• Home
 • »
 • News
 • »
 • jobs
 • »
 • BE vs B.Tech: ಮುಂದೆ ಒಳ್ಳೆಯ ಕೆಲಸ ಸಿಗಬೇಕು ಎಂದರೆ BE ಮಾಡಬೇಕಾ, B.Tech ಓಕೆ ನಾ?

BE vs B.Tech: ಮುಂದೆ ಒಳ್ಳೆಯ ಕೆಲಸ ಸಿಗಬೇಕು ಎಂದರೆ BE ಮಾಡಬೇಕಾ, B.Tech ಓಕೆ ನಾ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತದ ಹೆಚ್ಚಿನ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಈ ಎರಡೂ ಕೋರ್ಸ್‌ಗಳು ಲಭ್ಯವಿವೆ. ಆದರೆ ಯಾವುದಕ್ಕೆ ಹೆಚ್ಚು ಸ್ಕೋಪ್ ಇದೆ? ಯಾವುದನ್ನು ಆಯ್ಕೆ ಮಾಡಿದರೆ ಒಳ್ಳೆಯದು, ಎಂಬ ಗೊಂದಲವಿದ್ದರೆ ಈ ಲೇಖನ ಸಹಕಾರಿಯಾಗಲಿದೆ.

 • Share this:

  ಹಲವಾರು ವಿದ್ಯಾರ್ಥಿಗಳು (Students) ಪಿಯುಸಿ (PUC) ಮುಗಿದ ನಂತರ ಪದವಿಯಲ್ಲಿ ಯಾವ ವಿಷಯವನ್ನು ತೆಗೆದುಕೊಳ್ಳುವುದು? ಯಾವುದಕ್ಕೆ ಒಳ್ಳೆಯ ಭವಿಷ್ಯವಿದೆ? ವೃತ್ತಿಗೆ (Career) ಯಾವ ಕೋರ್ಸ್ ಸೂಕ್ತ ಎಂಬ ತೊಳಲಾಟದಲ್ಲಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ಇಂತಹ ಗೊಂದಲದಲ್ಲಿ ಇದ್ದೇ ಇರುತ್ತಾರೆ, ಈ ಸಮಯದಲ್ಲಿ ನೀವು ತೆಗೆದುಕೊಳ್ಳಲು ಬಯಸುವ ಕೋರ್ಸ್‌ಗಳ ಬಗೆಗೆ ಸೂಕ್ತವಾದ ಮಾಹಿತಿ ಕಲೆಹಾಕಿಕೊಂಡು ಇಲ್ಲವೇ ಹಿರಿಯ ಹಾಗೂ ಅನುಭವ ಹೊಂದಿರುವವರ ಸಲಹೆಯನ್ನು ಪಡೆದುಕೊಂಡು ಮುಂದಡಿ ಇಡುವುದು ಸೂಕ್ತ ನಿರ್ಧಾರವಾಗಿದೆ.


  ಬಿಇ ಹಾಗೂ ಬಿ.ಟೆಕ್ ವ್ಯತ್ಯಾಸವೇನು?


  ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೇ ಬಿಇ ಅಥವಾ ಬಿಟೆಕ್ ಎಂಬ ಉಪವರ್ಗಗಳಿದ್ದು ಇವೆರಡರಲ್ಲಿ ಆಯ್ಕೆಮಾಡುವುದು ಹೇಗೆ ಮತ್ತು ಇವುಗಳಿಗಿರುವ ವ್ಯತ್ಯಾಸಗಳೇನು ಎಂಬುದನ್ನು ಅರಿತುಕೊಳ್ಳುವುದು ಯಾವುದು ಆಯ್ಕೆಮಾಡಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತದೆ.


  ಶೈಕ್ಷಣಿಕ ಅನುಭವಿಗಳು ಹೇಳುವಂತೆ ವಿದ್ಯಾರ್ಥಿಗಳು ಈ ಎರಡೂ ಕೋರ್ಸ್‌ಗಳನ್ನು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಯ್ಕೆಮಾಡುವ ಮುನ್ನ ಇವುಗಳಿಗಿರುವ ವ್ಯತ್ಯಾಸಗಳನ್ನು ಅರಿತುಕೊಂಡು ಮುಂದುವರಿಯುವುದು ಸೂಕ್ತ ಎಂಬುದಾಗಿದೆ.


  ಸಾಂದರ್ಭಿಕ ಚಿತ್ರ


  ಭಾರತದ ಹೆಚ್ಚಿನ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಈ ಎರಡೂ ಕೋರ್ಸ್‌ಗಳು ಲಭ್ಯವಿವೆ. ಆದರೆ ಯಾವುದಕ್ಕೆ ಹೆಚ್ಚು ಸ್ಕೋಪ್ ಇದೆ? ಯಾವುದನ್ನು ಆಯ್ಕೆ ಮಾಡಿದರೆ ಒಳ್ಳೆಯದು, ಎಂಬ ಗೊಂದಲವಿದ್ದರೆ ಈ ಲೇಖನ ಸಹಕಾರಿಯಾಗಲಿದೆ.


  ಎರಡೂ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ಕಡ್ಡಾಯ


  ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (BE) ಮತ್ತು ಬ್ಯಾಚುಲರ್ ಆಫ್ ಟೆಕ್ನಾಲಜಿ (B.Tech) ಎರಡೂ ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್‌ಗಳಾಗಿವೆ.


  ಈ ಬಹುತೇಕ ಕೋರ್ಸ್‌ಗಳಿಗೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಪ್ರಾಥಮಿಕ ಪ್ರವೇಶ ಅರ್ಹತೆಯಾಗಿದೆ. ಎರಡೂ ಪದವಿ ಕೋರ್ಸ್‌ಗಳು ಸಾಮಾನ್ಯವಾಗಿ ನಾಲ್ಕು ವರ್ಷಗಳ ವಿದ್ಯಾಭ್ಯಾಸ ಅವಧಿಯನ್ನು ಹೊಂದಿದೆ ಮತ್ತು ಹಲವಾರು ಇತರ ಸಾಮಾನ್ಯ ವೈಶಿಷ್ಟ್ಯಗಳನ್ನು ಒಳಗೊಂಡಿವೆ.


  ಈ ವೈಶಿಷ್ಟ್ಯಗಳನ್ನು ಸಾಮಾನ್ಯವಾಗಿ ಪರಸ್ಪರ ಬದಲಿಯಾಗಿ ವೃತ್ತಿ ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಆದರೆ ಇವೆರಡೂ ಬೇರೆ ಬೇರೆ ಕೋರ್ಸ್‌ಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
  ಈ ಕೋರ್ಸ್‌ಗಳಿಗಿರುವ ವ್ಯತ್ಯಾಸಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ


  ಬಿಇ ವರ್ಸಸ್ ಬಿಟೆಕ್: ಹೋಲಿಕೆಗಳು


  ಹೆಚ್ಚಿನವರು ಬಿಇ ಮತ್ತು ಬಿಟೆಕ್ ಒಂದೇ ರೀತಿಯದ್ದಾಗಿದೆ ಎಂದು ನಂಬುತ್ತಾರೆ. ಕೆಲವು ನಿದರ್ಶನಗಳಲ್ಲಿ ಅವು ಸಮಾನವಾಗಿದೆ ಎಂಬುದಾಗಿ ಕಂಡುಬರುತ್ತವೆ. ಇವೆರಡರ ನಡುವೆ ಸಾಕಷ್ಟು ಸಾಮ್ಯತೆಗಳಿದ್ದು ಅವುಗಳನ್ನು ಅರಿತುಕೊಳ್ಳಲೇಬೇಕು:


  * ಶಿಕ್ಷಣ ಹೆಸರುಗಳು ಮತ್ತು ವಿಧಾನಗಳು ವಿಭಿನ್ನವಾಗಿದ್ದರೂ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಬಿಇ ಮತ್ತು ಬಿಟೆಕ್ ಅನ್ನು ಪ್ರತ್ಯೇಕ ಕೋರ್ಸ್‌ಗಳಾಗಿ ಪರಿಗಣಿಸುವುದಿಲ್ಲ.


  * ಇವೆರಡೂ ಕೋರ್ಸ್‌ಗಳ ಕಾಲಾವಧಿ 4 ವರ್ಷಗಳು


  * BE ಮತ್ತು B.Tech ಕಾರ್ಯಕ್ರಮಗಳ ಮಾನದಂಡಗಳನ್ನು ಸಹ ಹೋಲಿಸಬಹುದಾಗಿದೆ. ವಿದ್ಯಾರ್ಥಿಗಳು ಅರ್ಹತೆ ಪಡೆಯಲು ವಿಜ್ಞಾನದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 60% ಪಡೆದಿರಬೇಕು.


  ಹೆಚ್ಚುವರಿಯಾಗಿ, ಬಿಇ ಅಥವಾ ಬಿಟೆಕ್ ಅನ್ನು ಮುಂದುವರಿಸಲು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


  ಬಿಇ ಹಾಗೂ ಬಿಟೆಕ್‌ಗಿರುವ ಎರಡೂ ಭಿನ್ನ ಹೇಗೆ?


  ವಿಭಿನ್ನ ಶೈಕ್ಷಣಿಕ ಮಾದರಿಗಳಲ್ಲಿ ಇವುಗಳನ್ನು ಅಳವಡಿಸಿರುವುದರಿಂದ ಸಾಮಾನ್ಯವಾಗಿ ಬಿ.ಇ ಹಾಗೂ ಬಿ.ಟೆಕ್ ನಡುವೆ ವ್ಯತ್ಯಾಸಗಳಿರುತ್ತವೆ.


  ಕೈಗಾರಿಕಾ ಅಗತ್ಯಗಳನ್ನು ಪೂರೈಸಲು ಬಿ.ಟೆಕ್ ಕೋರ್ಸ್ ಹಾಗೂ ಪಠ್ಯಕ್ರಮವನ್ನು ನಿರಂತರವಾಗಿ ನವೀಕರಿಸಲಾಗುತ್ತದೆ ಹಾಗೂ ಬಿಇ ಥಿಯರಿ ಆಧಾರಿತವಾಗಿದ್ದು ಹಳೆಯ ವಿಚಾರಗಳು ಸಿದ್ಧಾಂತಗಳಿಗೆ ಆದ್ಯತೆ ನೀಡಲಾಗುತ್ತದೆ.


  education tips for btech students
  btec


  ಬಿಇ ಹಾಗೂ ಬಿ.ಟೆಕ್ ಆಯ್ಕೆಮಾಡುವುದು ಹೇಗೆ?


  ಬಿ.ಟೆಕ್ ಹಾಗೂ ಬಿ.ಇ ವಿದ್ಯಾರ್ಥಿಗಳಿಗೆ ವಿಫುಲ ವೃತ್ತಿ ಆಯ್ಕೆಗಳು ಲಭ್ಯವಿವೆ. ವಿದ್ಯಾರ್ಥಿಗಳ ಕೌಶಲ್ಯದ ಅಗತ್ಯತೆಗಳು, ಮಹತ್ವಾಕಾಂಕ್ಷೆಗಳು ಮತ್ತು ಆಸಕ್ತಿಗಳನ್ನು ಆಧರಿಸಿ ಬಿ.ಟೆಕ್ ಅಥವಾ ಬಿಇ ಕೋರ್ಸ್ ಮಾಡಬೇಕೆ ಎಂಬುದನ್ನು ನಿರ್ಧರಿಸುತ್ತದೆ.


  ಥಿಯರಿ ಜ್ಞಾನವನ್ನು ಅನ್ವೇಷಿಸುತ್ತಿರುವವರಿಗೆ ಬಿಇ ಪದವಿ ಹೆಚ್ಚು ಸೂಕ್ತವಾಗಿದೆ. ಸಿಸ್ಟಮ್ ವಿನ್ಯಾಸಗಳು, ಕಂಪ್ಯೂಟರ್ ಅಪ್ಲಿಕೇಶನ್‌ಗಳು ಹೀಗೆ ನಿಮ್ಮ ಆಸಕ್ತಿ ಈ ಕ್ಷೇತ್ರದಲ್ಲಾದರೆ ಬಿಇ ಸೂಕ್ತ.


  ಪ್ರಾಕ್ಟಿಕಲ್ ಜ್ಞಾನದ ಮೇಲೆ ಆಸಕ್ತಿ ಉಳ್ಳವರಿಗೆ ಬಿ.ಟೆಕ್ ಕೋರ್ಸ್ ಸೂಕ್ತವಾದುದು. ಡೇಟಾ ಪ್ರಕ್ರಿಯೆಗಾಗಿ ಪ್ರಾಯೋಗಿಕ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲು ಬಯಸಿದರೆ ಬಿ.ಟೆಕ್ ಕೋರ್ಸ್ ಕೌಶಲ್ಯ ಆಧಾರಿತವಾಗಿರುತ್ತದೆ ಹಾಗೂ ಡೇಟಾ ಪ್ರಕ್ರಿಯೆಗಾಗಿ ಕಂಪ್ಯೂಟರ್ ಅಪ್ಲಿಕೇಶನ್‌ಗಳನ್ನು ಹೇಗೆ ನಿರ್ಮಿಸುವುದು ಎಂಬುದನ್ನು ತಿಳಿಸಿಕೊಡುತ್ತದೆ.

  Published by:Kavya V
  First published: