ಬಟ್ಟೆಗಳ ಉದ್ಯಮ ಅಂದರೆ ಜವಳಿ ಉದ್ಯಮ (Textile Industry) ಎಂದಿಗೂ ಮಂಕಾಗುವುದೇ ಇಲ್ಲ. ಸದಾ ಬೇಡಿಕೆಯಲ್ಲಿರುವ ಕ್ಷೇತ್ರ ಇದಾಗಿದೆ. ಹಾಗಾಗಿ ಈ ಫೀಲ್ಡ್ ನಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ (Job Opportunities). ಜೊತೆಗೆ ಜವಳಿ ಉದ್ಯಮಕ್ಕೆ ಸರ್ಕಾರದ ಪರಿಷ್ಕೃತ ತಂತ್ರಜ್ಞಾನ ಉನ್ನತೀಕರಣ ಯೋಜನೆಯು ಜವಳಿ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಕೋಟಿ ಹೂಡಿಕೆ ಮತ್ತು 30 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ನಿರೀಕ್ಷೆಯಿದೆ. ಇದರಿಂದಾಗಿ ಉದ್ಯೋಗಾವಕಾಶಗಳು ಮೊದಲಿಗಿಂತ ವೇಗವಾಗಿ ಹೆಚ್ಚುತ್ತಿವೆ. ಜವಳಿ ಉದ್ಯಮದಲ್ಲಿ ನೀವು ವೃತ್ತಿ ರೂಪಿಸಿಕೊಳ್ಳಬೇಕೆಂದರೆ ಮಾಹಿತಿ ಇಲ್ಲಿದೆ.
ಟೆಕ್ಸ್ಟೈಲ್ ಎಂಜಿನಿಯರಿಂಗ್ ಎಂದರೇನು?
ಎಲ್ಲಾ ರೀತಿಯ ನೂಲುಗಳು ಮತ್ತು ಜವಳಿ ಬಟ್ಟೆಗಳ ತಯಾರಿಕೆ, ಬಳಕೆ ಬಗ್ಗೆ ಇದರಲ್ಲಿ ಕಲಿಸಲಾಗುತ್ತೆ. ಜವಳಿ ಎಂಜಿನಿಯರಿಂಗ್‌ನಲ್ಲಿ, ಬಟ್ಟೆಯನ್ನು ಆಕರ್ಷಕ ಮತ್ತು ಫ್ಯಾಶನಬಲ್ ಮಾಡಲು ಒತ್ತು ನೀಡಲಾಗುತ್ತದೆ. ಇದಕ್ಕಾಗಿ ಜವಳಿ ಎಂಜಿನಿಯರ್ ಸಾಕಷ್ಟು ಸಂಶೋಧನೆ ಮತ್ತು ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಟೆಕ್ಸ್ಟೈಲ್ಎಂಜಿನಿಯರ್ಗೆ ಹೊಸತನ, ಕ್ರಿಯೇಟಿವಿಟಿ ಸ್ಕಿಲ್ಸ್ ಬೇಕಾಗುತ್ತವೆ.
ಯಾವ ರೀತಿಯ ಕೋರ್ಸ್ಗಳನ್ನು ಮಾಡಬಹುದು
BE ಅಥವಾ B.Tech in Textile Technology, BA in Textile Designing, B.Sc in Textile Design, Bachelor of Design, Diploma in Textile Manufacturing ಅಥವಾ B.Tech in Textile Chemistry. ಈ ಕೋರ್ಸ್‌ಗಳಲ್ಲಿ ಅಡ್ವಾನ್ಸ್‌ಡ್ ಡಿಪ್ಲೊಮಾ, ಎಂಇಎ ಎಂಟೆಕ್ ಮತ್ತು ನಂತರ ಪಿಎಚ್‌ಡಿ ಕೂಡ ಮಾಡಬಹುದು.
ಜಾಬ್ ಪ್ರೊಫೈಲ್
ಜವಳಿ ಎಂಜಿನಿಯರ್ ಎಂಜಿನಿಯರಿಂಗ್ ಪ್ರಕ್ರಿಯೆಗೆ ಸಂಬಂಧಿಸಿದೆ. ಉಡುಪುಗಳ ವಿನ್ಯಾಸ ಮತ್ತು ತಯಾರಿಕೆಗಾಗಿ ಕೆಲಸ ಮಾಡುವ ವೃತ್ತಿಪರರು ಉತ್ಪನ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕೆಲಸ ಮಾಡುತ್ತಾರೆ.
ಯಾವೆಲ್ಲಾ ಸ್ಕಿಲ್ಸ್ ಅಗತ್ಯವಿದೆ?
ಈ ಕ್ಷೇತ್ರಕ್ಕೆ ಹೋಗಲು ಕಂಪ್ಯೂಟರ್ ಕೌಶಲ್ಯಗಳು, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳಂತಹ ಅನೇಕ ಕೌಶಲ್ಯಗಳನ್ನು ಹೊಂದಿರುವುದು ಅವಶ್ಯಕ. ಇದರ ಹೊರತಾಗಿ, ವಸ್ತುಗಳ ಸೂಕ್ಷ್ಮತೆ, ಕ್ರಿಯೇಟಿವಿಟಿಗೆ ಗಮನ ಕೊಡುವ ಸಾಮರ್ಥ್ಯವನ್ನು ಹೊಂದಿರಬೇಕು.
ವೃತ್ತಿ ಅವಕಾಶಗಳು
ಈ ಕ್ಷೇತ್ರದಲ್ಲಿ, ನೀವು ಜವಳಿ ಗಿರಣಿಗಳು, ನಿಟ್ವೇರ್ ಉತ್ಪಾದನಾ ಘಟಕಗಳು, ಜವಳಿ ಡೈಯಿಂಗ್ ಮತ್ತು ಪ್ರಿಂಟಿಂಗ್ ಘಟಕಗಳಲ್ಲಿ ಕೆಲಸ ಮಾಡಬಹುದು. ಇದಲ್ಲದೆ, ನೀವು ಸರ್ಕಾರಿ ಪ್ರಾಯೋಜಿತ ಅಥವಾ ಖಾಸಗಿ ರೇಷ್ಮೆ, ಕೈಮಗ್ಗ, ಸೆಣಬು, ಖಾದಿ, ಕರಕುಶಲ ಅಭಿವೃದ್ಧಿ ಸಂಸ್ಥೆಗಳಲ್ಲಿ ಸಹ ಕೆಲಸ ಮಾಡಬಹುದು.
ಸಂಬಳ ಎಷ್ಟು ನಿರೀಕ್ಷಿಸಬಹುದು
ಈ ಕ್ಷೇತ್ರದಲ್ಲಿ ನೀವು 30 ರಿಂದ 45 ಸಾವಿರ ರೂಪಾಯಿಗಳ ಆರಂಭಿಕ ವೇತನವನ್ನು ಸುಲಭವಾಗಿ ಪಡೆಯಬಹುದು. ಅನುಭವದ ಗಳಿಸಿದ ಬಳಿಕ ನೀವು ತಿಂಗಳಿಗೆ 50 ಸಾವಿರದಿಂದ 1 ಲಕ್ಷ ಗಳಿಸಬಹುದು. ನೀವು ಐಐಟಿಯಿಂದ ಜವಳಿ ಇಂಜಿನಿಯರಿಂಗ್‌ನಲ್ಲಿ ಬಿಟೆಕ್ ಮಾಡಿದ್ದರೆ, ನಿಮಗೆ ಆರಂಭಿಕ ವೇತನವು ತುಂಬಾ ದೊಡ್ಡ ಮೊತ್ತದಲ್ಲಿರುತ್ತದೆ.
ಇದನ್ನೂ ಓದಿ: Career Guidance: 10ನೇ ತರಗತಿ ಬಳಿಕವೂ ಎಂಜಿನಿಯರ್ ಆಗಬಹುದು, ಸರ್ಕಾರಿ ಕೆಲಸ ಸಿಗುವ ಸಾಧ್ಯತೆಯೂ ಹೆಚ್ಚು
ಫ್ಯಾಷನ್ ಡಿಸೈನಿಂಗ್ ಕೋರ್ಸ್ ಸಹ ಮಾಡಬಹುದು
ನೀವು ಆನ್ಲೈನ್ ಅಥವಾ ಆಫ್ಲೈನ್ ಎರಡರಲ್ಲಿಯೂ ಈ ಕೋರ್ಸ್ ಮಾಡಬಹುದು. ಅಷ್ಟೇ ಅಲ್ಲ ಫ್ಯಾಷನ್ ಲೋಕದಲ್ಲಿ ಆಸಕ್ತಿ ಉಳ್ಳವರು ಎಷ್ಟೋ ಜನ ಇರುವುದರಿಂದ ನೀವು ಹೊಸ ಉದ್ಯಮವನ್ನೂ ಸಹ ಆರಂಭಿಸಬಹುದು. ಬೆಂಗಳೂರಿನ ಮಹಿಳೆಯರ ಉಡುಪು ನಿರ್ಮಾಣ, ಬಣ್ಣದ ಹೊಂದಾಣಿಕೆ, ವಸ್ತ್ರವಿನ್ಯಾಸ, ಗ್ರಾಫಿಕ್ಸ್, ರೀಟೇಲ್ ಮಾರ್ಕೆಟಿಂಗ್ ಹೀಗೆ ಹಲವು ವಿಷಯಗಳನ್ನು ಇದರಲ್ಲಿ ಕಲಿಸಲಾಗುತ್ತದೆ. ಇದರಲ್ಲಿ ಪುರುಷರ ವಸ್ತ್ರ ವಿನ್ಯಾಸ ಕೂಡ ಬರುತ್ತದೆ. ಕರ್ನಾಟಕದ ಹಲವು ಭಾಗದಲ್ಲಿ ನೀವು ಈ ಕೋರ್ಸ್ ಮಾಡಬಹುದು. ನಿಟ್ಟೆ ಸ್ಕೂಲ್ ಆಪ್ ಫ್ಯಾಷನ್ ಮತ್ತು ಟೆಕ್ನಾಲಜಿ, ವಿದ್ಯಾ ಫ್ಯಾಷನ್ ಅಕಾಡೆಮಿ ಬೆಂಗಳೂರು, ಅರುಣಾಸ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್.. ಈ ಎಲ್ಲಾ ಕಾಲೇಜ್ಗಳಲ್ಲೂ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ