• ಹೋಂ
  • »
  • ನ್ಯೂಸ್
  • »
  • Jobs
  • »
  • Career Opportunities: ಎಲೆಕ್ಟ್ರಿಕಲ್ ಇಂಜಿನಿಯರ್​ಗಳಿಗೆ ಗುಡ್​ನ್ಯೂಸ್: EV ಮಾರುಕಟ್ಟೆಯಲ್ಲಿ ಬಂಪರ್​ ಅವಕಾಶ

Career Opportunities: ಎಲೆಕ್ಟ್ರಿಕಲ್ ಇಂಜಿನಿಯರ್​ಗಳಿಗೆ ಗುಡ್​ನ್ಯೂಸ್: EV ಮಾರುಕಟ್ಟೆಯಲ್ಲಿ ಬಂಪರ್​ ಅವಕಾಶ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವುದರಿಂದ, ವೃತ್ತಿಪರ ಎಲೆಕ್ಟ್ರಿಕಲ್ ಇಂಜಿನಿಯರ್‌ಗಳ ಬೇಡಿಕೆಯು ಗಣನೀಯವಾಗಿ ಹೆಚ್ಚಾಗಲಿದೆ. 

  • Share this:

ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಳವಣಿಗೆಯು ವೇಗ ಪಡೆದುಕೊಂಡಿದೆ. ಜಾಗತಿಕ ಇವಿ ಮಾರುಕಟ್ಟೆಯು 2021ರಿಂದ 2030ರವರೆಗೆ ಸುಮಾರು 22 ಪ್ರತಿಶತದಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಕ್ಷಿಪ್ರ ಬೆಳವಣಿಗೆಯು ಎಲೆಕ್ಟ್ರಿಕಲ್ ಇಂಜಿನಿಯರ್‌ಗಳಿಗೆ (Electrical Engineering) ಅವಕಾಶಗಳ ಮಹಾಪೂರವನ್ನೇ ಸೃಷ್ಟಿಸುತ್ತಿದೆ.


ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವುದರಿಂದ, ವೃತ್ತಿಪರ ಎಲೆಕ್ಟ್ರಿಕಲ್ ಇಂಜಿನಿಯರ್‌ಗಳ ಬೇಡಿಕೆಯು ಗಣನೀಯವಾಗಿ ಹೆಚ್ಚಾಗಲಿದೆ. ಹೌದು... ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ರಾಂತಿಯು ನುರಿತ ಎಲೆಕ್ಟ್ರಿಕಲ್ ಇಂಜಿನಿಯರ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ. ಇದು ಅತ್ಯಾಕರ್ಷಕ ವೃತ್ತಿ ಅವಕಾಶಗಳ ಜಗತ್ತನ್ನು ತೆರೆಯುತ್ತಿದೆ.


ಇದು ಇವಿ ಅಳವಡಿಕೆಯನ್ನು ಬೆಂಬಲಿಸುವ ಮೂಲಸೌಕರ್ಯವನ್ನು ಆವಿಷ್ಕರಿಸಲು, ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಅರ್ಹವಾದ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳ ಬೇಡಿಕೆಗೆ ಕಾರಣವಾಗಿದೆ.




ಚಾರ್ಜಿಂಗ್‌ ಸ್ಟೇಷನ್‌ಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ


ಇವಿ ಮಾರುಕಟ್ಟೆಯಲ್ಲಿನ ಅವಕಾಶದ ಪ್ರಮುಖ ಕ್ಷೇತ್ರವು ಚಾರ್ಜಿಂಗ್ ಸ್ಟೇಷನ್‌ಗಳ ವಿನ್ಯಾಸ, ಸ್ಥಾಪನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ನಿರ್ಮಾಣದಲ್ಲಿದೆ. ಎಲೆಕ್ಟ್ರಿಕಲ್ ಇಂಜಿನಿಯರ್‌ಗಳು ಸುಧಾರಿತ ಚಾರ್ಜಿಂಗ್ ಪರಿಹಾರಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.


ಹೆಚ್ಚುವರಿಯಾಗಿ, ಅವರು ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ಎಲೆಕ್ಟ್ರಿಕ್‌ ವಾಹನಗಳಿಗೆ ಸಮರ್ಥ ಶಕ್ತಿ ವಿತರಣೆ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುತ್ತಾರೆ.


ಇದನ್ನೂ ಓದಿ: Technology Courses: ತಂತ್ರಜ್ಞಾನದಲ್ಲಿ ಆಸಕ್ತಿ ಇರುವವರು ಈ ಡಿಗ್ರಿಗಳನ್ನು ಆಯ್ಕೆ ಮಾಡುವುದು ಬೆಸ್ಟ್


ಭಾರತದ ಪವರ್ ಗ್ರಿಡ್ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವಂತೆ, ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ಸ್ಮಾರ್ಟ್ ಗ್ರಿಡ್ ತಂತ್ರಗಳು ಮತ್ತು ವೆಹಿಕಲ್-ಟು-ಗ್ರಿಡ್ (V2G) ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಕೊಡುಗೆ ನೀಡುತ್ತಾರೆ.


ಈ ಕ್ಷೇತ್ರಗಳಲ್ಲೂ ಇದೆ ವಿಫುಲ ಅವಕಾಶಗಳು


ಇವಿ ಮಾರುಕಟ್ಟೆಯಲ್ಲಿ ಇಂಜಿನಿಯರ್‌ಗಳು ಮಹತ್ವದ ಪ್ರಭಾವ ಬೀರುತ್ತಿರುವ ವಿವಿಧ ಕ್ಷೇತ್ರಗಳೆಂದರೆ


*ಬ್ಯಾಟರಿ ತಂತ್ರಜ್ಞಾನ


*ಪವರ್ ಎಲೆಕ್ಟ್ರಾನಿಕ್ಸ್


*ಎಲೆಕ್ಟ್ರಿಕ್ ಮೋಟಾರ್ ವಿನ್ಯಾಸ


*ಚಾರ್ಜಿಂಗ್ ಮೂಲಸೌಕರ್ಯ


*ವಾಹನದಿಂದ ಗ್ರಿಡ್ ತಂತ್ರಜ್ಞಾನ


*ಎಂಬೆಡೆಡ್ ಸಿಸ್ಟಮ್‌ಗಳು ಮತ್ತು ನಿಯಂತ್ರಣ


*ಎಲೆಕ್ಟ್ರಿಕ್ ವಾಹನ ವ್ಯವಸ್ಥೆಯ ಸಂಶೋಧನೆ


ಹೆಚ್ಚುವರಿಯಾಗಿ, ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ದಕ್ಷ ಮತ್ತು ಸಮರ್ಥನೀಯ ಸ್ವಯಂ-ಚಾಲನಾ ವಾಹನಗಳನ್ನು ಸಕ್ರಿಯಗೊಳಿಸಲು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳು, ಸಂವೇದಕ ವ್ಯವಸ್ಥೆ, ಸಂವಹನ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಲು ಮತ್ತು ಸಂಯೋಜಿಸಲು ಹೆಚ್ಚು ತೊಡಗಿಸಿಕೊಂಡಿದ್ದಾರೆ.


ನವೀಕರಿಸಬಹುದಾದ ಇಂಧನಗಳ ಸಂಶೋಧನೆ


ಎಲೆಕ್ಟ್ರಿಕಲ್‌ ಇಂಜಿನಿಯರ್‌ಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತಿರುವ ಮತ್ತೊಂದು ಡೊಮೇನ್ ಎಂದರೆ ವಿದ್ಯುತ್ ವಾಹನಗಳೊಂದಿಗೆ ನವೀಕರಿಸಬಹುದಾದ ಶಕ್ತಿಯ ಏಕೀಕರಣ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸೌರ, ಗಾಳಿ ಮತ್ತು ಇತರ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಲು ಅವರು ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.




ಅಂದಹಾಗೆ ಎಲೆಕ್ಟ್ರಿಕ್ ವಾಹನಗಳ ತಿರುಳು ಬ್ಯಾಟರಿ ತಂತ್ರಜ್ಞಾನವಾಗಿದೆ. ಅಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್‌ಗಳು ಬ್ಯಾಟರಿ ಸಾಮರ್ಥ್ಯ, ದಕ್ಷತೆ ಮತ್ತು ಚಾರ್ಜಿಂಗ್ ಸಮಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಎಲೆಕ್ಟ್ರಿಕಲ್ ಇಂಜಿನಿಯರ್‌ಗಳು ಬಳಸಿದ EV ಬ್ಯಾಟರಿಗಳ ಮರುಬಳಕೆ ಮತ್ತು ಮರು-ಉತ್ಪಾದನೆಯಲ್ಲಿ ಪಾತ್ರವನ್ನು ವಹಿಸುತ್ತಾರೆ. ವಿದ್ಯುತ್‌ಚಾಲಿತ ವಾಹನಗಳ ಜೀವನಚಕ್ರದ ಉದ್ದಕ್ಕೂ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುತ್ತಾರೆ.


ಇವುಗಳೊಂದಿಗೆ ಇವಿಗಳ ಒಟ್ಟಾರೆ ಕಾರ್ಯಕ್ಷಮತೆ ಮತ್ತು ದಕ್ಷತೆಗೆ ಅಗತ್ಯವಾದ ಇನ್ವರ್ಟರ್‌ಗಳು, ಪರಿವರ್ತಕಗಳು, ಚಾರ್ಜರ್‌ಗಳನ್ನು ಒಳಗೊಂಡಂತೆ ಪವರ್ ಎಲೆಕ್ಟ್ರಾನಿಕ್ಸ್‌ನ ವಿನ್ಯಾಸ ಮತ್ತು ಆಪ್ಟಿಮೈಸೇಶನ್‌ನಲ್ಲಿ ಅವರ ಪರಿಣತಿಯು ಅನಿವಾರ್ಯವಾಗಿದೆ.


ಒಟ್ಟಾರೆಯಾಗಿ EV ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳಿಗೆ ಹೊಸ ವೃತ್ತಿ ಮಾರ್ಗಗಳು ಹೊರಹೊಮ್ಮುತ್ತಿವೆ. ಎಲೆಕ್ಟ್ರಿಕ್‌ ವಾಹನಗಳ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಹಾಗೆಯೇ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮುಂತಾದ ಕ್ಷೇತ್ರದಲ್ಲೂ ಅವಕಾಶಗಳು ಹೇರಳವಾಗಿವೆ.


ಇದರ ಜೊತೆಗೆ, ಬಸ್ಸುಗಳು, ರಿಕ್ಷಾಗಳು ಮತ್ತು ರೈಲುಗಳು ಸೇರಿದಂತೆ ಭಾರತದ ಸಾರ್ವಜನಿಕ ಸಾರಿಗೆಯ ವಿದ್ಯುದೀಕರಣದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

top videos
    First published: