• ಹೋಂ
 • »
 • ನ್ಯೂಸ್
 • »
 • jobs
 • »
 • Robotics Industry: ರೋಬೊಟಿಕ್ಸ್ ಕ್ಷೇತ್ರದಲ್ಲಿ ವೃತ್ತಿ ಪ್ರಾರಂಭಿಸಲು ಇಲ್ಲಿವೆ ಹಲವು ಉತ್ತಮ ಮಾರ್ಗಗಳು

Robotics Industry: ರೋಬೊಟಿಕ್ಸ್ ಕ್ಷೇತ್ರದಲ್ಲಿ ವೃತ್ತಿ ಪ್ರಾರಂಭಿಸಲು ಇಲ್ಲಿವೆ ಹಲವು ಉತ್ತಮ ಮಾರ್ಗಗಳು

ರೋಬೋಟಿಕ್ ತಂತ್ರಜ್ಞಾನ

ರೋಬೋಟಿಕ್ ತಂತ್ರಜ್ಞಾನ

ಸುರಕ್ಷಿತ ಹಾಗೂ ಸುಭದ್ರ ಭವಿಷ್ಯವನ್ನು ಪರಿಗಣನೆಗೆ ತೆಗೆದುಕೊಂಡಾಗ ರೋಬೊಟಿಕ್ಸ್ ಒಂದು ಅದ್ಭುತ ಅವಕಾಶವಾಗಿ ಕಾಣುತ್ತದೆ. ಈ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿದರೆ ನಿಜಕ್ಕೂ ಅದು ಒಂದು ಒಳ್ಳೆಯ ನಿರ್ಧಾರವಾಗುವುದರಲ್ಲಿ ಸಂಶಯವೇ ಇಲ್ಲ.

 • Trending Desk
 • 4-MIN READ
 • Last Updated :
 • Bangalore, India
 • Share this:

ಇಂದು ಉತ್ತಮ ಭವಿಷ್ಯ (Career Guidance) ಹಾಗೂ ಅದ್ಭುತ ಬುನಾದಿ ನೀಡುವಂತಹ ಸಾಮರ್ಥ್ಯವಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ ರೋಬೊಟಿಕ್ಸ್ (Robotics) ಸಹ ಒಂದು. ಇಂದಿನ ಪ್ರತಿನಿತ್ಯದ ರೂಢಿಯಲ್ಲಿರುವ ಸಾಕಷ್ಟು ಕೆಲಸ ಹಾಗೂ ಸೇವೆಗಳನ್ನು ರೋಬೊಟಿಕ್ಸ್‌ನೊಂದಿಗೆ ಸಂಪರ್ಕಿಸಬಹುದಾಗಿದೆ. ಅತಿ ಸೂಕ್ಷ್ಮ ಎನ್ನಬಹುದಾದ ಔಷಧಿ-ಮಾತ್ರೆಗಳ ತಯಾರಿಕೆಯಿಂದ ಹಿಡಿದು ನಮ್ಮೆಲ್ಲರ ಕೈಯಲ್ಲಿ ಅವಶ್ಯಕವಾಗಿ ಇರಬೇಕಾಗಿರುವ ಮೊಬೈಲ್ ಫೋನಿನ ಪ್ರೊಸೆಸ್ಸರ್‌ವರೆಗೆ ಎಲ್ಲ ಹಂತಗಳಲ್ಲೂ ರೋಬೊಟಿಕ್ಸ್ ತನ್ನ ಬಾಹುಗಳನ್ನು ಚಾಚಿದೆ.


ಹಾಗಾಗಿ ಸುರಕ್ಷಿತ ಹಾಗೂ ಸುಭದ್ರ ಭವಿಷ್ಯವನ್ನು ಪರಿಗಣನೆಗೆ ತೆಗೆದುಕೊಂಡಾಗ ರೋಬೊಟಿಕ್ಸ್ ಒಂದು ಅದ್ಭುತ ಅವಕಾಶವಾಗಿ ಕಾಣುತ್ತದೆ. ಈ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿದರೆ ನಿಜಕ್ಕೂ ಅದು ಒಂದು ಒಳ್ಳೆಯ ನಿರ್ಧಾರವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತದೆ ಇಂದಿನ ಅದರ ಬೆಳವಣಿಗೆ.


ಆದರೆ ಯಾರೆಲ್ಲ ಈ ಕ್ಷೇತ್ರವನ್ನು ಪ್ರವೇಶಿಸಬಹುದು ಅಥವಾ ಏನೆಲ್ಲ ಮಾರ್ಗಗಳ ಮೂಲಕ ಈ ಕ್ಷೇತ್ರದಲ್ಲಿ ನೆಲೆಯೂರಬಹುದು ಎಂಬ ಗೊಂದಲ ನಿಮ್ಮಲ್ಲಿರಬಹುದು. ಹಾಗಾದರೆ ಆ ಬಗ್ಗೆ ಇಲ್ಲಿ ತಿಳಿಯೋಣ.


ಇದನ್ನೂ ಓದಿ: ChatGPT: ತಂತ್ರಜ್ಞಾನದ ಅಭಿವೃದ್ಧಿಗೆ ಬಂದಿದೆ ಚಾಟ್​​ಜಿಪಿಟಿ! ಹೀಗಂದ್ರೆ ಏನು ಗೊತ್ತಾ?


ಮೊದಲಿಗೆ ಏನನ್ನು ಅಧ್ಯಯನ ಮಾಡಬೇಕು?


ರೋಬೊಟಿಕ್ಸ್ ಸಾಕಷ್ಟು ವಿಸ್ತಾರ ಹಾಗೂ ವೈವಿಧ್ಯಮಯ ಅಂಶಗಳಿಂದ ಕೂಡಿರುವ ಒಂದು ಸಂಕೀರ್ಣ ಕ್ಷೇತ್ರವಾಗಿದ್ದು ಇಲ್ಲಿ ಪ್ರವೇಶಿಸಲು ಮೊದಲಿಗೆ STEM ಕೋರ್ಸುಗಳ ಗಟ್ಟಿ ಬುನಾದಿಯ ಅಧ್ಯಯನ ಹೊಂದಿರಬೇಕಾಗಿರುತ್ತದೆ. ಇಲ್ಲಿ ಸ್ಟೆಮ್ ಎಂದರೆ ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಹಾಗೂ ಮ್ಯಾತಮ್ಯಾಟಿಕ್ಸ್ ಹಿನ್ನೆಲೆಯುಳ್ಳ ಅಧ್ಯಯನ ಎಂದಾಗುತ್ತದೆ.


ಪದವಿಪೂರ್ವ ಶಿಕ್ಷಣದ ನಂತರ ರೋಬೊಟಿಕ್ಸ್ ಕಲಿಯಲು ಸಾಕಷ್ಟು ತರಬೇತಿ ಅಧ್ಯಯನಗಳು ಲಭ್ಯವಿರುತ್ತವೆ. ಆದರೆ ರೋಬೊಟಿಕ್ಸ್ ನಲ್ಲೇ ಹೆಚ್ಚಿನ ಅಧ್ಯಯನ ಮಾಡುವ ಗುರಿ ಅಥವಾ ಉತ್ಕೃಷ್ಟ ಇಚ್ಛೆ ನಿಮ್ಮದಾಗಿದ್ದಲ್ಲಿ ಮೆಕ್ಯಾಟ್ರಾನಿಕ್ಸ್ ವಿಷಯ ಸಾಕಷ್ಟು ಸಹಕಾರಿಯಾಗಿದೆ. ಇದು ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕ್ಷೇತ್ರಗಳ ಸಂಯೋಜನೆಯಾಗಿದ್ದು ರೋಬೊಟಿಕ್ಸ್ ವಿಷಯಗಳನ್ನೂ ಸಹ ಹೊಂದಿದೆ.


ಯಾವ ಪದವಿಗಳು ರೋಬೊಟಿಕ್ಸ್ ಪ್ರವೇಶಿಸಲು ಸಹಕಾರಿಯಾಗಿವೆ?


ಇಲೆಕ್ಟ್ರಿಕಲ್ ಇಂಜಿನಿಯರಿಂಗ್: ನೀವು ಇಲೆಕ್ಟ್ರಿಕ್ ಇಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿದ್ದು ನಿಮಗೆ ರೋಬೊಟಿಕ್ಸ್ ಕ್ಷೇತ್ರ ಪ್ರವೇಶಿಸುವ ಆಸೆ ಇದೆಯೆ? ಹಾಗಿದ್ದರೆ ಈ ಪದವಿ ನಿಮಗೊಂದು ಉತ್ತಮ ಆರಂಭ ಒದಗಿಸುತ್ತದೆ.


ರೋಬೊಟಿಕ್ಸ್‌ನಲ್ಲಿ ಕಲಿಯಬಹುದಾದ ಹಲವು ಅಂಶಗಳನ್ನು ಇಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿಯೂ ಕಲಿಯಬಹುದಾಗಿದ್ದು ಈ ಪದವಿ ರೋಬೊಟಿಕ್ಸ್ ಕಲಿಕೆಯನ್ನು ಇನ್ನಷ್ಟು ಸುಗಮವಾಗುವಂತೆ ಮಾಡುತ್ತದೆ.


ಮೆಕ್ಯಾನಿಕಲ್ ಇಂಜಿನಿಯರಿಂಗ್ : ರೋಬೊಟಿಕ್ಸ್ ಸಹ ಹಲವು ಮೆಕ್ಯಾನಿಕಲ್ ವಿಷಯಕ್ಕೆ ಸಂಬಂಧಿಸಿದಂತಹ ಕಲಿಕಾ ಘಟಕಗಳನ್ನು ಹೊಂದಿರುವುದರಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಹ ರೋಬೊಟಿಕ್ಸ್ ಅಧ್ಯಯನಕ್ಕೆ ಬಹಳಷ್ಟು ನೆರವು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.


ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಾಮಾನ್ಯವಾಗಿ ಮೆಕ್ಯಾನಿಕ್ಸ್, ಮೆಟೀರಿಯಲ್ ಇಂಜಿನಿಯರಿಂಗ್, ಉತ್ಪಾದನೆಗಳಂತಹ ಅಧ್ಯಯನ ಅಂಶಗಳನ್ನು ಹೊಂದಿದ್ದು, ಇದನ್ನು ಕಲಿಯುವ ಮೂಲಕ ವಾಸ್ತವ ಜಗತ್ತಿನಲ್ಲಿ ರೋಬೊಟಿಕ್ಸ್ ಹೇಗೆ ವರ್ತಿಸುತ್ತದೆ ಎಂಬುದನ್ನು ಸಮರ್ಥವಾಗಿ ತಿಳಿಯಬಹುದಾಗಿದೆ.


ಇದನ್ನೂ ಓದಿ: Hummingbird : ಭವಿಷ್ಯದ ತಂತ್ರಜ್ಞಾನಕ್ಕೆ ಸ್ಪೂರ್ತಿಯಾಗಲಿದೆ ಈ ಪುಟ್ಟ ಹಕ್ಕಿ! ಹೇಗೆ ನೋಡಿ


ಕಂಪ್ಯೂಟರ್ ಸೈನ್ಸ್: ಈಗ ಏನಿದ್ದರೂ ಕಂಪ್ಯೂಟರ್ ಯುಗ. ಇಂದಿನ ಅಗಾಧ ಪ್ರಗತಿಗೆ ತಂತ್ರಜ್ಞಾನವು ಸಾಕಷ್ಟು ಕಾರಣವಾಗಿದ್ದು ಕಂಪ್ಯೂಟರ್ ಸೈನ್ಸ್ ಅತ್ಯುತ್ತಮ ತಂತ್ರಜ್ಞಾನದ ಸಾರಥಿಯಾಗಿದೆ. ರೋಬೊಟಿಕ್ಸ್‌ನಲ್ಲಿ ತಂತ್ರಾಂಶಗಳ ಪಾತ್ರ ಅಗಾಧವಾಗಿದ್ದು ಆ ತಂತ್ರಾಂಶಗಳನ್ನು ಅಬಿವೃದ್ಧಿಪಡಿಸುವಲ್ಲಿ ಕಂಪ್ಯೂಟರ್ ಸೈನ್ಸ್ ಹಿನ್ನೆಲೆ ಅತ್ಯಂತ ಸಹಕಾರಿಯಾಗಿದೆ. ಹಾಗಾಗಿ ಕಂಪ್ಯೂಟರ್‌ನಲ್ಲಿ ಪದವಿ ಪಡೆದವರು ರೋಬೊಟಿಕ್ಸ್ ಅನ್ನು ಸಮರ್ಥವಾಗಿ ಕಲಿಯಬಹುದು.


ಗಣಿತ: ಲಾಜಿಕಲ್, ರೀಸನಿಂಗ್‌ನಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು, ಹಾಗೂ ಬಹಳಷ್ಟು ಕ್ಷೇತ್ರಗಳನ್ನು ನಿರಾಯಾಸವಾಗಿ ಪ್ರವೇಶಿಸಲು ಗಣಿತ ವಿಷಯದ ಅಧ್ಯಯನ ನಿಮ್ಮನ್ನು ಸಮರ್ಥರನ್ನಾಗಿ ಮಾಡುತ್ತದೆ. ನೀವು ಗಣಿತದ ಉನ್ನತ ಪದವಿ ಹೊಂದಿದ್ದು ರೋಬೊಟಿಕ್ಸ್‌ನಲ್ಲಿ ವೃತ್ತಿ ಆರಂಭಿಸುವ ಮನಸ್ಸಿದ್ದಲ್ಲಿ ಡೇಟಾ ಸೈನ್ಸ್ ಅಥವಾ ಡೇಟಾ ಅನಾಲಿಸೀಸ್ ನಂತಹ ವೃತ್ತಿಗಳನ್ನು ಆಯ್ದುಕೊಳ್ಳಬಹುದಾಗಿದ್ದು ಇದರಲ್ಲಿ ಪರಿಣತಿ ಪಡೆಯಲು ನಿಮ್ಮ ಗಣಿತ ಜ್ಞಾನವು ಸಾಕಷ್ಟು ನೆರವಿಗೆ ಬರಲಿದೆ.


ಡಿಸೈನ್ ಆಂಡ್ ಟೆಕ್ನಾಲಜಿ : ಈ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ರೋಬೊಟಿಕ್ಸ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಸುಲಭವಾಗಿ ಪಡೆಯಬಹುದು.


ಈ ವಿಷಯದ ಅಧ್ಯಯನದ ಮೂಲಕ ನೀವು ಒಬ್ಬ ಸಮರ್ಥ ರೋಬೊಟಿಕ್ ತಂತ್ರಜ್ಞನಾಗಿ ವೃತ್ತಿ ಆರಂಭಿಸಬಹುದು ಹಾಗೂ ವಾಸ್ತವದಲ್ಲಿ ರೋಬೊಟ್ ಗಳು ಯಾವ ರೀತಿ ನಿರ್ವಹಿಸಲ್ಪಡುತ್ತವೆ ಹಾಗೂ ಅದರಲ್ಲಿ ಅಡಕವಾಗಿರುವ ತಂತ್ರಾಂಶಗಳು ಹೇಗಿರಬೇಕು ಮುಂತಾದ ಅಂಶಗಳನ್ನು ಕಲಿಯಬಹುದಾಗಿದೆ.


ಕಂಪ್ಯೂಟಿಂಗ್ ಆಂಡ್ ಪ್ರೊಗ್ರಾಮಿಂಗ್ : ಈ ವಿಷಯದಲ್ಲಿ ಪ್ರಮಾಣ ಪತ್ರ ಅಥವಾ ಡಿಪ್ಲೋಮಾ ಕೋರ್ಸ್ ಮುಗಿಸಿದವರು ಇಲೆಕ್ಟ್ರಿಕ್ ಇಂಜಿನಿಯರುಗಳ ಜೊತೆ ಹಾಗೂ ಕಂಟ್ರೋಲ್ ಇಂಜಿನಿಯರುಗಳ ಜೊತೆ ಕೆಲಸ ಮಾಡಲು ಅವಶ್ಯಕವಾಗಿರುವ ಕೌಶಲ್ಯಗಳನ್ನು ಹೊಂದಿರುತ್ತಾರೆ. ಹಾಗಾಗಿ ಇವರೂ ಸಹ ರೋಬೊಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಕಷ್ಟು ಅರ್ಹರಾಗಿರುತ್ತಾರೆ.


ಈ ಮೇಲಿನ ಎಲ್ಲ ಅಂಶಗಳು ರೋಬೊಟಿಕ್ಸ್ ಕ್ಷೇತ್ರ ಪ್ರವೇಶಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳಾಗಿವೆ. ಆದರೆ ಇವುಗಳನ್ನು ಹೊರತುಪಡಿಸಿಯೂ ಕೆಲವು ಇತರೆ ಕೌಶಲ್ಯಗಳನ್ನು ಸಹ ಅಭ್ಯರ್ಥಿಗಳು ಹೊಂದಿದ್ದಾಗ ರೋಬೊಟಿಕ್ಸ್ ಕ್ಷೇತ್ರ ಸಾಕಷ್ಟು ಆನಂದಮಯ ಹಾಗೂ ನೆಮ್ಮದಿಮಯ ಕೆಲಸವಾಗಿ ಪರಿವರ್ತಿತವಾಗುವುದಲ್ಲದೆ ಉಜ್ವಲ ಭವಿಷ್ಯವನ್ನೂ ರೂಪಿಸಬಹುದು.


ಸಂಪರ್ಕ ಜಾಲ ವೃದ್ಧಿಸುವ ಕಲೆ : ರೋಬೊಟಿಕ್ಸ್ ನಿಸ್ಸಂಶಯವಾಗಿ ಅದ್ಭುತ ಅವಕಾಶಗಳಿರುವ ಬಲಿಷ್ಠ ಕ್ಷೇತ್ರವಾಗಿ ಹೊರಹೊಮ್ಮಲಿದೆ. ಅದರಂತೆ ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸಹ ಸವಾಲಿನ ಕೆಲಸ. ಅದಕ್ಕಾಗಿ ಕ್ಷೇತ್ರದ ನುರಿತ ತಜ್ಞರೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಕಲೆ ನಿಮ್ಮನ್ನು ಈ ಕ್ಷೇತ್ರದಲ್ಲಿ ಬೇಗನೆ ನೆಲೆಯೂರುವಂತೆ ಮಾಡಬಹುದು.


ವಿಮರ್ಶಾತ್ಮಕ ಚಿಂತನೆ : ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅದರ ಉದ್ದಗಲಗಳ ಬಗ್ಗೆ ಆಲೋಚಿಸುವುದು ಹಾಗೂ ವಿಮರ್ಶಾತ್ಮಕ ಚಿಂತನೆಗಳನ್ನು ನಡೆಸುವುದು ನಿಮಗಿರುವ ಗ್ರಹಿಕಾ ಶಕ್ತಿಯನ್ನು ವ್ಯಕ್ತಪಡಿಸುತ್ತದೆ.


ರೋಬೊಟಿಕ್ಸ್ ಸಹ ಗ್ರಹಿಕಾ ಶಕ್ತಿಯುಳ್ಳವರನ್ನು ಸ್ವಾಗತಿಸುತ್ತದೆ. ಏಕೆಂದರೆ ಕಾಲಕ್ಕನುಗುಣವಾಗಿ ಈ ಕ್ಷೇತ್ರದಲ್ಲಿ ಅನೇಕ ಮಾರ್ಪಾಡುಗಳು ಬರಬಹುದು. ಪ್ರತಿಯೊಂದು ಬದಲಾವಣೆಗೆ ತಕ್ಕಂತೆ ಹಲವು ಪ್ರಯೋಜನಗಳು ಅಥವಾ ಅನುಪಯುಕ್ತತೆ ಉಂಟಾಗಬಹುದು.


ಈ ನಿಟ್ಟಿನಲ್ಲಿ ಮುಂದಾಲೋಚನೆಯ ಮೂಲಕ ವಿಮರ್ಶಾತ್ಮಕ ಚಿಂತನೆಗಳನ್ನು ನಡೆಸುವುದರಿಂದ ಕ್ಷೇತ್ರವು ಉತ್ತಮವಾದ, ಮತ್ತಷ್ಟು ಸುಧಾರಿತವಾದುದನ್ನು ಅಳವಡಿಸಿಕೊಳ್ಳಲು ನೆರವು ಸಿಗುತ್ತದೆ.


ನೇತೃತ್ವ ವಹಿಸಿಕೊಳ್ಳುವಿಕೆ: ಲೀಡರ್ಶಿಪ್‌ ಗುಣ ಎಂಬುದು ಯಾವ ಕ್ಷೇತ್ರದಲ್ಲಾಗಲಿ ಒಂದು ಉಪಯುಕ್ತವಾಗುವಂತಹ ಕೌಶಲ್ಯವಾಗಿದೆ. ಅದರಂತೆ ರೋಬೊಟಿಕ್ಸ್ ಕ್ಷೇತ್ರದಲ್ಲೂ ನಾಯಕತ್ವ ಗುಣ ಹೆಚ್ಚು ಮನ್ನಣೆ ಪಡೆದಿರುತ್ತದೆ.


ಇಂಟರ್ಪರ್ಸನಲ್ ಕೌಶಲ್ಯಗಳು : ಅಂದರೆ ಅಂತರ್ವ್ಯಕ್ತೀಯ ಕೌಶಲ್ಯಗಳು ಸಾಮಾನ್ಯವಾಗಿ ಒಂದು ತಂಡದಲ್ಲಿ ಪರಸ್ಪರರ ಮಧ್ಯೆ ಸಂವಹನ ನಡೆಸುವ ಗುಣವನ್ನು ತೋರಿಸುತ್ತದೆ. ರೋಬೊಟಿಕ್ಸ್ ಸಹ ರಭಸವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು ಇಲ್ಲಿ ಹಲವು ವಿವಿಧ ತಂಡಗಳು ಒಟ್ಟಾಗಿ ಕೈಜೋಡಿಸಿ ನಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂತರ್ವ್ಯಕ್ತೀಯ ಕೌಶಲ್ಯಗಳು ಸಾಕಷ್ಟು ಉಪಯುಕ್ತವಾಗಲಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು