ಕೋಡಿಂಗ್ ತಂತ್ರಜ್ಞಾನದಲ್ಲಿ (Coding Technology) ಉದ್ಯೋಗ (Job) ಮಾಡಬೇಕೆಂದು ಬಯಸಿರುವವವರು ನೀವಾಗಿದ್ದರೆ ಖಂಡಿತ ಈ ಕ್ಷೇತ್ರದಲ್ಲಿ ಉತ್ತಮ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಉತ್ತಮ ಕೋಡರ್‌ಗೆ (Coder) ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕೂಡ ಹೆಚ್ಚಿದೆ ಅಂತೆಯೇ ಸಾಕಷ್ಟು ನೇಮಕಾತಿಗಳು ನಡೆಯುತ್ತಿರುತ್ತವೆ. ಕೈತುಂಬಾ ಸಂಬಳದ ಕೋಡಿಂಗ್ ಉದ್ಯೋಗಗಳು ನಿಮ್ಮ ಗುರಿಯಾಗಿದ್ದರೆ ಅದಕ್ಕೆ ತಕ್ಕಂತೆಯೇ ಕೆಲವೊಂದು ಕೌಶಲ್ಯಗಳನ್ನು (Skills) ನೀವು ಕಲಿತಿರಬೇಕಾಗುತ್ತದೆ.
ಕೋಡರ್ ಸ್ಯಾಲರಿ ಹೇಗಿರುತ್ತದೆ?
ಉದ್ಯೋಗ ವೆಬ್‌ಸೈಟ್ ಇಂಡೀಡ್ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೋಡರ್‌ನ ಸರಾಸರಿ ವೇತನವು ವರ್ಷಕ್ಕೆ $73,473 ಆಗಿದೆ ಇದರೊಂದಿಗೆ ಕೋಡಿಂಗ್ ಉದ್ಯೋಗಕ್ಕಿರುವ ವೇತನಗಳು ಆಗಾಗ್ಗೆ ಬದಲಾಗುತ್ತಿರುತ್ತವೆ ಎಂಬ ವರದಿಯೂ ಇದೆ. ಅಮೆಜಾನ್ ಅಥವಾ ಸೇಲ್ಸ್‌ಫೋರ್ಸ್‌ನಲ್ಲಿ ಕೆಲಸ ಮಾಡುವ ಕೋಡರ್ $100,000 (£79,900) ಗಳಿಸುತ್ತಾರೆ ಎಂಬ ಮಾಹಿತಿ ಕೂಡ ಇದೆ.
ಕೋಡಿಂಗ್ ಉದ್ಯಮದಲ್ಲಿ ವೇತನಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ ಅಂತೆಯೇ ವೇತನ ಗಮನಾರ್ಹ ಪಾಲು ವಹಿಸುತ್ತದೆ. ಕ್ಯಾಲಿಫೋರ್ನಿಯಾ ಹಾಗೂ ಲಾಸ್ ಏಂಜಲೀಸ್ ಕೋಡರ್‌ಗೆ ಅತಿ ಹೆಚ್ಚು ಪಾವತಿಸುವ ದೇಶ ಎಂಬ ಬಿರುದು ಪಡೆದುಕೊಂಡಿದೆ. ಇಲ್ಲಿ ಸರಾಸರಿ ವಾರ್ಷಿಕ ವೇತನ $79,627 ಆಗಿದ್ದು ನಗರದ ಜೀವನ ವೆಚ್ಚಕ್ಕೆ ಅನುಗುಣವಾಗಿ ಪಾವತಿ ಕೂಡ ಇರುತ್ತದೆ.
ಕೋಡಿಂಗ್ ವೃತ್ತಿಗೆ ಕಚೇರಿಯ ನಾಲ್ಕುಗೋಡೆಗಳ ಬಂಧನವಿಲ್ಲ
ಕೆಲವು ಕಂಪನಿಗಳು, ವಿಶೇಷವಾಗಿ ಹೊಸ ಸ್ಟಾರ್ಟ್-ಅಪ್‌ಗಳು, ಕಡಿಮೆ ಮೂಲ ವೇತನವನ್ನು ಪಾವತಿಸುತ್ತವೆ. ಆದರೆ ಉದ್ಯೋಗಿಗಳಿಗೆ ಸ್ಟಾಕ್ ಆಯ್ಕೆಗಳನ್ನು ನೀಡುತ್ತವೆ. ಕೋಡಿಂಗ್ ವೃತ್ತಿಯಲ್ಲಿರುವ ಇನ್ನೊಂದು ಪ್ರಯೋಜನ ಎಂದರೆ ನೀವು ಈ ಕೆಲಸವನ್ನು ಎಲ್ಲಿಂದ ಬೇಕಾದರೂ ಮಾಡಬಹುದು. ಆದರೆ ಉತ್ತಮ ಇಂಟರ್ನೆಟ್ ಸೌಲಭ್ಯವಿರಬೇಕು ಅಷ್ಟೇ. ಕಚೇರಿಯ ನಾಲ್ಕು ಗೋಡೆಗಳ ಮಧ್ಯೆಯೇ ಒಬ್ಬ ಕೋಡರ್ ಕೆಲಸ ನಿರ್ವಹಿಸಬೇಕು ಎಂದೇನಿಲ್ಲ ಎಲ್ಲಿಂದ ಬೇಕಾದರೂ ಕೋಡಿಂಗ್ ವೃತ್ತಿಯನ್ನು ನಿರ್ವಹಿಸಬಹುದಾಗಿದೆ.
ಹೆಚ್ಚು ಹೆಚ್ಚು ನಿಪುಣರಾದಂತೆ ಅವಕಾಶಗಳು ಹೆಚ್ಚು
ಕೋಡಿಂಗ್ ವೃತ್ತಿಯಲ್ಲಿ ನೀವು ಹೆಚ್ಚು ಕಲಿತುಕೊಂಡಂತೆ ಅಷ್ಟೇ ಉತ್ತಮ ವೇತನ ಗೊಳಿಸಬಹುದು. ನಿಮ್ಮ ಕೌಶಲ್ಯಗಳನ್ನು ಇನ್ನಷ್ಟು ಮೊನಚುಗೊಳಿಸಲು ಆದಷ್ಟು ಕೋಡಿಂಗ್ ಟೆಕ್ ಈವೆಂಟ್‌ಗಳಿಗೆ ಹಾಜರಾಗಬಹುದು ಅಂತೆಯೇ ಹೆಚ್ಚಿನ ಸಂಪರ್ಕಗಳ ಮೂಲಕ ಕೋಡಿಂಗ್ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು.
ಇದನ್ನೂ ಓದಿ: Career Tips: ಉದ್ಯಮಿ ಆಗಬೇಕು ಅಂದುಕೊಂಡಿದ್ದೀರಾ? ಆರಂಭದಲ್ಲೇ ಇವುಗಳ ಬಗ್ಗೆ ತಿಳಿದುಕೊಂಡರೆ ನಷ್ಟದ ಮಾತೇ ಇಲ್ಲ
ಈ ಕ್ಷೇತ್ರದಲ್ಲಿ ನೀವು ಹೆಚ್ಚು ಸಮರ್ಥ ನೆಟ್‌ವರ್ಕ್ ಅನ್ನು ಸ್ಥಾಪಿಸಿದಂತೆ ಹೆಚ್ಚು ಹೆಚ್ಚು ಮುಂಬಡ್ತಿ ಪಡೆಯಬಹುದು. ಒಂದೇ ಕಂಪನಿಯಲ್ಲಿ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡುವುದಕ್ಕಿಂತ ಬೇರೆ ಬೇರೆ ಕಂಪನಿಯಲ್ಲಿ ಉತ್ತಮ ವೇತನ ಹಾಗೂ ಉನ್ನತ ಹುದ್ದೆಗೆ ಏರುವ ಮೂಲಕ ವೃತ್ತಿಜೀವನವನ್ನು ಮುನ್ನಡೆಸಬಹುದು.
ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಸಮತೋಲನ ಸಾಧಿಸಬಹುದು
ರಿಮೋಟ್ ವೃತ್ತಿಯಾಗಿ ಕೋಡಿಂಗ್ ಕ್ಷೇತ್ರ ಸಾಂಕ್ರಾಮಿಕದ ನಂತರ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಅಂತೆಯೇ ನಿಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನ ಇವೆರಡರಲ್ಲೂ ಸಮತೋಲನ ಸಾಧಿಸಬಹುದಾಗಿದೆ.
ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ನಿಮ್ಮ ವೃತ್ತಿಜೀವನ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂಬುದು ಈ ಉದ್ಯೋಗದ ಪ್ಲಸ್ ಪಾಯಿಂಟ್ ಆಗಿದೆ.
ಪುರುಷರೇ ಈ ಕ್ಷೇತ್ರದಲ್ಲಿ ಟಾಪ್
ಕೋಡಿಂಗ್ ಕ್ಷೇತ್ರದಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರೇ ಮೇಲುಗೈ ಸಾಧಿಸುತ್ತಾರೆ ಎಂದು ವುಮೆನ್ ಇನ್ ಟೆಕ್ ವೆಬ್‌ಸೈಟ್ ತಿಳಿಸಿದೆ. ಇಂಗ್ಲೆಂಡ್‌ನ ಟೆಕ್ ವರ್ಕ್‌ಫೋರ್ಸ್‌ನಲ್ಲಿ ಕೇವಲ 26% ಮಹಿಳೆಯರು ಮಾತ್ರ ಕೋಡಿಂಗ್ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಹೊರಹಾಕಿದೆ.
ಕೃತಕ ಬುದ್ಧಿಮತ್ತೆಯ ಪ್ರಭಾವ
ಆರ್ಟಿಫಿಶಿಯಲ್ ಇಂಟಲಿಜೆನ್ಸಿಯಂತಹ ನವೀನ ತಂತ್ರಜ್ಞಾನಗಳು ಕೂಡ ಕೋಡರ್‌ಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಬಳಕೆಯಾಗಬಹುದೇ ಎಂಬುದು ಇನ್ನೂ ಗೊಂದಲದಲ್ಲಿದೆ. ಈ ತಂತ್ರಜ್ಞಾನದಲ್ಲಿ ಹೆಚ್ಚು ಪುರೋಗತಿ ನಡೆದಂತೆ ಬಹುಶಃ ಹೆಚ್ಚು ನುರಿತ ಉದ್ಯೋಗಿಗಳಿಗೆ ಅವಕಾಶಗಳು ಕಡಿಮೆಯಾಗುವ ನಿರೀಕ್ಷೆ ಕೂಡ ಇದೆ ಎಂದು ಜಾಬ್ ವೆಬ್‌ಸೈಟ್‌ಗಳು ಊಹಿಸಿವೆ. ಅದಾಗ್ಯೂ ನುರಿತ ಹಾಗೂ ಅನುಭವಿ ಕೋಡಿಂಗ್ ಉದ್ಯೋಗಿಗಳ ಅಗತ್ಯ ಟೆಕ್ ವಲಯಕ್ಕೆ ಇದ್ದೇ ಇರುತ್ತದೆ ಎಂಬ ಅಂಶವನ್ನು ತಳ್ಳಿ ಹಾಕುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ