹೀರಾತು ಕ್ಷೇತ್ರ ಕೈತುಂಬಾ ಆದಾಯವನ್ನು ನೀಡುವ ಕ್ಷೇತ್ರವಾಗಿದೆ. ಜಾಹೀರಾತು ಉದ್ಯಮದಲ್ಲಿ ವೃತ್ತಿಯನ್ನು ಆರಂಭಿಸಬೇಕು ಎಂದಾದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಪದವಿಯನ್ನು ಪೂರೈಸಿರಬೇಕು. ನೀವು ಜಾಹೀರಾತು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಬಯಸಿದರೆ ಕೆಳಗೆ ನೀಡಲಾದ ಪಟ್ಟಿಯಿಂದ ನೀವು ಕೋರ್ಸ್ ಅನ್ನು ಆಯ್ಕೆ ಮಾಡಬಹುದು
ಕೋರ್ಸ್ಗಳಾವುವು?
ಜಾಹೀರಾತು ಮ್ಯಾನೇಜ್ಮೆಂಟ್ನಲ್ಲಿ ಎಮ್ಬಿಎ
ಜಾಹೀರಾತು ಹಾಗೂ ಬ್ರ್ಯಾಂಡ್ ಮ್ಯಾನೇಜ್ಮೆಂಟ್ನಲ್ಲಿ ಬಿ.ಕಾಮ್
ಜಾಹೀರಾತು ಹಾಗೂ ಪಿಆರ್ನಲ್ಲಿ ಬಿಎ
ಪಬ್ಲಿಕ್ ರಿಲೇಶನ್ ಹಾಗೂ ಜಾಹೀರಾತಿನಲ್ಲಿ ಡಿಪ್ಲೊಮ
ಮೀಡಿಯಾ ಮ್ಯಾನೇಜ್ಮೆಂಟ್ನಲ್ಲಿ ಬ್ಯಾಚುಲರ್ಸ್
ಜಾಹೀರಾತು ಹಾಗೂ ಮಾರ್ಕೆಟಿಂಗ್ ಕಮ್ಯುನಿಕೇಶನ್ನಲ್ಲಿ ಡಿಪ್ಲೊಮ
ಜಾಹೀರಾತಿನಲ್ಲಿ ಡಿಪ್ಲೊಮ (ಪಬ್ಲಿಕ್ ರಿಲೇಶನ್ ಹಾಗೂ ಬ್ಯುಸಿನೆಸ್ ಸ್ಟಡೀಸ್)
ಜಾಹೀರಾತು ಶಿಕ್ಷಣಕ್ಕಾಗಿ ಉನ್ನತ ಕಾಲೇಜುಗಳು
ಜಾಹೀರಾತಿನಲ್ಲಿ ವೃತ್ತಿಯನ್ನು ಆಯ್ದುಕೊಳ್ಳಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಈ ಕಾಲೇಜುಗಳು ಸೂಕ್ತವಾಗಿವೆ
ಕಾಲೇಜ್ ಆಫ್ ಸೋಶಿಯಲ್ ವರ್ಕ್ (ಮುಂಬೈ)
ಶ್ರೀ ಗುರು ಗೋಬಿಂದ್ ಸಿಂಗ್ ಕಾಲೇಜ್ ಆಫ್ ಕಾಮರ್ಸ್ (ದೆಹಲಿ)
ರಾಮನಾರಾಯಣ ರುಯಿಯಾ ಕಾಲೇಜು (ಮುಂಬೈ)
ಸೇಂಟ್ ಕ್ಸೇವಿಯರ್ ಕಾಲೇಜು (ಮುಂಬೈ)
ಮದ್ರಾಸ್ ಕ್ರಿಶ್ಚಿಯನ್ ಕಾಲೇಜು (ಚೆನ್ನೈ)
ಮಖನ್ಲಾಲ್ ಚತುರ್ವೇದಿ ವಿಶ್ವವಿದ್ಯಾಲಯ (ಭೋಪಾಲ್)
ಹುದ್ದೆಗಳಾವುವು?
ಜಾಹೀರಾತು ವಿಭಾಗದಲ್ಲಿ ಹೆಚ್ಚುವರಿ ಶಿಕ್ಷಣವನ್ನು ಸಂಪೂರ್ಣಗೊಳಿಸಿದ್ದರೆ ಅಂದರೆ ಸ್ನಾತಕೋತ್ತರ ಪದವಿ ಪೂರೈಸಿದ್ದರೆ ನೀವು ಸಂಪಾದಕರು, ಮಾಧ್ಯಮ ಖರೀದಿ ನಿರ್ದೇಶಕ, ಕಸ್ಟಮರ್ ಸರ್ವೀಸ್ ಮ್ಯಾನೇಜರ್/ ಅಕೌಂಟ್ ಮ್ಯಾನೇಜರ್, ಕ್ರಿಯೇಟೀವ್ ಡೈರೆಕ್ಟರ್, ಆರ್ಟ್ ಡೈರೆಕ್ಟರ್, ಮೀಡಿಯಾ ಪ್ಲಾನರ್ ಹುದ್ದೆಗಳಲ್ಲಿ ವೃತ್ತಿ ಆಯ್ಕೆಯನ್ನು ಮಾಡಬಹುದಾಗಿದೆ.
ಜಾಹೀರಾತು ವೃತ್ತಿಜೀವನದಲ್ಲಿ ಅಗತ್ಯವಿರುವ ಪ್ರಮುಖ ಕೌಶಲ್ಯಗಳು
ಜಾಹೀರಾತು ವಿಭಾಗದಲ್ಲಿ ಉದ್ಯೋಗ ದೊರೆಯಬೇಕು ಎಂದಾದಲ್ಲಿ ನೀವು ಸೃಜನಶೀಲರಾಗಿರಬೇಕು ಹಾಗೂ ಏಕಕಾಲದಲ್ಲಿ ಅನೇಕ ಕೆಲಸಗಳನ್ನು ನಿಭಾಯಿಸಬಲ್ಲ ಚತುರತೆ ನಿಮಗಿರಬೇಕು.ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಜಾಹೀರಾತು ಏಜೆನ್ಸಿಗಳು ಕಾರ್ಯನಿರ್ವಹಿಸುವುದರಿಂದ ಕ್ರಿಯಾತ್ಮಕವಾಗಿ ಯೋಚಿಸುವುದು ಅಗತ್ಯವಾಗಿದೆ. ಜಾಹೀರಾತು ಶಿಕ್ಷಣವನ್ನೊದಗಿಸುವ ಕಾಲೇಜುಗಳು ವೃತ್ತಿಪರ ತರಬೇತಿ, ಕೌಶಲ್ಯಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತವೆ.
ಅತ್ಯಗತ್ಯ ಕೌಶಲ್ಯಗಳಾವುವು? ಅವು ಏಕೆ ಪರಿಣಾಮಕಾರಿಯಾಗಿವೆ?
ಜಾಹೀರಾತು ಕ್ಷೇತ್ರದಲ್ಲಿ ಸಮರ್ಥವಾದ ಸಂವಹನ ಕೌಶಲ್ಯ ಅತೀ ಅಗತ್ಯವಾದುದು. ನಿಮ್ಮಲ್ಲಿ ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಗುಣವಿರಬೇಕು. ಒತ್ತಡದಲ್ಲಿ ಕೆಲಸ ಮಾಡಲು ನೀವು ಸಿದ್ಧರಾಗಿರಬೇಕು. ಡೆಡ್ಲೈನ್ಗಳಿಗೆ ಪೂರಕವಾಗಿ ನಿಮ್ಮ ಕೆಲಸ ವೇಗವಾಗಿರಬೇಕು. ಯಾವುದೇ ಸಂದರ್ಭವನ್ನು ನಿಭಾಯಿಸುವ ಛಾತಿ ನಿಮ್ಮಲ್ಲಿರಬೇಕು. ಆನ್ಲೈನ್ ಕಮ್ಯುನಿಕೇಶನ್ ಸ್ಕಿಲ್ಗಳ ಪರಿಣಿತಿಯನ್ನು ನೀವು ಹೊಂದಿರಬೇಕಾಗುತ್ತದೆ.
ಕಂಪ್ಯೂಟರ್ ಜ್ಞಾನದ ಅತ್ಯಗತ್ಯ ಅರಿವಿರಬೇಕು. ತಂಡವನ್ನು ಮುನ್ನಡೆಸುವ ಛಲಗಾರಿಕೆ ನಿಮ್ಮಲ್ಲಿರಬೇಕು. ಜಾಹೀರಾತು ವಿಭಾಗದಲ್ಲಿ ಸ್ಪರ್ಧೆಗಳು ಹೆಚ್ಚಾಗಿರುವುದರಿಂದ ಆ ಸ್ಪರ್ಧೆಗಳಿಗೆ ಹೊಂದಿಕೊಂಡಂತೆ ನೀವು ಕೌಶಲ್ಯಗಳನ್ನು ಪ್ರಕಟಿಸಬೇಕಾಗುತ್ತದೆ.
ಒಟ್ಟಿನಲ್ಲಿ ಜಾಹೀರಾತು ವಿಭಾಗದಲ್ಲಿ ನೀವು ಒಳ್ಳೆಯ ಉದ್ಯೋಗವನ್ನು ಪಡೆಯಬೇಕು ಎಂದಾದಲ್ಲಿ ಹೊಸ ಹೊಸ ಟ್ರೆಂಡ್ಗಳನ್ನು ಅರಿತುಕೊಳ್ಳುವಲ್ಲಿ ಸಿದ್ಧಹಸ್ತರಾಗಿರಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ