• Home
 • »
 • News
 • »
 • jobs
 • »
 • Job Searching Tips: ಉದ್ಯೋಗಾಕಾಂಕ್ಷಿಗಳೇ, ಈ 10 ಪಾಯಿಂಟ್ಸ್ ತಲೆಯಲ್ಲಿಟ್ಟುಕೊಂಡು ಕೆಲಸ ಹುಡುಕಿ

Job Searching Tips: ಉದ್ಯೋಗಾಕಾಂಕ್ಷಿಗಳೇ, ಈ 10 ಪಾಯಿಂಟ್ಸ್ ತಲೆಯಲ್ಲಿಟ್ಟುಕೊಂಡು ಕೆಲಸ ಹುಡುಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಉದ್ಯೋಗವನ್ನು ಹುಡುಕಲು ಆರಂಭಿಸುವವರಿದ್ದರೆ ಅಥವಾ ಈಗಾಗಲೇ ಆರಂಭಿಸಿದ್ದರೆ ತಿಳಿದುಕೊಳ್ಳಬೇಕಾದ 10 ಅಂಶಗಳು ಹೀಗಿವೆ.

 • Share this:

  ಉದ್ಯೋಗವನ್ನು ಹುಡುಕುವುದು (Job Searching) ಎಂದರೆ ತಮಾಷೆಯ ವಿಷಯವಲ್ಲ. ಹುಡುಕುತ್ತೇನೆ ಅಂದಾಕ್ಷಣ ಕೆಲಸ ಸಿಕ್ಕಿಬಿಡುವುದಿಲ್ಲ. ಹಾಗಂತ ಕೆಲಸ ಹುಡುಕುವುದು (Job Seeking) ಬಹಳ ಕಷ್ಟದ ಕೆಲಸವೂ ಅಲ್ಲ. ಹಾಗೇ ತುಂಬ ಸುಲಭವೂ ಅಲ್ಲ. ಅದಕ್ಕಾಗಿ ಸರಿಯಾಗಿ ಸಿದ್ಧಗೊಂಡಿರಬೇಕಾದದ್ದು ಮುಖ್ಯ. ಅಂದಾಗ ಮಾತ್ರ ಅದರ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯ. ನೀವು ಉದ್ಯೋಗವನ್ನು ಹುಡುಕಲು ಆರಂಭಿಸುವವರಿದ್ದರೆ ಅಥವಾ ಈಗಾಗಲೇ ಆರಂಭಿಸಿದ್ದರೆ ನೀವು ತಿಳಿದುಕೊಳ್ಳಬೇಕಾದ 10 ಅಂಶಗಳು ಹೀಗಿವೆ.


  1. ನಿಮ್ಮ ನೆಟ್‌ವರ್ಕ್ ಬಳಸಿ: ನೀವು ಉದ್ಯೋಗ ಹುಡುಕಾಟ ಆರಂಭಿಸಿದ್ದರೆ ನಿಮ್ಮ ಪರಿಚಯದವರು, ಸ್ನೇಹಿತರು ಅಥವಾ ಸಾಮಾಜಿಕ ಜಾಲತಾಣದ ಒಳ್ಳೆಯ ಸ್ನೇಹಿತರನ್ನು ಬಳಸಿಕೊಳ್ಳಿ.


  ಹಲವಾರು ಕಂಪನಿಗಳಲ್ಲಿ ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ನೀಡದೆಯೇ ಖಾಲಿಯಿರುವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಕಂಪನಿಯೊಳಗಿನವರನ್ನೇ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಕಂಪನಿಯಲ್ಲಿ ಉದ್ಯೋಗಿಗಳಾಗಿರುವವರ ರೆಫರೆನ್ಸ್‌ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಅನೌಪಚಾರಿಕ ನೇಮಕವು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ನೀವು ನಿಮ್ಮ ನೆಟ್ ವರ್ಕ್‌ ಬಳಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.


  ಆದ್ದರಿಂದ ಉದ್ಯೋಗವನ್ನು ಹುಡುಕುವ ಹಳೆಯ ವಿಧಾನಗಳ ಮೇಲೆ ಮಾತ್ರ ಗಮನಹರಿಸಬೇಡಿ. ಅದರಿಂದ ಹೊರಬಂದು ಜನರನ್ನು ತಿಳಿದುಕೊಳ್ಳಿ. ಅಲ್ಲದೇ ಪ್ರತಿಯೊಂದು ಸಂವಹನವನ್ನು ಸಂಭಾವ್ಯ ಅವಕಾಶವಾಗಿ ಪರಿಗಣಿಸಿ.


  2. ಸೋಷಿಯಲ್​ ಮೀಡಿಯಾ ಆ್ಯಪ್​ಗಳನ್ನು ಕ್ಲಿಯರ್​ ಆಗಿ ಇಟ್ಟುಕೊಳ್ಳಿ : ಕಂಪನಿಗಳು ಸಾಮಾನ್ಯವಾಗಿ ನೇಮಕಾತಿ ಮಾಡುವ ಮೊದಲು ಅಭ್ಯರ್ಥಿಯನ್ನು ಗೂಗಲ್‌ನಲ್ಲಿ ಹುಡುಕುತ್ತವೆ. ಅಥವಾ ಲಿಂಕ್ಡ್‌ ಇನ್‌, ನೌಕರಿ ಡಾಟ್‌ ಕಾಮ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್‌ ಮಾಡುತ್ತವೆ. ಆದ್ದರಿಂದ ನಿಮ್ಮ ಕೆಲಸದ ಹುಡುಕಾಟವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಸ್ವಚ್ಛಗೊಳಿಸಿ. ಅನೇಕ ಜನರು ಈ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ.


  If you don t know these things on Facebook you are guaranteed to get hacked
  ಸಾಂಕೇತಿಕ ಚಿತ್ರ


  ನಿಮ್ಮ ಕಾರ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಮೇಲ್ವಿಚಾರಣೆ ಮಾಡುವುದು ಅಗತ್ಯ ಎಂದು ಭಾವಿಸುತ್ತಾರೆ. ಆದರೆ ಸತ್ಯವೆಂದರೆ, ನಿಮ್ಮ ಪೋಸ್ಟ್ಗಳು, ಅಭಿರುಚಿಗಳು ಒಮ್ಮೆ ಹೊರಬಂದರೆ, ಅದನ್ನು ತೆಗೆದುಹಾಕಲು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. ಅದು ಪ್ರಶ್ನಾರ್ಹವಾಗಿದ್ದರೆ, ಅದನ್ನು ತೆಗೆದು ಹಾಕಿ.


  3. ನಿಮಗೆ ಬಲವಾದ ರೆಸ್ಯೂಮ್‌ ನ ಅಗತ್ಯವಿದೆ: ರೆಸ್ಯೂಮ್‌ಗಳ ಮಾನದಂಡಗಳು ಸಾರ್ವಕಾಲಿಕವಾಗಿದೆ. ಈಗಂತೂ ಆನ್‌ ಲೈನ್‌ ನಲ್ಲೇ ರೆಸ್ಯೂಮ್‌ ಗಳನ್ನು ಸ್ವೀಕರಿಸುವುದರಿಂದ ಇದು ನಿಸ್ಸಂಶಯವಾಗಿ ಆಕರ್ಷಕವಾಗಿರಬೇಕು ಮತ್ತು ಓದಲು ಸುಲಭವಾಗಿರಬೇಕು. ಇದರ ಜೊತೆಗೆ ಬಣ್ಣ ಮತ್ತು ಕಲಾತ್ಮಕತೆ ಕೂಡ ಮುಖ್ಯವಾಗುತ್ತದೆ. ವಾಸ್ತವವಾಗಿ, ಕೆಲವು ಎಟಿಎಸ್ ಸಾಫ್ಟ್‌ವೇರ್‌ಗಳು ಸೆರಿಫ್ ಫಾಂಟ್‌ಗಳನ್ನು ಓದುವುದಿಲ್ಲ.


  ಇದರಿಂದ ನಿಮ್ಮ ವೃತ್ತಿಜೀವನದ ಹಿನ್ನೆಲೆಯು ಉದ್ದೇಶಿತ ವ್ಯಕ್ತಿಯನ್ನು ತಲುಪುವುದಿಲ್ಲ. ಏಕೆಂದರೆ ನಿಮ್ಮ ರೆಸ್ಯೂಮ್‌ ಫಾಂಟ್‌ ಕಂಪ್ಯೂಟರ್ ಗುರುತಿಸುವುದಿಲ್ಲ. ಆದ್ದರಿಂದ ನಿಮ್ಮ ರೆಸ್ಯೂಮ್ ಅನ್ನು ಸರಳವಾಗಿ ಇರಿಸಿ. ಡಿಜಿಟಲ್ ಯುಗದಲ್ಲಿ ವಿಷಯವು ಪ್ರಮುಖವಾಗಿದೆ.
  4. ಕೀವರ್ಡ್‌ ಗಳ ಬಗ್ಗೆ ಗಮನವಿರಲಿ: ನಿಮ್ಮ ಉದ್ಯೋಗ ಬೇಟೆಯಲ್ಲಿರಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ನಿಮ್ಮ ರೆಸ್ಯೂಮ್‌ ಗಳಲ್ಲಿರುವ ಕೀವರ್ಡ್‌ ಗಳು.


  ಸರಿಯಾದ ಕೀವರ್ಡ್‌ ಗಳನ್ನು ಬಳಸುವುದು ನೀವು ಉದ್ಯೋಗ ಪಡೆಯುವಲ್ಲಿ ಬಹಳ ಸಹಾಯಕವಾಗಿದೆ. ಉದಾಹರಣೆಗೆ ಜಾಹೀರಾತಿನಲ್ಲಿ ಅಭ್ಯರ್ಥಿಗೆ x, y ಮತ್ತು z ನೊಂದಿಗೆ ಅನುಭವ ಬೇಕು ಎಂದು ಹೇಳಿದ್ದರೆ, ನಿಮ್ಮ ರೆಸ್ಯೂಮ್‌ ನಲ್ಲಿ X, Y ಮತ್ತು Z ಬಗ್ಗೆ ಬರೆದಿರುವುದಾಗಿ ಖಚಿತಪಡಿಸಿಕೊಳ್ಳಿ. ಇದರಿಂದ ಕಂಪನಿಯವರ ಸಿಸ್ಟಮ್‌ ನಿಮ್ಮ ರೆಸ್ಯೂಮ್‌ ಅನ್ನು ಪರಿಗಣಿಸುತ್ತದೆ.


  5. ನಿಮ್ಮ ಸಾಧನೆಗಳ ಮೇಲೆ ಕೇಂದ್ರೀಕರಿಸಿ: ನಿಮ್ಮ ಸಾಧನೆಗಳು ಮೇಲೆ ಗಮನ ಕೇಂದ್ರೀಕರಿಸುವುದು ಮತ್ತೊಂದು ಮುಖ್ಯವಾದ ಸಂಗತಿ. ನೀವು ನರ್ಸ್ ಅಥವಾ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದರೆ, ನಿಮ್ಮ ಉದ್ಯೋಗ ವಿವರಣೆಯ ಬಗ್ಗೆ, ಸಾಧನೆಯ ಬಗ್ಗೆ ಬರೆಯಿರಿ.


  ನೀವು ಏಕೆ ಪರಿಪೂರ್ಣ ನರ್ಸ್ ಆಗಿದ್ದೀರಿ? ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಇತರ 200 ಮಾರಾಟ ವ್ಯವಸ್ಥಾಪಕರಿಗಿಂತ ನಿಮ್ಮನ್ನು ಯಾವುದು ವಿಭಿನ್ನಗೊಳಿಸುತ್ತದೆ? ಎಂಬುದನ್ನು ಹೇಳಿ. ಅಷ್ಟಕ್ಕೂ ಇದಕ್ಕೆ ಉತ್ತರ ನಿಮ್ಮ ಸಾಧನೆಗಳು. ದಾದಿಯರಿಗಾಗಿ ನೀವು ಹೊಸ ತರಬೇತಿ ಮಾಡ್ಯೂಲ್ ಅನ್ನು ರಚಿಸಿದ್ದೀರಾ? ನಿಮ್ಮ ಮಾರಾಟ ತಂಡವು ಸವಾಲಿನ ಮಾರುಕಟ್ಟೆಯನ್ನು ಟ್ಯಾಪ್ ಮಾಡಿದ ಮೊದಲ ತಂಡವೇ? ಇಂಥ ಸಾಧನೆಗಳನ್ನು ನಿಮ್ಮ ರೆಸ್ಯೂಮ್‌ ಒಳಗೊಂಡಿರಲಿ.


  6. ಸಂದರ್ಶನದ ಸಮಯದಲ್ಲಿ ಕಂಪನಿಯವರು ಮೆಚ್ಚುವಂತೆ ನಡೆದುಕೊಳ್ಳಿ: ನೀವು ನಿಮ್ಮ ರೆಸ್ಯೂಮ್ ಅನ್ನು ನವೀಕರಿಸಿದ್ದಾದ ಮೇಲೆ ಸಂದರ್ಶನ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ. ನೀವು ಸ್ವಲ್ಪ ಸಮಯದವರೆಗೆ ಕೆಲಸದ ಹುಡುಕಾಟದಿಂದ ಹೊರಗುಳಿದಿದ್ದಲ್ಲಿ ನೀವು ಹೋಗುವ ಮೊದಲ ಸಂದರ್ಶನವು ವಿಭಿನ್ನವಾಗಿರಬಹುದು.


  ಮೊದಲನೆಯದಾಗಿ, ನೀವು ಒಬ್ಬ ವ್ಯಕ್ತಿಯನ್ನು ಭೇಟಿಯಾಗಲು ಮತ್ತು ಕಂಪನಿಯಿಂದ ಸ್ವಾಗತವನ್ನು ಮಾತ್ರ ನಿರೀಕ್ಷಿಸಬಹುದು. ಆದ್ರೆ ಉದ್ಯೋಗದ ಸಂದರ್ಶನಗಳು ಅದಕ್ಕಿಂತ ಹೆಚ್ಚಿನದಾಗಿರುತ್ತದೆ. ಇದು ಕೆಲಸದ ಬಗ್ಗೆ ಮಾತ್ರವಲ್ಲ, ಇದು ಒಬ್ಬ ವ್ಯಕ್ತಿಯೊಂದಿಗೆ ನೀವು ಹೇಗೆ ವರ್ತಿಸುತ್ತೀರಿ ಎಂಬುದರ ಬಗ್ಗೆ ಮಾತ್ರವಲ್ಲ, ಬದಲಾಗಿ ನೀವು ತಂಡದೊಂದಿಗೆ ಹೇಗೆ ಹೊಂದಿಕೊಳ್ಳುತ್ತೀರಿ ಎಂಬುದನ್ನೂ ಪರಿಗಣಿಸಲಾಗುತ್ತದೆ.
  ನೆನಪಿಡಿ, ನೀವು ಸಂದರ್ಶನ ತಂಡದೊಂದಿಗೆ ಹೇಗೆ ನಡೆದುಕೊಳ್ಳುತ್ತೀರಾ ಎನ್ನುದು ಕೂಡ ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ.


  7.ಸಂದರ್ಶನದ ನಂತರ ತಾಳ್ಮೆಯಿಂದಿರಿ: ಸಂದರ್ಶನ ಮುಗಿದ ಬಳಿಕ ಒಂದು ವಾರದಲ್ಲಿ ಕರೆ ಮಾಡುತ್ತೇವೆ ಎಂದು ಅವರು ಹೇಳಿರುತ್ತಾರೆ. ಎಲ್ಲವೂ ಸರಿ. ಅದಕ್ಕಾಗಿ ನೀವು ತಾಳ್ಮೆಯಿಂದ ಕಾಯಬೇಕಿದೆ.


  ಕೆಲವೊಮ್ಮೆ ಸಂದರ್ಶನದ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೆಲವೊಮ್ಮೆ ಮೂರು ಅಥವಾ ನಾಲ್ಕು ಸುತ್ತುಗಳೂ ಇರಬಹುದು. ವಾಸ್ತವವಾಗಿ, ಕಂಪನಿಗಳು ಸದ್ಯಕ್ಕೆ ಅಭ್ಯರ್ಥಿಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಸಂದರ್ಶನವು ಒಂದು ಗಂಟೆ ಮತ್ತು ಕೆಲವೊಮ್ಮೆ ಪೂರ್ಣ ದಿನವನ್ನೂ ತೆಗೆದುಕೊಳ್ಳಬಹುದು. ಹಾಗಾಗಿ ನೀವು ಸಂದರ್ಶನದ ಸಮಯದಲ್ಲಿ ಹಾಗೂ ಸಂದರ್ಶನದ ಬಳಿಕ ತಾಳ್ಮೆಯಿಂದಿರಬೇಕಾಗುತ್ತದೆ. ಅಪ್‌ಡೇಟ್‌ ಗಳಿದ್ದರೆ ಅವರಾಗಿಯೇ ಕರೆ ಮಾಡಿ ಮಾಹಿತಿ ನೀಡುತ್ತಾರೆ.


  8.ತೆರೆದ ಮನಸ್ಸನ್ನು ಇಟ್ಟುಕೊಳ್ಳಿ: ಕೆಲವೊಮ್ಮೆ ಕೆಲಸದ ವೇತನ ಕಡಿಮೆ ಇರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಸ್ಥಾನಗಳನ್ನು ಸ್ವತಂತ್ರ ಅಥವಾ ಅರೆಕಾಲಿಕವಾಗಿ ನೇಮಿಸಿಕೊಳ್ಳಬಹುದು. ನೀವು ಇಷ್ಟಪಡುವ ಕೆಲಸವು ನಿಮಗೆ ಬೇಕಾಗಿರುವ ಡೆಸಿಗ್ನೇಷನ್‌ ಹೊಂದಿಲ್ಲದೇ ಇರಬಹುದು. ಆದ್ರೆ ಇದನ್ನು ನಕಾರಾತ್ಮಕವಾಗಿ ನೋಡುವ ಬದಲು, ಅವಕಾಶಗಳನ್ನು ಪರಿಗಣಿಸಿ.


  ಅಂದರೆ ನೀವು ಹೊಸ ವಿಷಯಗಳಿಗೆ ನಿಮ್ಮನ್ನು ತೆರೆಯಲು ಪ್ರಯತ್ನ ಪಡಿ. ಹೊಸ ವಿಷಯಗಳು ಹೊಸ ಕೌಶಲ್ಯ ನಿಮಗೆ ಕಲಿಸುವುದರ ಜೊತೆಗೆ ಹೊಸ ಸಂಪರ್ಕಗಳನ್ನೂ ನಿಮಗೆ ಕಲ್ಪಿಸುತ್ತವೆ. ಇನ್ನೂ ಕೆಲವೊಮ್ಮೆ ಕಡಿಮೆ ಸಂಬಳವು ಹೊಂದಾಣಿಕೆಯಾದರೂ ಕೆಲಸದ ಸಮಯವು ಹೆಚ್ಚು ಕಡಿಮೆಯಾಗಬಹುದು. ಹಾಗಾಗಿ ನೀವು ಇಲ್ಲಿ ತೆರೆದ ಮನಸ್ಸಿನವರಾದರೆ ನಿಮಗೇ ಒಳ್ಳೆಯದು.


  9.ಎಲ್ಲವನ್ನೂ ದೃಷ್ಟಿಕೋನದಲ್ಲಿ ಇರಿಸಿ: ಮತ್ತೊಂದು, ಕಟು ಸತ್ಯವನ್ನು ನೀವು ಅರಗಿಸಿಕೊಳ್ಳಲೇ ಬೇಕು. ಅದೇ ಸ್ಪರ್ಧಾತ್ಮಕತೆ. ಸಂದರ್ಶನಕ್ಕೆ ಬಂದವರಲ್ಲಿ ನೀವೂ ಒಬ್ಬರು. ಅವರೂ ಕೂಡ ನಿಮಗೆ ಸ್ಪರ್ಧೆ ಒಡ್ಡುತ್ತಿದ್ದಾರೆ ಎಂಬುದನ್ನು ನೆನಪಿಡಿ.


  career tips for who is in problem
  ಸಾಂದರ್ಭಿಕ ಚಿತ್ರ


  ಸಂದರ್ಶನಕ್ಕೆ ಕರೆದ ಐವರಲ್ಲಿ ನೀವೂ ಒಬ್ಬರೆಂದು ನೀವು ಭಾವಿಸಬಹುದು. ಅವರು 500 ಅರ್ಜಿದಾರರಲ್ಲಿ 100 ಜನರನ್ನು ಸಂದರ್ಶಿಸುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಎಲ್ಲವನ್ನೂ ದೃಷ್ಟಿಕೋನದಲ್ಲಿ ಇರಿಸಿಕೊಳ್ಳಿ. ನಿಮಗೆ ಕೆಲಸ ಸಿಗದಿದ್ದರೆ ಬೇರೆ ಸಾಕಷ್ಟು ಅವಕಾಶಗಳಿವೆ. ಅವರು ಆಯ್ಕೆ ಮಾಡಿದ ಅಭ್ಯರ್ಥಿಯು ಬಿಟ್ಟುಹೋದಾಗ ಮತ್ತೆ ಅದೇ ಸ್ಥಾನ ತೆರೆದುಕೊಳ್ಳುತ್ತದೆ.


  10. ತೀರಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ: ಯಾವುದನ್ನು ತೀರಾ ವೈಯಕ್ತಿಕವಾಗಿ ತೆಗೆದುಕೊಳ್ಳದೇ ಇರುವುದು ಬಹಳ ಮುಖ್ಯ. ನಿರುತ್ಸಾಹಗೊಳ್ಳದಿರುವುದು ತುಂಬಾ ಕಷ್ಟವಾದರೂ ಅಸಾಧ್ಯವಲ್ಲ. ನೀವು ನೂರಾರು ಸಂದರ್ಶನಗಳಿಗೆ ಹೋಗಬಹುದು. ಸಾವಿರಾರು ರೆಸ್ಯೂಮ್‌ಗಳನ್ನು ಕಳುಹಿಸಬಹುದು. ಇನ್ನೂ ಆ ಕರೆಗಾಗಿ ಕಾಯುತ್ತಿರಬಹುದು. ಸ್ನೇಹಿತರು ಮತ್ತು ಕುಟುಂಬದವರು "ಸರಿಯಾದ ಕೆಲಸ ಸಿಕ್ಕೇ ಸಿಗುತ್ತದೆ “ ಎಂದು ಸಮಾಧಾನ ಮಾಡುತ್ತಾರೆ.


  ಆದರೆ ಕೆಲವೊಮ್ಮೆ ಅದನ್ನು ನಂಬಲು ಕಷ್ಟವಾಗುತ್ತದೆ. ನೀವು ಒಬ್ಬಂಟಿಯಾಗಿಲ್ಲ, ಬದಲಾಗಿ ಪ್ರತಿ ನಿರಾಕರಣೆಯಲ್ಲೂ ನಿಮಗೆ ಅದು ಫಿಟ್‌ ಅಲ್ಲ ಎಂಬುದನ್ನು ನೆನಪು ಮಾಡಿಕೊಳ್ಳಿ. ನಿಮಗೆ ಕೆಲಸ ಸಿಗಬೇಕು ಎಂದಿದ್ದರೆ ಅದು ಸಿಕ್ಕೇ ಸಿಗುತ್ತದೆ. ಪ್ರತಿ ಸೋಲೂ ಮತ್ತೊಂದು ಪ್ರಯತ್ನದೊಂದಿಗೆ ಆರಂಭಗೊಳ್ಳಲಿ. ಅಲ್ಲೋ... ಯಾರಿಗೋ ಥೇಟ್‌ ನಿಮ್ಮಂಥ ಅಭ್ಯರ್ಥಿಯೇ ಬೇಕಾಗಿದ್ದಿರಬಹುದು. ಅವರು ನಿಮ್ಮಂಥವರಿಗಾಗಿಯೇ ಹುಡುಕುತ್ತಿರಬಹುದು.


  ಹಾಗಾಗಿ ಪ್ರಯತ್ನಿಸುತ್ತಲೇ ಇರಿ. ಒಂದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ. ಕೆಲವೊಮ್ಮೆ ಇದರಿಂದ ಹತಾಶೆ ಉಂಟಾಗುತ್ತದೆ ನಿಜ. ಹಾಗೆ ಆದಾಗ ಈ ಹುಡುಕಾಟದಿಂದ ಒಂದು ಬ್ರೇಕ್‌ ತೆಗೆದುಕೊಳ್ಳಿ. ನಿಮಗಿಷ್ಟವಾದ ಕೆಲಸ ಮಾಡಿ. ಮತ್ತೆ ಬಂದು ಹುಮ್ಮಸ್ಸಿನಿಂದ ಹುಡುಕಾಟ ಆರಂಭಿಸಿ.

  Published by:Kavya V
  First published: