• ಹೋಂ
  • »
  • ನ್ಯೂಸ್
  • »
  • Jobs
  • »
  • Career Guidance: ವಾಯ್ಸ್ ಓವರ್, ಡಬ್ಬಿಂಗ್ ಆರ್ಟಿಸ್ಟ್ ಆಗುವುದು ಹೇಗೆ; ಕೋರ್ಸ್, ಉದ್ಯೋಗ ಮಾಹಿತಿ ಹೀಗಿದೆ

Career Guidance: ವಾಯ್ಸ್ ಓವರ್, ಡಬ್ಬಿಂಗ್ ಆರ್ಟಿಸ್ಟ್ ಆಗುವುದು ಹೇಗೆ; ಕೋರ್ಸ್, ಉದ್ಯೋಗ ಮಾಹಿತಿ ಹೀಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಉತ್ತಮ ಸ್ವರ, ಶಬ್ದಕೋಶದ ಭಂಡಾರ, ಮಾತಿನಲ್ಲೇ ಭಾವನೆ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಉತ್ತಮ ಆಯ್ಕೆ ಎಂದರೆ ಅದು ವಾಯ್ಸ್‌ ಓವರ್‌ ಮತ್ತು ಡಬ್ಬಿಂಗ್‌ ಕ್ಷೇತ್ರ. ಹಾಗಾದರೆ ವಾಯ್ಸ್ ಓವರ್, ಡಬ್ಬಿಂಗ್ ಆರ್ಟಿಸ್ಟ್ ಆಗುವುದು ಹೇಗೆ ಎಂದು ತಿಳಿಯೋಣ ಬನ್ನಿ.

  • Share this:

 ಮಾತು ಬಂದರೆ ಜಗತ್ತನ್ನೇ ಗೆಲ್ಲಬಹುದು ಅಂತಾ ಹೇಳಲಾಗುತ್ತದೆ. ಮಾತು ಮಾತ್ರ ಅಲ್ಲ ನಮ್ಮ ಧ್ವನಿ, ಮಾತಿನ ಸ್ಪಷ್ಟತೆ, ಪದಗಳ ಮೇಲಿನ ಹಿಡಿತ (Speaking skills) ಕೂಡ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗುತ್ತೆ. ತುಂಬಾ ಮಾತನಾಡುವವರು, ಒಳ್ಳೆಯ ಪದಪುಂಜ ಹೊಂದಿರುವವರು ಪತ್ರಿಕೆ, ಸುದ್ದಿ ಮಾಧ್ಯಮ, ರೆಡಿಯೋ ಜಾಕಿ, ಆಂಕರ್‌ ಹೀಗೆ ವಿವಿಧ ವೃತ್ತಿ ಆಯ್ಕೆಗಳ (Career Options) ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಾರೆ.


ಉತ್ತಮ ಸ್ವರ, ಶಬ್ದಕೋಶದ ಭಂಡಾರ, ಮಾತಿನಲ್ಲೇ ಭಾವನೆ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಉತ್ತಮ ಆಯ್ಕೆ ಎಂದರೆ ಅದು ವಾಯ್ಸ್‌ ಓವರ್‌ ಮತ್ತು ಡಬ್ಬಿಂಗ್‌ ಕ್ಷೇತ್ರ.


ವಾಯ್ಸ್‌ ಓವರ್‌ ಮತ್ತು ಡಬ್ಬಿಂಗ್‌


ಸಿನಿಮಾದಲ್ಲಿ ಇರುವ ಕಂಠದಾನ ಕಲಾವಿದರ ಬಗ್ಗೆ ನಿಮಗೆ ಗೊತ್ತಿರುತ್ತದೆ. ಈಗಂತೂ ಸಿನಿಮಾಗಳ ಡಬ್ಬಿಂಗ್‌ ಹೆಚ್ಚಾಗಿರುವುದರಿಂದ ಬೇರೆ ಭಾಷೆಯ ಸಿನಿಮಾಗಳ ನಟ-ನಟಿಯರಿಗೆ ಸ್ಥಳೀಯ ಕಲಾವಿದರು ಕಂಠದಾನ ಮಾಡುತ್ತಾರೆ. ಇದನ್ನೇ ಡಬ್ಬಿಂಗ್‌ ಎನ್ನಲಾಗುತ್ತದೆ.


ಎಫ್‌ಎಂನಲ್ಲಿ ನಿರೂಪಕರ ಮುಖ ಕಾಣುವುದಿಲ್ಲ ಬದಲಿಗೆ ಅವರ ನಿರ್ಗಳ ಮಾತು ಕೇಳುತ್ತದೆ. ಹೀಗೆ ಅವರು ಅವರ ಧ್ವನಿ ಇಂದಲೇ ಪ್ರೇಕ್ಷಕರಿಗೆ ಮೋಡಿ ಮಾಡಿ ಅವರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಈ ಧ್ವನಿ ಕೂಡ ಒಂದು ಶಕ್ತಿಯಾಗಿದ್ದು, ವೃತ್ತಿಜೀವನಕ್ಕೂ ಸಹಕಾರಿಯಾಗಿದೆ. ನೀವೂ ಸಹ ಒಳ್ಳೆಯ ಮಾತಿನ ಸ್ಪಷ್ಟತೆ, ಶಬ್ದಗ ಬಗ್ಗೆ ತಿಳಿದುಕೊಂಡರೆ ಡಬ್ಬಿಂಗ್‌ ಮತ್ತು ವಾಯ್ಸ್‌ ಓವರ್‌ ಕ್ಷೇತ್ರದಲ್ಲಿ ಕೆಲಸ ಮಾಡಬಹುದು.




ಡಬ್ಬಿಂಗ್‌ ಮತ್ತು ವಾಯ್ಸ್‌ ಓವರ್‌ನಲ್ಲಿ ವೃತ್ತಿ ಮಾಡಲು ಬೇಕಿರುವ ಕೌಶಲ್ಯಗಳು


ಮಾತಿನ ಸ್ಪಷ್ಟತೆ, ಸರಿಯಾದ ಉಚ್ಛಾರಣೆ ಮತ್ತು ಪದಗಳ ಉಚ್ಚಾರಣೆ, ಭಾಷೆಗಳ ಮೂಲಭೂತ ಜ್ಞಾನ, ಭಾಷೆಯನ್ನು ಮಾತನಾಡುವ ವಿಧಾನ, ಅದರ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಅರಿವಿರಬೇಕು. ಈ ಎಲ್ಲಾ ಕೌಶಲ್ಯಗಳ ಜೊತೆ ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಬಗ್ಗೆ ಧ್ವನಿ ಕಲಾವಿದರಾಗಿ ತಿಳಿದಿರುವುದು ಉತ್ತಮ.


ಒಬ್ಬ ಧ್ವನಿ ಕಲಾವಿದ ತನ್ನ ನಾಲಿಗೆಯಿಂದ ಯಾವುದೇ ಭಾಷೆಯನ್ನು ಮಾತನಾಡಲು ಮತ್ತು ಪ್ರಜ್ಞಾಪೂರ್ವಕ ಪ್ರಯತ್ನದಿಂದ ಸರಿಯಾಗಿ ಮಾತನಾಡಲು ತರಬೇತಿ ಪಡೆಯಬೇಕು. ಹಾಗೆಯೇ ಕಂಠದಾನ ಮಾಡುವಾಗ ಹೈ ಪಿಚ್‌, ಲೋ ಪಿಚ್‌ನಂತಹ ಶ್ರೇಣಿಗಳ ಬಗ್ಗೆಯೂ ಜ್ಞಾನ ಇರಬೇಕು.


ಇದನ್ನೂ ಓದಿ: Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು


ಕೌಶಲ್ಯಗಳ ಜೊತೆ ನಿಮ್ಮ ಇತಿಮಿತಿಗಳನ್ನು, ನಿಮ್ಮ ಸಾಮರ್ಥ್ಯಗಳನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಧ್ವನಿ ಕಲಾವಿದೆಯಾಗಿ 15 ವರ್ಷಗಳ ಅನುಭವವನ್ನು ಹೊಂದಿರುವ ತೃಪ್ತಿ ಚಿವುಕುಲ ಹೇಳುತ್ತಾರೆ. ಇವರು ಅನೇಕ ಚಲನಚಿತ್ರಗಳು, OTT ಶೋಗಳು ಮತ್ತು ಕಾರ್ಟೂನ್ ಸೀರಿಸ್‌ಗಳಿಗೆ ತಮ್ಮ ಧ್ವನಿ ನೀಡಿದ್ದಾರೆ.


ಕೊರ್ಸ್‌ಗಳು ಲಭ್ಯವಿವೆ


ವಾಯ್ಸ್ ಓವರ್/ಡಬ್ಬಿಂಗ್‌ಗಳಿಗೂ ಕೋರ್ಸ್ ಲಭ್ಯವಿದೆ. ಈ ಏನೇ ಕೋರ್ಸ್‌ಗಳು ಲಭ್ಯವಿದ್ದರೂ ಇವು ನಿಮ್ಮನ್ನು ಮತ್ತಷ್ಟು ಪಾಲಿಶ್‌ ಮಾಡಬಹುದೇ ಹೊರತು ಮಾತನಾಡುವ ಚಾಣಾಕ್ಷತನ ನಿಮ್ಮಲ್ಲಿಯೇ ಇರಬೇಕು. ಕೋರ್ಸ್‌ಗಳನ್ನು ನಿಮಗೆ ಆಸಕ್ತಿ ಇದ್ದರೆ ಮಾತ್ರ ತೆಗೆದುಕೊಳ್ಳುವುದು ಉತ್ತಮ.




ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಒಬ್ಬರಿಗೆ ಸಮರ್ಪಣೆ, ಸ್ಥಿರವಾದ ಕೆಲಸ ಮತ್ತು ನಿರಂತರ ಕಲಿಕೆ ಮತ್ತು ಸುಧಾರಣೆಯ ಅಗತ್ಯವಿದೆ. ಧ್ವನಿ ಕಲಾವಿದೆಯಾಗಿ ನೀವು ನೆಟ್‌ವರ್ಕಿಂಗ್ ಅನ್ನು ಮುಂದುವರಿಸಬೇಕು ಮತ್ತು ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುತ್ತಾರೆ ತೃಪ್ತಿ ಚಿವುಕುಲ.


ವೃತ್ತಿಗಿರುವ ಸ್ಕೋಪ್

top videos


    ಇಂದು ಧ್ವನಿ ಕಲಾವಿದರಿಗೆ ಸಾಕಷ್ಟು ಅವಕಾಶವಿದೆ, ವಿಶೇಷವಾಗಿ ಶಿಕ್ಷಣ ಮತ್ತು ಮನರಂಜನೆಯ ಡಿಜಿಟಲ್ ಯುಗದಲ್ಲಿ. ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್, ಪ್ರೈಮ್, ಅಮೆಜಾನ್ ವೀಡಿಯೋ, ಅನಿಮೇಷನ್, ಕಾರ್ಟೂನ್‌ಗಳು, ಜಾಹೀರಾತುಗಳು, ರೇಡಿಯೋ ಶೋಗಳು, ಸಾಕ್ಷ್ಯಚಿತ್ರಗಳು, ಕಾರ್ಪೊರೇಟ್ ಪ್ರಸ್ತುತಿಗಳು, ದೂರದರ್ಶನ, ಗೇಮಿಂಗ್ ಅಪ್ಲಿಕೇಶನ್‌ಗಳಂತಹ ಉನ್ನತ ಪ್ಲಾಟ್‌ಫಾರ್ಮ್‌ಗಳಲ್ಲಿ (OTTs) ಚಲನಚಿತ್ರಗಳಿಗೆ ಧ್ವನಿ ನೀಡಬಹುದು. ಮೇಲೆ ಹೇಳಿದಂತೆ ಈಗ ಒಂದು ಭಾಷೆಯ ಸಿನಿಮಾ ಎಲ್ಲಾ ಭಾಷೆಗಳಿಗೂ ಡಬ್‌ ಆಗುತ್ತಿರುವುದರಿಂದ ಅದು ಕೂಡ ಇಲ್ಲಿ ಕೆಲಸ ಮಾಡುತ್ತಿರುವವರಿಗೆ ವರದಾನವಾಗಿದೆ.

    First published: