• ಹೋಂ
 • »
 • ನ್ಯೂಸ್
 • »
 • Jobs
 • »
 • Govt Bank ಉದ್ಯೋಗಿಗಳಿಗೆ ಮಹತ್ವದ ಸುದ್ದಿ; ವಾರದಲ್ಲಿ 5 ದಿನ ಮಾತ್ರ ಕೆಲಸಕ್ಕೆ ಕೇಂದ್ರ ಸಚಿವರ ಸ್ಪಷ್ಟನೆ

Govt Bank ಉದ್ಯೋಗಿಗಳಿಗೆ ಮಹತ್ವದ ಸುದ್ದಿ; ವಾರದಲ್ಲಿ 5 ದಿನ ಮಾತ್ರ ಕೆಲಸಕ್ಕೆ ಕೇಂದ್ರ ಸಚಿವರ ಸ್ಪಷ್ಟನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪ್ರಸ್ತುತ, ಬ್ಯಾಂಕ್ ನೌಕರರು ಪರ್ಯಾಯ ಶನಿವಾರದಂದು ಕೆಲಸ ಮಾಡುತ್ತಾರೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್‌ಗಳು ಎಂದಿನಂತೆ ತೆರೆದಿರುತ್ತವೆ.

 • Share this:

ಸರ್ಕಾರಿ ಬ್ಯಾಂಕ್‌ಗಳು (Govt Bank) ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯನಿರ್ವಹಿಸಲು ಶೀಘ್ರದಲ್ಲೇ ಅನುಮತಿಸಲಾಗುವುದು ಎಂದು ಮೂಲಗಳು ಸಿಎನ್‌ಬಿಸಿ ಆವಾಜ್‌ಗೆ ತಿಳಿಸಿವೆ. ಹಣಕಾಸು ಸಚಿವಾಲಯ (Finance Ministry) ಶೀಘ್ರದಲ್ಲೇ ಈ ಬಗ್ಗೆ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


ಈ ಹಿಂದೆ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ (UFBEs) ವಾರಕ್ಕೆ 5 ದಿನಗಳ ಕೆಲಸದ ಮಾದರಿಯನ್ನು ಒಪ್ಪಿಕೊಂಡಿವೆ ಎಂದು ವರದಿಯಾಗಿದ್ದು, ಆದರೆ ಈ ಮಾದರಿ ಜಾರಿಯದರೆ ಒಟ್ಟು ಕೆಲಸದ ಸಮಯವನ್ನು ದಿನಕ್ಕೆ 40 ನಿಮಿಷಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


IBA ಯಿಂದ ಅನುಮೋದನೆಯನ್ನು ಪಡೆದ ನಂತರ, ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ನಂತರ ಅನುಮೋದನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ಬ್ಯಾಂಕ್ ನೌಕರರು ಪರ್ಯಾಯ ಶನಿವಾರದಂದು ಕೆಲಸ ಮಾಡುತ್ತಾರೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್‌ಗಳು ಎಂದಿನಂತೆ ತೆರೆದಿರುತ್ತವೆ. ಸಿಎನ್‌ಬಿಸಿ ಆವಾಜ್ ಪ್ರಕಾರ, ಐಬಿಎ ಈ ಅಗತ್ಯತೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ ಮತ್ತು ವೇತನ ಮಂಡಳಿಯನ್ನು ಪರಿಷ್ಕರಿಸಲು ಶೀಘ್ರದಲ್ಲೇ ನೋಟಿಸ್ ನೀಡಲಾಗುವುದು ಎಂದು ವರದಿಗಳು ಪ್ರಕಟಿಸಿವೆ.


ಏತನ್ಮಧ್ಯೆ, ಮೇ ತಿಂಗಳಲ್ಲಿ 11 ದಿನಗಳ ಕಾಲ ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಬುದ್ಧ ಪೂರ್ಣಿಮಾ ಮತ್ತು ಮಹಾರಾಣಾ ಪ್ರತಾಪ್ ಜಯಂತಿ ಸೇರಿದಂತೆ ವಿವಿಧ ಹಬ್ಬಗಳ ಕಾರಣದಿಂದ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ ರಜೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.


ಇದನ್ನೂ ಓದಿ: Career After BBA: ಕಾಮರ್ಸ್ ವಿದ್ಯಾರ್ಥಿಗಳಿಗೆ ಬಿಬಿಎ ಪದವಿ ಬಳಿಕ ವೃತ್ತಿ ಆಯ್ಕೆ ಹೇಗಿದ್ದರೆ ಉತ್ತಮ?


ಮೇ ತಿಂಗಳಲ್ಲಿ ಬ್ಯಾಂಕ್‌ಗೆ ಭೇಟಿ ನೀಡಲು ಯೋಜಿಸುವ ಗ್ರಾಹಕರು ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಬ್ಯಾಂಕ್ ರಜೆಯ ಕ್ಯಾಲೆಂಡರ್ ಅನ್ನು ಪರಿಶೀಲಿಸುವುದು ಉತ್ತಮ.


ಮೇ 2023 ರಲ್ಲಿ ನಿಯಮಿತ ವಾರಾಂತ್ಯದ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:


ಮೇ 7: ಭಾನುವಾರ
ಮೇ 13: ಎರಡನೇ ಶನಿವಾರ
ಮೇ 14: ಭಾನುವಾರ
ಮೇ 21: ಭಾನುವಾರ
ಮೇ 27: ನಾಲ್ಕನೇ ಶನಿವಾರ
ಮೇ 28: ಭಾನುವಾರ


ಈ ಮೇಲಿನ ರಜೆಗಳನ್ನು ಸೇರಿಸಿ ಒಟ್ಟು 11 ದಿನಗಳವರೆಗೆ ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗಿದ್ದರೂ, ಗ್ರಾಹಕರು ಆನ್‌ಲೈನ್ ವಹಿವಾಟು ನಡೆಸಲು ಮೊಬೈಲ್ ಫೋನ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು. ಗ್ರಾಹಕರು ಎಟಿಎಂಗಳು ಮತ್ತು ಬ್ಯಾಂಕಿಂಗ್ ಕಿಯೋಸ್ಕ್‌ಗಳಲ್ಲಿ ಈ ಸೇವೆಗಳನ್ನು ಬಳಸಬಹುದು.


ಪ್ರಸ್ತಾವನೆಯನ್ನು ಅನುಮೋದಿಸಿದರೆ ಏನು ಬದಲಾಗುತ್ತದೆ? 


*ಕಳೆದುಹೋದ ಸಮಯವನ್ನು ಸರಿದೂಗಿಸಲು ನೌಕರರು ಪ್ರತಿದಿನ 40-50 ನಿಮಿಷ ಹೆಚ್ಚು ಕೆಲಸ ಮಾಡುತ್ತಾರೆ.
*ಉದ್ಯೋಗಿಗಳ ಸಮಯ ಬದಲಾಗಬಹುದು (9:45 AM ನಿಂದ 5:30 PM).
*ಶನಿವಾರ ಮತ್ತು ಭಾನುವಾರ ರಜೆ. ಪ್ರಸ್ತುತ, ಬ್ಯಾಂಕ್ ಉದ್ಯೋಗಿಗಳು ಪರ್ಯಾಯ ಶನಿವಾರದಂದು ಕೆಲಸ ಮಾಡುತ್ತಾರೆ.


"ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ನ ಸೆಕ್ಷನ್ 25 ರ ಅಡಿಯಲ್ಲಿ, ಸರ್ಕಾರವು ಎಲ್ಲಾ ಶನಿವಾರಗಳನ್ನು ರಜೆಯೆಂದು ಸೂಚಿಸಬೇಕು. ಆರ್ಬಿಐ ಕೂಡ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕು. ಇದು ಹೆಚ್ಚಿನ ಅಂತರಬ್ಯಾಂಕ್ ಚಟುವಟಿಕೆಯ ಸಮಯವನ್ನು ನಿರ್ಧರಿಸುತ್ತದೆ" ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜನ್ ಹೇಳಿದ್ದಾರೆ.

top videos


  ಏಪ್ರಿಲ್‌ನಲ್ಲಿ, ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ ಮತ್ತು ಈದ್-ಉಲ್-ಫಿತರ್‌ನಂತಹ ಹಬ್ಬಗಳ ಕಾರಣ ಬ್ಯಾಂಕುಗಳು 15 ದಿನಗಳವರೆಗೆ ಕಾರ್ಯನಿರ್ವಹಿಸಿರಲಿಲ್ಲ. ಇನ್ನು ಈ ವಾರದಲ್ಲಿ ಐದು ದಿನಗಳಷ್ಟೇ ಕೆಲಸದ ಯೋಜನೆ ಕಾರ್ಯರೂಪಕ್ಕೆ ಬಂದರೆ ಬ್ಯಾಂಕ್ ಸಿಬ್ಬಂದಿ ಸಂತಸ ಪಡುತ್ತಾರೆ.

  First published: