ರೆಸ್ಯೂಮ್ (Resume )ಎನ್ನುವುದು ವೃತ್ತಿಜೀವನದಲ್ಲಿ ಅತಿಮುಖ್ಯ ಪಾತ್ರವಹಿಸುವ ಅಂಶವಾಗಿದೆ. ಅತ್ಯುತ್ತಮ ರೆಸ್ಯೂಮ್ ಒಳ್ಳೆಯ ಸಂಬಳ (Salary) ಪಡೆಯುವ ಉದ್ಯೋಗಕ್ಕೂ ಕಾರಣವಾಗಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಅದೆಷ್ಟೋ ಜನರು ಉದ್ಯೋಗ (Job) ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಸಮಯದಲ್ಲಿ ಉತ್ತಮ ರೆಸ್ಯೂಮ್ ಅನ್ನು ರೆಡಿ ಮಾಡಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ.
ಆಕರ್ಷಕ ರೆಸ್ಯೂಮ್ ಅರ್ಹ ಉದ್ಯೋಗಕ್ಕೆ ಕಾರಣ
ನಿಮ್ಮಲ್ಲಿ ಆಕರ್ಷಕ ವ್ಯಕ್ತಿತ್ವ ಹಾಗೂ ಚಾಣಾಕ್ಷತನವಿದ್ದರೆ ಉತ್ತಮ ಆದಾಯವಿರುವ ಉದ್ಯೋಗವನ್ನು ಕ್ಷಣಮಾತ್ರದಲ್ಲಿ ಗಿಟ್ಟಿಸಿಕೊಳ್ಳಬಹುದು ಎಂಬುದು ಉದ್ಯೋಗ ತಜ್ಞರ ಅನಿಸಿಕೆಯಾಗಿದೆ. ವಜಾಗೊಂಡ ಕಾರಣಕ್ಕೆ ನಿಮ್ಮಲ್ಲಿ ಪ್ರತಿಭೆಯ ಕೊರತೆ ಇದೆ ಅಥವಾ ನೀವು ಅರ್ಹರಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ ಎಂಬುದು ತಜ್ಞರ ಸಲಹೆಯಾಗಿದೆ.
ಆಕರ್ಷಕ ರೆಸ್ಯೂಮ್ ಒಳ್ಳೆಯ ಉದ್ಯೋಗವನ್ನು ಪಡೆಯುವಲ್ಲಿ ಸಹಕಾರಿಯಾಗಿದೆ. ನಿಮ್ಮ ರೆಸ್ಯೂಮೆ ಆಕರ್ಷಕವಾಗಿರಬೇಕು ಹಾಗೂ ಉತ್ತಮ ಆದಾಯದ ಉದ್ಯೋಗವನ್ನು ದೊರಕಿಸಿಕೊಡಬೇಕು ಎಂದಿದ್ದಲ್ಲಿ ಈ ಪಾಯಿಂಟ್ಗಳು ನಿಮ್ಮ ರೆಸ್ಯೂಮೆಯಲ್ಲಿರುವಂತೆ ನೋಡಿಕೊಳ್ಳಿ.
ಸರಳ ಹಾಗೂ ಆಕರ್ಷಕ
ನೀವು ವೃತ್ತಿರಂಗದಲ್ಲಿ ಎಷ್ಟೇ ಪರಿಣಿತರಾಗಿದ್ದರೂ ನಿಮ್ಮ ರೆಸ್ಯೂಮ್ ಸರಳವಾಗಿರಲಿ ಹಾಗೂ ವೃತ್ತಿ ನೈಪುಣ್ಯತೆಗಳನ್ನು ಪ್ರದರ್ಶಿಸುವಂತಿರಲಿ. ಒಂದೇ ಕಾಲಮ್ ನಲ್ಲಿ ಎಲ್ಲಾ ಮಾಹಿತಿಗಳು ಇರುವಂತೆ ನೋಡಿಕೊಳ್ಳಿ.
ಫೋಟೋ, ಬಣ್ಣಗಳು, ಚಾರ್ಟ್ಸ್ ಮೊದಲಾದ ಅಂಶಗಳನ್ನು ಬಳಸದಿರಿ. ಅಕ್ಷರ ಬಳಕೆಯಲ್ಲಿ ಏರಿಯಲ್ ಅಥವಾ ಟೈಮ್ಸ್ ರೋಮನ್ ಬಳಸಿ. ನೆನಪಿಡಿ, ರೆಸ್ಯೂಮೆಯಲ್ಲಿ ನಿಮ್ಮ ವೃತ್ತಿ ಹಾಗೂ ನಿಮ್ಮ ಕುರಿತ ಮಾಹಿತಿ ಇರಬೇಕೇ ಹೊರತು ನಿಮ್ಮ ಕ್ರಿಯಾತ್ಮಕತೆಯಲ್ಲ.
ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಿ
ನೀವು ಅರ್ಜಿ ಹಾಕುತ್ತಿರುವ ಉದ್ಯೋಗಕ್ಕೆ ಸಂಬಂಧಿತವಲ್ಲದ ವಿವರಗಳನ್ನು ರೆಸ್ಯೂಮೆಯಲ್ಲಿ ತುಂಬದಿರಿ. ನೀವು ಸಾಕಷ್ಟು ಅಭಿರುಚಿಗಳನ್ನು ಹೊಂದಿದವರಾಗಿದ್ದರೂ ಅದೆಲ್ಲವನ್ನೂ ರೆಸ್ಯೂಮೆಯಲ್ಲಿ ನಮೂದಿಸದಿರಿ. ಚಿಕ್ಕದಾಗಿ ಚೊಕ್ಕವಾಗಿ ನಿಮ್ಮ ಹವ್ಯಾಸಗಳನ್ನು ರೆಸ್ಯೂಮೆಯಲ್ಲಿ ನಮೂದಿಸಿ.
ಪ್ರಾಮಾಣಿಕವಾಗಿರಿ
ನಿಮ್ಮ ಉದ್ಯೋಗಕ್ಕೆ ಅಗತ್ಯ ಎಂಬ ಕಾರಣಕ್ಕೆ ನಕಲಿ ಪದವಿ, ಸ್ನಾತಕೋತ್ತರ ಪ್ರಮಾಣಪತ್ರಗಳನ್ನು ನಮೂದಿಸದಿರಿ. ನಿಮ್ಮ ವಿದ್ಯಾಭ್ಯಾಸ, ವೃತ್ತಿ ನೈಪುಣ್ಯತೆ, ಕ್ರಿಯಾತ್ಮಕತೆ, ವೃತ್ತಿ ಅನುಭವದ ಬಗ್ಗೆ ಪ್ರಾಮಾಣಿಕವಾಗಿರಿ.
ನೆನಪಿಡಿ, ನಕಲಿ ಮಾಹಿತಿಗಳನ್ನು ರೆಸ್ಯೂಮೆಯಲ್ಲಿ ನಮುದಿಸಿದಷ್ಟು ಮುಂದೊಂದು ದಿನ ಅಪಾಯಕ್ಕೆ ಕಾರಣವಾಗಬಹುದು. ಹಾಗೂ ನಿಮ್ಮ ನಯವಂಚಕತನ ಸಂಸ್ಥೆಗೆ ಬಹಿರಂಗಗೊಳ್ಳುವ ಅಪಾಯವಿದೆ. ಇದರಿಂದ ಮುಖ್ಯವಾಗಿ ನಿಮ್ಮ ಉದ್ಯೋಗಕ್ಕೆ ಹಾನಿಯುಂಟಾಗುವ ಸಂಭವ ಹೆಚ್ಚು. ನಿಮ್ಮ ವೃತ್ತಿಮಾಹಿತಿಯನ್ನೊಳಗೊಂಡ ನೇರ ದಾಖಲೆಗಳು ರೆಸ್ಯೂಮೆಯಾಗಿದ್ದು ಸಾಧ್ಯವಾದಷ್ಟು ಅದನ್ನು ನಿಖರ ಹಾಗೂ ನೇರವಾಗಿಸಿ.
ರೆಸ್ಯೂಮ್ನಲ್ಲಿ ಮಾಡುವ ತಪ್ಪುಗಳೇನು?
ಕೆರಿಯರ್ ಕೋಚಿಂಗ್ ಸರ್ವೀಸ್ ಸಂಸ್ಥೆಯ ಮುಖ್ಯಸ್ಥರಾದ ಬೆತ್ ಹ್ಯಾಂಡ್ಲರ್ ಗ್ರಂಟ್ ರೆಸ್ಯೂಮೆಯಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಾಡುವ ತಪ್ಪುಗಳನ್ನು ಪಟ್ಟಿಮಾಡಿದ್ದಾರೆ. ಶಾಲಾ ಕಾಲೇಜು ಕ್ಷೇತ್ರದ ಪ್ರತಿಯೊಂದು ಮಾಹಿತಿಗಳನ್ನು ರೆಸ್ಯೂಮೆಯಲ್ಲಿ ನಮೂದಿಸುವ ಅಗತ್ಯವಿಲ್ಲ ಎಂಬುದು ಬೆತ್ ಅಭಿಪ್ರಾಯವಾಗಿದೆ.
ಇಮೇಲ್ ವಿಳಾಸ ವೃತ್ತಿಪರವಾಗಿರಲಿ
ರೆಸ್ಯೂಮೆಯ ಮೇಲ್ಭಾಗದಲ್ಲಿ ನಿಮ್ಮ ಇಮೇಲ್ ನಮೂದಿಸಿ ಹಾಗೂ ಆದಷ್ಟು ಇಮೇಲ್ ವೃತ್ತಿಪರವಾಗಿರಲಿ ಅಂದರೆ ನಿಮ್ಮ ಮೊದಲ ಹೆಸರು ಹಾಗೂ ಕೊನೆಯ ಹೆಸರನ್ನು ಬಳಸಿಕೊಂಡು ಇಮೇಲ್ ರಚಿಸಿ.
ಆದಷ್ಟು ವಿಷಯಗಳನ್ನು ನಮೂದಿಸುವಾಗ ಪದಗಳನ್ನು ಜಾಗರೂಕತೆಯಿಂದ ಬಳಸಿ ಎಂದು ಸಲಹೆ ನೀಡುತ್ತಾರೆ. ಕ್ರಿಯಾತ್ಮಕ ಪದ ಪ್ರಯೋಗವನ್ನು ಅನುಸರಿಸಿ ಹಾಗೂ ಸರಳ ವಾಕ್ಯಗಳನ್ನು ಬಳಸಿ ಎಂದು ತಿಳಿಸಿದ್ದಾರೆ.
ಕಾಗುಣಿತ ಹಾಗೂ ವ್ಯಾಕರಣ ದೋಷ ಇರದಂತೆ ನೋಡಿಕೊಳ್ಳಿ
ಇನ್ನು ಕಾಗುಣಿತ ವ್ಯಾಕರಣ ದೋಷಗಳು ರೆಸ್ಯೂಮೆಯಲ್ಲಿದೆಯೇ ಎಂಬುದನ್ನು ಮೂರು ನಾಲ್ಕು ಬಾರಿ ಕಣ್ಣಾಡಿಸಿ ನೋಡಿ ಎಂಬುದು ಬೆತ್ ನೀಡುವ ಸಲಹೆಯಾಗಿದೆ. ರೆಸ್ಯೂಮೆ ಹಾಗೂ ಕವರ್ ಲೆಟರ್ನಲ್ಲಿರುವ ಅಂಶಗಳು ಬೇರೆ ಬೇರೆಯಾಗಿರಲಿ ಎಂಬ ಸೂಚನೆಯನ್ನು ಬೆತ್ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಸಲಹೆ ಪಡೆದುಕೊಳ್ಳುವುದು
ಬೆತ್ ಹೇಳುವ ಪ್ರಕಾರ ಸಾಮಾಜಿಕ ತಾಣಗಳು ರೆಸ್ಯೂಮೆ ರಚನೆಯಲ್ಲಿ ಸಹಕಾರಿಯಾಗಿವೆ ಎಂದಾಗಿದೆ. ಇಲ್ಲಿ ವೃತ್ತಿನಿಪುಣತೆಯುಳ್ಳವರು, ರೆಸ್ಯೂಮೆ ರಚನೆಕಾರರ ಸಲಹೆಗಳನ್ನು ಪಡೆದುಕೊಂಡು ಉತ್ತಮ ರೆಸ್ಯೂಮೆಯನ್ನು ಸಿದ್ಧಪಡಿಸಬಹುದು ಎಂಬುದು ಅವರ ಹೇಳಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ