ಇಂದು ಉದ್ಯೋಗ ರಂಗದಲ್ಲಿ (Working Field) ವಿಫುಲ ಅವಕಾಶಗಳಿದ್ದು, (Opportunities) ಆ ಅವಕಾಶಗಳನ್ನು ಬಳಸುವ ಬುದ್ಧಿವಂತಿಕೆ ಹಾಗೂ ಅವಕಾಶಗಳನ್ನು ಸರಿಯಾಗಿ ಅನ್ವೇಷಿಸುವ ತಾಳ್ಮೆ ಇರಬೇಕು. ಮುಂದಿನ ಭವಿಷ್ಯಕ್ಕೆ ಅತ್ಯುತ್ತಮವಾಗಿರುವ ವೃತ್ತಿ ರಂಗವನ್ನು (Career) ಆಯ್ದುಕೊಳ್ಳುವುದು ಪ್ರಯಾಸವಲ್ಲದೇ ಇದ್ದರೂ ಯಾವುದು ಸ್ಥಿರವಾಗಿರುವ ವೃತ್ತಿ ಎಂಬುದನ್ನು ಹುಡುಕಾಡುವುದು ಅತ್ಯವಶ್ಯಕವಾಗಿದೆ.
ಕೋವಿಡ್ನ ನಂತರ ಸಂಸ್ಥೆಗಳು ಉದ್ಯೋಗಿಗಳ ವಜಾಗೊಳಿಸುವಿಕೆಯಂತಹ (Layoff) ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿರುವುದರಿಂದ ಆಯ್ದುಕೊಂಡಿರುವ ಉದ್ಯೋಗ ಅಥವಾ ವೃತ್ತಿ ಮುಂದಿನ ಭವಿಷ್ಯಕ್ಕೆ ಸ್ಥಿರವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಬೇಡಿಕೆಯ ಕ್ಷೇತ್ರವಾಗಿರುವ ಆಭರಣ ವಿನ್ಯಾಸ ಕ್ಷೇತ್ರ
ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ತಮಗೆ ಸೂಕ್ತವಾಗಿರುವ ವೃತ್ತಿ ಯಾವುದು ಎಂಬ ಗೊಂದಲದಲ್ಲಿರುವುದು ಸಹಜವಾಗಿದೆ. ಯಾವ ವೃತ್ತಿ ತಮಗೆ ಸೂಕ್ತ, ಯಾವ ರಂಗದಲ್ಲಿ ಒಳ್ಳೆಯ ಬೇಡಿಕೆ ಇದೆ ಎಂಬ ಯೋಚನೆ ಕಾಡುತ್ತಿರುತ್ತದೆ.
ಈ ಸಮಯದಲ್ಲಿ ಅವರಿಗೆ ಉತ್ತಮ ಮಾರ್ಗದರ್ಶನ ಹಾಗೂ ಸಲಹೆಯ ಅಗತ್ಯವಿರುತ್ತದೆ. ಇಂದಿನ ಲೇಖನದಲ್ಲಿ ಬೇಡಿಕೆಯ ಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ಆಭರಣ ವಿನ್ಯಾಸದ ಬಗ್ಗೆ ಕೆಲವೊಂದನ್ನು ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಟ್ರೆಂಡ್ಗೆ ಅನುಸಾರವಾಗಿ ವಿನ್ಯಾಸಗಳ ರಚನೆ
ಆಭರಣ ವಿನ್ಯಾಸ ಇಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆಯ ವೃತ್ತಿರಂಗವಾಗಿ ಬೆಳೆಯುತ್ತಿದೆ. ಆಭರಣಗಳನ್ನು ಉಡುಗೊರೆಯಾಗಿ ನೀಡುವುದು, ಹಬ್ಬ ಹರಿದಿನ ಅಂತೆಯೇ ವಿಶೇಷ ದಿನಗಳಲ್ಲಿ ಖರೀದಿಸುವುದು ಸಾಮಾನ್ಯಾಗಿದೆ.
ಈ ಸಮಯದಲ್ಲಿ ಟ್ರೆಂಡ್ಗೆ ಅನುಸಾರವಾಗಿ ಆಭರಣಗಳನ್ನು ವಿನ್ಯಾಸ ಮಾಡುವ ಕಲೆ ಒಲಿಸಿಕೊಳ್ಳುವುದು ಸೂಕ್ತವಾಗಿದೆ. ಆಕರ್ಷಕ ವಿನ್ಯಾಸವು ಹೆಚ್ಚಿನ ಆಭರಣ ಪ್ರಿಯರ ಮನಸ್ಸಿಗೆ ಮುದ ನೀಡುತ್ತದೆ. ಹಾಗಾಗಿ ಆಭರಣ ವಿನ್ಯಾಸಗಳ ಬಗ್ಗೆ ತರಬೇತಿ ಪಡೆದುಕೊಳ್ಳುವುದು ಉತ್ತಮವಾಗಿದೆ.
ಆಭರಣ ವಿನ್ಯಾಸಕರು ಸೃಜನಶೀಲತೆ ಹಾಗೂ ಕರಕುಶಲತೆಯ ಜ್ಞಾನವನ್ನು ಬಳಸಿಕೊಂಡು ಆಭರಣಗಳನ್ನು ನಿರ್ಮಿಸುತ್ತಾರೆ. ಗ್ರಾಹಕರನ್ನು ಆಕರ್ಷಿಸಲು ವೈವಿಧ್ಯಮಯವಾದ ವಿನ್ಯಾಸಗಳನ್ನು ವಿನ್ಯಾಸಕಾರರು ಪ್ರಯೋಗಿಸುತ್ತಾರೆ.
ಆಭರಣ ವಿನ್ಯಾಸಕಾರರಾಗಿ ಜವಬ್ದಾರಿಗಳು
ಆಭರಣ ವಿನ್ಯಾಸಕಾರರು ಕೆಲವೊಂದು ಜವಬ್ದಾರಿಗಳನ್ನು ಹೊಂದಿದ್ದು, ವಿನ್ಯಾಸಗಳನ್ನು ಮಾಡುವ ಸಮಯದಲ್ಲಿ ಇವುಗಳನ್ನು ಅನುಸರಿಸಬೇಕು.
1) ವಿನ್ಯಾಸಗಳನ್ನು ರಚಿಸಲು ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಕೈಯಲ್ಲಿ ಬಿಡಿಸಿದ ವಿನ್ಯಾಸಗಳನ್ನು ಮೊದಲು ಆಯ್ದುಕೊಳ್ಳಬೇಕು.
2) ಗ್ರಾಹಕರ ಆಯ್ಕೆ ಹಾಗೂ ಟ್ರೆಂಡ್ಗೆ ಅನುಸಾರವಾಗಿ ಆಭರಣಗಳ ವಿನ್ಯಾಸಗಳನ್ನು ಮಾಡಬೇಕು.
3) ಗ್ರಾಹಕರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುವುದು ಉತ್ತಮವಾಗಿರುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಕಾರರು ಆಭರಣ ವಿನ್ಯಾಸಗಳನ್ನು ಮಾಡಬೇಕು.
4) ವಿನ್ಯಾಸಗಳನ್ನು ಪ್ರದರ್ಶಿಸುವ ಮುನ್ನ ಅದಕ್ಕೆ ತಕ್ಕಂತೆ ಬಜೆಟ್ಗಳನ್ನು ಹೊಂದಿಸಿ.
5) ಸರಿಯಾದ ಪರಿಕರಗಳು ಹಾಗೂ ಗುಣಮಟ್ಟದ ಅಂಶಗಳನ್ನು ಬಳಸಿಕೊಂಡು ವಿನ್ಯಾಸಗಳನ್ನು ನಿರ್ಮಿಸಿ.
6) ಸಮಯಕ್ಕೆ ಸರಿಯಾಗಿ ಮಾರ್ಗಸೂಚಿಗಳನ್ನು ಅನುಸರಿಸಿ ವಿನ್ಯಾಸಗಳನ್ನು ನಿರ್ಮಿಸಿದ್ದೀರಿ ಎಂಬುದನ್ನು ಖಚಿತಪಡಿಸಿ.
ಆಭರಣ ವಿನ್ಯಾಸಕಾರರಾಗುವುದು ಹೇಗೆ?
ಬ್ಯಾಚುಲರ್ ಡಿಗ್ರಿ ಪಡೆಯಿರಿ
ಆಭರಣ ವಿನ್ಯಾಸದಲ್ಲಿ ಬ್ಯಾಚುಲರ್ ಡಿಗ್ರಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಪದವಿಯಲ್ಲಿ ಆಭರಣ ವಿನ್ಯಾಸ, ಆ್ಯಕ್ಸೆಸರಿಗಳ ವಿನ್ಯಾಸದ ಬಗ್ಗೆ ವಿಷಯಗಳಿರುತ್ತವೆ. ಬೇರೆ ಬೇರೆ ವಿನ್ಯಾಸ ತಂತ್ರಗಳನ್ನು ಅರಿತುಕೊಳ್ಳಲು ಈ ಪದವಿ ಸಹಾಯ ಮಾಡುತ್ತದೆ. ಸಂಸ್ಥೆಯ ನುರಿತ ವೃತ್ತಿಪರರನ್ನು ಸಂಪರ್ಕಿಸಲು ನೆರವಾಗಲಿದೆ. ವೃತ್ತಿ ಕ್ಷೇತ್ರದ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದು.
ಕಲಿಕೆಯ ನಂತರ ವಿನ್ಯಾಸಗಳನ್ನು ಅಭ್ಯಸಿಸುವುದು
ಈ ಕ್ಷೇತ್ರದಲ್ಲಿ ನೀವು ಹೊಸಬರಾಗಿದ್ದರೆ ಶಿಕ್ಷಣ ಮುಗಿಸಿದೊಡನೆ ಪಾರ್ಟ್ ಟೈಮ್ ವೃತ್ತಿಯಲ್ಲಿ ವಿನ್ಯಾಸಗಳ ಬಗ್ಗೆ ಅಭ್ಯಸಿಸಬಹುದು. ಈ ಉದ್ಯೋಗ ಅನುಭವವನ್ನು ನಿಮ್ಮ ರೆಸ್ಯೂಮೆಯಲ್ಲಿ ಸೇರಿಸಿಕೊಳ್ಳಿ. ಸಮಯ ಸಿಕ್ಕಾಗಲೆಲ್ಲಾ ನಿಮ್ಮದೇ ವಿನ್ಯಾಸ ರಚನೆಗಳನ್ನು ಅಭ್ಯಸಿಸುತ್ತಿರಿ.
ನಿಮ್ಮ ವೃತ್ತಿ ಸಂಪರ್ಕವನ್ನು ಬೆಳೆಸಿಕೊಳ್ಳಿ
ಆಭರಣ ವಿನ್ಯಾಸ ಎಂಬುದು ಸಹಯೋಗದೊಂದಿಗೆ ನಡೆಸುವ ಉದ್ಯಮವಾಗಿದೆ. ಈ ರಂಗದಲ್ಲಿ ಸೃಜನಶೀಲ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವುದು ಈ ರಂಗದಲ್ಲಿ ನಿಪುಣರಾಗಲು ಸಹಕಾರಿಯಾಗಿದೆ. ಉದ್ಯಮ ರಂಗದ ಬಗ್ಗೆ ಇನ್ನಷ್ಟು ಆಳವಾದ ಮಾಹಿತಿ ಪಡೆಯಲು ಸಹಕಾರಿಯಾಗಿದೆ. ಬೇರೆ ಬೇರೆ ಆರ್ಡರ್ಗಳನ್ನು ಪಡೆಯಲು ಈ ಸಂಪರ್ಕಗಳು ನೆರವಾಗಲಿವೆ.
ಉನ್ನತ ಕಂಪನಿಗಳು
ವಿನ್ಯಾಸ ರಂಗದಲ್ಲಿ ಇತ್ತೀಚೆಗೆ ಹೆಚ್ಚಿನ ಸ್ಪರ್ಧೆಗಳಿದ್ದು ಬೇರೆ ಬೇರೆ ಅನುಭವಿಗಳ ಅಗತ್ಯತೆಯನ್ನು ಕಂಪನಿಗಳು ಹೊಂದಿರುತ್ತವೆ. ಕೆಲವೊಂದು ಉನ್ನತ ಕಂಪನಿಗಳು ಆಭರಣ ವಿನ್ಯಾಸಕಾರರನ್ನು ನೇಮಿಸಿಕೊಳ್ಳುತ್ತವೆ. ಆ ಸಂಸ್ಥೆಗಳು ಹೀಗಿವೆ.
ಇಲ್ಲಿ ನೀವು ಪೂರ್ಣಪ್ರಮಾಣದ ಉದ್ಯೋಗಿಯಾಗಿ ಸೇರಿಕೊಳ್ಳಬಹುದು.
ಕಲ್ಯಾಣ್ ಜ್ಯುವೆಲರ್ಸ್
ಪಿಸಿ ಚಂದ್ರ ಜ್ಯುವೆಲರ್ಸ್
ತನಿಷ್ಕ್
ಮಲಬಾರ್ ಗ್ರೂಪ್
ಜ್ಯುವೆಲ್ ಬಾರ್
ಡಯಾನಿ ಜ್ಯುವೆಲ್ಸ್
ಆಭರಣ ವಿನ್ಯಾಸಕಾರರು ಆಭರಣ ತಯಾರಿ ಹಾಗೂ ವಿನ್ಯಾಸ ಎರಡರಲ್ಲೂ ಪ್ರಾವೀಣ್ಯತೆಯನ್ನು ಪಡೆದುಕೊಂಡಿರುತ್ತಾರೆ. ಆಭರಣ ವಿನ್ಯಾಸ ಪ್ರಕ್ರಿಯೆ ಕಷ್ಟಕರವಾಗಿದ್ದರೂ ಈಗೀಗ ಕೆಲವೊಂದು ಸಾಫ್ಟ್ವೇರ್ಗಳ ಸಹಾಯದಿಂದ ಇದನ್ನು ಸುಲಭವಾಗಿ ಅರಿತುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ