ಉದ್ಯೋಗದಲ್ಲಿ (Employment) ಉನ್ನತಿ ಪಡೆಯಬೇಕು ಎಂದಾದರೆ ಅದಕ್ಕೆ ಸೂಕ್ತವಾಗಿರುವ ತರಬೇತಿ ಹಾಗೂ ಅನೇಕ ಕೋರ್ಸ್‌ಗಳನ್ನು (Course) ಮಾಡಬೇಕಾಗುತ್ತದೆ. ನೀವು ಹೆಚ್ಚುವರಿ ಉನ್ನತಿ ಸಾಧಿಸಿದಂತೆ ನಿಮಗೆ ದೊರೆಯುವ ವೇತನದಲ್ಲಿ ಕೂಡ ಏರಿಕೆಯಾಗುತ್ತದೆ. ವಾಸ್ತುಶಿಲ್ಪ (Architecture and Design)) ಹಾಗೂ ವಿನ್ಯಾಸ ಇಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆಯುಳ್ಳ ವೃತ್ತಿ ಆಯ್ಕೆಗಳಾಗಿವೆ. ಅಂತೆಯೇ ಈ ಕ್ಷೇತ್ರದಲ್ಲಿ ನಿಮಗೆ ಹೆಚ್ಚಿನ ತರಬೇತಿ ಹಾಗೂ ಹೆಚ್ಚುವರಿ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಉದ್ಯೋಗಿಗಳು ಮಾತ್ರವಲ್ಲದೆ ವಿದ್ಯಾರ್ಥಿಗಳು ಕೂಡ ಬೇಸಿಗೆ ಶಿಬಿರದ ಆರ್ಕಿಟೆಕ್ಚರ್ ಹಾಗೂ ವಿನ್ಯಾಸ ಕೋರ್ಸ್‌ಗಳಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಉತ್ತಮವಾಗಿ ಕಲಿಯಬಹುದಾಗಿದೆ
ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಬೇಸಿಗೆ ಪ್ರೋಗ್ರಾಂ
ಆರ್ಕಿಟೆಕ್ಚರ್ ಹಾಗೂ ವಿನ್ಯಾಸದಲ್ಲಿ ವೃತ್ತಿ ಆಯ್ಕೆಮಾಡಿಕೊಳ್ಳುವವರಿಗೆ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: IIT ಜಮ್ಮುವಿನಲ್ಲಿದೆ ಸೈಬರ್ ಸೆಕ್ಯೂರಿಟಿ PG ಡಿಪ್ಲೋಮಾ; ಈ ಕೋರ್ಸ್ ಮಾಡಿದ್ರೆ ಯಾವ ಜಾಬ್ ಸಿಗುತ್ತೆ ಗೊತ್ತಾ?
ಬೇಸಿಗೆ ಪ್ರೋಗ್ರಾಮ್ಗಳಾಗಿರುವ ಈ ತರಬೇತಿ ಹಾಗೂ ಅನುಭವವನ್ನೊದಗಿಸುವ ಕೋರ್ಸ್‌ಗಳು, ಹುದ್ದೆಗೆ ಬೇಕಾಗಿರುವ ಪ್ರಮುಖ ವಿನ್ಯಾಸ ಕೌಶಲ್ಯಗಳ ಬಗ್ಗೆ ತರಬೇತಿ ನೀಡುತ್ತದೆ, ಅದೇ ರೀತಿ ಸ್ಟುಡಿಯೋ ವಿನ್ಯಾಸವನ್ನು ಸಹ ಆಸಕ್ತರು ಇಲ್ಲಿ ಕಲಿತುಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಈ ಕೋರ್ಸ್ ಸಹಕಾರಿ
ವಿಶ್ವವಿದ್ಯಾನಿಲಯ ನೀಡುವ ಬೇರೆಬೇರೆ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಕ್ಷೇತ್ರದಲ್ಲಿ ಹೆಚ್ಚಿನ ಅನುಭವ, ಸ್ಪಷ್ಟತೆ, ಸಾಮರ್ಥ್ಯ, ಸಂಪರ್ಕಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ಮೊದಲಾದ ಅಂಶಗಳನ್ನು ತಮ್ಮದಾಗಿಸಿಕೊಳ್ಳಬಹುದು.
2008 ರಿಂದ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಾಲೇಜ್ ಆಫ್ ಎನ್ವಿರಾನ್ಮೆಂಟಲ್ ಡಿಸೈನ್ (CED) ವಾಸ್ತುಶಿಲ್ಪ ಮತ್ತು ವಿನ್ಯಾಸದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕಳೆದ ಹದಿನೈದು ವರ್ಷಗಳಲ್ಲಿ ಕಾರ್ಯಕ್ರಮಗಳಿಗೆ ಹಾಜರಾದ 2,400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ದರ್ಜೆಯ ಸಂಸ್ಥೆಗಳಲ್ಲಿ ವಾಸ್ತುಶಿಲ್ಪ ಹಾಗೂ ವಿನ್ಯಾಸ ವಿಷಯಗಳನ್ನು ಅಧ್ಯಯನ ನಡೆಸುತ್ತಿದ್ದಾರೆ. ಪದವೀಧರರಾಗಿ ಒಳ್ಳೆಯ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಇನ್ನಷ್ಟು ಅಭಿವೃದ್ಧಿ ಸಾಧ್ಯ
ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತಮ್ಮ ತಮ್ಮ ಅನುಭವಗಳನ್ನು ತಿಳಿಸಿದ್ದು ಈ ಕಾರ್ಯಕ್ರಮದಿಂದ ತಾವು ಬಹಳಷ್ಟು ವಿಷಯಗಳನ್ನು ಕಲಿತಿರುವುದಾಗಿ ತಿಳಿಸಿದ್ದಾರೆ.
ಇಲ್ಲಿಂದ ಅನುಭವ ಪಡೆದುಕೊಂಡಿರುವ ಕೆಲವೊಬ್ಬರು ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ಹಾಗೂ ವಿನ್ಯಾಸದಲ್ಲಿ ಪದವಿಗಳನ್ನು ಪಡೆದುಕೊಂಡಿದ್ದು ಪಾರ್ಟ್‌ನರ್‌ಗಳೊಂದಿಗೆ ಸೇರಿ ತಮ್ಮದೇ ಸ್ವಂತ ಸಂಸ್ಥೆ ಪ್ರಾರಂಭಿಸಿದ್ದಾರೆ ಹಾಗೂ ಇನ್ನು ಕೆಲವರು ಹೆಸರಾಂತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನಲಂಕರಿಸಿದ್ದಾರೆ.
ಬೇರೆ ಬೇರೆ ಕೋರ್ಸ್‌ಗಳು ಲಭ್ಯ
ವೃತ್ತಿಯನ್ನು ಬದಲಾಯಿಸಲು ಅಥವಾ ಪದವೀಧರ ವಿನ್ಯಾಸ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಪರಿಗಣಿಸುವವರಿಗೆ, ಆರ್ಕಿಟೆಕ್ಚರ್, ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಚರ್ ಮತ್ತು ಅರ್ಬನ್ ಪ್ಲಾನಿಂಗ್‌ನಲ್ಲಿ ಮೂರರಿಂದ ಆರು ವಾರಗಳ ಪೂರ್ಣ ಸಮಯದ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.
ಆನ್‌ಲೈನ್ ಕೋರ್ಸ್ ಅನ್ನು ಕೂಡ ಆಸಕ್ತರಿಗಾಗಿ ವಿದ್ಯಾಲಯ ನೀಡುತ್ತಿದೆ. ಸಿಇಡಿ ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪ ಮತ್ತು ವಿನ್ಯಾಸ ಕಾರ್ಯಕ್ರಮಗಳನ್ನು ಸಹ ನೀಡುತ್ತದೆ. ವಿದ್ಯಾರ್ಥಿಗಳು ಅಗತ್ಯ ಡಿಜಿಟಲ್ ವಿನ್ಯಾಸ ಪರಿಕರಗಳನ್ನು ಕಲಿಯುತ್ತಾರೆ.
ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ ಹೇಗೆ?
ಅದೂ ಅಲ್ಲದೆ ಈ ವಿದ್ಯಾಲಯ, ತಜ್ಞರು ಹಾಗೂ ಪರಿಣಿತರ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇಲ್ಲಿ ಕೋರ್ಸ್ ಮಾಡಿರುವವರು ವೃತ್ತಿ ರಂಗದಲ್ಲಿ ಸುಲಭವಾಗಿ ಸಾಧಿಸಬಹುದಾಗಿದೆ ಹಾಗೂ ವಿದ್ಯಾರ್ಥಿಗಳಿಗೂ ಮುಂದಿನ ಕಲಿಕೆಗೆ ಈ ಕೋರ್ಸ್‌ಗಳು ನೆರವಾಗುತ್ತವೆ.
ಸಿಇಡಿಯ ಸಮ್ಮರ್ ಪ್ರೋಗ್ರಾಂ ವಿದ್ಯಾರ್ಥಿಗೆ, ಪ್ರತಿಯೊಬ್ಬ ಪದವೀಧರರಿಗೆ ಅಥವಾ ಇತರ ವೃತ್ತಿಪರ ಅಪ್ಲಿಕೇಶನ್‌ಗಳಿಗಾಗಿ ಉತ್ತಮ ಗುಣಮಟ್ಟದ ಪೋರ್ಟ್‌ಫೋಲಿಯೋವನ್ನು ನಿರ್ಮಿಸಲು ಅವಕಾಶ ಮಾಡಿಕೊಡುತ್ತದೆ.
ವಿದ್ಯಾರ್ಥಿಗಳು ಕೊಲಂಬಿಯಾ, ಕಾರ್ನೆಲ್, ಹಾರ್ವರ್ಡ್, MIT, ಪ್ರಿನ್ಸ್‌ಟನ್, ರೈಸ್, ಇಲಿನಾಯ್ಸ್ ವಿಶ್ವವಿದ್ಯಾಲಯ, ಮಿಚಿಗನ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ವಾಷಿಂಗ್ಟನ್ ವಿಶ್ವವಿದ್ಯಾಲಯ, ಯೇಲ್ ಮತ್ತು UC ಬರ್ಕ್‌ಲಿ ಮೊದಲಾದ ವಿದ್ಯಾಲಯಗಳಲ್ಲಿ ಹೆಚ್ಚುವರಿ ವ್ಯಾಸಂಗವನ್ನು ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ