• Home
  • »
  • News
  • »
  • jobs
  • »
  • Career After 10th: SSLC ಬಳಿಕ ಈ 4 ಕೋರ್ಸ್​ಗಳನ್ನು ಮಾಡಿದವರಿಗೆ ಬೇಗ ಕೆಲಸ ಸಿಗುತ್ತೆ

Career After 10th: SSLC ಬಳಿಕ ಈ 4 ಕೋರ್ಸ್​ಗಳನ್ನು ಮಾಡಿದವರಿಗೆ ಬೇಗ ಕೆಲಸ ಸಿಗುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

10 ನೇ ತರಗತಿಯ ನಂತರ ಉದ್ಯೋಗವನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಹಲವಾರು ಅಲ್ಪಾವಧಿಯ ಕೋರ್ಸ್ ‌ಗಳು ಇವೆ.

  • Share this:

ಅನಿವಾರ್ಯ ಕಾರಣಗಳಿಂದ ಹಲವು ವಿದ್ಯಾರ್ಥಿಗಳಿಗೆ (Students) ಶಾಲಾ ಶಿಕ್ಷಣದ (School Education) ಬಳಿಕ ಉನ್ನತ ಶಿಕ್ಷಣ (Higher Education) ಪಡೆಯುವುದು ಸಾಧ್ಯವಾಗುವುದಿಲ್ಲ. ಇನ್ನು ಕೆಲವರು SSLC ಬಳಿಕ ಓದನ್ನು ನಿಲ್ಲಿಸಿ ಬಿಡುತ್ತಾರೆ. ಒಂದಷ್ಟು ವರ್ಷಗಳ ಬಳಿಕ ಮತ್ತೆ ಓದಬೇಕು ಎಂಬ ಬಯಕೆ ಆಗುತ್ತೆ. ಅಂಥವರು ಕೂಡ ಒಂದೊಳ್ಳೆಯ ವೃತ್ತಿಯನ್ನು ರೂಪಿಸಿಕೊಳ್ಳಬಹುದು. 10ನೇ ಕ್ಲಾಸ್​ ಪಾಸ್​ ಆದವರಿಗೆ ಹಲವು ವೃತ್ತಿ ಆಯ್ಕೆಗಳು ಲಭ್ಯವಿವೆ. 10 ನೇ ತರಗತಿಯ ನಂತರ ಉದ್ಯೋಗವನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಹಲವಾರು ಅಲ್ಪಾವಧಿಯ ಕೋರ್ಸ್ ‌ಗಳು ಇವೆ. ಈ ಕೋರ್ಸ್​ಗಳ ಮೂಲಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೋಗಬಹುದು.


ಈ ಅಲ್ಪಾವಧಿಯ ಕೋರ್ಸ್‌ ಗಳನ್ನು (Professional Courses)ಮಾಡಲು ನೀವು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಈ ಕೋರ್ಸ್‌ ಗಳನ್ನು ಮಾಡಿದ ಬಳಿಕ ಆರಂಭದಲ್ಲೇ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಮಾಡಬಹುದು. ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ವಿದ್ಯಾರ್ಥಿಗಳು ಹಣಕಾಸಿನ ಸ್ಥಿತಿಯಿಂದ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಅಲ್ಪಾವಧಿಯ ಕೋರ್ಸ್‌ಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು.


ಡಿಪ್ಲೊಮಾ ಇನ್ ಆರ್ಟ್ ಟೀಚರ್


ಇದು 6 ತಿಂಗಳ ಕೋರ್ಸ್ ಆಗಿದೆ. ಈ ಕೋರ್ಸ್‌ನಲ್ಲಿ, ವಿದ್ಯಾರ್ಥಿಗಳಿಗೆ ಹೇಗೆ ಕಲಿಸಬೇಕೆಂದು ಕಲಿಸಲಾಗುತ್ತದೆ. ಈ ಕೋರ್ಸ್ 10 ನೇ ತರಗತಿ ಓದಿದವರಿಗೆ ಉತ್ತಮ ಆಯ್ಕೆಯಾಗಿದೆ. ಬೋಧನಾ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆ. ಖಾಸಗಿ ಸಂಸ್ಥೆಗಳಲ್ಲಿ ಈ ಕೋರ್ಸ್‌ ಗೆ ಬೇಡಿಕೆ ಹೆಚ್ಚಿದೆ.




ಸ್ಟೆನೋಗ್ರಫಿಯಲ್ಲಿ ಡಿಪ್ಲೊಮಾ


ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಸ್ಟೆನೋಗ್ರಫಿ ಕೋರ್ಸ್ ಮಾಡಬಹುದು. ಸ್ಟೆನೋಗ್ರಫಿಗೆ ಸರ್ಕಾರಿ ನೇಮಕಾತಿಗಳೂ ಬರುತ್ತಲೇ ಇರುತ್ತವೆ. ಅಲ್ಲಿಯೂ ಅರ್ಜಿ ಸಲ್ಲಿಸಬಹುದು. ಈ ಕೋರ್ಸ್‌ನಲ್ಲಿ ಸ್ಟೆನೋಗ್ರಫಿ ಜೊತೆಗೆ ಕಂಪ್ಯೂಟರ್ ಮತ್ತು ಟೈಪಿಂಗ್ ಕಲಿಸಲಾಗುತ್ತದೆ. ಅದರ ನಂತರ ಯಾವುದೇ ಬಹುರಾಷ್ಟ್ರೀಯ ಕಂಪನಿಯಲ್ಲಿ 20 ರಿಂದ 25 ಸಾವಿರ ರೂಪಾಯಿಗಳ ಉದ್ಯೋಗವು ಆರಂಭದಲ್ಲಿ ಲಭ್ಯವಿದೆ.


 ಲಲಿತಕಲೆಯಲ್ಲಿ ಡಿಪ್ಲೊಮಾ


ಇದು ಸರ್ಟಿಫಿಕೇಟ್ ಕೋರ್ಸ್. 10ನೇ ತರಗತಿ ನಂತರ ಇದನ್ನು ಮಾಡಬಹುದು. ಈ ಕೋರ್ಸ್‌ಗಳು 6 ತಿಂಗಳಿಂದ ಒಂದು ವರ್ಷದವರೆಗೆ ಇರುತ್ತದೆ. ಈ ಕೋರ್ಸ್ ಮಾಡಿದ ನಂತರ, ಗ್ರಾಫಿಕ್ ಡಿಸೈನರ್, ಆರ್ಟ್ ಟೀಚರ್, ಫ್ಲ್ಯಾಶ್ ಆನಿಮೇಟರ್, ಆರ್ಟ್ ಲೈಸನ್ ಆಫೀಸರ್ ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ವಿದ್ಯಾರ್ಥಿಗಳು 25 ರಿಂದ 30 ಸಾವಿರ ರೂಪಾಯಿಗೆ ಈ ಕೋರ್ಸ್ ಮಾಡಬಹುದು. ನೀವು ಈ ಕ್ಷೇತ್ರದಲ್ಲಿ ಪದವಿಯನ್ನೂ ತೆಗೆದುಕೊಳ್ಳಬಹುದು.


Job Alert apply for various posts in institute of fashion technology
ಸಾಂದರ್ಭಿಕ ಚಿತ್ರ


ಡಿಸೈನರ್​  


ಫ್ಯಾಷನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಗ್ರಾಫಿಕ್ಸ್ ಡಿಸೈನಿಂಗ್ ಅಥವಾ ಜ್ಯುವೆಲ್ಲರಿ ಡಿಸೈನಿಂಗ್ ನಂತಹ ಯಾವುದೇ ರೀತಿಯ ಶಿಕ್ಷಣಕ್ಕಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಡಿಪ್ಲೊಮಾ ಇನ್ ಡಿಸೈನಿಂಗ್ ಕೋರ್ಸ್‌ಗಳು ಲಭ್ಯವಿದೆ. ಅಂತಹ ಕೋರ್ಸ್ ನಂತರ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು ಅಥವಾ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆಯಬಹುದು.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು