ಭಾರತವು ಮಹಿಳಾ ಸಬಲೀಕರಣ (Empowering Women) ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯ ವಿಷಯದಲ್ಲಿ, ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ. ಸಾಮಾಜಿಕ, ಆರ್ಥಿಕ ಹಾಗೂ ತಾಂತ್ರಿಕ ಬೆಳವಣಿಗೆಗಳೊಂದಿಗೆ ಉದ್ಯೋಗ ಮಾರುಕಟ್ಟೆಯು (Job Market) ನಿರಂತರವಾಗಿ ಪ್ರಗತಿ ಕಾಣುತ್ತಿದ್ದು, ಇದು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತಿದೆ. ಕಳೆದ 50 ವರ್ಷಗಳಿಗೆ ಹೋಲಿಸಿದರೆ ನಮ್ಮ ದೇಶ ಮಹಿಳೆಯರ ಸಬಲೀಕರಣ ಮತ್ತು ಉದ್ಯೋಗದ ವಿಚಾರದಲ್ಲಿ ಬಹಳಷ್ಟು ಬೆಳವಣಿಗೆ ಕಂಡಿದೆ. ಆದರೆ, ಇದೆಲ್ಲದರ ಹೊರತಾಗಿಯೂ ಉದ್ಯೋಗ ಕ್ಷೇತ್ರದ ಪ್ರತಿ ವಲಯಗಳಲ್ಲೂ ಲಿಂಗ ತಾರತಮ್ಯವಿರುವುದು ಕಹಿ ಸತ್ಯ ಕೂಡ ಹೌದು.
ಕೆಲವು ವರ್ಷಗಳಿಂದೀಚೆ ಭಾರತದ ಉದ್ಯೋಗದ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ಕೈಗೊಳ್ಳುತ್ತಿದ್ದಾರೆ. ಇದು ಆಶಾದಾಯಕವಾಗಿದ್ದರೂ, ಸಮಾನ ಉದ್ಯೋಗಾವಕಾಶಗಳನ್ನು ಪಡೆಯಲು ಮತ್ತು ವೃತ್ತಿಯಲ್ಲಿ ವೇಗವಾಗಿ ಮುನ್ನುಗುವ ವಿಚಾರದಲ್ಲಿ ಮಹಿಳೆಯರು ಇನ್ನೂ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ, 2023ರ ವರ್ಷವು ಭಾರತದಲ್ಲಿ ಮಹಿಳಾ ವೃತ್ತಿಜೀವನದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಕಾಣುವ ಲಕ್ಷಣಗಳು ಗೋಚರಿಸುತ್ತಿದೆ.
2023ರಲ್ಲಿ ಉದ್ಯೋಗಕ್ಕೆ ಸಂಬಧಿಸಿದಂತೆ ಉಂಟಾಗುತ್ತಿರುವ ಬೆಳವಣಿಗೆಗಳು ಮತ್ತು ಸವಾಲುಗಳನ್ನು ಕುರಿತು ಉದ್ಯಮ ತಜ್ಞರು ಹೀಗೆ ಹೇಳುತ್ತಾರೆ. ಸ್ಪೇಸ್‌ಮಂತ್ರದ ಸಂಸ್ಥಾಪಕಿ ನಿಧಿ ಅಗರ್ವಾಲ್ ಅವರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಿಗೆ ವೃತ್ತಿ ಅವಕಾಶಗಳು ಗಮನಾರ್ಹ ಮಟ್ಟದಲ್ಲಿ ಸೃಷ್ಟಿಯಾಗುತ್ತಿವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆ ಮತ್ತು ಅದು ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿರುವುದುರಿಂದ ಮಹಿಳೆಯರು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ಜಾಗತಿಕವಾಗಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿದೆ.
"ಈ ಸಕಾರಾತ್ಮಕ ಬೆಳವಸಾಕಷ್ಟು ಹೊರತಾಗಿಯೂ, ವೇತನದಲ್ಲಿ ಲಿಂಗ ತಾರತಮ್ಯವಿದೆ, ಮಹಿಳಾ ಉದ್ಯಮಿಗಳಿಗೆ ಬೆಂಬಲದ ಕೊರತೆ ಇದೆ. ಜೊತೆಗೆ, ಹಣಕಾಸು ಮತ್ತು ತಂತ್ರಜ್ಞಾನದಂತಹ ಪುರುಷ-ಪ್ರಾಬಲ್ಯದ ಉದ್ಯಮಗಳಲ್ಲಿ ಮಹಿಳೆಯರನ್ನು ಹಿಮ್ಮೆಟ್ಟಿಸುವ ಸಾಂಸ್ಕೃತಿಕ ಕಟ್ಟಲೆಗಳು ಸೇರಿದಂತೆ ಇನ್ನೂ ಸಾಕಷ್ಟು ಸವಾಲುಗಳನ್ಜು ಎದುರಿಸಬೇಕಾಗಿದೆ” ಎಂದು ನಿಧಿ ಅಗರ್ವಾಲ್ ಅಭಿಪ್ರಾಯ ಪಡುತ್ತಾರೆ.
“ಈ ಸವಾಲುಗಳನ್ನು ಎದುರಿಸಲು, ಕಂಪನಿಗಳು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ, ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಸಾಕಷ್ಟು ಸಮಯ ಒದಗಿಸುವುದರೊಂದಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಬೇಕಿದೆ. ಈ ಮೂಲಕ, ಭಾರತವು ತನ್ನ ಮಹಿಳಾ ಉದ್ಯೋಗಿಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು”ಎಂದು ನಿಧಿ ಅಗರ್ವಾಲ್ ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: Career Advice: ಯಶಸ್ವಿ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಈ 7 ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು
" ಇತ್ತೀಚೆಗೆ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ. ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಇರುವ ಸಾಂಪ್ರದಾಯಿಕ ಅಡೆತಡೆಗಳನ್ನು ದಾಟಿ ಹೆಚ್ಚು ಹೆಚ್ಚು ಮಹಿಳೆಯರು ಕಾರ್ಪೊರೇಟ್ ಮತ್ತು ಸಾರ್ವಜನಿಕ ವಲಯಗಳಲ್ಲಿ ನಾಯಕತ್ವದಂತಹ ಪ್ರಮುಖ ಹುದ್ದೆಗಳಿಗೇರುತ್ತಿದ್ದಾರೆ" ಎಂದು ರಿಧಿಮಾ ವಿಶ್ಲೇಷಿಸುತ್ತಾರೆ.
ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ
ಕಾರ್ಫೋರೇಟ್ ಕ್ಷೇತ್ರ ಮಾತ್ರವಲ್ಲದೆ ಇತ್ತೀಚೆಗೆ ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಹ ಮಹಿಳೆಯರು ತಮ್ಮ ವ್ಯವಹಾರವನ್ನು ಪ್ರಾರಂಭಿಸುವ ಹಾದಿಯನ್ನು ಸುಲಭಗೊಳಿಸಿವೆ ಎಂದು ಸಹ ಅವರು ಹೇಳುತ್ತಾರೆ.
“ಭಾರತದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಮಹಿಳೆಯರು ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಸಂಬಳದ ವಿಷಯದಲ್ಲಿ ಮಾತ್ರ ಲಿಂಗ ಅಸಮಾನತೆ ಎದ್ದು ಕಾಣುತ್ತಿದೆ ಎಂಬುದು Find.Inc ನ ಸಂಸ್ಥಾಪಕ ಮತ್ತು CEO ಹರಿಯೋಮ್ ಸೇಠ್ ಅವರ ಅಭಿಪ್ರಾಯ.
ಒಟ್ಟಾರೆಯಾಗಿ, ಭಾರತದಲ್ಲಿ ಮಹಿಳೆಯರಿಗೆ ವೃತ್ತಿ ಅವಕಾಶಗಳು ಹೆಚ್ಚಾಗುತ್ತಿರುವುದೇನೋ ನಿಜ. ಆದರೆ, ಇನ್ನೂ ಸಾಕಷ್ಟು ಸವಾಲುಗಳಿವೆ. ನಾಯಕತ್ವದ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾತ್ರವಲ್ಲದೆ, ಲಿಂಗ ಆಧಾರಿತವಾದ ಸಾಂಪ್ರದಾಯಿಕ ಕಟ್ಟಲೆಗಳನ್ನು ತೊಡೆದು ಹಾಕಬೇಕಿದೆ. ಜೊತೆಗೆ ಮಹಿಳೆಯರಿಗೆ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಅವಕಾಶ ಮಾಡಿಕೊಡುವ ಮೂಲಕ ಕೆಲಸದಲ್ಲಿ ಲಿಂಗ-ಸಮಾನತೆ ಸಾಧ್ಯವಿದೆ.
ಇದಲ್ಲದೆ, ಕಂಪನಿಗಳು ಮತ್ತು ಉದ್ಯೋಗದಾತರು ಮಹಿಳೆಯರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸೂಕ್ತ ವಾತಾವರಣವನ್ನು ನಿರ್ಮಿಸಬೇಕಿದೆ. ಇವಿಷ್ಟು ಸಾಧ್ಯವಾಗುವುದಾದರೆ, ಮುಂಬರುವ ವರ್ಷಗಳಲ್ಲಿ ಭಾರತವು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಗೆ ಸಾಕ್ಷಿಯಾಗುವುದು ದೂರವೇನಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ