• ಹೋಂ
  • »
  • ನ್ಯೂಸ್
  • »
  • Jobs
  • »
  • Career Option: ಪಿಯುಸಿ ಮುಗಿದ ಮೇಲೆ ತಲೆಬಿಸಿ ಬೇಡ, ಈ 3 ಆಯ್ಕೆಗಳನ್ನು ಗಮನಿಸಿ

Career Option: ಪಿಯುಸಿ ಮುಗಿದ ಮೇಲೆ ತಲೆಬಿಸಿ ಬೇಡ, ಈ 3 ಆಯ್ಕೆಗಳನ್ನು ಗಮನಿಸಿ

ಉದ್ಯೋಗ (ಸಾಂದರ್ಭಿಕ ಚಿತ್ರ)

ಉದ್ಯೋಗ (ಸಾಂದರ್ಭಿಕ ಚಿತ್ರ)

ಮೊದಲೆಲ್ಲಾ ಮಕ್ಕಳಿಗೆ ಪೋಷಕರು ಕೇವಲ ಡಾಕ್ಟರ್ ಅಥವಾ ಎಂಜಿನಿಯರ್ ಆಗು ಅಂತ ಹೇಳುತ್ತಿದ್ದರು. ಆದರೆ ಈಗ ಆ ಟ್ರೆಂಡ್ ಸಂಪೂರ್ಣವಾಗಿ ಬದಲಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

  • Trending Desk
  • 4-MIN READ
  • Last Updated :
  • Karnataka, India
  • Share this:

    ಸಾಮಾನ್ಯವಾಗಿ ಮಕ್ಕಳು ಮನೆಯಲ್ಲಿ ಪಿಯುಸಿ ಬಂದ್ರು ಅಂದ್ರೆ ಸಾಕು ಪೋಷಕರಿಗೆ ‘ಅಯ್ಯೋ ಮಕ್ಕಳು 12ನೇ (12th Standard) ತರಗತಿಯಲ್ಲಿದ್ದಾರೆ. ಫಲಿತಾಂಶ ಹೇಗೆ ಬರುತ್ತೋ, ಮುಂದೆ ಏನು ಮಾಡ್ತಾರೋ’ ಅನ್ನೋ ಒಂದು ಯೋಚನೆ ಸದಾ ಕಾಡುತ್ತಲೇ ಇರುತ್ತದೆ ಅಂತ ಹೇಳಬಹುದು. ಈ ಯೋಚನೆ ಬರೀ ಪೋಷಕರಿಗಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೂ (Students) ಸಹ ಪಿಯುಸಿ (PUC) ನಂತರದಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಒಂದು ದೊಡ್ಡ ತಲೆ ನೋವಾಗಿರುತ್ತದೆ.


    ಮೊದಲೆಲ್ಲಾ ಮಕ್ಕಳಿಗೆ ಪೋಷಕರು ಕೇವಲ ಡಾಕ್ಟರ್ ಅಥವಾ ಎಂಜಿನಿಯರ್ ಆಗು ಅಂತ ಹೇಳುತ್ತಿದ್ದರು. ಆದರೆ ಈಗ ಆ ಟ್ರೆಂಡ್ ಸಂಪೂರ್ಣವಾಗಿ ಬದಲಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಅಂಕ ನೋಡಿ ನಿರ್ಧಾರ
    ಈಗ ವಿದ್ಯಾರ್ಥಿಗಳ ಮುಂದೆ ಅನೇಕ ರೀತಿಯ ವೃತ್ತಿ ಆಯ್ಕೆಗಳಿವೆ. ಎಂದರೆ ಅವರು ಪಿಯುಸಿ ಮುಗಿಸಿದ ನಂತರ ಅವರಲ್ಲಿರುವ ಆಸಕ್ತಿಗನುಗುಣವಾಗಿ ಅವರು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ನೋಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರ್ಶಪ್ರಾಯವಾಗಿ ನೋಡುವುದಾದರೆ, ವೃತ್ತಿಯನ್ನು ಆಯ್ಕೆ ಮಾಡುವುದು ಬರೀ ವಿದ್ಯಾರ್ಥಿಗಳ ಅಥವಾ ಪೋಷಕರ ನಿರ್ಧಾರವಲ್ಲ, ಇದು ಇಬ್ಬರ ನಿರ್ಧಾರವಾಗಿರಬೇಕು.


    ಇಲ್ಲಿದೆ ನೋಡಿ ಆಯ್ಕೆಗಳು
    ಒಟ್ಟಿನಲ್ಲಿ ನಾವು ಆಯ್ಕೆ ಮಾಡಿಕೊಳ್ಳುವ ವೃತ್ತಿ ನಮಗೆ ಖುಷಿ, ಹಣ ನೀಡುವಂತೆ ಮತ್ತು ಒಳ್ಳೆಯ ಭವಿಷ್ಯವನ್ನು ರೂಪಿಸುವಂತಿರಬೇಕು. ಈಗಂತೂ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ, ಅದರಲ್ಲಿ ತಂತ್ರಜ್ಞಾನದ ಬಗ್ಗೆ ಅರಿವಿರುವುದು ತುಂಬಾನೇ ಮುಖ್ಯವಾಗಿರುತ್ತದೆ. ನೀವು ಸಹ ಅಂತಹ ವೃತ್ತಿಜೀವನವನ್ನು ಹುಡುಕುತ್ತಿದ್ದರೆ, ಇಲ್ಲಿವೆ ನೋಡಿ ಕೆಲವು ವೃತ್ತಿ ಆಯ್ಕೆಗಳು.


    ಪಿಯುಸಿ ಪಾಸ್ ಆದ ನಂತರ ನೀವು ಆಯ್ಕೆ ಮಾಡಬಹುದಾದ ಮೂರು ವೃತ್ತಿ ಆಯ್ಕೆಗಳಿವು


    ವಿಡಿಯೋ ಎಡಿಟರ್
    ವಿಡಿಯೋ ಎಡಿಟಿಂಗ್ ಎನ್ನುವುದು ಕಲಾತ್ಮಕ ಸಾಮರ್ಥ್ಯದೊಂದಿಗೆ ತಂತ್ರಜ್ಞಾನವನ್ನು ಸಂಯೋಜಿಸುವ ವೃತ್ತಿಯಾಗಿದೆ. ಕಂಟೆಂಟ್ ಡೆವಲಪರ್‌ಗಳು, ಫಿಲ್ಮ್ ಎಡಿಟರ್‌ಗಳು, ವಿಡಿಯೋ ಕಂಟೆಂಟ್ ಡೆವಲಪರ್‌ಗಳು, ಮಲ್ಟಿಮೀಡಿಯಾ ಡಿಸೈನರ್‌ಗಳು, ಬ್ರಾಡ್‌ಕಾಸ್ಟ್ ಇಂಜಿನಿಯರ್‌ಗಳು ಮತ್ತು ಆನಿಮೇಟರ್‌ಗಳಂತಹ ಈ ವೈವಿಧ್ಯಮಯ ವಲಯದಲ್ಲಿ ಹಲವು ಉದ್ಯೋಗಗಳಿವೆ.


    ಕೆಲಸದ ಬಲವಾದ ಪೋರ್ಟ್‌ಫೋಲಿಯೊವು ವಿವಿಧ ವಿಡಿಯೋ ಎಡಿಟಿಂಗ್ ಉದ್ಯೋಗಗಳಿಗೆ ಅರ್ಹತೆ ಪಡೆಯಬಹುದು, ಏಕೆಂದರೆ ಇದು ಸಾಮಾನ್ಯವಾಗಿ ನಿಮ್ಮ ಕೆಲಸದ ಅನುಭವದ ಮೇಲೆ ಸಾಬೀತಾಗಿರುವ ಸಾಮರ್ಥ್ಯವನ್ನು ಒತ್ತಿ ಹೇಳುವ ಉದ್ಯೋಗಗಳಲ್ಲಿ ಒಂದಾಗಿದೆ.


    ಡಿಜಿಟಲ್ ಮಾರ್ಕೆಟಿಂಗ್
    ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಒಂದು ವಿಧದ ಜಾಹೀರಾತು ಉದ್ಯಮ ಅಂತ ಹೇಳಬಹುದು. ಇದರಲ್ಲಿ ಕಂಪನಿಗಳು ತಮ್ಮ ಸರಕು ಮತ್ತು ಸೇವೆಗಳನ್ನು ಜಾಹೀರಾತು ಮಾಡಲು ಸಾಮಾಜಿಕ ಮಾಧ್ಯಮ, ಇ-ಮೇಲ್, ಬ್ಲಾಗ್‌ಗಳು ಮತ್ತು ಡಿಜಿಟಲ್ ಜಾಹೀರಾತುಗಳಂತಹ ಆನ್‌ಲೈನ್ ಚಾನೆಲ್‌ಗಳನ್ನು ಬಳಸುತ್ತವೆ.




    ಹಳೆಯ ಮಾರ್ಕೆಟಿಂಗ್ ಪದ್ದತಿ ಇನ್ನೂ ಪರಿಣಾಮಕಾರಿಯಾಗಿದ್ದರೂ, ಡಿಜಿಟಲ್ ಮಾರ್ಕೆಟಿಂಗ್ ವೇಗವಾಗಿ ಅದನ್ನು ಬದಲಾಯಿಸುತ್ತಿದೆ ಅಂತ ಹೇಳಬಹುದು. ಏಕೆಂದರೆ ಇದು ಜನರನ್ನು ಹೆಚ್ಚು ಸೆಳೆಯುತ್ತಿದೆ ಮತ್ತು ಉತ್ತಮ ವಿಶ್ಲೇಷಣೆಯನ್ನು ಹೊಂದಿದೆ.


    ಇದನ್ನೂ ಓದಿ: Jobs: ಕಲಬುರಗಿಯಲ್ಲಿ 10ನೇ ತರಗತಿ ಪಾಸಾದವರಿಗೆ ಬಂಪರ್ ಉದ್ಯೋಗ- 35 ಸಾವಿರ ಸಂಬಳ


    8,60,000 ಉದ್ಯೋಗಾವಕಾಶಗಳೊಂದಿಗೆ, ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಸ್ಥಾನವು ಟಾಪ್ 10 ಹೆಚ್ಚು ಬೇಡಿಕೆಯ ಸ್ಥಾನಗಳಲ್ಲಿ ಒಂದಾಗಿದೆ ಎಂದು ಲಿಂಕ್ಡ್ಇನ್ ಹೇಳಿಕೊಂಡಿದೆ. ಸಾಮಾಜಿಕ ಮಾಧ್ಯಮ, ವಿಷಯ ಯೋಜನೆ, ವಿಷಯ ವಿಶ್ಲೇಷಣೆ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನ ಇತರ ಅಂಶಗಳು ಹೆಚ್ಚು ಬೇಡಿಕೆಯಲ್ಲಿರುವ ಕೌಶಲ್ಯಗಳಾಗಿವೆ.


    ಸೈಬರ್ ಸೆಕ್ಯೂರಿಟಿ ಎಂಜಿನಿಯರ್‌
    ಸೈಬರ್‌ ಸೆಕ್ಯೂರಿಟಿ ಎಂಜಿನಿಯರ್‌ಗಳನ್ನು ಮಾಹಿತಿ ಭದ್ರತಾ ಎಂಜಿನಿಯರ್‌ಗಳು ಎಂದೂ ಕರೆಯುತ್ತಾರೆ. ಸಿಸ್ಟಮ್‌ಗಳು ಮತ್ತು ಸಾಫ್ಟ್ವೇರ್​ಗಳಲ್ಲಿನ ಬೆದರಿಕೆಗಳು ಮತ್ತು ದುರ್ಬಲತೆಗಳನ್ನು ಗುರುತಿಸುವುದು ಅವರ ಮುಖ್ಯ ಗುರಿಯಾಗಿದೆ, ನಂತರ ಹ್ಯಾಕಿಂಗ್ ಮತ್ತು ಮಾಲ್‌ವೇರ್ ಎಲ್ಲಾ ರೀತಿಯ ಸೈಬರ್‌ ಕ್ರೈಮ್‌ಗಳ ವಿರುದ್ಧ ರಕ್ಷಿಸಲು ಹೈಟೆಕ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಅವರ ಕೌಶಲ್ಯಗಳನ್ನು ಬಳಸಿಕೊಳ್ಳಲಾಗುತ್ತದೆ.


    ಇದನ್ನೂ ಓದಿ: Post Office Jobs: ಪೋಸ್ಟ್ ಆಫೀಸ್ ಹುದ್ದೆ ಖಾಲಿ ಇದೆ- 10th ಪಾಸಾಗಿದ್ರೆ 63 ಸಾವಿರ ಸಂಬಳ


    ಹಣಕಾಸು ಸೇವೆಗಳು, ಸರ್ಕಾರ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ಚಿಲ್ಲರೆ ವ್ಯಾಪಾರವು ಸೈಬರ್‌ ಭದ್ರತೆಯಲ್ಲಿ ಉದ್ಯೋಗ ನಿರೀಕ್ಷೆಗಳಿಗೆ ಕೆಲವು ಉತ್ತಮ ಕ್ಷೇತ್ರಗಳಾಗಿವೆ. ಪ್ರಪಂಚವು ಡಿಜಿಟಲೀಕರಣದತ್ತ ಸಾಗುತ್ತಿರುವಾಗ, ಸೈಬರ್‌ ಸೆಕ್ಯೂರಿಟಿ ಎಂಜಿನಿಯರ್‌ಗಳು ಪ್ರಪಂಚದಾದ್ಯಂತ ಹೆಚ್ಚು ಸಂಭಾವನೆ ಪಡೆಯುವ ಜನರಲ್ಲಿ ಒಬ್ಬರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: