• Home
  • »
  • News
  • »
  • jobs
  • »
  • Career Choice: ಕರಿಯರ್ ಆಯ್ಕೆಗೂ ಮುನ್ನ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು

Career Choice: ಕರಿಯರ್ ಆಯ್ಕೆಗೂ ಮುನ್ನ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಯಸ್ಸು ಮೀರಿದ ಮೇಲೆ ವೃತ್ತಿ ಬದಲಾವಣೆ, ತಪ್ಪುಗಳನ್ನು ಸರಿ ಮಾಡಿಕೊಂಡು ಮೊದಲಿನಿಂದ ಆರಂಭಿಸುವುದು ಕಷ್ಟದ ಕೆಲಸ ಎಂಬುವುದನ್ನು ಮರೆಯಬೇಡಿ. ಸರಿದು ಹೋದ ಕಾಲ ಮತ್ತೆ ಬರುವುದಿಲ್ಲ. ಹೀಗಾಗಿ ಮೊದಲೇ ಚೆನ್ನಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.

  • Share this:

ವೃತ್ತಿಯನ್ನು ಆಯ್ಕೆ (Career Choice) ಮಾಡಿಕೊಳ್ಳುವ ವಿಚಾರದಲ್ಲಿ ಎಲ್ಲರೂ ಸಲಹೆಗಳನ್ನು ನೀಡುತ್ತಾರೆ. ಆದರೆ ಎಲ್ಲರ ಮಾತನ್ನೂ ಕೇಳುತ್ತಿದ್ದರೆ ಗೊಂದಲ (Confusion in Choosing Career) ಹೆಚ್ಚಾಗೋದು ಗ್ಯಾರಂಟಿ. ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ಕರಿಯರ್​ ಅನ್ನು ಆಯ್ಕೆ ಮಾಡಿ. ವೃತ್ತಿಯನ್ನು ಆಯ್ಕೆ ಮಾಡುವ ಮೊದಲು ತಜ್ಞರ ಸಹಾಯವನ್ನು ತೆಗೆದುಕೊಳ್ಳಿ. ಅವರೊಂದಿಗೆ ಮಾತನಾಡುವುದರಿಂದ ನಿಮಗೆ ವಾಸ್ತವದ ಮಾಹಿತಿ ಸಿಗುತ್ತದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಮುಂದೆ ಉದ್ಯೋಗ ಮಾಡಲು ಯಾವ ಫೀಲ್ಡ್​ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟತೆ ಸಿಗುತ್ತದೆ.


ನಿಮ್ಮ ಆಸಕ್ತಿ ಏನು?


ವೃತ್ತಿಯನ್ನು ಆಯ್ಕೆ ಮಾಡುವಾಗ ನಿಮ್ಮ ನಿರ್ಧಾರ ಮತ್ತು ಆಸಕ್ತಿಯ ಮೇಲೆ ಗಮನ ಇರಲಿ. ನಿಮ್ಮನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಳ್ಳಿ. ಕೋರ್ಸ್ ಅಥವಾ ಕ್ಷೇತ್ರ ಆಯ್ಕೆ ನಿರ್ಧಾರವನ್ನು ಪದೇ ಪದೇ ಬದಲಾಯಿಸಬೇಡಿ. ಒಮ್ಮೆ ಯೋಚಿಸಿದ ನಂತರ ವೃತ್ತಿಯನ್ನು ಆರಿಸಿಕೊಳ್ಳಿ. ಇದರೊಂದಿಗೆ ಸಮಯ ವ್ಯರ್ಥವಾಗುವುದಿಲ್ಲ.


ವೃತ್ತಿ ಆಯ್ಕೆಗೂ ಮುನ್ನ ಏನು ಮಾಡಬೇಕು?


ನೀವು ಮಾಡುತ್ತಿರುವ ಕೋರ್ಸ್​​ಗೆ ಸಂಬಂಧಪಟ್ಟ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿ. ಇದು ಕೋರ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಮತ್ತೊಂದೆಡೆ, ಅನುಭವಿ ವ್ಯಕ್ತಿಗಳಿಂದ ವೃತ್ತಿಜೀವನಕ್ಕೆ ಉತ್ತಮ ಮಾರ್ಗದರ್ಶನ ಸಿಗುತ್ತದೆ. ವೃತ್ತಿಜೀವನದಲ್ಲಿ ವ್ಯಕ್ತಿತ್ವವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವೃತ್ತಿಯನ್ನು ಆಯ್ಕೆ ಮಾಡಲು ಮತ್ತು ಯಶಸ್ಸನ್ನು ಸಾಧಿಸಲು ಇವು ಅತ್ಯಗತ್ಯ.


upskilling for career development 5 tips to upskill for career advancement
ಸಾಂದರ್ಭಿಕ ಚಿತ್ರ


ವೃತ್ತಿ ಭವಿಷ್ಯದ ಬಗ್ಗೆ ಎಲ್ಲಾ ಆಯಾಮಗಳಿಂದ ಯೋಚಿಸಿ


ಕೆಲಸದ ವಾತಾವರಣಕ್ಕೂ ಗಮನ ಕೊಡಿ. ವೃತ್ತಿಯನ್ನು ಆಯ್ಕೆ ಮಾಡುವಾಗ, ಯಾವ ಪರಿಸರದಲ್ಲಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ಗಮನ ಕೊಡಿ. ಇದಲ್ಲದೇ ಉದ್ಯೋಗಾವಕಾಶ, ಉದ್ಯೋಗ ಭದ್ರತೆ, ಎಷ್ಟು ಸಂಬಳ ಸಿಗುತ್ತಿದೆ ಎಂಬುದರ ಬಗ್ಗೆಯೂ ಗಮನ ಹರಿಸಬೇಕು.


ಇದನ್ನೂ ಓದಿ: Interview Tips-5: ಇಂಟರ್​ವ್ಯೂನಲ್ಲಿ ನಿಮ್ಮ ಪರಿಚಯ ಮಾಡಿಕೊಡುವಾಗ ಈ ಮಾಹಿತಿಗಳನ್ನು ಹೇಳಬೇಡಿ


ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರವು ಉತ್ತಮ ಅವಕಾಶಗಳನ್ನು ನೀಡಬಲ್ಲದು ಎಂಬುದನ್ನು ವಿಶ್ಲೇಷಿಸಿ. ಇತರ ಆಯ್ಕೆಗಳಿಗಿಂತ ಯಾವ ಕ್ಷೇತ್ರದಲ್ಲಿ ಬೆಳವಣಿಗೆ ಹೆಚ್ಚು. ಭವಿಷ್ಯದಲ್ಲಿ ಹಣ ಮತ್ತು ಹವ್ಯಾಸ ಎರಡನ್ನೂ ಪೂರೈಸಲು ಯಾವಾಗಲೂ ಅಂತಹ ವೃತ್ತಿಯನ್ನು ಆರಿಸಿಕೊಳ್ಳಿ.


ಮುಂದಿನ 5, 10 ವರ್ಷಗಳಲ್ಲಿ ನೀವು ಎಲ್ಲಿರಬೇಕು?


ವೃತ್ತಿ ಜೀವನದಲ್ಲಿ ಮೈಲಿಗಲ್ಲುಗಳನ್ನು ಮುಟ್ಟುವುದು ತುಂಬಾನೇ ಮುಖ್ಯ. ಈಗ ನಾನು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ, ಮುಂದಿನ ಹಾದಿ ಹೇಗಿರುತ್ತದೆ. ಯಾವ ಯಾವ ಹುದ್ದೆಗಳನ್ನು ಅಲಂಕರಿಸಬಹುದು. ಮುಂದಿನ 5 ಹಾಗೂ 10 ವರ್ಷಗಳಲ್ಲಿ ಎಷ್ಟು ಮುಂದೆ ಸಾಗಿರಬಹುದು. ನನ್ನ ಸಾಧನೆಗೆ ತಕ್ಕಂತ ಅವಕಾಶ, ವೇತನ ಸಿಗುತ್ತದೆಯೇ ಎಂಬುದನ್ನು ಮೊದಲೇ ಯೋಚನೆ ಮಾಡಬೇಕು.


Career Growth Tips: ನಿಮ್ಮ ವೃತ್ತಿಯಲ್ಲಿ ಬೇಗ ಯಶಸ್ಸು ಸಿಗಬೇಕೆಂದರೆ ಈ 5 ಟಿಪ್ಸ್ ಪಾಲಿಸಿ ಸಾಕು
ಸಾಂಕೇತಿಕ ಚಿತ್ರ


ಇದನ್ನು ಮರೆಯಬೇಡಿ


ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪುಗಳನ್ನು ನೀವು 30 ವರ್ಷದೊಳಗೆ ಮಾಡಿಕೊಂಡರೆ ಸಮಸ್ಯೆ ಇಲ್ಲ. ವಯಸ್ಸು ಮೀರಿದ ಮೇಲೆ ವೃತ್ತಿ ಬದಲಾವಣೆ, ತಪ್ಪುಗಳನ್ನು ಸರಿ ಮಾಡಿಕೊಂಡು ಮೊದಲಿನಿಂದ ಆರಂಭಿಸುವುದು ಕಷ್ಟದ ಕೆಲಸ ಎಂಬುವುದನ್ನು ಮರೆಯಬೇಡಿ. ಸರಿದು ಹೋದ ಕಾಲ ಮತ್ತೆ ಬರುವುದಿಲ್ಲ. ಹೀಗಾಗಿ ಮೊದಲೇ ಚೆನ್ನಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.

Published by:Kavya V
First published: