ಐಟಿ (IT) ಸೇವಾ ವಲಯ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆ ಆರ್ಥಿಕವಾಗಿ ಭರಪೂರ ಕೊಡುಗೆ ನೀಡುತ್ತಿದೆ. ಭಾರತದ ಐಟಿ ಕ್ಷೇತ್ರದಲ್ಲಿಯೂ ಗಣನೀಯ ಬದಲಾವಣೆಗಳಾಗಿದ್ದು, ವಿಶ್ವದ ಡಿಜಿಟಲ್ ಪ್ರತಿಭೆಗಳ ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳು ಉಲ್ಬಣಗೊಂಡಿವೆ. ಐಟಿ ವಲಯ ಅಂದರೆ ಹೆಚ್ಚಿನ ಜನಕ್ಕೆ ಹೆಚ್ಚು ಸಂಬಳ (Salary) ಎಂಬ ನಿರೀಕ್ಷೆ ಇದೆ. ಈ ನಿರೀಕ್ಷೆ ಹೆಚ್ಚಿನವರನ್ನು ಐಟಿ ಕ್ಷೇತ್ರಕ್ಕೆ ಕರೆತರುತ್ತಿದೆ. ಐಟಿ ಕ್ಷೇತ್ರ ಪ್ರಸ್ತುತ ಈಗ ಕೋರ್ಸ್‌ಗಳಿಗೆ (Course), ಸ್ಕಿಲ್‌ಗಳಿಗೆ ಆದ್ಯತೆ ನೀಡುತ್ತಿದ್ದು, ಇಂತಹ ಪ್ರತಿಭೆ ಇದ್ದವರಿಗೆ ಕ್ಷೇತ್ರದಲ್ಲಿ ಕೆಲಸ ಖಾತರಿ ಎನ್ನುವಂತಾಗಿದೆ. ಐಟಿ ವಲಯದಲ್ಲಿ ಒಳ್ಳೆ ಸಂಬಳ ಪಡೆಯಬೇಕು ಅಂದರೆ ಪದವಿ ಜೊತೆ ಕೋರ್ಸ್, ಸ್ಕಿಲ್ ಕಲಿಯುವುದು ಈಗ ಮುಖ್ಯವಾಗಿದೆ.
ಹೀಗೆ ಹೆಚ್ಚು ಸಂಬಳದ ಉದ್ಯೋಗಗಳನ್ನು ಬಯಸುವ ವಿದ್ಯಾರ್ಥಿಗಳು ದೇಶದಲ್ಲಿ ಲಭ್ಯವಿರುವ ವಿವಿಧ ಉನ್ನತ ಐಟಿ ಕೋರ್ಸ್‌ಗಳೊಂದಿಗೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ಈಗಷ್ಟೇ ಪಿಯುಸಿ ಮುಗಿಸಿದವರಿಗೂ ಈ ಕೋರ್ಸ್‌ಗಳು ಉತ್ತಮವಾಗಿದ್ದು, ಮುಂದಿನ ವೃತ್ತಿ ಭವಿಷ್ಯಕ್ಕೆ ಅಡಿಪಾಯವಾಗಲಿವೆ.
ಪಿಯುಸಿ ನಂತರ ಆಯ್ಕೆ ಮಾಡಿಕೊಳ್ಳಬಹುದಾದ ಐಟಿ ಕೋರ್ಸ್‌ಗಳು
ಬ್ಯುಸಿನೆಸ್ ಇಂಟಲಿಜೆನ್ಸ್ (BI)
ಇಂದಿನ ತಂತ್ರಜ್ಞಾನ-ಚಾಲಿತ ಆರ್ಥಿಕತೆಯಲ್ಲಿ ಡೇಟಾ-ಚಾಲಿತ ನಿರ್ಧಾರಗಳನ್ನು ಮಾಡುವಲ್ಲಿ BI ಮುಖ್ಯವಾಗಿದ್ದು, ಉದ್ಯಮಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.
ಬಿಸಿನೆಸ್ ಇಂಟೆಲಿಜೆನ್ಸ್ ಎನ್ನುವುದು ವ್ಯವಹಾರ ಬುದ್ಧಿಮತ್ತೆಗಾಗಿ ಡೇಟಾವನ್ನು ಹಿಂಪಡೆಯಲು, ವಿಶ್ಲೇಷಿಸಲು, ಪರಿವರ್ತಿಸಲು ಮತ್ತು ವರದಿ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಕಂಪನಿಗಳು ಅಗತ್ಯವಾಗಿ ಇದಕ್ಕೆ ಸಂಬಂಧಿಸಿದಂತೆ ನೇಮಕಾತಿಗಳನ್ನು ಮಾಡಿಕೊಳ್ಳುತ್ತವೆ.
ಕಂಪನಿಗಳಲ್ಲಿ ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಉದ್ಯೋಗವಕಾಶ ಕೂಡ ಹೆಚ್ಚಿವೆ. ಹೀಗಾಗಿ ದ್ವಿತೀಯ ಪಿಯುಸಿ ನಂತರ ಐಟಿ ವಲಯದಲ್ಲಿ ಕೋರ್ಸ್ ಮಾಡುವವರಿಗೆ ಇದು ಉತ್ತಮ ಕೋರ್ಸ್ ಆಗಿದೆ.
ಇದನ್ನೂ ಓದಿ: ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಸೋಲೇ ಗೆಲುವಿನ ಸೋಪಾನ, ದುಡುಕದೆ ನಡೆ ನೀ ಜೋಪಾನ!
ಬಿಐನಲ್ಲಿ ಐಟಿ ಕೋರ್ಸ್ ಮೂಲಕ, ಡೇಟಾ ಯೋಜನೆ, ಮೆಟಾಡೇಟಾ ಸಿಸ್ಟಮ್ಸ್ ಡೆವಲಪ್‌ಮೆಂಟ್, ಇಆರ್‌ಪಿ, ಸಿಸ್ಟಮ್‌ಗಳ ವಿಶ್ಲೇಷಣೆ, ಪ್ರೋಗ್ರಾಮಿಂಗ್ ಮತ್ತು ತಂತ್ರಜ್ಞಾನ ನಿರ್ವಹಣೆಯಲ್ಲಿ ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
ಬಿಗ್ ಡೇಟಾ ಮತ್ತು ಡೇಟಾ ಸೈನ್ಸ್
ಇದು ಪ್ರತಿ ಕಂಪನಿಯೂ, ಕ್ಷೇತ್ರವೂ ಅಳವಡಿಕೊಳ್ಳುವ ಒಂದು ಸೇವೆಯಾಗಿದ್ದು, ಉದ್ಯೋಗವಕಾಶಗಳು ಸಹ ಹೇರಳವಾಗಿವೆ. ಬಿಗ್ ಡೇಟಾ ಮತ್ತು ಡೇಟಾ ಸೈನ್ಸ್ ಕೋರ್ಸ್‌ಗಳನ್ನು ಹೊಂದಿರುವ ಅಭ್ಯರ್ಥಿಗಳು ಡೇಟಾ ಸೈಂಟಿಸ್ಟ್, ಎಂಎಲ್ ಇಂಜಿನಿಯರ್, ಡೇಟಾ ವಿಶ್ಲೇಷಕ, ಉತ್ಪನ್ನ ವಿಶ್ಲೇಷಕ, ವ್ಯಾಪಾರ ವಿಶ್ಲೇಷಕ ಮತ್ತು ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡಬಹುದು. ಹೀಗಾಗಿ ದ್ವಿತೀಯ ಪಿಯುಸಿ ನಂತರ ಐಟಿ ವಲಯದಲ್ಲಿ ಕೆಲಸ ಮಾಡ ಬಯಸುವವರು ಈ ಕೋರ್ಸ್ ಅನ್ನು ಆಯ್ಕೆಯಾಗಿಸಿಕೊಳ್ಳಬಹುದು.
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವ್ಯಾಪಾರ ಬೆಳವಣಿಗೆಯ ತಂತ್ರಗಳು, ಮಾರ್ಕೆಟಿಂಗ್ ತಂತ್ರಗಳು, ನಾಯಕತ್ವ, ರಚನಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಪರಸ್ಪರ ಮತ್ತು ಸಂವಹನ ಕೌಶಲ್ಯಗಳು, ಕಾರ್ಯತಂತ್ರದ ಚಿಂತನೆ ಮತ್ತು ಇತರ ಪರಿಕಲ್ಪನೆಗಳನ್ನು ಕಲಿಸುತ್ತವೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ಮೇ 2ನೇ ತಾರೀಖಿನೊಳಗೆ ಅಪ್ಲೈ ಮಾಡಿ
ಈ ಕೋರ್ಸ್ ಮೂಲಕ ಐಟಿ ಉದ್ಯಮದಲ್ಲಿ ಅಸೋಸಿಯೇಟ್ ಪ್ರಾಜೆಕ್ಟ್ ಮ್ಯಾನೇಜರ್, ಸರ್ಟಿಫೈಡ್ ಪ್ರಾಜೆಕ್ಟ್ ಮ್ಯಾನೇಜರ್, ಸರ್ಟಿಫೈಡ್ ಪ್ರಾಜೆಕ್ಟ್ ಡೈರೆಕ್ಟರ್ ಇತ್ಯಾದಿ ಹುದ್ದೆಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಬ್ಬರಿಗೂ ಈ ಕೋರ್ಸ್ ಸೂಕ್ತವಾಗಿದೆ.
ವೆಬ್ ಡೆವಲಪ್‌ಮೆಂಟ್
ಪಿಯುಸಿ ಮುಗಿದ ನಂತರ ವೆಬ್ ಡೆವಲಪ್‌ಮೆಂಟ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆರಿಸಿಕೊಳ್ಳಬಹುದು. ವೆಬ್ ಡೆವಲಪ್‌ಮೆಂಟ್ ಅಥವಾ ವೆಬ್ ಡಿಸೈನರ್ ಕೋರ್ಸ್‌ಗಳಿಗೆ HTML, CSS ಮತ್ತು JS ನಲ್ಲಿ ಹೆಚ್ಚಿನ ಜ್ಞಾನದ ಅಗತ್ಯವಿದೆ.
ಇದಕ್ಕೆ ಸಂಬಂಧ ಪಟ್ಟ ಕೋರ್ಸ್‌ಗಳು ನಿಮಗೆ ಈ ಕುರಿತಾಗಿ ಹೆಚ್ಚಿನ ಜ್ಞಾನ ನೀಡುತ್ತವೆ ಮತ್ತು ಭವಿಷ್ಯದಲ್ಲಿ ಕೆಲಸ ಪಡೆಯಲು ಸಹ ಸಹಾಯ ಮಾಡುತ್ತವೆ. ಈ ಕೋರ್ಸ್‌ಗಳ ಸಹಾಯದಿಂದ, ವಿದ್ಯಾರ್ಥಿಗಳು ಸ್ಕೇಲೆಬಲ್ ವೆಬ್‌ಸೈಟ್‌ಗಳು, ಬ್ಯಾಕ್-ಎಂಡ್ API ಗಳು ಮತ್ತು ವೆಬ್ UI ಗಳನ್ನು ನಿರ್ಮಿಸಲು ಕಲಿಯುತ್ತಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಯಾವ ಜಿಲ್ಲೆಗೆ ಯಾವ ಸ್ಥಾನ? ಇಲ್ಲಿದೆ ಲಿಸ್ಟ್
ವೆಬ್ ಅಭಿವೃದ್ಧಿ ಅಥವಾ ಡಿಸೈನರ್ ಕೋರ್ಸ್‌ಗಳು ಆನ್‌ಲೈನ್‌ನಲ್ಲಿಯೂ ಲಭ್ಯವಿದೆ. ಅಡೋಬ್, ಗೂಗಲ್, ಝೆಂಡ್ ಮತ್ತು ಮೈಕ್ರೋಸಾಫ್ಟ್‌ನಂತಹ ಹೆಚ್ಚು ಪ್ರತಿಷ್ಠಿತ ಕಂಪನಿಗಳು ವೆಬ್ ಡೆವಲಪರ್‌ಗಳು, ಪಿಎಚ್‌ಪಿ ಎಂಜಿನಿಯರ್‌ಗಳಿಗಾಗಿ ವೈಯಕ್ತಿಕ-ಪ್ರಮಾಣೀಕೃತ ಕೋರ್ಸ್‌ಗಳನ್ನು ನಡೆಸುತ್ತವೆ.
ಸಾಫ್ಟ್‌ವೇರ್ ಡೆವಲಪ್‌ಮೆಂಟ್
ಈಗಂತೂ ಎಲ್ಲದಕ್ಕೂ ಸಾಫ್ಟ್‌ವೇರ್. ಟೆಕ್ ಲೋಕದಲ್ಲಿ ಸಾಫ್ಟ್‌ವೇರ್ ಪಾತ್ರ ತುಂಬಾ ದೊಡ್ಡದು. ವಲಯದಲ್ಲಿ ಪೈಥಾನ್, ಜಾವಾ, C#, R, SAS, Scala, Swift, JavaScript ಮತ್ತು ಟೈಪ್‌ಸ್ಕ್ರಿಪ್ಟ್ ಹೆಚ್ಚು ಬೇಡಿಕೆಯಲ್ಲಿರುವ ಪ್ರೋಗ್ರಾಮಿಂಗ್ ಭಾಷೆಗಳಾಗಿವೆ.
ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಐಟಿ ವೃತ್ತಿಪರರು ಪ್ರೋಗ್ರಾಮಿಂಗ್ ಕೌಶಲ್ಯಗಳಿಗೆ ಒತ್ತು ನೀಡಬೇಕು. ವಿದ್ಯಾರ್ಥಿಗಳು ಸಹ ಮುಂದೆ ಇಲ್ಲಿ ಕೆಲಸ ಮಾಡಬೇಕು ಅಂತಿದ್ದರೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ನಂತಹ ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ