• ಹೋಂ
 • »
 • ನ್ಯೂಸ್
 • »
 • Jobs
 • »
 • Architect ಆದವರು 3D ಮಾಡೆಲಿಂಗ್ ಕೌಶಲ್ಯಗಳನ್ನು ಹೊಂದಿದ್ದರೆ ವೃತ್ತಿ ಅವಕಾಶಗಳು ದುಪ್ಪಾಟ್ಟಾಗುತ್ತೆ

Architect ಆದವರು 3D ಮಾಡೆಲಿಂಗ್ ಕೌಶಲ್ಯಗಳನ್ನು ಹೊಂದಿದ್ದರೆ ವೃತ್ತಿ ಅವಕಾಶಗಳು ದುಪ್ಪಾಟ್ಟಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅದ್ಯತೆ ಇರುವ ಕ್ಷೇತ್ರವಾದ 3D ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ (ಅನುಕರಣೆ) ಫೋಕಸ್ ಮಾಡಿಕೊಂಡು ಆರ್ಕಿಟೆಕ್ಚರ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

 • Share this:

ಇಂದು ವೃತ್ತಿರಂಗದಲ್ಲಿ (Job Market) ವಿಫುಲ ಅವಕಾಶಗಳಿದ್ದು, ಅದನ್ನು ಹುಡುಕುವ ಕಲೆಗಾರಿಕೆ ಹಾಗೂ ನೈಪಣ್ಯತೆ ಅಭ್ಯರ್ಥಿಗೆ ಇರಬೇಕು. ಯಾವೆಲ್ಲಾ ವೃತ್ತಿಗಳಿಗೆ (Careers) ಆದ್ಯತೆ ಇದೆ? ಯಾವ ಕೋರ್ಸ್ (Professional Courses) ಮಾಡಿದರೆ ಉತ್ತಮ ಎಂಬುದನ್ನು ಅರಿತುಕೊಂಡು ವೃತ್ತಿ ಆಯ್ಕೆಮಾಡಿಕೊಳ್ಳಬೇಕು, ಅದೇ ರೀತಿ ವೃತ್ತಿ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳುತ್ತಿರಬೇಕು.


ಹೆಚ್ಚು ಅದ್ಯತೆ ಇರುವ ಕ್ಷೇತ್ರವಾದ 3D ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ (ಅನುಕರಣೆ) ಫೋಕಸ್ ಮಾಡಿಕೊಂಡು ಆರ್ಕಿಟೆಕ್ಚರ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ. ಶೈಕ್ಷಣಿಕ ಅರ್ಹತೆ ಹಾಗೂ ನಿಮಗಿರಬೇಕಾದ ಕೌಶಲ್ಯಗಳನ್ನು ನಿರ್ಧರಿಸಿಕೊಂಡು ವೃತ್ತಿ ಆಯ್ಕೆಮಾಡಬಹುದು. ಎಷ್ಟು ಸಂಬಳ ಬರುತ್ತದೆ ಎಂಬ ವಿವರವನ್ನೂ ಪಡೆದುಕೊಳ್ಳಬಹುದು.


ಆರ್ಕಿಟೆಕ್ಚರ್‌ಗಳಿಗೆ ಹೆಚ್ಚಿನ ಬೇಡಿಕೆ


ವಾಸ್ತುಶಿಲ್ಪಿಗಳು ಅಥವಾ ಆರ್ಕಿಟೆಕ್ಚರ್‌ಗಳು ಕಟ್ಟಡ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಹಾಗಾಗಿ ಇಂತಹ ಆರ್ಕಿಟೆಕ್ಚರ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ತಂತ್ರಜ್ಞಾನದ ನಾವೀನ್ಯತೆಗಳನ್ನು ಬಳಸಿಕೊಂಡು ಇವರುಗಳು ರೇಖಾಚಿತ್ರ ಹಾಗೂ ವಿನ್ಯಾಸವಲ್ಲದೆ ಇನ್ನಷ್ಟು ಕ್ರಿಯಾತ್ಮಕ ಶೈಲಿಯಲ್ಲಿ ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ಅಂತಹುದೇ ಒಂದು ಕ್ಷೇತ್ರ 3ಡಿ ಮಾಡೆಲಿಂಗ್ ಹಾಗೂ ಸಿಮ್ಯುಲೇಶನ್ ಆಗಿದೆ. ಈ ಉದ್ಯೋಗ ಭಾರತದಲ್ಲಿ ಹೆಸರುವಾಸಿಯಾಗುತ್ತಿದೆ.


ಪ್ರಾತಿನಿಧಿಕ ಚಿತ್ರ


ಭಾರತದಲ್ಲಿ ನಿರ್ಮಾಣ ಉದ್ಯಮವು ವೇಗವಾಗಿ ಬೆಳೆಯುತ್ತಿದೆ ಮತ್ತು ಅದರೊಂದಿಗೆ, ನಿರ್ಮಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸುವ ಮತ್ತು ದೃಶ್ಯೀಕರಿಸುವ ಆರ್ಕಿಟೆಕ್ಚರ್‌ಗಳಿಗೂ ಹೆಚ್ಚು ಬೇಡಿಕೆ ಇದೆ.


ಗ್ರಾಹಕರಿಗೆ ವಿನ್ಯಾಸಗಳನ್ನು ಪ್ರದರ್ಶಿಸಲು, ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ಮತ್ತು ನಿರ್ಮಾಣಕ್ಕಾಗಿ ವಿವರವಾದ ಯೋಜನೆಗಳನ್ನು ರಚಿಸಲು ಇಂತಹ ಮಾದರಿಗಳನ್ನು ಬಳಸಬಹುದು ಎಂದು ಡಿಸೈನ್ ಫೋರಮ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ಮತ್ತು ಪಾಲುದಾರ ಅನೋಜ್ ತೆವಾಟಿಯಾ ತಿಳಿಸುತ್ತಾರೆ.


ವೃತ್ತಿ ಅವಕಾಶಗಳು ಮತ್ತು ಸ್ಕೋಪ್


ಇತ್ತೀಚಿನ ವರ್ಷಗಳಲ್ಲಿ, 3D ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ ಬಳಕೆಯು ಭಾರತೀಯ ನಿರ್ಮಾಣ ಉದ್ಯಮದಲ್ಲಿ ಹೆಚ್ಚು ಪ್ರಚಲಿತವಾಗಿದೆ. 3D ಮಾಡೆಲಿಂಗ್ ಮತ್ತು ಸಿಮ್ಯುಲೇಶನ್‌ನಲ್ಲಿ ನುರಿತ ವಾಸ್ತುಶಿಲ್ಪಿಗಳಿಗೆ ಅಥವಾ ಆರ್ಕಿಟೆಕ್ಟ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ.


ಆರ್ಕಿಟೆಕ್ಟ್ ಗಳು ಭೂದೃಶ್ಯಗಳ ನೈಜ ಮಾದರಿಗಳನ್ನು ರಚಿಸುವುದು, ವಿಡಿಯೋ ಗೇಮ್ ಹಾಗೂ ಚಲನಚಿತ್ರಗಳಿಗೆ ವರ್ಚುವಲ್ ಪರಿಸರವನ್ನು ನಿರ್ಮಿಸುವುದು ಮೊದಲಾದ ಮಹತ್ತರ ಹುದ್ದೆಗಳನ್ನಲಂಕರಿಸಬಹುದು.


ಗೂಗಲ್, ಮೈಕ್ರೋಸಾಫ್ಟ್ ಮತ್ತು ಮೆಟಾ 3D ಮಾಡೆಲರ್‌ಗಳು ಮತ್ತು ಸಿಮ್ಯುಲೇಟರ್‌ಗಳನ್ನು ನೇಮಿಸಿಕೊಳ್ಳುವ ಪ್ರಮುಖ ಸಂಸ್ಥೆಗಳಾಗಿವೆ.
ಇರಬೇಕಾದ ಶೈಕ್ಷಣಿಕ ಅರ್ಹತೆ ಏನು?


3D ಮಾಡೆಲಿಂಗ್ ಮತ್ತು ಸಿಮ್ಯುಲೇಶನ್‌ನ ಜ್ಞಾನದೊಂದಿಗೆ ವಾಸ್ತುಶಿಲ್ಪದಲ್ಲಿ ವೃತ್ತಿಜೀವನಕ್ಕಾಗಿ ವಿವಿಧ ಶೈಕ್ಷಣಿಕ ಅರ್ಹತೆಗಳಿವೆ. 3ಡಿ ವಿಶುವಲೈಸರ್ ಆಗಲು ಗ್ರಾಫಿಕ್ ವಿನ್ಯಾಸ ಅಥವಾ ಒಳಾಂಗಣ ವಿನ್ಯಾಸದಲ್ಲಿ ಬ್ಯಾಚುಲರ್ ಆಫ್ ಡಿಸೈನ್ ಪದವಿ (BDes) ಅಥವಾ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ನಂತರ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದಿರಬೇಕು.


ಸಿವಿಲ್ ಇಂಜಿನಿಯರಿಂಗ್ ಅಥವಾ BArch ಕೋರ್ಸ್‌ಗಳಲ್ಲಿ ಬಿಟೆಕ್ ಅನ್ನು ಸಹ ಆಯ್ಕೆ ಮಾಡಬಹುದು. IIT-ದೆಹಲಿ, IIT-ಬಾಂಬೆ ಮತ್ತು NIFT ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಪದವಿ ಪ್ರೋಗ್ರಾಮ್‌ಗಳನ್ನೊದಗಿಸುವ ವಿದ್ಯಾ ಸಂಸ್ಥೆಗಳಾಗಿವೆ.


ಅಗತ್ಯವಿರುವ ಕೌಶಲ್ಯಗಳು


3ಡಿ ಮಾಡೆಲಿಂಗ್ ಹಾಗೂ ವಿಶುವಲೈಸೇಶನ್‌ನಲ್ಲಿ ವೃತ್ತಿ ಆಯ್ಕೆಮಾಡಲು ಕಲಾತ್ಮಕ ಒಲವಿರಬೇಕು. ಸೃಜನಶೀಲತೆ ಮತ್ತು ತಂತ್ರಜ್ಞಾನ ಅತೀ ಅಗತ್ಯವಾದ ಕೌಶಲ್ಯವಾಗಿದೆ. 3DS ಮ್ಯಾಕ್ಸ್, ವಿ-ರೇ, ರೈನೋ, ಮಾಯಾ ಮತ್ತು ಸ್ಕೆಚ್‌ಅಪ್‌ನಂತಹ 3D ಸಾಫ್ಟ್‌ವೇರ್‌ನಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು ಎಂದು ಅನೋಜ್ ತಿಳಿಸುತ್ತಾರೆ.


ಸಂಬಳ


ವೃತ್ತಿ ಬೆಳವಣಿಗೆಯ ಅವಕಾಶಗಳ ಜೊತೆಗೆ, 3D ಮಾಡೆಲಿಂಗ್ ಮತ್ತು ಸಿಮ್ಯುಲೇಶನ್‌ನಲ್ಲಿ ಕೆಲಸ ಮಾಡುವ ಆರ್ಕಿಟೆಕ್ಟ್ ಗಳು ಹೆಚ್ಚಿನ ಸಂಬಳವನ್ನು ನಿರೀಕ್ಷಿಸಬಹುದು.


ಇದನ್ನೂ ಓದಿ: Artificial Intelligence ಬಳಸಿಕೊಂಡು ಹೀಗೆ ರೆಸ್ಯೂಮ್ ಕ್ರಿಯೇಟ್ ಮಾಡಿದ್ರೆ ರಿಜೆಕ್ಟ್ ಆಗೋ ಮಾತೇ ಇಲ್ಲ


ಆರಂಭ ಹಂತದಲ್ಲಿ 3D ವಿಶುವಲೈಸರ್‌ಗಳು ಸುಮಾರು ರೂ 25,000 ರಿಂದ ರೂ 30,000 ಗಳಿಸುತ್ತಾರೆ. ಉದ್ಯಮದಲ್ಲಿ ಅನುಭವ ಗಳಿಸಿದ ನಂತರ ಉದ್ಯೋಗಾರ್ಥಿ ತಿಂಗಳಿಗೆ ರೂ 4-5 ಲಕ್ಷದವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಗಳಿಸಬಹುದು ಎಂದು ಅನೋಜ್ ತಿಳಿಸುತ್ತಾರೆ.

top videos


  ಪೇಸ್ಕೇಲ್ ಪ್ರಕಾರ, ಭಾರತದಲ್ಲಿ 3D ಮಾಡೆಲರ್‌ಗೆ ಸರಾಸರಿ ವೇತನವು ವಾರ್ಷಿಕ ರೂ 4 ಲಕ್ಷವಾಗಿದೆ ಅಂತೆಯೇ BIM ನಿರ್ವಾಹಕರು ವರ್ಷಕ್ಕೆ ರೂ 9 ಲಕ್ಷ ವೇತನ ಪಡೆಯಬಹುದು.

  First published: