• Home
  • »
  • News
  • »
  • jobs
  • »
  • Bad Habits: 'ಉತ್ತಮ ನಾಯಕ' ಎನಿಸಿಕೊಳ್ಳಲು ಈ ಐದು ಅಭ್ಯಾಸಗಳನ್ನು ನೀವು ಬಿಡಲೇಬೇಕು!

Bad Habits: 'ಉತ್ತಮ ನಾಯಕ' ಎನಿಸಿಕೊಳ್ಳಲು ಈ ಐದು ಅಭ್ಯಾಸಗಳನ್ನು ನೀವು ಬಿಡಲೇಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಸ್ವಯಂ-ಅರಿವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಜನರು ನಿಮ್ಮಲ್ಲಿರುವ ಗುಣಗಳನ್ನು ಹಾಗೂ ನಡವಳಿಕೆಗಳನ್ನು ಇಷ್ಟ ಪಡುತ್ತಾರೆ.

  • Trending Desk
  • 3-MIN READ
  • Last Updated :
  • Share this:

ಯಶಸ್ಸಿನ ದಾರಿಯಲ್ಲಿರುವ ನಾಯಕರಂತಿದ್ದವರು ಕೆಲವೊಮ್ಮೆ ಯಾವುದೋ ಕೆಲವು ವಿಚಾರಗಳಿಗೆ ಕಟ್ಟ ಹೆಸರು ಪಡೆಯುತ್ತಾರೆ. ಆ ಸಮಯದಲ್ಲಿ (Time) ಆಗಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಲ್ಲದೆ ಹಿಂದಿನ ತಪ್ಪುಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ಪಡೆಯುವುದು ಉತ್ತಮ ನಾಯಕತ್ವದ ನಿರ್ಣಾಯಕ ಅಂಶವನ್ನು ಅಭಿವೃದ್ಧಿಪಡಿಸಲು ಹಾಗೂ ಸ್ವಯಂ-ಅರಿವಿಗೆ ಸಹಾಯ ಮಾಡುತ್ತದೆ. ನಿಮ್ಮ ಸ್ವಯಂ-ಅರಿವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಜನರು ನಿಮ್ಮಲ್ಲಿರುವ ಗುಣಗಳನ್ನು (Qulity) ಹಾಗೂ ನಡವಳಿಕೆಗಳನ್ನು ಇಷ್ಟ ಪಡುತ್ತಾರೆ. ಇತರರಿಗೆ ಗೌರವ ಕೊಡುವುದು, ನ್ಯಾಯಯುತವಾಗಿ ಮಾತನಾಡುವುದು, ಪರಾನುಭೂತಿ ಮತ್ತು ನಂಬಿಕೆ ಉಳಿಸಿಕೊಳ್ಳುವುದು ಮುಖ್ಯವಾಗಿವೆ. ಆದ್ದರಿಂದ, ಸ್ವಯಂ-ಅರಿವು ಇಲ್ಲದಿದ್ದರೆ ಹಲವು ಅವಮಾನಗಳನ್ನು ಎದುರಿಸಬೇಕಾಗುತ್ತದೆ.


ಕಾರಣ, ಸರಳವಾಗಿ ಹೇಳುವುದಾದರೆ, ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯನ್ನು ಹೊಂದಿರುವುದು. ಇದು ಖಂಡಿತವಾಗಿಯೂ ಕಳಪೆ ನಿರ್ಧಾರ ತೆಗೆದುಕೊಳ್ಳುವ, ಹಾಳಾದ ಸಂಬಂಧಗಳಿಗೆ ಘಾಸಿ ಉಂಟುಮಾಡುವ ವರ್ತನೆಯಾಗಿರುತ್ತದೆ. ಆ ನಿಟ್ಟಿನಲ್ಲಿ, ನೀವು ಅವುಗಳನ್ನು ಬದಲಾಯಿಸಲು ಸಾಕಷ್ಟು ಸ್ವಯಂ-ಅರಿವು ಬೆಳೆಸಿಕೊಂಡ ನಂತರ ಕೆಳಗಿನ ಈ ಅಭ್ಯಾಸಗಳನ್ನು ಬಿಡಲೇಬೇಕು.


1. ಯೋಚಿಸದೆಯೇ ಬೇಡಿಕೆ ಇಡುವವರ್ತನೆ


ಕಡಿಮೆ ಭಾವನಾತ್ಮಕ ಬುದ್ಧಿಮತ್ತೆ ಹೊಂದಿರುವ ಜನರು ಸಾಮಾನ್ಯವಾಗಿ ಇತರ ತಂಡದ ಸದಸ್ಯರನ್ನು ಸಂಪರ್ಕಿಸದೆಯೇ ಬೇಡಿಕೆ ಇಡುತ್ತಾರೆ. ಇಂತಹ ವ್ಯಕ್ತಿಗಳು ಸಂಕುಚಿತ ಮನಸ್ಸಿನ - ಅಥವಾ ತಪ್ಪು - ನಿರೀಕ್ಷೆಗಳನ್ನು ಹೊಂದಿದ್ದು ಇದು ವಾಸ್ತವದ ಪ್ರಜ್ಞೆಯನ್ನು ಸಮರ್ಥವಾಗಿ ಕುಂಠಿತಗೊಳಿಸಿ ಕೆಲಸದ ಪ್ರಕ್ರಿಯೆಗಳನ್ನು ಹಾಳುಮಾಡುತ್ತದೆ.


2.ಜಡ್ಜ್ ಮಾಡುವ ವರ್ತನೆ


ಜಡ್ಜ ಮಾಡುವ ಮನೋಭಾವವು ಕೆಲಸದಲ್ಲಿ ಸಹೋದ್ಯೋಗಿಗಳನ್ನು ದೂರವಿಡುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ, ಜಡ್ಜ್ ಮಾಡುವ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಬೇಕು.


ಇದನ್ನೂ ಓದಿ: 5 ಬಾರಿ ವಿಫಲವಾದರೂ ಛಲ ಬಿಡದೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ದಿಟ್ಟೆ


ಇದಕ್ಕಾಗಿ ಸ್ವಯಂ-ಅರಿವು ಮಾಡಿಕೊಳ್ಳಬೇಕು. ವಿಷಯ ಗೊತ್ತಿಲ್ಲದೆ ಜಡ್ಜ್ ಮಾಡುವುದನ್ನು ನಿಲ್ಲಿಸಬೇಕು. ಬೇರೆಯವರು ಹೇಳುವುದನ್ನು ಸರಿಯಾಗಿ ಆಲಿಸುವುದನ್ನು ರೂಢಿಸಿಕೊಳ್ಳಿ . ನೆನಪಿಡಿ, ಸತ್ಯ ಗೊತ್ತಿಲ್ಲದೆ ಜಡ್ಜ್ ಮಾಡಿದರೆ, ನಿಮ್ಮ ಮೇಲಿನ ಭಾವನೆಯೇ ಬದಲಾಗುತ್ತದೆ.


3. ನನ್ನಂತೆಯೇ ಆಗಬೇಕೆಂಬ ಮನೋಭಾವ


ನೀವು ಕೆಲಸ ಮಾಡುವಾಗ ನಿಮ್ಮ ಮ್ಯಾನೇಜರ್ ಆಗಲಿ ಅಥವಾ ಸಹವರ್ತಿಯಾಗಲಿ ಒಮ್ಮೊಮ್ಮೆ ತಮ್ಮದೆ ಆದ ನಿರ್ದಿಷ್ಟ ನಿರೀಕ್ಷೆಗಳನ್ನು ಅಥವಾ ಅನಿಸಿಕೆಯನ್ನು ಹೊಂದಿರುತ್ತಾರೆ.


ಅವರು ಯಾರ ಬಗ್ಗೆಯಾಗಲಿ ಯೋಚಿಸುವುದಿಲ್ಲ ಅಥವಾ ಇನ್ನೊಬ್ಬರ ಅನಿಸಿಕೆಗಳಿಗೆ ಬೆಲೆ ನೀಡುವುದಿಲ್ಲ. ತಾವು ಹೇಳಿದ್ದೇ ಸರಿ, ಅದು ಹೀಗೆ ಇರಬೇಕು, ಹೀಗೆ ಆಗಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಇಂತಹ ಗುಣಲಕ್ಷಣ ನಿಮ್ಮಲ್ಲೂ ಇದ್ದರೆ ಇದನ್ನು ಈಗಲೇ ನಿಲ್ಲಿಸಿ. ಏಕೆಂದರೆ ಇದು ನಾಯಕತ್ವದ ಗುಣಲಕ್ಷಣವಲ್ಲ ಹಾಗೂ ಇದು ನಿಮ್ಮನ್ನು ಅಧಃಪತನಕ್ಕೆ ತಳ್ಳಬಹುದು.


ಗಮನಿಸಿ: ಈ ಗೀಳಿನ ವ್ಯಕ್ತಿಯು ಕೆಲಸದ ಸ್ಥಳದಲ್ಲಿ ಹೆಚ್ಚು ತೊಂದರೆ ಉಂಟು ಮಾಡಿ, ತಂಡದ ಹೊಂದಾಣಿಕೆಯನ್ನು ಹಾಳು ಮಾಡಬಹುದು.


4. ನಿರ್ಧರಿಸುವ ಸಾಮರ್ಥ್ಯದ ಕೊರತೆ


ಎಲ್ಲ ರೀತಿಯಿಂದಲೂ ಯೋಚನೆ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನಾಯಕನಾದವನ ಒಂದು ಸಾಮರ್ಥ್ಯ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸುಖಾಸುಮ್ಮನೆ, ತಂಡದ ಸದಸ್ಯರನ್ನು ಟೀಕೆ ಮಾಡಿದರೆ ಅದು ಅವರಿಗೆ ನೋವುಂಟು ಮಾಡುತ್ತದೆ.


ಕೆಲವು ಮ್ಯಾನೇಜರ್ ಗಳು ಟೀಕೆ ಮಾಡುವ ಗೀಳನ್ನು ಬೆಳೆಸಿಕೊಂಡಿರುತ್ತಾರೆ. ತಮ್ಮ ಅಂತಃಪ್ರಜ್ಞೆಯನ್ನು ಬಳಸಿಕೊಂಡು ಇಲ್ಲ ಸಲ್ಲದ ವಿಷಯಗಳ ಕುರಿತು ಟೀಕೆ ಮಾಡುವುದು ಒಬ್ಬ ಉತ್ತಮ ನಾಯಕನ ಲಕ್ಷಣವಲ್ಲ.


5.ಹೊಣೆಗಾರಿಕೆಯ ಕೊರತೆ


ಜವಾಬ್ದಾರಿಯನ್ನು ನಿರ್ವಹಿಸದ ಹಾಗೂ ತಮ್ಮ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳದ ವ್ಯಕ್ತಿ ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾನೆ.


ತಮ್ಮ ಸ್ವಂತ ತಪ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಾಗ, ಇನ್ನೊಬ್ಬರ ಮೇಲೆ ತಮ್ಮ ತಪ್ಪನ್ನು ಎತ್ತಿ ಹಾಕುತ್ತಾರೆ, ಇದು ವಾಸ್ತವತೆಗೆ ವಿರುದ್ಧವಾದಾಗ ನಾಯಕತ್ವಕ್ಕೆ ಅರ್ಹನಲ್ಲದ ವ್ಯಕ್ತಿ ಎನ್ನುವ ಹಣೆಪಟ್ಟಿ ದೊರೆಯುತ್ತದೆ.
ಈ ಕ್ಷಮಿಸಲಾಗದ ಲಕ್ಷಣಗಳನ್ನು ಹೊಂದಿರುವ ಮೇಲಾಧಿಕಾರಿಗಳು ತಮ್ಮ ಸ್ವಂತ ಕ್ರಿಯೆಗಳಿಗೆ ಜವಾಬ್ದಾರರಾಗಲು ಹಿಂಜರಿಯುತ್ತಾರೆ. ಅವರು ತಮ್ಮ ಖ್ಯಾತಿಯನ್ನು ಕಾಪಾಡಿಕೊಳ್ಳಲು ಹಾಗೂ ತಮ್ಮ ವರ್ಚಸ್ಸಿನ ಕುರಿತು ಹೆಚ್ಚು ಕಾಳಜಿ ವಹಿಸುತ್ತಾರೆ.

First published: