• ಹೋಂ
  • »
  • ನ್ಯೂಸ್
  • »
  • Jobs
  • »
  • KPSC Success Story: 22 ವರ್ಷಕ್ಕೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಕನ್ನಡತಿ; 3 ಸರ್ಕಾರಿ ಕೆಲಸ ಪಡೆದ ಗಟ್ಟಿಗಿತ್ತಿ

KPSC Success Story: 22 ವರ್ಷಕ್ಕೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಕನ್ನಡತಿ; 3 ಸರ್ಕಾರಿ ಕೆಲಸ ಪಡೆದ ಗಟ್ಟಿಗಿತ್ತಿ

3 ಸರ್ಕಾರಿ ನೌಕರಿ ಪಡೆದ ಪ್ರೀತಿ

3 ಸರ್ಕಾರಿ ನೌಕರಿ ಪಡೆದ ಪ್ರೀತಿ

ಓದಿನಲ್ಲಿ ಚುರುಕಿದ್ದ ಪ್ರೀತಿಗೆ 15 ವರ್ಷ ಆದಾಗ ಕಣ್ಣಿನ ಸಮಸ್ಯೆ ಎದುರಾಯಿತು. ಆಗ ಕನ್ನಡಕ ಬಳಸಲು ಶುರು ಮಾಡಿದರು. ಆದರೆ 22 ವರ್ಷ ಆದಾಗ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು.

  • Share this:

ಹುಟ್ಟುವಾಗಲೇ ಅಂಗವೈಕಲ್ಯ (Physical Disability), ಅಂಧತ್ವ (Blindness) ಹೊಂದಿರುವವರ ಬಹುಕೇ ಒಂದು ಹೋರಾಟದಂತಿರುತ್ತದೆ. ತಮ್ಮ ನೂನ್ಯತೆಗಳೊಂದಿಗೆ ಬದುಕುವುದನ್ನು ಕಲಿಯುತ್ತಾರೆ. ಆದರೆ ಯಾವುದೇ ವೈಕಲ್ಯತೆ ಇಲ್ಲದೆ ಜನಿಸಿ ನಂತರ ಬದುಕಿನಲ್ಲಿ ಅಂಗವೈಕಲ್ಯತೆಗೆ ತುತ್ತಾದವರ ನೋವು ಹೇಳತೀರದು. ಇಂದು ನಾವು ಹೇಳ ಹೊರಟಿರುವ ಯುವತಿಯ ಪರಿಸ್ಥಿತಿಯೂ ಇದೇ ರೀತಿ ಇದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ನಿವಾಸಿ ಪ್ರೀತಿ ಕಾರುಡಗಿಮಠ ಅವರ ಜೀವನದ ಕಥೆ ಹೇಳಿದರೆ ಎಂಥವರ ಕಣ್ಣಾಲಿಗೆಯೂ ತೇವಗೊಳ್ಳುತ್ತವೆ.


ಎಲ್ಲರಂತೆ ಆಡಿಕೊಂಡು ನೂರಾರು ಕನಸ್ಸು ಹೊತ್ತು ಪದವಿ ಮುಗಿಸಿದ ಯುವತಿಯ ಬಾಳೇ ಅಂಧಕಾರಕ್ಕೆ ತುತ್ತಾಯಿತು. ಆದರೂ ಎದೆಗುಂದದ ಗಟ್ಟಿಗಿತ್ತಿ ಇಂದು 3 ಸರ್ಕಾರಿ ಹುದ್ದೆಗಳನ್ನು (Govt Jobs) ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.


ಸಾಧಕಿ ಪ್ರೀತಿ


ಕಣ್ಣು ಕಾಡದೆ PG ಮಾಡಲು ಆಗಲಿಲ್ಲ


ಪ್ರೀತಿ ಕಾರುಡಗಿಮಠ ಅವರು ಸಾಮಾನ್ಯ ಕುಟುಂಬದಲ್ಲಿ ಮೂವರು ಸಹೋದರಿಯರ ಜೊತೆ ಜನಿಸಿದವರು. ಓದಿನಲ್ಲಿ ಚುರುಕಿದ್ದ ಪ್ರೀತಿಗೆ 15 ವರ್ಷ ಆದಾಗ ಕಣ್ಣಿನ ಸಮಸ್ಯೆ ಎದುರಾಯಿತು. ಆಗ ಕನ್ನಡಕ ಬಳಸಲು ಶುರು ಮಾಡಿದರು. ಆದರೆ 22 ವರ್ಷ ಆದಾಗ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು. BScಯಲ್ಲಿ 88% ಅಂಕ ಪಡೆದಿದ್ದಾಕೆ, MSc ಗಣಿತ ವಿಭಾಗದಲ್ಲಿ ಅಧ್ಯಯನದ ವೇಳೆ ಕಣ್ಣು ಕಾಣಿಸದಿದ್ದಾಗ ಅರ್ಧಕ್ಕೆ ಬಿಡಬೇಕಾಯಿತು.


3 ಸರ್ಕಾರಿ ಹುದ್ದೆಗಳಿಗೆ ಆಯ್ಕೆ 


ಮದುವೆ ವಯಸ್ಸಿಗೆ ಬಂದ ಹೆಣ್ಣುಮಗಳು ದೃಷ್ಟಿ ಕಳೆದುಕೊಂಡಿದ್ದನ್ನು ನೋಡಿ ಇಡೀ ಕುಟುಂಬವೇ ಕಣ್ಣೀರು ಸುರಿಸಿತು. ಆದರೆ ಪ್ರೀತಿ ಮಾತ್ರ ತನ್ನ ಕನಸಿಗೆ ಬೆಳಕು ಹರಿಸಿದಳು. ದೃಷ್ಟಿ ಇಲ್ಲದಿದ್ದರೆ ಏನು, ಪ್ರತಿಭೆ ಇದೆ ನನಗೆ ಎಂದು ಮುಂದೆ ಸಾಗಿದಳು. ಅದರ ಫಲವಾಗಿ ಇಂದು 3 ಸರ್ಕಾರಿ ಕೆಲಸವನ್ನು ಪಡೆದುಕೊಂಡಿದ್ದಾಳೆ. 2020 ರಲ್ಲಿ 10ನೇ ಕ್ಲಾಸ್​ ಆಧಾರದ ಮೇಲೆ ಕೋರ್ಟ್​ನಲ್ಲಿ ಪ್ರೊಸೆಸಿಂಗ್ ಸರ್ವರ್ ಹುದ್ದೆ ಪಡೆದುಕೊಂಡರು. ನಂತರ 2021ರಲ್ಲಿ ಪಸ್ಟ್ ಗ್ರೇಡ್ ರೆವೆನ್ಯು ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದರು.  ಜೊತೆಗೆ 2021ರಲ್ಲೇ ಎಫ್​ಡಿಎ ಪಾಸ್ ಆಗಿ ಇದೀಗ ಕರ್ನಾಟಕ ಬಯಲಾಟ ಅಕಾಡೆಮಿಯಲ್ಲಿ ಮೂರು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: UPSC Success Story: ಅಬ್ಬಬ್ಬಾ, 6 ವರ್ಷಗಳಲ್ಲಿ 12 ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ; ರೈತನ ಮಗನ ಸಾಧನೆ ಇದು


ಪ್ರೀತಿಗೆ ಕುಟುಂಬವೇ ಶಕ್ತಿ 


ಈ ಸರ್ಕಾರಿ ಹುದ್ದೆಗಳಿಗೇ ಪ್ರೀತಿ ತೃಪ್ತಿಗೊಂಡಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತನ್ನ ಅಭ್ಯಾಸವನ್ನು ಮುಂದುವರಿಸಿ ಮುಂದೆ ಕೆಎಎಸ್​ ಅಧಿಕಾರಿ ಆಗುವ ಗುರಿ ಹೊಂದಿದ್ದಾರೆ. ಅಂಗವೈಕಲ್ಯತೆ ಸಾಧನೆಗೆ ಎಂದಿಗೂ ಅಡ್ಡಿ ಆಗಬಾರದು ಎನ್ನುತ್ತಾರೆ ಪ್ರೀತಿ. ಇನ್ನು ತನ್ನ ಸಾಧನೆಯಲ್ಲಿ ಬೆಂಬಲವಾಗಿ ನಿಂತ ತಂದೆ-ತಾಯಿ, ಸೋದರಿಯರನ್ನು ಸ್ಮರಿಸುತ್ತಾರೆ.  ಸರ್ಕಾರಿ ಹುದ್ದೆಯ ಪರೀಕ್ಷೆಗೆ ತಯಾರಿ ನಡೆಸುವಾಗ ಓದಲು ಆಗದಿದ್ದರಿಂದ ವಿಡಿಯೋ, ಆಡಿಯೋ ಮೂಲಕ ಕಲಿತೆ. ಸೋದರಿಯರಿಂದ ಓದಿಸಿಕೊಂಡು ಅಭ್ಯಾಸ ಮಾಡಿದೆ. ತಂದೆ ಕೂಡ ನನ್ನ ಓದಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು ಎಂದು ಕುಟುಂಬಸ್ಥರಿಗೆ ಪ್ರೀತಿ ಧನ್ಯವಾದ ಹೇಳುತ್ತಾರೆ.




ಮಗಳು ಕಣ್ಣು ಕಳೆದುಕೊಂಡ ನೋವು ಅವಳ ಸಾಧನೆ ಮೂಲಕ ಮರೆಯಾಗಿದೆ ಎಂದು ಪ್ರೀತಿಯ ಪೋಷಕರು ನಿಟ್ಟುಸಿರು ಬಿಡುತ್ತಾರೆ. ಮಗಳನ್ನು ಐಎಎಸ್​ ಅಥವಾ ಕೆಎಎಸ್​ ಅಧಿಕಾರಿಯಾಗಿ ನೋಡುವ ಆಸೆ ಇದೆ ಎಂದು ಪ್ರೀತಿ ಅವರ ತಂದೆ ಹೇಳಿದ್ದಾರೆ. ಸಾಧನೆ ಮಾಡಬೇಕು ಎಂದುಕೊಂಡಿರುವ ಲಕ್ಷಾಂತರ ಮಂದಿಗೆ ಪ್ರೀತಿ ನಿಜಕ್ಕೂ ಮಾದರಿ ಅಂತಲೇ ಹೇಳಬಹುದು. ಅವರ ಛಲ, ಪ್ರತಿಭೆಗೆ ನಮದೊಂದು ಸಲಾಂ.

Published by:Kavya V
First published: