• ಹೋಂ
  • »
  • ನ್ಯೂಸ್
  • »
  • Jobs
  • »
  • Resume Tips-13: ರೆಸ್ಯೂಮ್​​ನಲ್ಲಿ ನಿಮ್ಮ ಬಗ್ಗೆ ಯಾವ ಮಾಹಿತಿ ಇರಬೇಕು, ಯಾವುದು ಅನಗತ್ಯ?

Resume Tips-13: ರೆಸ್ಯೂಮ್​​ನಲ್ಲಿ ನಿಮ್ಮ ಬಗ್ಗೆ ಯಾವ ಮಾಹಿತಿ ಇರಬೇಕು, ಯಾವುದು ಅನಗತ್ಯ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರೆಸ್ಯೂಮ್‌ನಲ್ಲಿ ಕೆಲವೊಂದು ತಪ್ಪುಗಳು ಕಂಡು ಬಂದರೆ ಅದು ಉದ್ಯೋಗ ಪಡೆಯಲು ಹಿನ್ನಡೆಯಾಗಿ ಪರಿಣಮಿಸುತ್ತದೆ. ಇಂದಿನ ಲೇಖನದಲ್ಲಿ ಆ ತಪ್ಪುಗಳೇನು? ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

  • Trending Desk
  • 2-MIN READ
  • Last Updated :
  • Share this:

    ನಿಮ್ಮ ರೆಸ್ಯೂಮ್‌ (Resume) ಉದ್ಯೋಗ ಹುಡುಕಾಟದಲ್ಲಿ (Job Search) ಪ್ರಮುಖವಾಗಿದೆ. ನೀವು ಕೆಲಸ ಮಾಡಿದ ಕಂಪನಿಗಳ ವಿವರ, ಉದ್ಯೋಗ ನೈಪುಣ್ಯತೆ, ವಿದ್ಯಾರ್ಹತೆ, ವೃತ್ತಿ ಅನುಭವ ಸೇರಿದಂತೆ ಇನ್ನಿತರ ಕೌಶಲ್ಯಗಳು ಹೀಗೆ ರೆಸ್ಯೂಮೆ ನಿಮ್ಮ ವೃತ್ತಿ ಬದುಕಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುತ್ತದೆ.  ಇದು ಅತಿ ಮುಖ್ಯವಾಗಿರುವ ದಾಖಲೆ ಎಂದೆನಿಸಿದೆ.


    ರೆಸ್ಯೂಮ್‌ನಲ್ಲಿ ದೋಷಗಳಿರದಂತೆ ನೋಡಿಕೊಳ್ಳಿ


    ರೆಸ್ಯೂಮ್‌ನಲ್ಲಿ ಕೆಲವೊಂದು ತಪ್ಪುಗಳು ಕಂಡು ಬಂದರೆ ಅದು ಉದ್ಯೋಗ ಪಡೆಯಲು ಹಿನ್ನಡೆಯಾಗಿ ಪರಿಣಮಿಸುತ್ತದೆ. ಇಂದಿನ ಲೇಖನದಲ್ಲಿ ಆ ತಪ್ಪುಗಳೇನು? ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


    ನಿಮ್ಮ ರೆಸ್ಯೂಮ್ ನೇಮಕಾತಿದಾರರನ್ನು ಮೆಚ್ಚಿಸುವಂತಿರಲಿ


    ರೆಸ್ಯೂಮ್ ​ನಲ್ಲಿ ವಿವರವಾದ ಹಾಗೂ ಸಮಗ್ರ ಮಾಹಿತಿಯನ್ನು ನಮೂದಿಸುವುದು ಮುಖ್ಯವಾಗಿದೆ. ನೀವು ಎಲ್ಲಿ ಕಾರ್ಯನಿರ್ವಹಿಸಿದ್ದೀರಿ, ನಿಮ್ಮ ಉದ್ಯೋಗ ಅನುಭವ, ವೃತ್ತಿ ನೈಪುಣ್ಯತೆಗಳು ಇದಿಷ್ಟು ಆಕರ್ಷಕವಾಗಿರಲಿ. ರೆಸ್ಯೂಮ್​​ ನಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬುವುದಕ್ಕಿಂತ ಈ ಅಂಶಗಳಿಗೆ ಪ್ರಾಮುಖ್ಯತೆ ನೀಡಿ.


    ಪ್ರಾತಿನಿಧಿಕ ಚಿತ್ರ


    ವೃತ್ತಿಅನುಭವ ನಮೂದಿಸಿ


    ನಿಮ್ಮನ್ನು ನೇಮಿಸುವವರು ನಿಮಗಿರುವ ವೃತ್ತಿಕೌಶಲ್ಯ ಹಾಗೂ ನೀವು ಈ ಹಿಂದೆ ಕೆಲಸ ಮಾಡಿದ ಸಂಸ್ಥೆಗಳ ವಿವರಗಳನ್ನು ವೀಕ್ಷಿಸುತ್ತಾರೆ. ಅವರಿಗೆ ಬೇಕಾದ ವೃತ್ತಿ ಅನುಭವ ನಿಮಗಿದೆಯೇ ಹಾಗೂ ಉದ್ಯೋಗದಲ್ಲಿ ನೀವೆಷ್ಟು ಸಮಯವಿರಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ ನಿಮ್ಮನ್ನು ನೇಮಿಸಬೇಕೇ ಬೇಡವೇ ಎಂಬುದನ್ನು ಅವಲೋಕಿಸುತ್ತಾರೆ.


    ನಿಮ್ಮ ಹಳೆಯ ಸಂಸ್ಥೆಯ ವಿವರ, ಉದ್ಯೋಗ ಶೀರ್ಷಿಕೆ, ಉದ್ಯೋಗ ದಿನಾಂಕಗಳು ಇದಿಷ್ಟನ್ನು ನಮೂದಿಸಿ. ರೆಸ್ಯೂಮ್ ಹೆಡ್‌ಲೈನ್ ಮುಖ್ಯವಾಗಿರಲಿ ಏಕೆಂದರೆ ಹೆಚ್ಚಿನ ನೇಮಕಾತಿದಾರರು ಈ ಹೆಡ್‌ಲೈನ್‌ಗಳನ್ನು ನೋಡಿಯೇ ಹೆಚ್ಚು ಪ್ರಭಾವಿತರಾಗುತ್ತಾರೆ.


    ನೇಮಕಾತಿದಾರರನ್ನು ಮೆಚ್ಚಿಸುವಂತಿರಲಿ


    ನಿಮ್ಮ ರೆಸ್ಯೂಮ್‌ನಲ್ಲಿರುವ ವಿವರಗಳು ನೇಮಕಾತಿದಾರರನ್ನು ಮೆಚ್ಚಿಸುವಂತಿರಬೇಕು ಹಾಗೂ ನಿಮ್ಮನ್ನು ಆಯ್ಕೆ ಮಾಡಲು ಅನುಕೂಲಕರವಾಗುವಂತೆ ಇರಬೇಕು.


    Resume
    ಪ್ರಾತಿನಿಧಿಕ ಚಿತ್ರ


    ದೀರ್ಘಾವಧಿಯ ಉದ್ಯೋಗ ಸ್ಥಿರತೆಯನ್ನು ರೆಸ್ಯೂಮ್‌ನಲ್ಲಿ ಪ್ರದರ್ಶಿಸದೇ ಇರುವುದು


    ನಿಮ್ಮ ರೆಸ್ಯೂಮ್‌ನಲ್ಲಿ ಕಡಿಮೆ ಉದ್ಯೋಗ ಅವಧಿ ಹಾಗೂ ಹೆಚ್ಚಿನ ಅಂತರಗಳನ್ನು ನಮೂದಿಸದಿರಿ. ಎರಡಕ್ಕಿಂತ ಹೆಚ್ಚು ವರ್ಷಗಳ ಕಾಲ ಉದ್ಯೋಗ ಮಾಡಿದ ವರ್ಷವನ್ನು ನಮೂದಿಸಿ. ಉದ್ಯೋಗ ಅಂತರ ಹಾಗೂ ವರ್ಷ ಕಡಿಮೆ ಇದ್ದರೆ ಅದಕ್ಕೆ ಸೂಕ್ತ ಕಾರಣವನ್ನು ರೆಸ್ಯೂಮೆಯಲ್ಲಿ ಒದಗಿಸಿ.


    ಉದ್ಯೋಗದಲ್ಲಿ ಹೆಚ್ಚಿನ ಉದ್ಯೋಗ ಅವಧಿಯನ್ನು ನಮೂದಿಸಿದಷ್ಟು ಆ ಕೆಲಸದಲ್ಲಿ ನಿಮಗೆ ಉತ್ತಮ ಸ್ಥಿರತೆ ಇದೆ ಎಂಬುದನ್ನು ತೋರಿಸುತ್ತದೆ. ಆದಷ್ಟು ವಿವರಗಳನ್ನು ಬುಲೆಟ್ ರೂಪದಲ್ಲಿ ನಮೂದಿಸಿ ಇದರಿಂದ ವಿವರಗಳು ಸ್ಫುಟವಾಗಿ ಕಾಣಿಸಿಕೊಳ್ಳುತ್ತವೆ ಹಾಗೂ ನೇಮಕಾತಿದಾರರು ಇದರಿಂದ ಖುಷಿಗೊಳ್ಳುತ್ತಾರೆ.


    resume tips in kannada internship resume format for freshers
    ಸಾಂದರ್ಭಿಕ ಚಿತ್ರ


    ಒಂದೇ ಕಂಪನಿಯಲ್ಲಿ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ್ದೀರಿ ಎಂಬುದನ್ನು ನಮೂದಿಸುವುದಕ್ಕಿಂತ ಮೊದಲು ನೀವು ಅಪ್ಲೈಮಾಡುತ್ತಿರುವ ಉದ್ಯೋಗ ಹಾಗೂ ಹುದ್ದೆ ಹೇಗಿದೆ ಎಂಬುದನ್ನು ವೀಕ್ಷಿಸಿ. ಒಂದು ತಂಡದಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸುವವರು ನೀವಾಗಿದ್ದರೆ ಅದಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ರೆಸ್ಯೂಮ್‌ನಲ್ಲಿ ನಮೂದಿಸಿ.


    ರೈಟಿಂಗ್​ ಸ್ಟ್ರಾಂಗ್​ ಆಗಿ ಇರಲಿ 


    ಉದ್ಯೋಗಕ್ಕೆ ಅನವಶ್ಯಕವಾಗಿರುವ ಬರವಣಿಗೆಯನ್ನು ಆದಷ್ಟು ತಪ್ಪಿಸಿ. ರೆಸ್ಯೂಮ್ ತಯಾರಿಸಿದ ನಂತರ ಅದನ್ನು ಬೇರೆಯವರಿಗೆ ಓದಲು ನೀಡಿ. ಅವರ ಸಹಾಯ ಪಡೆದುಕೊಳ್ಳಿ. ವ್ಯಾಕರಣ ತಪ್ಪು, ಕಾಗುಣಿತ ದೋಷಗಳು ರೆಸ್ಯೂಮ್‌ನಲ್ಲಿ ಇರದಂತೆ ನೋಡಿಕೊಳ್ಳಿ. ನಿಮ್ಮ ರೆಸ್ಯೂಮ್ ಓದಿಸಿಕೊಂಡು ಹೋಗುವಂತಿರಲಿ.




    ಸಾಫ್ಟ್‌ವೇರ್ ಬಳಸಿ ರೆಸ್ಯೂಮ್ ಪರಿಶೀಲಿಸಿ


    ರೆಸ್ಯೂಮ್ ತಯಾರಿಸಿದ ನಂತರ ಸ್ಪೆಲ್ ಚೆಕ್ ಸಹಾಯದೊಂದಿಗೆ ರೆಸ್ಯೂಮೆಯನ್ನು ಪರಿಶೀಲಿಸಿಕೊಳ್ಳಿ. ಪ್ರೂಫ್‌ರೀಡಿಂಗ್ ಸಾಫ್ಟ್‌ವೇರ್ ಬಳಸಿಕೊಂಡು ಪುನರ್ ವಿಮರ್ಶಿಸಿ. ನಿಮ್ಮ ರೆಸ್ಯೂಮ್ ಹೆಚ್ಚಿನ ತಪ್ಪುಗಳನ್ನು ಹೊಂದಿದ್ದರೆ ಅವರದನ್ನು ‌ತೆಗೆದು ಕೂಡ ನೋಡುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.


    ರೆಸ್ಯೂಮ್ ತಯಾರಿಸುವ ಮುನ್ನ ಆದಷ್ಟು ತಪ್ಪುಗಳಿರದಂತೆ ನೋಡಿಕೊಳ್ಳಿ. ನೀವೇ ಒಮ್ಮೆ ಓದಿಕೊಳ್ಳಿ. ಎಲ್ಲಿ ಏನು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಅವಲೋಕಿಸಿ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು