• ಹೋಂ
  • »
  • ನ್ಯೂಸ್
  • »
  • Jobs
  • »
  • Career Guidance: ವಿದ್ಯಾರ್ಥಿಗಳ ನಡವಳಿಕೆ ಟ್ರ್ಯಾಕಿಂಗ್ ವೃತ್ತಿ ಆಯ್ಕೆಗೆ ಸಹಾಯ ಮಾಡಲಿದೆ; ಹೇಗೆ?

Career Guidance: ವಿದ್ಯಾರ್ಥಿಗಳ ನಡವಳಿಕೆ ಟ್ರ್ಯಾಕಿಂಗ್ ವೃತ್ತಿ ಆಯ್ಕೆಗೆ ಸಹಾಯ ಮಾಡಲಿದೆ; ಹೇಗೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಡವಳಿಕೆಯ ಟ್ರ್ಯಾಕಿಂಗ್ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ದೌರ್ಬಲ್ಯ ಮತ್ತು ಆಸಕ್ತಿಗಳ ಬಗ್ಗೆ ಸ್ಪಷ್ಟತೆ ಪಡೆಯಬಹುದು. ಇದು ಅವರ ವೃತ್ತಿಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

  • Trending Desk
  • 2-MIN READ
  • Last Updated :
  • Share this:

    ಆಧುನಿಕ ದಿನಗಳಲ್ಲಿ ಎಲ್ಲವೂ ತುಂಬಾ ವೇಗದಲ್ಲಿ ಬದಲಾಗುತ್ತಿರುತ್ತದೆ. ಇಂದಿನ ತಂತ್ರಜ್ಞಾನವು ಜಗತ್ತನ್ನು (Technology Era) ಮತ್ತಷ್ಟು ಕಿರಿದಾಗಿಸಿದೆ. ಹಾಗೆಯೇ ಜನರು ಅವರ ಕೆಲಸ, ಜೀವಶೈಲಿ, ವಿಚಾರ ಇವೆಲ್ಲವೂ ಮೊದಲಿಗಿಂತ ಹೆಚ್ಚು ಬದಲಾಗಿದೆ. ಅಲ್ಲದೇ ಶಿಕ್ಷಣ (Education) ಸೇರಿದಂತೆ ಇಂದಿನ ವ್ಯವಸ್ಥೆಗಳೂ ಬದಲಾಗಿವೆ. ಉದ್ಯೋಗ ಕ್ಷೇತ್ರಗಳಲ್ಲಂತೂ ಕ್ರಾಂತಿಯೇ ಆಗಿದೆ. ಈ ತಂತ್ರಜ್ಞಾನದ ಯುಗದಲ್ಲಿ ಎಲ್ಲರೂ ಬದಲಾಗಿದ್ದಾರೆ. ಅದಕ್ಕೆ ವಿದ್ಯಾರ್ಥಿಗಳ (Students) ನಡವಳಿಕೆ ಹೊರತಾಗಿಲ್ಲ.


    ಸದ್ಯ ಹೊಸ ಯುಗದ ಶಿಕ್ಷಣ ವ್ಯವಸ್ಥೆ ಕೂಡ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಅದರಲ್ಲೂ ಕೋವಿಡ್‌ ಸಾಂಕ್ರಾಮಿಕದ ನಂತರ ಎಲ್ಲವೂ ಬದಲಾಗಿದೆ. ತರಗತಿ ನಡೆಸುವ ವಿಧಾನ, ಮಕ್ಕಳು ಕಲಿಯುವ ವಿಧಾನ, ಮಾಹಿತಿ ಪಡೆದುಕೊಳ್ಳುವುದು, ಟ್ಯೂಷನ್‌ ಹೀಗೆ ಬಹಳಷ್ಟು ಬದಲಾವಣೆಗಳಾಗಿವೆ. ಎಲ್ಲದರಲ್ಲೂ ತಂತ್ರಜ್ಞಾನ ಇಣುಕಿದೆ.


    ಇದಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಬೋಧನೆ ಹಾಗೂ ಕಲಿಕೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸುತ್ತಿವೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ವೃತ್ತಿ ಮಾರ್ಗಗಳನ್ನು ನ್ಯಾವಿಗೇಟ್ ಮಾಡಲು ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿವೆ.


    ವಿದ್ಯಾರ್ಥಿಗಳ ನಡವಳಿಕೆ ತಿಳಿದುಕೊಳ್ಳುವುದು ಮುಖ್ಯ


    ವಿದ್ಯಾರ್ಥಿಗಳ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಶಾಲಾ ಆಧಾರಿತ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಸಹಾಯ ಮಾಡುವುದು ಸಂಸ್ಥೆಯ ಪ್ರಾಥಮಿಕ ಗುರಿಯಾಗಿದೆ. ಆದ್ರೆ ಇದರಿಂದ ವಿದ್ಯಾರ್ಥಿಗಳ ನಡವಳಿಕೆಯನ್ನು ಪತ್ತೆಹಚ್ಚಲು ಅವರ ವಿಭಾಗಗಳ ಉದ್ದಕ್ಕೂ ಅವರಿಗೆ ಅರ್ಥಮಾಡಿಕೊಳ್ಳಲು ಮತ್ತು ಸಹಾಯ ಮಾಡುವುದು ಅವಶ್ಯಕ.


    ಪ್ರಾತಿನಿಧಿಕ ಚಿತ್ರ


    ವಾಸ್ತವವಾಗಿ, ನಡವಳಿಕೆ ಟ್ರ್ಯಾಕಿಂಗ್ ವಿದ್ಯಾರ್ಥಿಗೆ ಅವರ ವೃತ್ತಿ ಮಾರ್ಗಗಳನ್ನು ನ್ಯಾವಿಗೇಟ್ ಮಾಡಲು ಪ್ರಯೋಜನಕಾರಿಯಾಗಿದೆ. ಶಿಕ್ಷಕರು ಮತ್ತು ಪೋಷಕರಿಗೆ ತಮ್ಮ ಮಗುವಿನ ನಡವಳಿಕೆಯ ಬಗ್ಗೆ ಹೆಚ್ಚು ಅರಿವು ಮೂಡಿಸಲು ಅನುವು ಮಾಡಿಕೊಡುತ್ತದೆ.


    ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಮಕ್ಕಳು ಆತಂಕಗೊಂಡಿದ್ದಾರೆ. ಅದರಲ್ಲೂ ಐದು ಮಕ್ಕಳಲ್ಲಿ ಒಬ್ಬರು ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಾರೆ ಎನ್ನಲಾಗುತ್ತದೆ. ಆದ್ದರಿಂದ, ಸಕಾರಾತ್ಮಕ ನಡವಳಿಕೆಯು ಸಕಾರಾತ್ಮಕ ಕಲಿಕೆಯ ಅಡಿಪಾಯ ಹಾಕುತ್ತದೆ. ಇದು ಮಕ್ಕಳ ಭವಿಷ್ಯದ ಯಶಸ್ಸಿಗೆ ಕೊಡುಗೆ ನೀಡುತ್ತದೆ.


    ವೃತ್ತಿ ನ್ಯಾವಿಗೇಶನ್‌ನಲ್ಲಿ ನಡವಳಿಕೆಯ ಟ್ರ್ಯಾಕಿಂಗ್‌ನ ಏಕೆ ಮುಖ್ಯ?


    ಬಿಹೇವಿಯರ್ ಟ್ರ್ಯಾಕಿಂಗ್ ವಿದ್ಯಾರ್ಥಿಗಳಿಗೆ ಅವರ ವೃತ್ತಿ ಪ್ರಯಾಣದಲ್ಲಿ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಅವರ ಸಾಮರ್ಥ್ಯ, ದೌರ್ಬಲ್ಯಗಳು ಮತ್ತು ಸುಧಾರಣೆಯ ಅಗತ್ಯವಿರುವ ಕ್ಷೇತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.




    ವಿದ್ಯಾರ್ಥಿಗಳ ನಡವಳಿಕೆಯನ್ನು ಟ್ರ್ಯಾಕ್ ಮಾಡುವ ಮೂಲಕ, ವಿದ್ಯಾರ್ಥಿಗಳು ಉತ್ತಮವಾದ ಕಾರ್ಯಗಳ ಸ್ವರೂಪವನ್ನು ಮತ್ತು ಅವರು ಸವಾಲಾಗಿ ಕಾಣುವ ಕಾರ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಇದು ಅವರ ಆದರ್ಶ ವೃತ್ತಿ ಮಾರ್ಗವನ್ನು ಗುರುತಿಸಲು ಮತ್ತು ಅವರ ಶಿಕ್ಷಣ ಮತ್ತು ತರಬೇತಿಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.


    ಹೆಚ್ಚುವರಿಯಾಗಿ, ನಡವಳಿಕೆಯ ಟ್ರ್ಯಾಕಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಅಭ್ಯಾಸಗಳು ಮತ್ತು ಸಮಯ ನಿರ್ವಹಣೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ವೃತ್ತಿಜೀವನದ ಯಶಸ್ಸಿಗೆ ಅವಶ್ಯಕವಾಗಿದೆ. ಗುರಿಗಳನ್ನು ಹೊಂದಿಸುವ ಮೂಲಕ ಮತ್ತು ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ, ವಿದ್ಯಾರ್ಥಿಗಳು ತಮ್ಮ ಪ್ರೇರಣೆ ಮತ್ತು ಗಮನವನ್ನು ಸುಧಾರಿಸಬಹುದು. ಇದು ಅವರ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ.


    ಇದಲ್ಲದೆ, ವಿದ್ಯಾರ್ಥಿಗಳು ಇತರರ ಮೇಲೆ ತಮ್ಮ ನಡವಳಿಕೆಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗಿದೆ. ಅಲ್ಲದೇ ಸಂವಹನ ಮತ್ತು ಟೀಮ್‌ವರ್ಕ್‌ನಂತಹ ಪ್ರಮುಖ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹ ಬಿಹೇವಿಯರ್‌ ಟ್ರ್ಯಾಕಿಂಗ್‌ ಸಹಾಯ ಮಾಡುತ್ತದೆ.


    ಈ ಕೌಶಲ್ಯಗಳು ಪ್ರತಿಯೊಬ್ಬರ ವೃತ್ತಿಜೀವನದ ಯಶಸ್ಸಿಗೆ ನಿರ್ಣಾಯಕ ಅಂಶಗಳಾಗಿವೆ. ಹಾಗಾಗಿ ಬಿಹೇವಿಯರ್‌ ಟ್ರ್ಯಾಕಿಂಗ್‌ನಿಂದ ವಿದ್ಯಾರ್ಥಿಗಳು ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಲು ಸಹಾಯ ಮಾಡುತ್ತದೆ ಎಂದರೆ ತಪ್ಪಾಗೋದಿಲ್ಲ.


    ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು ವೇಸ್ ಬಿಹೇವಿಯರ್ ಟ್ರ್ಯಾಕಿಂಗ್


    ವೇಸ್‌ ಬಿಹೇವಿಯರ್‌ ಟ್ರ್ಯಾಕಿಂಗ್‌ ವಿದ್ಯಾರ್ಥಿಗಳಿಗೆ ಹಲವು ವಿಧಾನಗಳ ಮೂಲಕ ಸಹಾಯ ಮಾಡಬಹುದು. ಸ್ವಯಂ ಅರಿವು, ಗೋಲ್‌ ಸೆಟ್ಟಿಂಗ್‌, ಸಹಾಯ ಕೇಳುವುದು, ಸಮಯ ನಿರ್ವಹಣೆ, ಭಾವನೆಗಳನ್ನು ತಿಳಿದುಕೊಳ್ಳುವುದು, ವಾಸ್ತವಿಕ ಗುರಿಗಳನ್ನು ಸೆಟ್‌ ಮಾಡುವುದು ಮುಂತಾದ ವಿಷಯಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು.


    Career Change


    *ಸ್ವಯಂ-ಅರಿವು: ನಡವಳಿಕೆಯ ಟ್ರ್ಯಾಕಿಂಗ್ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ದೌರ್ಬಲ್ಯ ಮತ್ತು ಆಸಕ್ತಿಗಳ ಬಗ್ಗೆ ಸ್ಪಷ್ಟತೆ ಪಡೆಯಬಹುದು. ಇದು ಅವರ ವೃತ್ತಿಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ.


    *ಗೋಲ್‌ ಸೆಟ್ಟಿಂಗ್: ವಿದ್ಯಾರ್ಥಿಗಳ ನಡವಳಿಕೆಯನ್ನು ಟ್ರ್ಯಾಕ್ ಮಾಡುವ ಮೂಲಕ, ಅವರು ವಾಸ್ತವಿಕ ಗುರಿಗಳನ್ನು ಹೊಂದಿಸಲು ಸಹಾಯವಾಗುತ್ತದೆ. ಅವರ ಶೈಕ್ಷಣಿಕ ಮತ್ತು ವೃತ್ತಿಜೀವನದ ಯಶಸ್ಸಿಗೆ ಮಾರ್ಗಸೂಚಿಯನ್ನು ರಚಿಸಬಹುದು. ಕಾಲಾನಂತರದಲ್ಲಿ ಅವರ ಪ್ರಗತಿಯನ್ನು ಅಳೆಯಬಹುದು.


    ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅಭ್ಯಾಸಗಳನ್ನು ಸುಧಾರಿಸಲು ಮತ್ತು ಅವುಗಳನ್ನು ಸರಿಪಡಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ.


    *ಸಮಯ ನಿರ್ವಹಣೆ: ಈಗಿನ ತಾಂತ್ರಿಕ ಪ್ರಗತಿಯು ವಿದ್ಯಾರ್ಥಿಗಳಿಗೆ ತಮ್ಮ ನಡವಳಿಕೆ ಮತ್ತು ಚಟುವಟಿಕೆಗಳನ್ನು ನಿರ್ವಹಿಸಲು ಸೂಕ್ತವಾದ ಗೇಟ್‌ವೇಗಳನ್ನು ಸೃಷ್ಟಿಸಿದೆ ಎಂಬುದು ನಿಜ.


    ಇದು ವಿದ್ಯಾರ್ಥಿಗಳು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆ ಮತ್ತು ತಮ್ಮ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಹೆಚ್ಚು ಅರಿವು ಮೂಡಿಸಲು ಕಾರಣವಾಗಿದೆ. ಅಲ್ಲದೇ ತಮ್ಮ ಆದ್ಯತೆಯ ಬಗ್ಗೆ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.


    *ಸಹಾಯ ಕೇಳುವುದು: ವಿದ್ಯಾರ್ಥಿಗಳು ಯಾವುದೇ ಹಂತದಲ್ಲಿ ಸಹಾಯವನ್ನು ಕೇಳಲು ಹಿಂಜರಿಯಬಾರದು. ಪ್ರಶ್ನೆಗಳು ಅಥವಾ ಸಹಾಯವನ್ನು ಕೇಳುವುದರಿಂದ ಅವರಿಗೇ ಅನೇಕ ರೀತಿಯಲ್ಲಿ ಅನುಕೂಲವಾಗುತ್ತದೆ.


    *ನಿಮ್ಮ ಭಾವನೆಗಳನ್ನು ತಿಳಿದುಕೊಳ್ಳಿ: ಸಮತೋಲಿತ ಭಾವನೆಗಳ ಬಗ್ಗೆ ಮಾತನಾಡುವಾಗ ಆತ್ಮಾವಲೋಕನವು ಪ್ರಮುಖವಾಗಿದೆ. ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುವುದು ಒಟ್ಟಾರೆ ವ್ಯಕ್ತಿತ್ವವನ್ನು ಉತ್ತಮವಾಗಿ ನಡೆಸಲು ಸಹಾಯ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    *ವಾಸ್ತವದಲ್ಲಿನ ನಿರೀಕ್ಷೆಗಳನ್ನು ಹೊಂದಿಸಿ: ಕೆಲವೊಮ್ಮೆ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಅನೇಕ ಆಲೋಚನೆಗಳನ್ನು ಹೊಂದಿರಬಹುದು. ಅಂಥ ರೇಸಿಂಗ್ ಆಲೋಚನೆಗಳಿಂದ ಭ್ರಮೆಯಲ್ಲಿ ತೇಲಬಹುದು. ಆದರೆ ವಾಸ್ತವಿಕವಾಗಿರುವುದು ಮತ್ತು ವಾಸ್ತವದ ಗುರಿಗಳನ್ನು ತಲುಪಲು ಕೆಲಸ ಮಾಡುವುದು ಒಳ್ಳೆಯದು.


    ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೆ ವೃತ್ತಿ ಕೌನ್ಸೆಲಿಂಗ್


    ಶಿಕ್ಷಣ ಕ್ಷೇತ್ರದ ಬದಲಾಗುತ್ತಿರುವ ಡೈನಾಮಿಕ್ಸ್ಅನ್ನು ಪರಿಗಣಿಸಿ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಲಭ್ಯವಿರುವ ವಿವಿಧ ವೃತ್ತಿ ಸ್ಟ್ರೀಮ್‌ಗಳೊಂದಿಗೆ ದಾರಿಯನ್ನು ಕಂಡುಕೊಳ್ಳುತ್ತಾರೆ. ವಿದ್ಯಾರ್ಥಿಗಳನ್ನು ಇದಕ್ಕೆ ತಯಾರು ಮಾಡುವ ಮತ್ತು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುವ ಅಸಂಖ್ಯಾತ ಕೌನ್ಸೆಲಿಂಗ್ ವೇದಿಕೆಗಳು ಇಂದು ನಮಗೆ ಸಿಗುತ್ತವೆ.


    ಹೆಚ್ಚುವರಿಯಾಗಿ, ಈ ಪ್ಲಾಟ್‌ಫಾರ್ಮ್‌ಗಳು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯನ್ನು ಕಂಡುಹಿಡಿಯಲು, ಅವರ ಸಾಮರ್ಥ್ಯದ ಬಗ್ಗೆ ಅರಿಯಲು ಮತ್ತು ದೌರ್ಬಲ್ಯಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ವೃತ್ತಿ ಅವಕಾಶಗಳನ್ನು ನ್ಯಾವಿಗೇಟ್ ಮಾಡಲು ಅವರಿಗೆ ಅನುಕೂಲ ಮಾಡಿಕೊಡುತ್ತವೆ. ಇದಲ್ಲದೆ, ವೃತ್ತಿ ಸಮಾಲೋಚನೆಯು ಕಾರ್ಯಾಗಾರಗಳು, ವೃತ್ತಿ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತವೆ.


    ಇದನ್ನೂ ಓದಿ: Karnataka Budget 2023: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್; ತಲಾ 2,000 ರೂಪಾಯಿ ಆರ್ಥಿಕ ನೆರವು


    ಅಲ್ಲದೇ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಐಚ್ಛಿಕ ಒನ್‌ -ಆನ್-ಒನ್ ಕೌನ್ಸೆಲಿಂಗ್ ಅನ್ನು ಸಹ ನಡೆಸುತ್ತವೆ. ಹಾಗಾಗಿ ಇದು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸದ್ಯದ ತಂತ್ರಜ್ಞಾನಗಳಿಂದಾಗಿ ಶೈಕ್ಷಣಿಕ ವಿಕಸನ ಸ್ವರೂಪವನ್ನು ಗಮನಿಸಿದರೆ, ಬೋಧನೆ ಮತ್ತು ಕಲಿಕೆಯ ಅಭ್ಯಾಸಗಳು ರೂಪಾಂತರಗೊಳ್ಳುತ್ತಿವೆ.


    ಇದು ನಡವಳಿಕೆಯ ಟ್ರ್ಯಾಕಿಂಗ್ ವಿಧಾನಗಳು ಮತ್ತು ಅವುಗಳನ್ನು ಅಳವಡಿಸುವುದರೊಂದಿಗೆ ಸಂಬಂಧ ಹೊಂದಿವೆ ಎಂದು ಹೇಳಬಹುದು. ಇಂದು, ನಡವಳಿಕೆ ಟ್ರ್ಯಾಕಿಂಗ್ ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯ, ದೌರ್ಬಲ್ಯಗಳು ಮತ್ತು ಸುಧಾರಣೆಯ ಕ್ಷೇತ್ರಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಪಡೆಯಲು ಪ್ರಮುಖ ಸಾಧನವಾಗಿದೆ. ಆ ಮೂಲಕ ಅವರ ವೃತ್ತಿ ಮಾರ್ಗವನ್ನು ನ್ಯಾವಿಗೇಟ್ ಮಾಡುತ್ತದೆ ಅನ್ನೋದನ್ನು ಅಲ್ಲಗಳೆಯುವಂತಿಲ್ಲ.


    ಒಟ್ಟಾರೆ, ಇಂದು ಬದಲಾದ ಜೀವನಶೈಲಿಯಲ್ಲಿ ಓದು, ಉದ್ಯೋಗ ಇವುಗಳ ಆಯ್ಕೆ ಬಹಳ ಮುಖ್ಯ. ಇದನ್ನು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಫೋಕಸ್‌ ಮಾಡಿದರೆ ಅತ್ಯುತ್ತಮ ಸ್ಥಾನಕ್ಕೇರಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರ ವಿದ್ಯಾರ್ಥಿಯು ಈ ಬಗ್ಗೆ ಗಮನ ಹರಿಸಬೇಕಿದೆ. ಹಾಗಾಗಿ ಬಿಹೇವಿಯರ್‌ ಟ್ರ್ಯಾಕಿಂಗ್ ವಿದ್ಯಾರ್ಥಿಗಳ ವೃತ್ತಿ ಮಾರ್ಗಗಳನ್ನು ನ್ಯಾವಿಗೇಟ್‌ ಮಾಡಲು ಖಂಡಿತಾ ಸಹಾಯ ಮಾಡುತ್ತದೆ.


    ವಿದ್ಯಾರ್ಥಿಗಳು ಅವರ ಸಾಮರ್ಥ್ಯ, ಆಸಕ್ತಿ, ಗುರಿಗಳ ಮೇಲೆ ಗಮನವಿರಿಸಿ, ಈ ಬಗ್ಗೆ ಮೇಲೆ ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಒಂದೊಳ್ಳೆಯ ವೃತ್ತಿ ಜೀವನವನ್ನು ಪಡೆಯಲು ಸಾಧ್ಯ.

    Published by:Kavya V
    First published: