• ಹೋಂ
  • »
  • ನ್ಯೂಸ್
  • »
  • Jobs
  • »
  • Artificial Intelligence: ಈಗೆಲ್ಲಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​ನದ್ದೇ ಕಾರುಬಾರು! ಇದು ನಿಮ್ಮ ಕೆರಿಯರ್ ಮೇಲೆ ಹೇಗೆ ಪರಿಣಾಮ ಬೀರುತ್ತೆ?

Artificial Intelligence: ಈಗೆಲ್ಲಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​ನದ್ದೇ ಕಾರುಬಾರು! ಇದು ನಿಮ್ಮ ಕೆರಿಯರ್ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೃತಕ ಬುದ್ಧಿಮತ್ತೆ ಮತ್ತು ಅದನ್ನು ಆಧರಿಸಿದ ತಂತ್ರಜ್ಞಾನ ಮತ್ತು ಉತ್ಪನ್ನಗಳು ಇನ್ನೂ ಕೆಲವು ರೀತಿಯಲ್ಲಿ ಸೀಮಿತವಾಗಿವೆ ಎಂದು ಪಾಪನಿಕ್ಲೋವ್ ಗಮನ ಸೆಳೆಯುತ್ತಾರೆ.

  • Trending Desk
  • 5-MIN READ
  • Last Updated :
  • Share this:

ಈಗೆಲ್ಲಾ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence- ಕೃತಕ ಬುದ್ಧಿಮತ್ತೆ) ಮತ್ತು ಚಾಟ್‌ಜಿಪಿಟಿಯದ್ದೆ(ChatGPT) ಕಾರುಬಾರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮಾಹಿತಿ(Information) ಮತ್ತು ತಂತ್ರಜ್ಞಾನದ(Technology) ಕ್ಷೇತ್ರದಲ್ಲಿ ಈಗ ಕೇಳಿ ಬರುತ್ತಿರುವ ಎರಡು ಮುಖ್ಯವಾದ ತಂತ್ರಜ್ಞಾನಗಳು ಇವುಗಳು ಅಂತ ಹೇಳಬಹುದು.


ಮೈಕ್ರೋಸಾಫ್ಟ್ ಬೆಂಬಲಿತ ಓಪನ್ ಎಐ ರಚಿಸಿದ ಎಐ ಚಾಲಿತ ಚಾಟ್ಬಾಟ್ ಪ್ರಶ್ನೆಗಳಿಗೆ ಉತ್ತರಿಸುವ, ಪ್ರಬಂಧಗಳನ್ನು ಬರೆಯುವುದರಿಂದ ಹಿಡಿದು ಕಾನೂನು ಪ್ರಕರಣಗಳನ್ನು ವಾದಿಸುವ ಸಾಮರ್ಥ್ಯದವರೆಗೂ ತುಂಬಾನೇ ಬಳಕೆಯಲ್ಲಿರುವ ತಂತ್ರಜ್ಞಾನ ಅಂತ ಹೇಳಬಹುದು.


ಆದರೆ ಈ ಕೃತಕ ಬುದ್ದಿಮತ್ತೆಯು ಅನೇಕರ ಮನಸ್ಸಿನಲ್ಲಿ ಒಂದು ಸಂದೇಹವನ್ನು ಮೂಡಿಸಿದ್ದಂತೂ ನಿಜ ಅಂತ ಹೇಳಬಹುದು. ಅದೇನೆಂದರೆ ಈಗ ಎಲ್ಲವೂ ಎಐ ಚಾಲಿತವಾದರೆ, ಕೆಲಸಗಳನ್ನು ಮಾಡಲು ಭವಿಷ್ಯದಲ್ಲಿ ವ್ಯಕ್ತಿಗಳೇ ಬೇಕಾಗುವುದಿಲ್ಲವೇ ಎಂಬ ಪ್ರಶ್ನೆ ಅನೇಕರ ತಲೆಯಲ್ಲಿ ದೊಡ್ಡ ಹುಳವನ್ನು ಬಿಟ್ಟಿದೆ ಅಂತ ಹೇಳಬಹುದು.


ಕೃತಕ ಬುದ್ಧಿಮತ್ತೆಯು ಈ ಅನೇಕರ ಉದ್ಯೋಗಗಳು ಮತ್ತು ವೃತ್ತಿಜೀವನದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು? ಹೇಗೆ ಪರಿಣಾಮ ಬೀರಬಹುದು? ಯಾವಾಗ ಪರಿಣಾಮ ಬೀರಬಹುದು? ಈ ಎಲ್ಲಾ ಪ್ರಶ್ನೆಗಳು ತಲೆಯಲ್ಲಿ ಸುಳಿದಾಡುವುದು ಸಾಮಾನ್ಯವಾಗಿದೆ.


ಇದನ್ನೂ ಓದಿ: Success Story: ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸ್ ಆದ ಮಿಸ್ ಇಂಡಿಯಾ ಫೈನಲಿಸ್ಟ್!


ಎಐ ಆಧಾರಿತ ತಂತ್ರಜ್ಞಾನವು ಜನರ ಉದ್ಯೋಗಗಳನ್ನು ಕಸಿದುಕೊಳ್ಳುವ ಬಗ್ಗೆ ಕಳವಳಗಳು ಹೆಚ್ಚಾದರೂ, ತಜ್ಞರು ಇದು ಅಷ್ಟು ಸುಲಭದ ಮಾತಲ್ಲ ಬಿಡಿ ಎಂದು ಹೇಳುತ್ತಿದ್ದಾರೆ.


ಎಐ ಉದ್ಯೋಗಗಳನ್ನು ಬದಲಾಯಿಸುತ್ತದೆಯೇ ಅಥವಾ ಸೃಷ್ಟಿಸುತ್ತದೆಯೇ?


ಎಐ ಕೆಲವು ಉದ್ಯೋಗಗಳನ್ನು ಬದಲಾಯಿಸುತ್ತದೆಯೇ ಎಂಬ ಪ್ರಶ್ನೆಗೆ ನೇರವಾದ ಉತ್ತರವು "ಹೌದು" ಅಂತ ಆಗಿರುತ್ತದೆ. ಕೃತಕ ಬುದ್ಧಿಮತ್ತೆಯಲ್ಲಿನ ಬೆಳವಣಿಗೆಗಳು ತಂತ್ರಜ್ಞಾನವು ಹೆಚ್ಚು ಹೆಚ್ಚು ಸಾಧಿಸಬಹುದು ಮತ್ತು ಅದು ಸಹಜವಾಗಿ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಂಗಾಪುರ್ ಮ್ಯಾನೇಜ್ಮೆಂಟ್ ಯೂನಿವರ್ಸಿಟಿಯ ಮಾಹಿತಿ ವ್ಯವಸ್ಥೆಗಳ ನಿವೃತ್ತ ಪ್ರಾಧ್ಯಾಪಕ ಸ್ಟೀವನ್ ಮಿಲ್ಲರ್ ಹೇಳುತ್ತಾರೆ.


"ಕೃತಕ ಬುದ್ಧಿಮತ್ತೆಯ ಪರಿಣಾಮವಾಗಿ ಭೌತಿಕ ಯಂತ್ರಗಳು, ಸಾಫ್ಟ್‌ವೇರ್ ವ್ಯವಸ್ಥೆಗಳು ಮತ್ತು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಂಯೋಜನೆಗಳು ಹೆಚ್ಚು ಸಮರ್ಥವಾಗುತ್ತಿದ್ದಂತೆ, ಇಂದಿನ ಮಾನವ ಕೆಲಸದ ಹೆಚ್ಚಿನ ಭಾಗಗಳನ್ನು ಯಂತ್ರಗಳೊಂದಿಗೆ ಬದಲಾಯಿಸುವ ಸಾಧ್ಯತೆಗಳು ಹೆಚ್ಚಾಗಿವೆ ಮತ್ತು ಆರ್ಥಿಕವಾಗಿ ಇದು ಕಾರ್ಯಸಾಧ್ಯವಾಗಿದೆ" ಎಂದು ಅವರು ಸಿಎನ್‌ಬಿಸಿ ಮೇಕ್ ಇಟ್ ಸಂದರ್ಶನದಲ್ಲಿ ತಿಳಿಸುತ್ತಾರೆ.


ಕೆಲವು ಉದ್ಯೋಗಗಳು ಇತರ ಉದ್ಯೋಗಗಳಿಗಿಂತಲೂ ಇದಕ್ಕೆ ಹೆಚ್ಚು ಗುರಿಯಾಗುತ್ತವೆ ಎಂದು ಮಿಲ್ಲರ್ ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಚ್ಚು ಪುನರಾವರ್ತಿತ ಅಥವಾ ಏನು ಮಾಡಬೇಕೆಂಬುದನ್ನು ರೂಪಿಸುವ ನಿರ್ದಿಷ್ಟ ಸೂಚನೆಗಳು ಅಥವಾ ನಿಯಮಗಳನ್ನು ಆಧರಿಸಿದ ಉದ್ಯೋಗಗಳು ಅಂತ ಹೇಳಬಹುದು.


ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ಹಣಕಾಸು ಪ್ರಾಧ್ಯಾಪಕ ಡಿಮಿಟ್ರಿಸ್ ಪಾಪನಿಕ್ಲೋವ್ ಅವರ ಪ್ರಕಾರ, ಬಲವಾದ ಮಾನವ ಅಂಶವನ್ನು ಹೊಂದಿರುವ ಉದ್ಯೋಗಗಳು ಎಂದರೆ ಈ ಚಿಕಿತ್ಸೆ ನೀಡುವುದು ಇತ್ಯಾದಿ, ಈ ತಂತ್ರಜ್ಞಾನದಿಂದ ಆಕ್ರಮಿಸಿಕೊಳ್ಳುವ ಸಾಧ್ಯತೆಯಿಲ್ಲ. "ಪರಸ್ಪರ ಕೌಶಲ್ಯಗಳಿಗೆ ಒತ್ತು ನೀಡುವ ಉದ್ಯೋಗಗಳನ್ನು ಎಐನಿಂದ ಬದಲಾಯಿಸುವುದು ತುಂಬಾ ಕಷ್ಟ" ಎಂದು ಅವರು ಹೇಳುತ್ತಾರೆ.


ದಿಗಂತದಲ್ಲಿ ಹೊಸ ಉದ್ಯೋಗಗಳು?


"ಹೆಚ್ಚಿನ ತಾಂತ್ರಿಕ ಪ್ರಗತಿಗಳಾದಂತೆ, ಕಾರ್ಮಿಕರಲ್ಲಿ ಉದ್ಯೋಗ ನಷ್ಟ, ಸ್ಥಳಾಂತರದ ಆರಂಭಿಕ ಭಯವು ಸ್ವಾಭಾವಿಕವಾಗಿದೆ" ಎಂದು ಕೆಪಿಎಂಜಿ ಯುಎಸ್ ನ ಸಲಹಾ ನಾಯಕ ಸ್ಟೀವ್ ಚೇಸ್ ಹೇಳುತ್ತಾರೆ.


ಆದಾಗ್ಯೂ, ಹಲವಾರು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ. ಮೊದಲನೆಯದಾಗಿ, ಇದೇ ರೀತಿಯ ಅಡಚಣೆಯು ಈ ಹಿಂದೆ ಸಂಭವಿಸಿದೆ.


ಇದನ್ನೂ ಓದಿ: Game: ಹವ್ಯಾಸದಿಂದ ವೃತ್ತಿಜೀವನದವರೆಗೆ: ಭಾರತದಲ್ಲಿ ಬದಲಾಗುತ್ತಿರುವ ಗೇಮಿಂಗ್‌ ಉದ್ಯಮ!


ಹೊಸ ತಂತ್ರಜ್ಞಾನದಿಂದ ಕೆಲವು ಉದ್ಯೋಗಗಳು ಕಳೆದು ಹೋದರೆ, ಅವುಗಳ ಸ್ಥಾನದಲ್ಲಿ ಇನ್ನಿತರೆ ಬೇರೆ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಇತಿಹಾಸವು ತೋರಿಸುತ್ತದೆ.


"ಹೊಸ ರೀತಿಯ ಸರಕು ಮತ್ತು ಸೇವೆಗಳನ್ನು ರಚಿಸುವ ಮತ್ತು ತಲುಪಿಸುವ ಸಾಮರ್ಥ್ಯದ ಪರಿಣಾಮವಾಗಿ ಹೊಸ ಉದ್ಯೋಗಗಳ ಸೃಷ್ಟಿಯು ಸ್ಥಳಾಂತರಗೊಂಡ ಉದ್ಯೋಗಗಳ ಸಂಖ್ಯೆಯನ್ನು ಮೀರಿಸಿದೆ" ಎಂದು ಮಿಲ್ಲರ್ ಅವರು ವಿವರಿಸುತ್ತಾರೆ.


ಎಐನ ವಿರುದ್ಧ ಕೆಲಸ ಮಾಡುವುದಲ್ಲ, ಅದರೊಟ್ಟಿಗೆ ಕೆಲಸ ಮಾಡುವುದು


ಕೃತಕ ಬುದ್ಧಿಮತ್ತೆ ಮತ್ತು ಅದನ್ನು ಆಧರಿಸಿದ ತಂತ್ರಜ್ಞಾನ ಮತ್ತು ಉತ್ಪನ್ನಗಳು ಇನ್ನೂ ಕೆಲವು ರೀತಿಯಲ್ಲಿ ಸೀಮಿತವಾಗಿವೆ ಎಂದು ಪಾಪನಿಕ್ಲೋವ್ ಗಮನ ಸೆಳೆಯುತ್ತಾರೆ.


"ಈ ಸಮಯದಲ್ಲಿ ನಾವು 'ನಿಜವಾದ ಎಐ' ಯಿಂದ ಸಾಕಷ್ಟು ದೂರವಿದ್ದೇವೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಮ್ಮಲ್ಲಿರುವ ಎಲ್ಲಾ ಮಾದರಿಗಳು ಡೇಟಾದ ಸೆಟ್ ಹೊಂದಿರುವ ಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಪ್ರತಿಕ್ರಿಯೆಯನ್ನು ಊಹಿಸುತ್ತವೆ.


ಎಐ ಮಾಡುವ ಹೆಚ್ಚಿನ ಕೆಲಸವೆಂದರೆ ಅಸ್ತಿತ್ವದಲ್ಲಿರುವ ಜ್ಞಾನವನ್ನು ನಿರ್ದಿಷ್ಟ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಶ್ಲೇಷಿಸುವುದಷ್ಟೇ ಆಗಿದೆ. ಇದು ಹೊಸ ಜ್ಞಾನವನ್ನು ಸೃಷ್ಟಿಸುವಿಕೆಯಿಂದ ತುಂಬಾನೇ ದೂರದಲ್ಲಿದೆ" ಎಂದು ಅವರು ಹೇಳುತ್ತಾರೆ.


"ಮಾನವರ ಕೆಲಸವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವುದಕ್ಕಿಂತ ಮಾನವ ಉದ್ಯೋಗಿಗಳ ಕೆಲಸವನ್ನು ಹೆಚ್ಚಿಸಲು ಎಐ ಅನ್ನು ಬಳಸಲು ಹೆಚ್ಚಿನ ಅವಕಾಶಗಳಿವೆ" ಎಂದು ಪಾಪನಿಕ್ಲೋವ್ ಹೇಳುತ್ತಾರೆ.


ಉದ್ಯೋಗದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಅಥವಾ ಉದ್ಯೋಗಿಗಳನ್ನು ಬೆಂಬಲಿಸಲು ಅನೇಕ ವ್ಯವಹಾರಗಳು ಎಐ ಅನ್ನು ಬಳಸುತ್ತಿವೆ ಎಂದು ಚೇಸ್ ಒಪ್ಪುತ್ತಾರೆ.


"ಕೆಲಸದಲ್ಲಿ ತಂಡದ ನಾಯಕರು ತಮ್ಮ ವ್ಯವಹಾರಕ್ಕಾಗಿ ಭೌತಿಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಕಾರ್ಮಿಕರು ತಮ್ಮ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡಲು ಎಐ ಅನ್ನು ಅಳವಡಿಸಿಕೊಳ್ಳುತ್ತಿದ್ದಾರೆ" ಎಂದು ಚೇಸ್ ಹೇಳುತ್ತಾರೆ.



"ಎಐ ಅನ್ನು ಬಳಸಿಕೊಳ್ಳುವುದು ಸಂಸ್ಥೆಗಳಿಗೆ ಪುನರಾವರ್ತಿತ ಕಾರ್ಯಗಳಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡುವ ಮತ್ತು ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಇನ್ನಷ್ಟು ಸುಲಭಗೊಳಿಸುವ ರೀತಿಯಲ್ಲಿ ಪಾತ್ರಗಳನ್ನು ಪುನರ್ ರಚಿಸಲು ಅನುವು ಮಾಡಿಕೊಡುತ್ತದೆ" ಎಂದು ಹೇಳುತ್ತಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು