ಪ್ರತಿಯೊಬ್ಬ ಉದ್ಯೋಗಿಯ ಯಶಸ್ವಿ ವೃತ್ತಿಜೀವನ (Career) ನಡೆಸಲು ಬಯಸುತ್ತಾರೆ. ಆದರೆ ವೃತ್ತಿಯಲ್ಲಿ ಯಶಸ್ಸು ಹೊಂದಲು ಅವರು ಕೌಶಲ್ಯ (Skill) ನಿರ್ಮಾಣ ಕೋರ್ಸ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ಕಲಿಯಲು ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಸಮಸ್ಯೆಯೇನಲ್ಲ. ಜಾಗತೀಕರಣದ ಪರಿಣಾಮ ವಿಶ್ವ ದರ್ಜೆಯ ಕೋರ್ಸ್ಗಳನ್ನು (Professional Courses) ಆಯ್ಕೆ ಮಾಡಿಕೊಳ್ಳುವುದು ಈಗ ಅತ್ಯಂತ ಸುಲಭ.
ಏನನ್ನು ಓದಬೇಕು, ಏನನ್ನು ಸಾಧಿಸಬೇಕ, ಇಂತಿಷ್ಟು ವರ್ಷಗಳ ನಂತರ ವೃತ್ತಿಯಲ್ಲಿ ಎಷ್ಟು ಎತ್ತರ ತಲುಪಿರಬೇಕು ಎಂಬುದನ್ನು ವ್ಯಕ್ತಿಯೊಬ್ಬ ಮೊದಲೇ ನಿರ್ಧರಿಸಿರಬೇಕು. ಏಕೆಂದರೆ, ಇಂದು ಸಂಸ್ಥೆಗಳು ತಮ್ಮ ವ್ಯಾಪಾರ, ಉದ್ಯಮಗಳಲ್ಲಿ ಉಳಿಸಿಕೊಳ್ಳಲು, ನಿರ್ಮಿಸಲು ಮತ್ತು ಬೆಳೆಯಲು ಸಹಾಯ ಮಾಡುವ ರೀತಿಯಲ್ಲಿ ಪ್ರತಿಭೆಯನ್ನು ಹೊಂದಿರಲು ಬಯಸುತ್ತವೆ.
ಹಾಗಾಗಿ ಇಂದಿನ ಸಂದರ್ಭವು ಬದಲಾಗಿದೆ. ನಾವು ಮುಂದುವರಿಯುತ್ತಿರುವಂತೆ ಬದಲಾಗುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ, ವ್ಯಕ್ತಿಯು ಕಲಿಕೆಯ ವೇಗವನ್ನು ಹೆಚ್ಚಿಸುವ ಕಲಿಕೆಯ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚು ಮುಖ್ಯವಾಗಿದೆ. ಆದ್ದರಿಂದ ವ್ಯಕ್ತಿಯೊಬ್ಬ ತಾನು ಸ್ವತಃ ಕೌಶಲ್ಯಗಳನ್ನು ಪಡೆದುಕೊಳ್ಳಲು ಹಲವು ಮಾರ್ಗಗಳಿವೆ. ಆದಾಗ್ಯೂ, ಕೋರ್ಸ್ಗಳನ್ನು ಆಯ್ಕೆ ಮಾಡುವಾಗ ತಾನು ಇದನ್ನು ಓದಿ ಏನು ಸಾಧಿಸಬೇಕು ಎಂಬುದರ ಸ್ಪಷ್ಟ ಉದ್ದೇಶ ಹೊಂದಿರುವುದು ಒಳ್ಳೆಯದು.
ಈ ಕೆಳಗಿನ ಅಂಶಗಳು ಕಲಿಕೆಯ ಪ್ರಯಾಣ ಮತ್ತು ಬೆಳವಣಿಗೆಯಲ್ಲಿ ಸಹಾಯ ಮಾಡಬಹುದು:
1.ಆಕಾಂಕ್ಷೆಗಳು, ಕೌಶಲ್ಯ ಮತ್ತು ಜ್ಞಾನದ ಆಧಾರದ ಮೇಲೆ ಕೋರ್ಸ್ ಆಯ್ಕೆ ಮಾಡಿ: ಯಾವುದೇ ಕಲಿಕೆಗೆ ಬದ್ಧರಾಗುವ ಮೊದಲು, ಕಲಿಯುವವರು ಅವರ ಆಕಾಂಕ್ಷೆಗಳು, ಕೌಶಲ್ಯ, ಜ್ಞಾನ, ಕಲಿಕೆಯ ಶೈಲಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ವಿಷಯ ಅಥವಾ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕು.
ನಾವು ಎಲ್ಲಿದ್ದೇವೆ ಮತ್ತು ನಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಏನು ಮಾಡಬೇಕು ಎಂಬುದರ ಸ್ಪಷ್ಟತೆಯಿರಲಿ. ಒಂದು ಕೌಶಲ್ಯದ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಅದನ್ನು ಚೆನ್ನಾಗಿ ಕಲಿಯುವುದರಿಂದ ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಅನ್ವಯಿಸಬಹುದು.
2. ಸ್ಪಂದಿಸುವ ಕಲಿಕೆಯನ್ನು ಆಯ್ಕೆ ಮಾಡಿ: ಇಂದು ಅನೇಕ ವೃತ್ತಿಪರರು ಕೆಲಸ, ಕಟುಂಬ ಮತ್ತು ಸಾಮಾಜಿಕ ಬದ್ಧತೆಗಳ ನಡುವೆ ಜಗ್ಗಾಡುತ್ತಿರುವುದನ್ನು ನಾವು ಕಾಣುತ್ತೇವೆ.
ಆದ್ದರಿಂದ, ಸರಿಯಾದ ಕಲಿಕೆಯ ವ್ಯವಸ್ಥೆಯನ್ನು ಆಯ್ಕೆ ಮಾಡುವುದು ಮುಖ್ಯ. ಅದು ಒಬ್ಬರ ಜೀವನ ಲಯಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಪ್ರೋಗ್ರಾಂ ಅನ್ನು ಆಯ್ಕೆಮಾಡುವಾಗ, ಅನುಕೂಲದ ಬಗ್ಗೆ ವಿಶೇಷ ಗಮನವಿರಲಿ.
3. ಭವಿಷ್ಯದ ಕೌಶಲ್ಯಗಳನ್ನು ವಿಶ್ಲೇಷಿಸಿ: ಕೋರ್ಸ್ನಲ್ಲಿ ನಿಮ್ಮ ಹೂಡಿಕೆಯ ಮೇಲಿನ ಲಾಭವನ್ನು ಲೆಕ್ಕ ಹಾಕುವುದು ಉತ್ತಮ. ನಿಮ್ಮ ಕೋರ್ಸ್ನ ಯಶಸ್ಸಿನ ಚಿತ್ರವು ನೀವು ಕಲಿಕೆಯನ್ನು ಹೇಗೆ ಉತ್ತಮವಾಗಿ ಕಾರ್ಯಗತಗೊಳಿಸಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಆನ್ಲೈನ್/ಹೈಬ್ರಿಡ್ ಕೋರ್ಸ್ ಉದ್ಯಮ-ಕೇಂದ್ರಿತ ವಿಧಾನವನ್ನು ತೆಗೆದುಕೊಳ್ಳುವುದು ಉತ್ತಮ.
4. ಸಣ್ಣ ಮತ್ತು ದೀರ್ಘಾವಧಿಯ ವೃತ್ತಿ ಗುರಿಗಳಿರಲಿ: ಕೌಶಲ್ಯ-ನಿರ್ಮಾಣ ಕಾರ್ಯಕ್ರಮವು ಕಲಿಯುವವರಿಗೆ ತಮ್ಮ ದೀರ್ಘಾವಧಿಯ ಗುರಿಗಳನ್ನು ಮತ್ತು ಅವರ ಅಲ್ಪಾವಧಿಯ ಉದ್ದೇಶಗಳನ್ನು ಹೀಗೆ ಎಲ್ಲವನ್ನೂ ಸಾಧಿಸಲು ಸಹಾಯ ಮಾಡುತ್ತದೆ.
ಪ್ರತಿ ವೃತ್ತಿಪರರ ಅಂತಿಮ ಗುರಿಯು ಯಶಸ್ವಿ ವೃತ್ತಿಜೀವನದ ಪಥವನ್ನು ಹೊಂದುವುದಾಗಿರುತ್ತದೆ. ಜೊತೆಗೆ ಅದನ್ನು ಸಾಧಿಸಲು ಕೌಶಲ್ಯ-ನಿರ್ಮಾಣ ಅಗತ್ಯವಿರುತ್ತದೆ.
5. ನಿಮ್ಮ ಕಲಿಕೆಯ ಶೈಲಿಯನ್ನು ತಿಳಿದುಕೊಳ್ಳಿ: ವೈಯಕ್ತಿಕಗೊಳಿಸಿದ ಕಲಿಕೆಯನ್ನು ಒದಗಿಸುವ ಕೋರ್ಸ್ಗಳನ್ನು ನೋಡಿ. ಅಲ್ಲದೇ ಅವರವರ ಸಾಮರ್ಥ್ಯ, ಅಗತ್ಯ, ಆಸಕ್ತಿಗಳಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು.
ಇದು ಕಲಿಯುವವರಿಗೆ ಹೆಚ್ಚು ಸೂಕ್ತವಾದ ಕಲಿಕೆಯ ಯೋಜನೆಯನ್ನು ರಚಿಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬ ವೃತ್ತಿಪರರು ವಿಶಿಷ್ಟ ರೀತಿಯಲ್ಲಿ ಮತ್ತು ವಿಶಿಷ್ಟ ವೇಗದಲ್ಲಿ ಕಲಿಯುತ್ತಾರೆ.
ವೈಯಕ್ತಿಕಗೊಳಿಸಿದ ಕಲಿಕೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವರ ಕಲಿಕೆಯ ಶೈಲಿ, ಪೂರ್ವ ಜ್ಞಾನ, ಸಾಮರ್ಥ್ಯಗಳು ಮತ್ತು ಆಸಕ್ತಿಗಳ ಆಧಾರದ ಮೇಲೆ "ಕಲಿಕೆಯ ಯೋಜನೆ" ಯನ್ನು ಪಡೆಯುತ್ತಾರೆ.
6. ಆನ್ಲೈನ್ ಕಲಿಕೆ ಉತ್ತಮ : ವ್ಯಕ್ತಿಗಳು ಆನ್ಲೈನ್ ಕಲಿಕಾ ವೇದಿಕೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅದು ನಿರ್ದಿಷ್ಟವಾಗಿ ಒಂದಕ್ಕೆ ಬದ್ಧರಾಗುವ ಮೊದಲು ಕಲಿಯುವವರಿಗೆ ವಿಭಿನ್ನ ಕೋರ್ಸ್ಗಳನ್ನು ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ.
ಆನ್ಲೈನ್ ಕಲಿಕೆಯ ಒಂದು ಮೌಲ್ಯಯುತ ಪ್ರಯೋಜನವೆಂದರೆ ವಿಭಿನ್ನ ಆಸಕ್ತಿಗಳನ್ನು ಹುಡುಕುವ ಸಾಮರ್ಥ್ಯ. ಇದು ಕಲಿಯುವವರಿಗೆ ಅವರು ಅಂತಿಮವಾಗಿ ಆಯ್ಕೆ ಮಾಡುವ ಕೋರ್ಸ್ ಅನ್ನು ಪೂರ್ಣಗೊಳಿಸಲು ಪ್ರೇರೇಪಿಸುತ್ತದೆ.
ಒಟ್ಟಾರೆ, ಉತ್ತಮ ಕೌಶಲ್ಯವೃದ್ಧಿ ಕೋರ್ಸ್ ಆಯ್ಕೆ ಮಾಡುವುದು ಕಷ್ಟ ನಿಜ. ಆದರೆ ತ್ವರಿತ ವೃತ್ತಿಜೀವನದ ಪ್ರಗತಿಗಾಗಿ ಉತ್ತಮ ಕೌಶಲ್ಯ-ನಿರ್ಮಾಣ ಕೋರ್ಸ್ಗಳನ್ನು ಹುಡುಕುವಲ್ಲಿ ವೃತ್ತಿಪರರಿಗೆ ಸಹಾಯ ಮಾಡುವ ಎಡ್ಟೆಕ್ ಪ್ಲಾಟ್ಫಾರ್ಮ್ಗಳಿವೆ. ಅವು ವೃತ್ತಿಪರರಿಗೆ ಅಗತ್ಯವಾದ ಉದ್ದೇಶ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ. ನೀವು ಅಂಥವುಗಳ ಸಹಾಯ ಪಡೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ